ನಡೆದಾಡಲು ಕಷ್ಟಪಡುತ್ತಿದ್ದ ಅಪರ್ಣಾ, ಮೌಂಟ್ ಎವರೆಸ್ಟ್ ಏರಿದ ಕಥೆಯಿದು..!

ಟೀಮ್​ ವೈ.ಎಸ್​. ಕನ್ನಡ

ನಡೆದಾಡಲು ಕಷ್ಟಪಡುತ್ತಿದ್ದ ಅಪರ್ಣಾ, ಮೌಂಟ್ ಎವರೆಸ್ಟ್ ಏರಿದ ಕಥೆಯಿದು..!

Sunday July 09, 2017,

3 min Read

ಬದುಕಿನಲ್ಲಿ ಒಮ್ಮೊಮ್ಮೆ ಏನು ಬೇಕಾದರೂ ನಡೆಯಬಹುದು. ಅದೃಷ್ಟ ಬದಲಾಗಿ ಇತಿಹಾಸ ಸೃಷ್ಟಿಸುವಂತಹ ಕೆಲಸಗಳು ನಡೆಯಬಹುದು. ಅಪರ್ಣಾಪ್ರಭು ದೇಸಾಯಿ ಸಾಧನೆ ಇದಕ್ಕೊಂದು ಉದಾಹರಣೆ. ಅಪರ್ಣಾಗೆ ವೈದ್ಯರು ಇನ್ನುಮುಂದೆ ಯಾವುದಾದರು ನೆರವಿಲ್ಲದೆ ನಡೆದಾಡಲು ಸಾಧ್ಯವೇ ಇಲ್ಲ ಅನ್ನುವ ಷರಾ ಬರೆದು ಬಿಟ್ಟಿದ್ದರು. ಆದ್ರೆ ಅದೃಷ್ಟಕ್ಕೇ ಸವಾಲೆಸೆದು ಅಪರ್ಣಾ ಇಂದು ಸಾಧನೆ ಮಾಡಿದ್ದಾರೆ. ಜಗತ್ತಿನ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿ ದಾಖಲೆ ಬರೆದಿದ್ದಾರೆ.

image


“ವ್ಹೀಲ್​ಚೇರ್​​ನಲ್ಲಿ ಒಂದೆರಡು ತಿಂಗಳು ಕಳೆದ ಮೇಲೆ ನನಗೆ ಎರಡು ಆಯ್ಕೆಗಳು ಮಾತ್ರ ಇತ್ತು. ಒಂದನೆಯದು ವ್ಹೀಲ್ ಚೇರ್ ನಲ್ಲೇ ಉಳಿದಿರುವ ಜೀವನ ಕಳೆಯುವುದು ಮತ್ತೊಂದು ಏನಾದರೂ ಹೊಸ ಸಾಧನೆ ಮಾಡುವುದು. ಆದರೆ ನಾನು ಯಾವುದನ್ನೂ ಕೂಡ ಸುಲಭವಾಗಿ ಕೈ ಬಿಡುವ ವ್ಯಕ್ತಿತ್ವವನ್ನು ಹೊಂದಿರಲಿಲ್ಲ. ಆಸ್ಪತ್ರೆ, ಪರೀಕ್ಷೆಗಳು ಮತ್ತು ಚಿಕಿತ್ಸೆಗಳು ನನಗೆ ಅತೀ ದೊಡ್ಡ ಸವಾಲನ್ನೇ ಎಸೆದಿದ್ದರು. ಸ್ಪೆಷಲಿಸ್ಟ್​ಗಳು ಮತ್ತು ವೈದ್ಯರು ಕೂಡ ಹೆಚ್ಚೇನು ಮಾಡುವುದಕ್ಕೆ ಸಾಧ್ಯವಿರಲಿಲ್ಲ.”
- ಅಪರ್ಣಾಪ್ರಭು ದೇಸಾಯಿ, ಮೌಂಟ್ ಎವರೆಸ್ಟ್ ಏರಿದವರು

