ಕಾಲೇಜು ಕಟ್ಟಡದಲ್ಲೊಂದು ವಿಭಿನ್ನ ಹಸಿರು ಉದ್ಯಾನವನ..!

ಟೀಮ್​ ವೈ.ಎಸ್​. ಕನ್ನಡ

ಕಾಲೇಜು ಕಟ್ಟಡದಲ್ಲೊಂದು ವಿಭಿನ್ನ ಹಸಿರು ಉದ್ಯಾನವನ..!

Thursday June 02, 2016,

2 min Read

ಪರಿಸರ ಮಾಲಿನ್ಯಕ್ಕೆ ಇರುವ ಏಕೈಕ ಪರಿಹಾರ ಗಿಡ-ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದು. ಅದರಲ್ಲೂ ವಿನಾಶದ ಅಂಚಿನಲ್ಲಿರುವ ಸ್ಥಳೀಯ ಸಸ್ಯ ಪ್ರಬೇಧಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಜಿಪಿಸ್ ಇನ್ಸ್​ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮ್ಯಾನೇಜ್​ಮೆಂಟ್ ದಿಟ್ಟ ಹೆಜ್ಜೆ ಇಟ್ಟಿದೆ. ದೇಶದ ಅತಿ ಎತ್ತರದ ನೇರ ಉದ್ಯಾನವನ ‘ಎಸ್ಕಲೇಟರ್ ಗಾರ್ಡನ್’ನ್ನು ಕಾಲೇಜಿನಲ್ಲಿ ರೂಪಿಸಿದೆ. ಹೊಸ ತಂತ್ರಜ್ಞಾನ ಬಳಸಿ ಕಡಿಮೆ ಸ್ಥಳದಲ್ಲೇ ಹಸಿರು ಕ್ರಾಂತಿಗೆ ಈ ಕಾಲೇಜ್ ಹೊಸ ಮುನ್ನುಡಿ ಬರೆದಿದೆ.

image


ಜಿಪಿಸ್ ಇನ್ಸ್​ಟಿಟ್ಯೂಟ್​ ಆಫ್ ಅಗ್ರಿಕಲ್ಚರಲ್ ಮ್ಯಾನೇಜ್​ಮೆಂಟ್​ ಕಾಲೇಜು ಕಟ್ಟಡವೊಂದರಲ್ಲಿ ಹಸಿರು ನಳನಳಿಸುವಂತಾಗಿದೆ. ನೂರಾರು ಸ್ಥಳೀಯ ಪ್ರಬೇಧದ ಸಸ್ಯ ಸಂಕುಲಗಳ ಉದ್ಯಾನವನ ಕಾಲೇಜಿನೊಳಗೆ ನಿರ್ಮಾಣಗೊಂಡಿದೆ. ದೇಶದ ಅತಿ ಎತ್ತರದ ನೇರ ಉದ್ಯಾನವನ ಎಸ್ಕಲೇಟರ್ ಗಾರ್ಡನ್​ ಅನ್ನು ಕಾಲೇಜಿನಲ್ಲಿ ನಿರ್ಮಿಸಿದೆ. ಈ ಮೂಲಕ ಕಾಲೇಜು ಹೊಸ ದಾಖಲೆ ಬರೆದಿದೆ.

ಇದನ್ನು ಓದಿ: "ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!

ಮಲ್ಟಿಪ್ಲೆಕ್ಸ್ ಗ್ರೂಪ್​ನ ಕನಸಾದ ಈ ನೇರ ಉದ್ಯಾನವನ ಎಸ್ಕಲೇಟರ್ ಗಾರ್ಡನ್, ಆಧುನಿಕ ವಾಸ್ತುಶಿಲ್ಪ ಮತ್ತು ಪರಿಸರ ಕಾಳಜಿಯ ಅನನ್ಯ ಸಮ್ಮಿಲನವಾಗಿದೆ. ಹನಿ ನೀರಾವರಿ ಮೂಲಕ 300ಕ್ಕೂ ಅಧಿಕ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಈ ಉದ್ಯಾನವನದಲ್ಲಿ ಬೆಳೆಸಲಾಗಿದೆ. ಪ್ರತಿ ಸಸ್ಯ 4 ಕಿಲೋ ಗ್ರಾಂ ಇದ್ದು, ಒಟ್ಟಾರೆ 50 ಅಡಿ ಎತ್ತರ ಹಾಗೂ ಏಳೂವರೆ ಅಡಿ ಅಗಲವಿದೆ. ಈ ಉದ್ಯಾನವನ ಸ್ಥಳೀಯ ಪರಿಸರಕ್ಕೆ ಹೊಸ ಮೆರಗು ನೀಡಿದೆ.

