ಸೂರ್ಯಶಕ್ತಿಯಿಂದ ಉದ್ಯೋಗ ಸೃಷ್ಟಿ, ಕುಗ್ರಾಮಗಳ ಅಭಿವೃದ್ಧಿ

ರವಿ

ಸೂರ್ಯಶಕ್ತಿಯಿಂದ ಉದ್ಯೋಗ ಸೃಷ್ಟಿ, ಕುಗ್ರಾಮಗಳ ಅಭಿವೃದ್ಧಿ

Wednesday February 17, 2016,

3 min Read

ಆತ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಬಾಲಕ. ಅವನಿಗೂ ಎಲ್ಲರಂತೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದ. ಇದು ಮೂರ್ನಾಲ್ಕು ದಶಕಗಳ ಹಿಂದಿನ ಮಾತು. ಆ ಬಾಲಕನ ಹೆಸರು ಬಾಲ. ಬಡತನ, ಜನರ ಕಷ್ಟ, ಎಲ್ಲವನ್ನು ಸಣ್ಣ ವಯಸ್ಸಿನಲ್ಲೇ ಅನುಭವಿಸಿದ್ರು, ಕಣ್ತುಂಬಿಕೊಂಡಿದ್ರು. ಬಾಲ, ಫ್ರೌಢ ವಯಸ್ಸಿಗೆ ಬರೋ ವೇಳೆಗೆ, ಆತನ ಬಹುತೇಕ ಗೆಳೆಯರು ನಗರ ಪ್ರದೇಶಗಳತ್ತ ವಲಸೆ ಹೋಗಲು ನಿರ್ಧರಿಸಿದ್ರು. ಇದಕ್ಕೆ ಕಾರಣ, ಬರಗಾಲ ಅಪರೂಪಕ್ಕೆಂಬಂತೆ ಬೀಳುವ ಮಳೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು.

image


ಈ ಮಳೆಯನ್ನೇ ಆಧರಿಸಿದ ಬೆಳೆದ ಬೆಳೆಗಳು ಫಸಲು ನೀಡುವ ಮುಂಚೆ ಒಣಗಿ ಹೋಗುತ್ತಿದ್ವು. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯ್ತು. ಇದ್ರಿಂದ ಜೀವನ ನಿರ್ವಹಣೆಗೆ ಬೇಕಾದ ಹಣ ಸಿಗುತ್ತಿರಲಿಲ್ಲ. ಮುಂದಿನ ವರ್ಷದ ಮಳೆ-ಬೆಳೆಯ ಭವಿಷ್ಯ ತಿಳಿಯಲು ಗ್ರಾಮದ ಹಿರಿಯರು ದೇವರು ದಿಂಡರು ಅಥವಾ ಅತೀಂದ್ರಿಯ ಶಕ್ತಿಗಳ ಮೊರೆ ಹೋಗುತ್ತಿದ್ದರು. ಆದರೂ ಅದರಲ್ಲಿ ಕೆಲವರು ಮಾತ್ರ ಮಳೆಯಾಗದಿರಲು ಕಾರಣ ಹವಾಮಾನ ವೈಪರಿತ್ಯ ಎನ್ನುತ್ತಿದ್ದರು. ಆದರು ಜನ ಮೂಡನಂಬಿಕೆಗೆ ಮಾರು ಹೋಗಿದ್ರು.

ಇದನ್ನು ಓದಿ

ತನಗೆ ಕಾಲಿಲ್ಲದೆ ಇದ್ರೂ ಸಿಂಹಗಳಿಗೆ ಬೆಂಗಾವಲು..!

ತನ್ನ ಗೆಳೆಯರಂತೆ ಅವರ ಸಹಾಯದಿಂದ ಬಾಲ ಸಹ ಮಹಾನಗರಿ ಬೆಂಗಳೂರು ಸೇರಿಕೊಂಡ. ಆದರೆ, ತಮ್ಮ ಬರಪೀಡಿತ ಹಳ್ಳಿಗಳಿಗೆ, ಹಳ್ಳಿಗಳ ಜೊತೆ-ಜೊತೆಗೆ ಗ್ರಾಮಸ್ಥರ ಅಭಿವೃದ್ಧಿಗೂ ಏನಾದ್ರು ಮಾಡಬೇಕೆಂಬ ಛಲ ಅವರಲ್ಲಿತ್ತು. ತಮ್ಮ ಗ್ರಾಮಗಳಿಗೆ ಆರ್ಥಿಕ ಶಕ್ತಿ ದೊರಕಿಸಿಕೊಡುವ ಕನಸು ಕಾಣತೊಡಗಿದ್ದರು. ಅಂದು ಬಾಲ ಕಂಡಿದ್ದ ಕನಸು 2016ರಲ್ಲಿ ನನಸಾಗಲಿದೆ. ಅದು ಜಗತ್ತಿನ ಅತಿದೊಡ್ಡ ಸೋಲಾರ್‌ಪಾರ್ಕ್ ರೂಪದಲ್ಲಿ. ಅಂದು ಕುಗ್ರಾಮದಲ್ಲಿ ಹುಟ್ಟಿದ ಆ ಬಾಲಕ ಇಂದು ವಿಶ್ವದ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಲೋಕಾರ್ಪಣೆಗೆ ಕಾರಣರಾಗಿದ್ದಾರೆ.