ಅಪರ್ಣಾ ಮೆಡಿಸಿನ್ ಮತ್ತು ಸರ್ಜರಿಗಳಿಂದ ರೋಸಿ ಹೋಗಿದ್ದರು. ತನ್ನ ಸಹೋದರನಿಂದ ಸಲಹೆ ಪಡೆದುಕೊಂಡರು. ಅವರು ಅಪರ್ಣಾಗೆ ಮಸಲ್ ಬಿಲ್ಡ್ ಮಾಡಿದರೆ, ಅದು ಮೂಳೆಗಳ ಮೇಲೆ ಭಾರ ಕಡಿಮೆ ಮಾಡಿ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ ಅನ್ನುವ ಮಾತು ಹೇಳಿದ್ರು. ನಿಧಾನವಾಗಿ ಅಪರ್ಣಾ ಓಡಲು ಆರಂಭಿಸಿದ್ದರು. ಒಂದು ಮೂರು ಕಿಲೋಮೀಟರ್ ಗಳ ಓಟದ ಬಳಿಕ ಅಪರ್ಣಾಗೆ ತನ್ನ ಗುರಿಯ ಕಡೆ ಸ್ಪಷ್ಟ ಗುರಿ ಸಿಕ್ಕಾಗಿತ್ತು. ತನ್ನ ಬದುಕಿನ 2ನೇ ಟ್ರೆಕ್ಕಿಂಗ್ ನಲ್ಲೇ ಎವರೆಸ್ಟ್ ಏರುವ ಕನಸು ಕಾಣಲು ಆರಂಭಿಸಿದ್ರು. ಅಷ್ಟೇ ಅಲ್ಲ 2013ರಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು.

ಮೌಂಟ್ ಎವರೆಸ್ಟ್ ಸೊಬಗಿನ ಸಿರಿಯನ್ನು ನೋಡೊದ ಅಪರ್ಣಾ ಅದರ ತುತ್ತ ತುದಿ ತಲುಪುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಮುಂದಿನ ನಾಲ್ಕು ವರ್ಷಗಳು ಮೌಂಟ್ ಎವರೆಸ್ಟ್ ಏರುವ ಕನಸು ಮತ್ತು ಪ್ರಯತ್ನದಲ್ಲೇ ಮುಗಿದುಹೋಗಿತ್ತು. ಆದರೆ ಕಳೆದ ಮೇ 22ರಂದು ಅಪರ್ಣಾ ತನ್ನ ಕನಸನ್ನು ನನಸು ಮಾಡಿಕೊಂಡಿದ್ದರು. ವಿಶ್ವದ ಅತೀ ಎತ್ತರ ಶೃಂಗ ಮೌಂಟ್ ಎವರೆಸ್ಟ್ ನಲ್ಲಿದ್ದರು ಅಪರ್ಣಾ ಪ್ರಭು ದೇಸಾಯಿ.

image


ಗುರಿ ಕಡೆಗೆ ದಿಟ್ಟ ನಡಿಗೆ

ಅಪರ್ಣಾ ಮೌಂಟ್ ಎವರೆಸ್ಟ್ ಏರಲು ಆನ್ ಲೈನ್ ಮೂಲಕ ಫಂಡಿಂಗ್ ಪೋಲ್ ಮಾಡಿದ್ದರು. ಭೋಧಿ ವೃಕ್ಷ ಅನ್ನುವ ಸ್ವಂತ ಕಂಪನಿಯಲ್ಲಿ ಗ್ಲೋಬಲ್ ಕನ್ಸಲ್ಟಂಟ್ ಆಗಿ ಕೆಲಸ ಮಾಡಿದ್ದರು. ಅತ್ಯುತ್ತಮ ನೆಟ್ ವರ್ಕ್ ನಿಂದಾಗಿ ಅಪರ್ಣಾ ಫಂಡ್ ಸಂಗ್ರಹಿಸಿದ್ದರು. ಗೆಳೆಯರ ಮೂಲಕ ಮೌಂಟ್ ಎವರೆಸ್ಟ್ ಏರಲು ಉತ್ಸುಕರಾಗಿದ್ದ ರನ್ನಿಂಗ್ ಕ್ಲಬ್ ಸದಸ್ಯರೊಬ್ಬರ ಪರಿಚಯವಾಯಿತು. ಆತ, ಅಪರ್ಣಾಗೆ ಬೇಕಾದ ರೀಸರ್ಚ್ ಮತ್ತು ಎವರೆಸ್ಟ್ ಏರಲು ಮಾಡಬೇಕಾದ ಕೆಲಸಗಳನ್ನು ಹುಡುಕುವಂತೆ ಹೇಳಿದಾಗ ಅತ್ಮವಿಶ್ವಾಸ ಇಮ್ಮಡಿಯಾಯಿತು.

