ಮುಂಬೈನಲ್ಲಿ ಆರಂಭವಾದ ಬೀಚ್‌ ಸ್ವಚ್ಛತಾ ಕಾರ್ಯ- ಉಳಿದ ಕಡೆಯಿಂದ ಭಾರೀ ಬೆಂಬಲ

ಟೀಮ್​ ವೈ.ಎಸ್​. ಕನ್ನಡ

0

ಬೀಚ್‌ಗಳೆಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಸಮಯ ಸಿಕ್ಕಾಗ ಬೀಚ್‌ಗೆ ಹೋಗಿ ಕಾಲ ಕಳೆಯೋದು ಮನಸ್ಸಿಗೂ ಖುಷಿ ನೀಡುವ ವಿಚಾರ. ಆದ್ರೆ ಭಾರತದಲ್ಲಿ ಬೀಚ್‌ಗೆ ಹೋದ್ರೆ ಹೇಸಿಗೆ ಹುಟ್ಟೋದು ಗ್ಯಾರೆಂಟಿ. ಅದ್ರಲ್ಲೂ ಮುಂಬೈನಂತಹ ಮಹಾ ನಗರಗಳಲ್ಲಿ ಸಾಕಷ್ಟು ಸಮುದ್ರ ಕಿನಾರೆಗಳಿದ್ರೂ ಅಲ್ಲಿ ಹೋಗಿ ಕಾಲ ಕಳೆಯೋದು ಕನಸಿನ ಮಾತು. ಯಾಕಂದ್ರೆ ಅಷ್ಟು ಗಲೀಲುಗಳನ್ನು ಈ ಬೀಚ್‌ಗಳು ತುಂಬಿಕೊಂಡಿವೆ.

ಇದನ್ನು ಓದಿ: ಬದಲಾಗುತ್ತಿದೆ ಭಾರತ- ಇ-ಮೇಲ್​ ತಂತ್ರಜ್ಞಾನದಲ್ಲಿ ಅಭಿವೃದ್ಧಿಯತ್ತ ಚಿತ್ತ

ಈ ಸ್ಥಿತಿಗಳಿಂದ ಮುಕ್ತಿ ನೀಡಲು, ಜನರು ಮುಂಬೈನಲ್ಲಿ ಬೀಚ್‌ ಕ್ಲೀನ್‌ಮಾಡುವ ಕಾರ್ಯ ನಡೆಯುತ್ತಿದೆ. ಮೊದಲ ಹೆಜ್ಜೆಯಾಗಿ ಮುಂಬೈನ ವರ್ಸೋವಾ ಬೀಚ್‌ ತ್ಯಾಜ್ಯಮುಕ್ತವಾಗುತ್ತಿದೆ. ಕಳೆದ ವರ್ಷದವರೆಗೆ ವರ್ಸೋವಾ ಬೀಚ್‌ಗೆ ಪ್ರತಿವರ್ಷ 3ಲಕ್ಷ ಕಿಲೋಗ್ರಾಂ ತ್ಯಾಜ್ಯಗಳನ್ನು ಬಿಸಾಕಲಾಗುತ್ತಿತ್ತು. ಬೀಚ್‌ನಲ್ಲಿ ಕಾಲಕಳೆಯೋದು ಬಿಟ್ಟುಬಿಡಿ, ಅದ್ರ ಹತ್ತಿರಕ್ಕೆ ಹೋಗೋದಿಕ್ಕೂ ಎರಡೆರಡು ಬಾರಿ ಯೋಚನೆ ಮಾಡುವಂತಹ ಸ್ಥಿತಿ ಇತ್ತು. ಆದ್ರೆ ಈಗ ವರ್ಸೋವಾ ಕಡಲ ಕಿನಾರೆ ಕೊಂಚ ಶುಧ್ಧವಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಅಫ್ರೋಝ್‌ ಶಾ ಅನ್ನುವ ವಕೀಲರು. ವರ್ಸೋವಾ ಬೀಚ್‌ ಸುಮಾರು 2.5 ಕಿಲೋಮೀಟರ್‌ ಉದ್ಧವಿದೆ. ಅಫ್ರೋಝ್‌ ಶಾ ಸ್ವಯಂ ಪ್ರೇರಿತರಾಗಿ ಈ ಬೀಚ್‌ನ್ನು ತ್ಯಾಜ್ಯಮುಕ್ತ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ವಿಶ್ವದ ಅತ್ಯಂತ ಉದ್ದದ ಬೀಚ್‌ ಕ್ಲೀನಿಂಗ್‌ ಕಾರ್ಯ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

"ನನಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಇತ್ತು. ನನ್ನ ಮನೆಯ ಬಾಲ್ಕನಿಯಿಂದ ಪ್ರತಿದಿನ ಬೀಚ್‌ನ್ನು ನೋಡುತ್ತಿದ್ದೆ. ಒಂದು ದಿನ ಬೆಳಗ್ಗೆ ಬೀಚ್‌ ನೋಡುತ್ತಿರುವಾಗ ನನಗೆ ಕಡಲ ಕಿನಾರೆ ತುಂಬಾ ಪ್ಲಾಸ್ಟಿಕ್‌ಗಳೇ ತುಂಬಿರುವುದು ಕಾಣಿಸಿತು. ಈ ಪ್ಲಾಸ್ಟಿಕ್‌ಗಳು ನನ್ನನ್ನು ದಂಗು ಬಡಿಸಿತು. ಬೀಚ್‌ನ್ನು ಸ್ವಚ್ಛ ಮಾಡುವ ಕಾರ್ಯಕ್ಕೆ ಇಳಿಯುವಂತೆ ಪ್ರೇರೇಪಿಸಿತು."
- ಅಫ್ರೋಝ್‌, ಬೀಚ್‌ ಸ್ವಚ್ಛತಾ ಅಭಿಯಾನದ ರೂವಾರಿ

