ಮಕ್ಕಳಿಗಾಗಿ ಬಂತು ಬ್ಯೂಟಿ ಪಾರ್ಲರ್​- ಮೇಕ್​ಓವರ್​ ಜೊತೆಗೆ ಮಸ್ತಿ ಗ್ಯಾರೆಂಟಿ..!

ಟೀಮ್​ ವೈ.ಎಸ್​. ಕನ್ನಡ

1

ಮದುವೆ, ನಾಮಕರಣ, ಸಮಾರಂಭ ಅಂದ್ರೆ ಗಂಡು ಮಕ್ಕಳದು ಒಂದೇ ಚಿಂತೆ...ಈ ಹೆಣ್ಮಕ್ಳು ಬೇಗ ರೆಡಿಯಾಗಲ್ಲಪ್ಪಾ... ಗಂಟೆಗಟ್ಟಲೆ ಕನ್ನಡಿ ಮುಂದೆ ಕೂತ್ಕೋತಾರೆ ಅನ್ನೋದೇ ದೊಡ್ಡ ಗೋಳು. ಒಮ್ಮೆಮ್ಮೊ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಈ ಬಗ್ಗೆ ಜಗಳ ನಡೆಯುವುದೂ ಉಂಟು. ಗಂಡ- ಹೆಂಡತಿ ನಡುವೆ ಮುನಿಸು ಬಂದ ಉದಾಹರಣೆಗಳು ಕೂಡ ಇದೆ. ರೆಡಿಯಾಗುವ ಸಮಸ್ಯೆಯಿಂದ ಬಸ್​, ಟ್ರೈನ್​ ಮಿಸ್​​ ಮಾಡಿಕೊಂಡ ಮಹಾನುಭವರು ಕೂಡ ನಮ್ಮ ನಿಮ್ಮ ನಡುವೆ ಇದ್ದಾರೆ. 

ಆದ್ರೆ ಇಂತಹ ಕಂಪ್ಲೆಂಟ್​ಗಳಿಗೆ  ಫುಲ್ ಸ್ಟಾಪ್ ಅನ್ನುವ  ಹಾಗೆ ಬೆಂಗಳೂರಿನಲ್ಲಿ ನಾಯಿಕೊಡೆಯಂತೆ ಬ್ಯೂಟಿ ಪಾರ್ಲರ್​​ಗಳು ಹುಟ್ಟಿಕೊಂಡಿವೆ. ಹೆಣ್ಣುಮಕ್ಕಳ ಏನೋ ಕತೆಯೇನೋ ಪಾರ್ಲರ್ ನಲ್ಲಿ ಮುಗಿತು. ಆದ್ರೆ ಮನೆಗೊಂದು ಮಗು ಅಂತ ಇರುತ್ತಲ್ಲ ಮಕ್ಕಳನ್ನ ರೆಡಿ ಮಾಡೋದಕ್ಕೆ ನಿಂತ್ರೆ ಮತ್ತಷ್ಟು ಗಂಟೆ ಕಾಯಬೇಕಲ್ಲ,  ಅಂತ ಇನ್ನು ಮುಂದೆ ಯೋಚನೆ ಮಾಡೋ ಹಾಗಿಲ್ಲ. ಇಷ್ಟು ದಿನ ಮಕ್ಕಳಿಗೊಂದು ಪಾರ್ಲರ್ ಇದ್ದಿದ್ರೆ ಸಖತ್ತಾಗಿ ಇರ್ತಿತ್ತು ಅಂತ ಇದ್ದವ್ರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಮಕ್ಕಳಿಗಾಗಿಯೇ ಬೆಂಗಳೂರಿನಲ್ಲಿ ಪಾರ್ಲರ್ ಓಪನ್ ಆಗಿದೆ. ಅದೇ ದಿವಾಸ್ ಅಂಡ್ ಡೂಡ್ಸ್..!

ಇದನ್ನು ಓದಿ: ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!

ಏನಿದು ದಿವಾಸ್​ & ಡೂಡ್ಸ್​..?