image


ಇದ್ಯಾವೋದು ಸಿನಿಮಾ ಸ್ಟೋರಿಯಲ್ಲ, ಇದು ನೈಜ ಕಥೆ. ಅಂದು ಶಾಪಗ್ರಸ್ಥ ಹಳ್ಳಿಗಳ ಆರ್ಥಿಕ ಅಭಿವೃದ್ಧಿಯ ಕನಸು ಕಂಡಿದ್ದ ಬಾಲಕ ಜಿ.ವಿ.ಬಲರಾಮ್‌. ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ಸಂಸ್ಥೆ(KREDL) ಮ್ಯಾನೇಜಿಂಗ್ ಡೈರೆಕ್ಟರ್‌. ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ ನಿರ್ಮಾಣವಾಗಲು ಜಿ.ವಿ.ಬಲರಾಮ್ ಅವರೇ ಪ್ರಮುಖ ಕಾರಣ. ಇವತ್ತು ಪಾವಗಡ ತಾಲೂಕಿನ ಹಳ್ಳಿಗರ ಪಾಲಿಗೆ ಜಿ.ವಿ ಬಲರಾಮ್ ಒಂದು ಹೆಮ್ಮೆಯಾಗಿದ್ದಾರೆ. ಸೋಲಾರ್ ಪಾರ್ಕ್ ಪಾವಗಡಕ್ಕೆ ಬರುವಂತಾಗಲು ಬಾಲ ಪಟ್ಟ ಶ್ರಮ ಅಷ್ಟಿಷಲ್ಲ. ಹಾಗಾಗಿ ಇಂದು ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ತಾವು ಅಂದುಕೊಂಡಂತೆ ತಮ್ಮ ತಾಲೂಕಿನ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ..

ಬಲರಾಮ್ ಕನಸು ನನಸಾಗಿಸುಕೊಳ್ಳುವಲ್ಲಿ ಅನೇಕ ಅಡೆತಡೆಗಳು ಎದುರಾದ್ವು. ಅದರಲ್ಲೊಂದು ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಭೂ ಸ್ವಾಧಿನ ಪಡಿಸಿಕೊಳ್ಳುವುದು. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಮುಖ್ಯವಾಗಿ ಬೇಕಿರೋದು ಭೂಮಿ. ಆದರೆ ಭಾರತದಂತಹ ದೊಡ್ಡ ದೇಶದಲ್ಲಿ ಸೋಲಾರ್ ಪಾರ್ಕ್ನಂತಹ ದೊಡ್ಡ ಪ್ರಾಜೆಕ್ಟ್ಗೆ ಬೇಕಿರೋ ಭೂಮಿ ಒಂದೇ ಕಡೆ ಸಿಗೋದು ಕಷ್ಟ. ಆದರೆ, ಬಲರಾಮ್‌, ತಮ್ಮ ವಿಭಿನ್ನ ಆಲೋಚನೆಗಳ ಮೂಲಕ ತಮ್ಮೂರಿನ ಅಭಿವೃದ್ಧಿಯಲ್ಲಿ ಪಾತ್ರವಹಿಸಿದ್ದಾರೆ. ಅದು ಇತರೆ ಸೋಲಾರ್ ಉದ್ಯಮಿಗಳು ಯೋಚಿಸದೇ ಇರುವ ರೀತಿಯಲ್ಲಿ.. ರೈತರು ತಮ್ಮ ಜಮೀನುಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಅನ್ನೋದು ಬಲರಾಮ್ ಅವರಿಗೆ ಗೊತ್ತಿತ್ತು. ಹೀಗಾಗಿಯೇ, ಅವರು ಭೂಸ್ವಾಧೀನ ಅಥವಾ ಜಮೀನು ಖರೀದಿಯ ಉಸಾಬರಿಗೆ ಕೈ ಹಾಕಲಿಲ್ಲ. ಬದಲಾಗಿ 25ರಿಂದ 30 ವರ್ಷಗಳ ಮಟ್ಟಿಗೆ ತಮ್ಮ ಜಮೀನನ್ನು ಗುತ್ತಿಗೆ ನೀಡಬಹುದು.. ಅದು ನಿಮಿಷ್ಟ ಅಂತಾ ಹೇಳಿದ ಬಲರಾಮ್‌, ರೈತರಿಗೆ ಆಯ್ಕೆ ಸ್ವಾತಂತ್ರ್ಯ ನೀಡಿದರು.