ಇದನ್ನು ಓದಿ: ಜಲಚರ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಈ ಟೀಮ್​..!

ಮೌಂಟ್ ಎವರೆಸ್ಟ್​​ನ ಉತ್ತರಭಾಗವಾದ ಚಾಂಗ್ಸ್ಟ್ ಗ್ಲೇಸಿಯರ್ ನಲ್ಲಿ ಅಪರ್ಣಾ ತಂದೆ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ಹೀಗಾಗಿ ಬಾಲ್ಯ ಅನುಭವ ಹಾಗೂ ಅಲ್ಲಿನ ಅನುಭವ ಅಪರ್ಣಾಗೆ ಅಲ್ಲಿಂದ ಸಾಹಸ ಆರಂಭಿಸಲು ಪ್ರೇರಣೆ ನೀಡಿತ್ತು. ಅಲ್ಲೇ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತಯಾರಿ ಆರಂಭಿಸಿದರು. 47 ವರ್ಷದ ಅಪರ್ಣಾಗೆ ಅತ್ತ ಪೂರ್ಣ ಯೌವ್ವನದಲ್ಲೂ ಇರಲಿಲ್ಲ, ಇತ್ತ ವಯಸ್ಸಿನ ಗಡಿಯನ್ನೂ ದಾಟಿರಲಿಲ್ಲ.

“ನಾನು ವಯಸ್ಸಾದಂತೆ ಹೆಚ್ಚು ಅನುಭವ ಹಾಗೂ ಮನಸ್ಸನ್ನು ಹೆಚ್ಚು ಸ್ಥಿಮಿತದಲ್ಲಿಟ್ಟುಕೊಳ್ಳಬಹುದು ಅನ್ನುವ ನಿಯಮವನ್ನು ಒಪ್ಪಿಕೊಂಡಿದ್ದೆ. ಮೌಂಟ್ ಎವರೆಸ್ಟ್ ಏರಲು ಸಾಕಷ್ಟು ಪ್ರಯತ್ನಗಳು ಹಾಗೂ ಎಚ್ಚರಿಕೆಯ ಹೆಜ್ಜೆಗಳು ಬೇಕಾಗುತ್ತದೆ.ಇಂಟರ್ ನೆಟ್ ಆಗಲಿ ಅಥವಾ ಫೋನ್ ಗಳಾಗಲಿ ಇರುವುದಿಲ್ಲ. ಮೊಬೈಲ್ ಫೋನ್ಗಳು ಸೇರಿದಂತೆ ಇತರೆ ಗಾಡ್ಜೆಟ್ ಗಳನ್ನು ಚಾರ್ಜ್ ಮಾಡಲು ಕೂಡ ಅವಕಾಶ ಇರುವುದಿಲ್ಲ. ”
- ಅಪರ್ಣಾಪ್ರಭು ದೇಸಾಯಿ, ಮೌಂಟ್ ಎವರೆಸ್ಟ್ ಏರಿದವರು