ಮಕ್ಕಳಿಗಾಗಿ ಅಂತಾನೆ ಆರಂಭ ಆಗಿರೋ ಈ ಪಾರ್ಲರ್ ನಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ. ಮಕ್ಕಳಿಗಾಗಿ ಮೇಕ್ ಓವರ್ ಬ್ಲೋಡ್ರೈ  , ಹೇರ್ ಎಕ್ಸ್​​ಟೆಂಕ್ಷನ್ ,ಮಿನಿ ಪೆಡಿಕ್ಯೂರ್,ಮೆಡಿಕ್ಯೂರ್, ನೇಲ್ ಆರ್ಟ್,ಹೇರ್ ಕಟ್ ಹೀಗೆ ಇನ್ನೂ ಅನೇಕ ಸೌಲಭ್ಯಗಳು ಇಲ್ಲಿ ಸಿಗುತ್ತದೆ. ವಿಶೇಷ ಅಂದ್ರೆ ಮಕ್ಕಳ ತಜ್ಞರಿಂದ ಎಲ್ಲಾ ರೀತಿಯ ಸೂಚನೆಗಳನ್ನ ಪಡೆದುಕೊಂಡು ಮಕ್ಕಳ ಚರ್ಮಕ್ಕೆ ಘಾಸಿ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇನ್ನು ಮಕ್ಕಳ ಮುಖಕ್ಕೆ ಯಾವುದೇ ಕೆಮಿಕಲ್ ಯೂಸ್ ಮಾಡದೆ ಚಾಕಲೇಟ್ ಫೇಷಿಯಲ್ ಮಾಡಲಾಗುತ್ತದೆ. ಮಕ್ಕಳು ಓಡಾಡುವ ಅಥವಾ ಮಕ್ಕಳಿರೋ ಜಾಗಗಳು ಸುಂದರವಾಗಿರಬೇಕು ಮತ್ತು ಮಕ್ಕಳ ಮನಸ್ಸನ್ನ ಆಕರ್ಷಣೆ ಮಾಡುವಂತಿರಬೇಕು. ಇದೇ ಉದ್ದೇಶದಿಂದ ಇಲ್ಲಿ ಮಕ್ಕಳು ಕುಳಿತುಕೊಳ್ಳುವ ಜಾಗವನ್ನ ಗೊಂಬೆಗಳಿಂದ ಅಲಂಕಾರ ಮಾಡಲಾಗಿದೆ. ಮಕ್ಕಳಿಗೆ ಬೋರ್ ಆಗಬಾರದು ಅನ್ನೋ ಉದ್ದೇಶದಿಂದ ಟಿವಿಯನ್ನೂ ಇಡಲಾಗಿದೆ. 

ಮೇಕ್ ಓವರ್ ಜೊತೆಯಲ್ಲಿ ಬರ್ತ್​ಡೇ ಪಾರ್ಟಿ

ದಿವಾಸ್ ಅಂಡ್ ಡೂಡ್ಸ್ ಸ್ಪಾದಲ್ಲಿ ಮಕ್ಕಳಿಗೆ ಮೇಕ್ ಓವರ್ ಮತ್ತು ಮೇಕಪ್​ ಮಾಡುವುದಷ್ಟೇ ಅಲ್ಲದೆ ಇಲ್ಲಿ ಬರ್ತ್​ಡೇ ಪಾರ್ಟಿಯನ್ನೂ ಮಾಡಲಾಗುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ಪಾರ್ಟಿಯನ್ನ ಅರೆಂಜ್ ಮಾಡಿಕೊಡಲಾಗುತ್ತದೆ. ಇದರ ಜೊತೆಗೆ ಇಲ್ಲಿ ಮಕ್ಕಳೀಗೆ ಬೇಕಿರುವ ಚಾಕಲೇಟ್ಸ್, ಕುಕ್ಕಿಸ್,ಮತ್ತು ಪಿಜ್ಹಾ ಕೂಡ ಲಭ್ಯವಿದೆ. ಅಷ್ಟೇ ಅಲ್ಲದೆ ಮಕ್ಕಳ ಆಟಿಕೆ ಮತ್ತು ಬಟ್ಟೆಗಳನ್ನು ಶಾಪ್ ಮಾಡಬಹುದು. ಒಟ್ಟಾರೆ ಒಮ್ಮೆ ಈ ಸ್ಪಾಗೆ ಎಂಟ್ರಿಕೊಟ್ಟರೆ ಒಂದು ಮಗುವಿಗೆ, ಸಮಾರಂಭಕ್ಕೆ ಹೋಗುವಾಗ ಬೇಕಿರೋ ಎಲ್ಲಾ ವಸ್ತುಗಳು ಲಭ್ಯವಿದೆ. ಇದರ ಜೊತೆಯಲ್ಲಿ ಇಲ್ಲಿ ಬರುವ ಮಕ್ಕಳಿಗೆ ಬೋರ್ ಆಗಬಾರದು ಅನ್ನೋ ಉದ್ದೇಶದಿಂದ ಮಕ್ಕಳಿಗಾಗಿ ಸಾಕಷ್ಟು ಆಟಗಳನ್ನ ಮತ್ತು ಆಕ್ಟಿವಿಟಿಗಳನ್ನೂ ಇಡಲಾಗಿದೆ. ಟೆಡಿ ಬೆಯರ್ ಫಿಲ್ಲಿಂಗ್ ಅನ್ನ ಮಕ್ಕಳಿಂದಲೇ ಮಾಡಿಸಲಾಗುತ್ತದೆ. ಅದ್ರ ಜೊತೆಯಲ್ಲಿ ಅದಕ್ಕೆ ಬರ್ತ್ ಸರ್ಟಿಫಿಕೇಟ್ ನೀಡಿ ಮಗು ಹುಟ್ಟಿದಂತೆ ಸಂಭ್ರಮಿಸಲಾಗುತ್ತೆ.