image


ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ, ಈ ಉದ್ಯಾನವನಕ್ಕೆ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಇಡೀ ಉದ್ಯಾನವನ ಸಂಪೂರ್ಣವಾಗಿ ನೈಸರ್ಗಿಕವಾಗಿ ಬೆಳೆದು ನಿಂತಿದೆ. ನೋಡಲು ಕೂಡ ಸುಂದರವಾಗಿ ಕಾಣುವ ಉದ್ಯಾನವನ ಕಡಿಮೆ ಸ್ಥಳದಲ್ಲೇ ಹೆಚ್ಚು ಹಸಿಸು ಬೆಳೆಸಬೇಕೆಂಬುವರ ಕನಸಿಗೆ ಸಹಾಯಕಾರಿಯಾಗಿದೆ. ಕಡಿಮೆ ಸ್ಥಳವಿರುವ ಅಪಾರ್ಟ್​ಮೆಂಟ್, ಮನೆಗಳಲ್ಲಿ ಈ ವಿಧಾನವನ್ನು ಬಳಸಿಕೊಳ್ಳಬಹುದಾಗಿದೆ.

image


ಜಿಪಿಎಸ್ ಇನ್ಸ್​ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮ್ಯಾನೇಜ್​ಮೆಂಟ್​ನ ಈ ಪ್ರಯೋಗ ಭವಿಷ್ಯದ ಆಧುನಿಕ ವಾಸ್ತುಶಿಲ್ಪಕ್ಕೆ ಮಾದರಿ ಎನಿಸುವಂತಿದೆ. ಪರಿಸರ ಪೂರಕ ಬಹುಮಹಡಿ ಕಟ್ಟಡಗಳನ್ನು ಹೇಗೆ ನಿರ್ಮಿಸಬಹುದು ಹಾಗೂ ಆ ಮೂಲಕ ಪರಿಸರದ ಸವಾಲುಗಳಿಗೆ ಹೇಗೆ ಉತ್ತರ ನೀಡಬಹುದು ಎನ್ನುವುದಕ್ಕೆ ಈ ಉದ್ಯಾನವನ ಮಾದರಿ. ಹೆಚ್ಚುತ್ತಿರುವ ಪರಿಸರದ ತಾಪಮಾನ, ಕುಸಿಯುತ್ತಿರುವ ಗಾಳಿಯ ಗುಣಮಟ್ಟ ನಗರ ಜೀವನವನ್ನು ಅಸಹನೀಯಗೊಳಿಸುತ್ತಿದೆ. ಇದಕ್ಕೆ ಉತ್ತರ ಇಂತಹ ಪ್ರಯೋಗ. ‘ಇದು ಕೇವಲ ಪ್ರಯೋಗವಾಗಿ ಮಾತ್ರ ಉಳಿದಿಲ್ಲ. ಇದು ಹಲವು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವಂತಹ ನೂತನ ಪ್ರಯತ್ನವಾಗಿದೆ. ಭವಿಷ್ಯದಲ್ಲಿ ದೇಶ-ವಿದೇಶದಲ್ಲಿ ಇಂತಹ ವಾಸ್ತುಶಿಲ್ಪಕ್ಕೆ ಹೆಚ್ಚಿನ ಬೇಡಿಕೆಯಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವಕಾಶ ದೊರೆಯಲಿದೆ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿಗಳು.

ವಿದ್ಯಾರ್ಥಿಗಳ ಈ ವಿನೂತನ ಗಾರ್ಡನಿಂಗ್​ ಕ್ರಮ ಈಗ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಮನಸ್ಸಿದ್ದರೆ ಯಾವ ಸವಾಲನ್ನು ಬೇಕಾದ್ರೂ ಗೆಲ್ಲಬಹುದು ಅನ್ನೋದಕ್ಕೆ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿ.

ಇದನ್ನು ಓದಿ:

1. ಇದು ಫೋಟೋಗಳು ಕಥೆ ಹೇಳೊ ಸಮಯ

2. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

3. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!