ಜೀವನ್ಮರಣದ ನಡುವಿನ ಹೋರಾಟ

ಮೌಂಟ್ ಎವರೆಸ್ಟ್ ಹತ್ತಲು ಸಾಕಷ್ಟು ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಗಟ್ಟಿತನವೂ ಬೇಕಾಗುತ್ತದೆ. ಇತರರ ಕಷ್ಟಗಳನ್ನು ಹತ್ತಿರದಿಂದ ನೋಡಿದಾಗಲೂ ಮನಸ್ಸು ಕೆಡಿಸಿಕೊಳ್ಳಬಾರದು. ಕೆಲವೊಮ್ಮೆ ಹತ್ತಿದ ಎತ್ತರವನ್ನು ಮತ್ತೆ ಹತ್ತಬೇಕಾಗುತ್ತದೆ. ಕತ್ತಲಿನಲ್ಲಿ ದಿಟ್ಟ ಹೆಜ್ಜೆ ಇಡುವಂತಹ ಗಟ್ಟಿ ಮನಸ್ಸು ಇರಬೇಕಾಗುತ್ತದೆ. ನಿಮ್ಮ ದೃಷ್ಟಿಯ ಕೆಳಗೆ ಪ್ರಪಾತಗಳು ಇರುತ್ತವೆ. ಇದು ನಿಮ್ಮನ್ನು ಸಾಕಷ್ಟು ಪರೀಕ್ಷೆಗೆ ಒಡ್ಡುವುದು ಗ್ಯಾರೆಂಟಿ.

ಅಪರ್ಣಾರಿಂದ ಕಲಿತ ಪಾಠ

ಮೌಂಟ್ ಎವರೆಸ್ಟ್ ಏರಲು ಅಪರ್ಣಾ ತನ್ನೆಲ್ಲಾ ಶ್ರಮವನ್ನು ಹಾಕಿದ್ದರು. ಅಪರ್ಣಾ ಬಳಿ ಇದ್ದಿದ್ದು ಕೇವಲ ಶ್ರಮ ಮಾತ್ರ. 4ವರ್ಷಗಳ ತರಬೇತಿಯಲ್ಲಿ ಅಪರ್ಣಾ, ಸಾಕಷ್ಟು ಕಲಿತಿದ್ದರು. ಬೆಳ್ಳಂಬೆಳಗ್ಗೆ 2 ಗಂಟೆಗೆ ಎದ್ದು ಅಭ್ಯಾಸ ನಡೆಸಿದ ಉದಾಹರಣೆಯೂ ಇದೆ. ಅಪರ್ಣಾ ತನ್ನ ಹಠ ಮತ್ತು ಶ್ರಮದಿಂದಲೇ ಇದೆಲ್ಲವನ್ನೂ ಸಾಧಿಸಿದ್ದಾರೆ. ದೃಢ ನಿರ್ಧಾರ, ಶಿಸ್ತು ಅಪರ್ಣಾ ಸಾಧನೆಯ ಹಿಂದೆ ಶಕ್ತಿಯಾಗಿ ನಿಂತಿದೆ. ಅಪರ್ಣಾ ತನಗಾಗಿದ್ದ ಅವಮಾನಕ್ಕೆ ತನ್ನ ಸಾಧನೆಯ ಮೂಲಕ ಉತ್ತರ ಹೇಳಿದ್ದಾರೆ. ಜಗತ್ತಿನ ಉತ್ತುಂಗದ ಶಿಖರ ಏರಿದ್ದು ಅಪರ್ಣಾಗೆ ಹೊಸ ಹುರುಪು ಹಾಗೂ ಉತ್ಸಾಹವನ್ನು ತುಂಬಿದೆ. ಅಪರ್ಣಾ ಪ್ರಭು ದೇಸಾಯಿಯವರ ಸಾಧನೆ ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಭಾರತದ 6 ಸುಪ್ರಸಿದ್ಧ ಉದ್ಯಮಿಗಳು ಇವರು..!

2. ಏರ್​ಫೋರ್ಸ್ ಸೇರಲು ಬಹು ರಾಷ್ಟ್ರೀಯ ಕಂಪನಿಯ ಕೆಲಸ ಕೈಬಿಟ್ಟ ಮಹಿಳಾಮಣಿ..!

3. 8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!