ಅಮೆರಿಕಾದಿಂದ ಹುಟ್ಟಿದ ಕನಸು

ಅನು ಬಸವರಾಜ್ ಈ ದಿವಾಸ್ ಅಂಡ್ ಡೂಡ್ಸ್ ಮಾಲೀಕರು. ಮೂಲತಃ ಬೆಂಗಳೂರಿನವರೇ ಆದ ಅನು ಕೆಲಸದ ನಿಮಿತ್ತ ಕೆಲ ವರ್ಷಗಳ ಕಾಲ ಅಮೆರಿಕಾದಲ್ಲಿ ವಾಸವಿದ್ರು. ಅಲ್ಲಿ ಈ ರೀತಿಯ ಸ್ಪಾ ಮತ್ತು ಪಾರ್ಲರ್ ಗಳು ಕಾಮನ್. ಅಲ್ಲಿಂದ ಇಲ್ಲಿ ಬಂದ ನಂತರ ಅನು ಬಸವರಾಜ್ ಇಲ್ಲೇಕೆ ಇಂತಹದೊಂದು ಪಾರ್ಲರ್ ಕಮ್ ಸ್ಪಾ ಓಪನ್ ಮಾಡಬಾರದು ಅನ್ನೋ ಐಡಿಯಾ ಮಾಡಿ ಈಗ ದಿವಾಸ್ ಅಂಡ್ ಡೂಡ್ಸ್ ಪ್ರಾರಂಭ ಮಾಡಿದ್ದಾರೆ. ಮೊದಲಿಗೆ ವೈಟ್ ಫೀಲ್ಡ್ ನಲ್ಲಿ ಒಂದು ಬ್ರಾಂಚ್ ಆರಂಭ ಮಾಡಿದ್ರು. ಅಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ತಕ್ಷಣ ಮತ್ತೊಂದು ಬ್ರಾಂಚ್ ಅನ್ನ ಇಂದಿರಾನಗರದಲ್ಲಿ ಸ್ಟಾರ್ಟ್ ಮಾಡಿದ್ದಾರೆ. ಒಟ್ಟಾರೆ ಇನ್ನು ಮುಂದೆ ಮಕ್ಕಳಿಗೆ ಮೇಕಪ್ ಮಾಡೋದಕ್ಕೆ ಅಂತ ಟೈಂ ವೇಸ್ಟ್ ಮಾಡೋ ಹಾಗಿಲ್ಲ. ಒಮ್ಮೆ ಇಲ್ಲಿ ಬೇಟಿ ಕೊಟ್ರೆ ಆಯ್ತು ಫುಲ್ ಮೇಕ್ ಓವರ್​ನೊಂದಿಗೆ ನಿಮ್ಮ ಮಗು ಸೂಪರ್ ಆಗಿ ರೆಡಿಯಾಗಿರುತ್ತದೆ.

ಇದನ್ನು ಓದಿ:

1. ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು 

2. ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!

3. ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!


Related Stories