image


ಇತ್ತೀಚಿನ ವರ್ಷಗಳಲ್ಲಿ ಮಳೆ ಬೆಳೆ ಇಲ್ಲದೇ, ಬರದ ಪರಿಸ್ಥಿಯಿಂದ ಕಂಗೆಟ್ಟಿದ್ದ, ಆರ್ಥಿಕವಾಗಿ ಬರೀ ನಷ್ಟವನ್ನೇ ಕಂಡಿದ್ದ ರೈತರಿಗೆ ಭೂಮಿ ಗುತ್ತಿಗೆ ಪದ್ದತಿಯಿಂದ ಲಾಭವೇ ಹೆಚ್ಚು. ಯಾಕಂದರೆ ಪ್ರತಿ ಎಕರೆ ಭೂಮಿಗೆ ವರ್ಷಕ್ಕೆ 20 ಸಾವಿರ ಹಣ ರೈತರಿಗೆ ಸಿಗುತ್ತದೆ. ಇದರ ಜೊತೆಗೆ ಭೂಮಿಯು ಅವರ ಹೆಸರಲ್ಲೇ ಉಳಿಯುತ್ತದೆ. ಇದು ತಿಳಿದ ಕೂಡಲೇ ಶ್ರೀಮಂತ ರೈತರಿಂದ ಹಿಡಿದು ಸಣ್ಣ ಹಿಡುವಳಿದಾರರವರೆಗೂ ಸರಿಸುಮಾರು 2 ಸಾವಿರಕ್ಕೂ ಹೆಚ್ಚು ರೈತರು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ಪರಿಣಾಮ 10ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ.

ಬಲರಾಮ್ ಅವರ ಕನಸು ಇಷ್ಟಕ್ಕೆ ನಿಲ್ಲುವುದಿಲ್ಲ.ಪ್ರಾಥಮಿಕ ಆರೋಗ್ಯ, ಶಿಕ್ಷಣ, ಶುಚಿತ್ವ ಹಾಗೂ ಇನ್ನಿತರೆ ಅಗತ್ಯ ಸೇವೆಗಳ ವಿಚಾರದಲ್ಲಿ ಪಾವಗಡ ತಾಲೂಕಿನ ಗ್ರಾಮಸ್ಥರು ತಮ್ಮ ತಮ್ಮಲ್ಲೇ ಸಹಕಾರ ಸಂಘಗಳನ್ನು ಮಾಡಿಕೊಳ್ಳಲು ಬಲರಾಮ್ ಅವರು ಪ್ರೇರೇಪಿಸುತ್ತಿದ್ದಾರೆ. ಕೇವಲ ಗುತ್ತಿಗೆ ಹಣವನ್ನು ರೈತರಿಗೆ ಕೊಡಿಸುವ ಕೆಲಸಕ್ಕೆ ಮಾತ್ರ ಸೀಮಿತವಾಗಲಿಲ್ಲ. ಜೊತೆಗೆ, ಸೋಲಾರ್ಪಾರ್ಕ್ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದು ಅಲ್ಲದೇ, ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ವೆಚ್ಚವಾಗುವ ಹಣದಲ್ಲಿ ಶೇಕಡಾ ಎರಡರಷ್ಟನ್ನು ಪಾವಗಡದಲ್ಲಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ಸಹ ಬಲರಾಮ್ ಯೋಚಿಸಿದ್ದಾರೆ. ಎಲ್ಲವು ಅಂದುಕೊಂಡಂತೆ ಆದಲ್ಲಿ ಸಂಪೂರ್ಣ ಪಾವಗಡ ತಾಲೂಕು ಅಭಿವೃದ್ಧಿಯಾಗಲಿದೆ. ಇದರೊಂದಿಗೆ ದೇಶವು ಅಭಿವೃದ್ಧಿಯಾಗಲಿದೆ. ಹಲವು ಉದ್ಯೋಗ ಸೃಷ್ಟಿಸುವುದರ ಜೊತೆಗೆ ಹಲವು ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಲಿದೆ. ಜಿ,ವಿ. ಬಲರಾಮ್ ರಂತೆ ಪ್ರತಿ ರಾಜ್ಯದಲ್ಲಿ ಒಬ್ಬರು ಕನಸು ಕಂಡಲ್ಲಿ, ಪ್ರತಿ ಗ್ರಾಮ, ಗ್ರಾಮಸ್ಥರು ಗ್ರಾಮದಲ್ಲಿಯೇ ಸಂತಸದಿಂದ ಬದುಕು ನೆಡಸಲಿದ್ದಾರೆ. ನೆಮ್ಮದಿಯ ಜೀವನ ಅವರದಾಗಿಸಿಕೊಳ್ಳಲಿದ್ದಾರೆ.

ಇದನ್ನು ಓದಿ

1. ವಧು-ವರರ ಅನ್ವೇಷಣೆಗೆ ಜಾಲ ತಾಣ

2. ಕಬ್ಬನ್ ಪಾರ್ಕ್​ನಲ್ಲಿ ಒಣಗಿದ ಮರಗಳಲ್ಲಿ ಅರಳಿದೆ ಕಲೆ...!

3. ಬಳಕೆಯಾದ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಸೇವೆ ಒದಗಿಸುತ್ತಿರುವ ಬೆಂಗಳೂರು ಮೂಲದ ಚೆಕ್‌ ಗಾಡಿ ಸಂಸ್ಥೆ