33 ವರ್ಷದ ಅಫ್ರೋಜ್‌ ಶಾ ವೃತ್ತಿಯಲ್ಲಿ ವಕೀಲರು. ಒಂದು ವರ್ಷದ ಹಿಂದೆ ಅಫ್ರೋಝ್‌ ಈ ಕೆಲಸವನ್ನು ಶುರುಮಾಡಿದ್ರು. ಅಫ್ರೋಝ್‌ ಆರಂಭಿಸಿದ ಈ ಕೆಲಸ ಹಲವರನ್ನು ಆಕರ್ಷಿಸಿತು. ವಸೋವಾ ಬೀಚ್‌ನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಹಲವರ ಬೆಂಬಲ ಸಿಕ್ಕಿತು. ಕೆಲವರು ಸ್ವಯಂ ಪ್ರೇರಿತರಾಗಿ ಅಫ್ರೋಝ್‌ ಕೆಲಸಕ್ಕೆ ಕೈ ಜೋಡಿಸಿದ್ರು. ಎನ್‌ಜಿಒಗಳು ಕೂಡ ಈ ಕೆಲಸವನ್ನು ಆರಂಭಿಸಿ, ಅಫ್ರೋಝ್‌ ಕನಸಿಗೆ ಮತ್ತಷ್ಟು ಜೀವ ತುಂಬಿದವು. 500ಕ್ಕೂ ಅಧಿಕ ಜನರು ಇದ್ರಲ್ಲಿ ಭಾಗಿಯಾದ್ರು. ಬೀಚ್‌ ಸ್ವಚ್ಛತಾ ಅಭಿಯಾನದಲ್ಲಿ ವಯಸ್ಸಿನ ಅಂತರವೂ ಲೆಕ್ಕಕ್ಕೇ ಬರಲಿಲ್ಲ. ಹಿರಿಯ ನಾಗರೀಕರು, ಶಾಲಾಮಕ್ಕಳು, ಬಾಲಿವುಡ್‌ ಸೆಲೆಬ್ರಿಟಿಗಳಾಸ ಸುಭಾಷ್‌ ಗಾಯ್‌, ಪೂಜಾ ಭಟ್‌, ಹೀಗೆ ಎಲ್ಲರೂ ಬೀಚ್‌ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಬೃಹನ್‌ ಮುಂಬೈ ಮುನಿಸಿಪಲ್‌ ಕಾರ್ಪೋರೇಷನ್‌ ಕೆಲಸಗಾರರು ಕೂಡ ಈ ಕಾರ್ಯದಲ್ಲಿ ಪಾಲ್ಗೊಂಡರು.

ಅಫ್ರೋಝ್‌ ಆರಂಭಿಸಿದ ಈ ಕೆಲಸಕ್ಕೆ ಈಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಯುನೈಟೆಡ್‌ ನೇಷನ್‌ನ ಸದಸ್ಯ ಮತ್ತು ಯು.ಎನ್‌. ಎನ್‌ವಿರಾನ್‌ಮೆಂಟ್‌ ಚೀಫ್‌ ಎರಿಕ್‌ ಸೊಲ್ಹಿಮ್‌, ಲೆವಿಸ್‌ ಪಗ್‌, ಸೇದಂತೆ ಹಲವರ ನೆರವು ಕೂಡ ಸಿಕ್ಕಿದೆ. ಒಟ್ಟಿನಲ್ಲಿ ಅಫ್ರೋಝ್‌ ಆರಂಭಿಸಿದ ಈ ಕಾರ್ಯ ಹಲವು ನಗರಗಳ ಬೀಚ್‌ ಸ್ವಚ್ಛತಾ ಅಭಿಯಾನಕ್ಕೆ ಪ್ರೇರಣೆ ನೀಡಿದೆ.

ಇದನ್ನು  ಓದಿ:

1. "ಗೈಡ್​" ಟೆನ್ಷನ್​ ಬಿಟ್ಟುಬಿಡಿ- ವಸ್ತುಸಂಗ್ರಹಾಲಯದ ಮಾಹಿತಿ ನೀಡುವ ಆ್ಯಪ್​ ಡೌನ್​ಲೋಡ್​ ಮಾಡಿ..!

2. ಶತಾಯುಷಿ ಅಜ್ಜಿಯ ಚಿನ್ನದ ಓಟ..

3. ಕ್ಯಾನ್ಸರ್ ಪೀಡಿತ ಮಗುವಿಗಾಗಿ ಒಲಿಂಪಿಕ್ಸ್ ಪದಕ ಮಾರಿದ ಕ್ರೀಡಾಪಟು..

Related Stories

Stories by YourStory Kannada