ಆಮೆಗಳನ್ನು ಉಳಿಸಿ- ಇದು ನೌಕಾದಳದ ಅಭಿಯಾನ..!

ಟೀಮ್​ ವೈ.ಎಸ್​. ಕನ್ನಡ

2

ಭಾರತದಲ್ಲಿ ಸಾಕಷ್ಟು ಜೀವಿಗಳು ಅಪಾಯದ ಅಂಚಿನಲ್ಲಿವೆ. ಅವುಗಳ ಪೈಕಿ ಆಮೆಗಳ ಸ್ಥಿತಿ ಅಂತೂ ಕೇಳೋದೇ ಬೇಡ. ಪ್ರತೀ ವರ್ಷವೂ ಆಮೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ವಿಭಿನ್ನ ತಳಿಯ ಆಮೆಗಳಿದ್ದ ಪ್ರದೇಶಗಳಲ್ಲಿ ಕೆಲವು ತಳಿಗಳು ಕಾಣೆಯಾಗಿವೆ. ಆದ್ರೆ ಭಾರತೀಯ ನೌಕಾದಳ ಆಮೆಗಳನ್ನು ಮತ್ತು ಅವುಳ ತಳಿಗಳನ್ನು ರಕ್ಷಿಸಲು “ಆಪರೇಷನ್ ಓಲಿವಾ” ಅನ್ನುವ ಅಭಿಯಾನವನ್ನು ಆರಂಭಿಸಿದೆ. ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೇ ತಳಿಯ ಆಮೆಗಳನ್ನು ರಕ್ಷಿಸಲು ಇದನ್ನು ಓಡಿಶಾದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಈ ಆಮೆಗಳು ಇರುವ ತೀರಪ್ರದೇಶಗಳಲ್ಲಿ ಮೀನುಗಾರಿಕೆಯಿಂದ ಹಿಡಿದು ಎಲ್ಲಾ ಅತಿಕ್ರಮ ಪ್ರವೇಶಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಈ ಅಭಿಯಾನವನ್ನು ಓಡಿಶಾದ 3 ಸಾಗರ ತೀರಗಳಲ್ಲಿ ಆರಂಭಿಸಲಾಗಿದೆ. ಗಹಿರಮಾತಾ ಸಾಗರ ತೀರಪ್ರದೇಶ, ದೇವಿ ನದಿ ದಂಡೆ ಮತ್ತು ರುಷಿಕುಲ್ಯಾ ಬೀಚ್​ನಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಅರಣ್ಯ ಇಲಾಖೆ ಆರಂಭಿಸಿದ ಈ ಕಾರ್ಯಕ್ಕೆ ಭಾರತೀಯ ನೌಕೌದಳ ಕೈ ಜೋಡಿಸಿದೆ. ಆಮೆಗಳಿಗೆಂದೇ ಮೀಸಲಾಗಿರಿಸಿರುವ ತೀರ ಪ್ರದೇಶಗಳಲ್ಲಿ ಅಕ್ರಮ ಮೀನುಗಾರಿಕೆ ಮತ್ತು ಅತಿಕ್ರಮ ಪ್ರವೇಶ ಮಾಡಿದವರಿಗೆ ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ. ಈ ಪ್ರದೇಶಗಳಿಂದ ಆಮೆಗಳನ್ನು ಸಾಗಿಸುವುದನ್ನು ಕೂಡ ನಿಷೇಧಿಸಲಾಗಿದೆ. ದಿನದ 24 ಗಂಟೆ ಹಾಗೂ ವರ್ಷದ 365 ದಿನವೂ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆಮೆಗಳ ಸಂತತಿ ಹೆಚ್ಚಾಗುವ ತನಕ ಈ ಅಭಿಯಾನ ಕಾರ್ಯರೂಪದಲ್ಲಿ ಇರಲಿದೆ.

“ಈ ರಕ್ಷಿತ ಪ್ರದೇಶಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿದ 250 ಮೀನುಗಾರರನ್ನು ಈಗಾಗಲೇ ಬಂಧಿಸಲಾಗಿದೆ. 40 ವಿಭಿನ್ನ ತಳಿಯ ಆಮೆಗಳನ್ನು ರಕ್ಷಿಸಲಾಗಿದೆ. ಬಂಧಿತ ಮೀನುಗಾರರನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಅವರು ತನಿಖೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ 196 ಮೀನುಗಾರರನ್ನು ಬಂಧಿಸಲಾಗಿದೆ. ”
- ಸಂಜೀವ್ ಧಿವಾನ್, ಡಿಐಜಿ, ಕೋಸ್ಟ್ ಗಾರ್ಡ್ ಓಡಿಶಾ

ಗಹರಿಮಾತಾ ಮರೀನ್ ಸ್ಯಾಂಚುರಿಯಲ್ಲಿ ಅಕ್ರಮ ಪ್ರವೇಶವನ್ನು ಮತ್ತೆ ಹಚ್ಚಲು ಹೆಲಿಕಾಪ್ಟರ್​ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಇಂತಹ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶ ಮಾಡದಂತೆ ಮೀನುಗಾರರಿಗೆ ಕೂಡ ತಿಳಿಸಲಾಗಿದೆ. ಈ ರಕ್ಷಿತ ಪ್ರದೇಶಗಳಲ್ಲಿ ಮೀನುಗಾರಿಕೆ ನಡುಸುದರಿಂದ ಆಮೆಗಳ ಸಂತತಿ ಕಡಿಮೆ ಆಗಿದೆ. ಈಗ ಅದರ ರಕ್ಷಣೆ ಕೂಡ ನಮ್ಮದೇ ಹೊಣೆಯಾಗಿದೆ. ಭಾರತೀ ನೌಕಾದಳದ ಈ ಕಾರ್ಯಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನು ಓದಿ:

1. ತಾಂಜಾನಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಸಂಕಷ್ಟ : ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ 

2. ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಈ “ಫಿಟ್ನೆಸ್ ಕೌರ್”

3. ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!