ಸಿಎಂ ಭದ್ರತೆಯ ಹೊಣೆ ಹೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ.. 

ಟೀಮ್ ವೈ.ಎಸ್.ಕನ್ನಡ 

1

ಸುಭಾಷಿಣಿ ಶಂಕರನ್, ದೇಶದ ಹೆಮ್ಮೆಯ ಐಪಿಎಸ್ ಆಫೀಸರ್. ಆಸ್ಸಾಂ ಮುಖ್ಯಮಂತ್ರಿಗಳ ಭದ್ರತೆಯ ಹೊಣೆ ಸುಭಾಷಿಣಿ ಅವರ ಹೆಗಲೇರಿದೆ. ಮುಖ್ಯಮಂತ್ರಿಯೊಬ್ಬರ ಸೆಕ್ಯೂರಿಟಿಗೆ ನೇಮಕವಾದ ಭಾರತದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಸುಭಾಷಿಣಿ. ಕಳೆದ ಜುಲೈನಲ್ಲಿ ಅವರು ಸಿಎಂ ಸೆಕ್ಯೂರಿಟಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಸುಭಾಷಿಣಿ ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬದವರು. ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಬಕೋಣಮ್​ನಲ್ಲಿ ಜನಿಸಿದ ಸುಭಾಷಿಣಿ 1980ರಲ್ಲಿ ಪೋಷಕರೊಂದಿಗೆ ಮುಂಬೈಗೆ ಶಿಫ್ಟ್ ಆದ್ರು. ಅವರು ಶಾಲಾ ದಿನಗಳನ್ನು ಮುಂಬೈನಲ್ಲೇ ಕಳೆದಿದ್ದಾರೆ. ಸೇಂಟ್ ಗ್ಸೇವಿಯರ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪದವಿ ಪಡೆದ ಸುಭಾಷಿಣಿ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದ್ರು. ದೆಹಲಿಯ ಜವಾಹರ ಲಾಲ್ ಯೂನಿವರ್ಸಿಟಿಯಲ್ಲಿ (ಜೆಎನ್​ಯು) ಮಾಸ್ಟರ್ಸ್ ಹಾಗೂ ಎಂಫಿಲ್ ಮುಗಿಸಿದ್ರು.

ಜೆಎನ್​ಯುನಲ್ಲಿ ಓದುತ್ತಿದ್ದಾಗ್ಲೇ ಸುಭಾಷಿಣಿ ಯುಪಿಎಸ್​ಇ ಪರೀಕ್ಷೆಗೆ ತಯಾರಿ ಆರಂಭಿಸಿದ್ರು. 2010ರಲ್ಲಿ 243ನೇ ರ್ಯಾಂಕ್ ಪಡೆಯುವ ಮೂಲಕ ಅವರು ಯುಪಿಎಸ್​ಇ ಪರೀಕ್ಷೆ ಪಾಸು ಮಾಡಿದ್ರು. ನಂತರ ಪೊಲೀಸ್ ಅಕಾಡೆಮಿ ತರಬೇತಿಗಾಗಿ ಹೈದರಾಬಾದ್​ಗೆ ತೆರಳಬೇಕಾಯ್ತು. ಕೊನೆಗೆ ಅವರನ್ನು ಆಸ್ಸಾಂಗೆ ನೇಮಕ ಮಾಡಲಾಯ್ತು. ''ಮುಖ್ಯಮಂತ್ರಿಗಳ ಭದ್ರತಾ ಮುಖ್ಯಸ್ಥರಾಗಿ ಮಹಿಳಾ ಅಧಿಕಾರಿ ನೇಮಕಗೊಂಡಿರೋದು ಎಲ್ಲರಿಗೂ ಹೊಸ ವಿಷಯ, ಆದ್ರೆ ನಿಧಾನವಾಗಿ ಎಲ್ಲರೂ ಇದನ್ನು ಒಪ್ಪಿಕೊಳ್ತಾರೆ'' ಅನ್ನೋ ವಿಶ್ವಾಸ ಸುಭಾಷಿಣಿ ಅವರದ್ದು.

ಒಂದು ರಾಜ್ಯದ ಮುಖ್ಯಮಂತ್ರಿಗಳ ಭದ್ರತೆಯ ಹೊಣೆ ಅಂದ್ರೆ ಅತ್ಯಂತ ದೊಡ್ಡ ಜವಾಬ್ಧಾರಿ. ಯಾವುದೇ ಕುಂದು ಕೊರತೆಯಿಲ್ಲದಂತೆ ಅದನ್ನು ನಿಭಾಯಿಸುವ ಛಾತಿ ಸುಭಾಷಿಣಿ ಅವರಿಗಿದೆ. ಯಾವುದೇ ಪ್ರಮಾದಗಳಿಗೆ ಅಲ್ಲಿ ಅವಕಾಶವಿಲ್ಲ. ಪ್ರತಿದಿನ ಮುಖ್ಯಮಂತ್ರಿಗಳ ಪ್ರಯಾಣವನ್ನು ಪ್ಲಾನ್ ಮಾಡುವುದು ಇವರದ್ದೇ ಕೆಲಸ, ಅವರು ಯಾವ ಮಾರ್ಗದಲ್ಲಿ ಸಾಗಬೇಕು, ಅಲ್ಲಿ ಭದ್ರತಾ ವ್ಯವಸ್ಥೆ ಹೇಗಿದೆ ಅನ್ನೋದನ್ನೆಲ್ಲ ಸುಭಾಷಿಣಿ ನೋಡಿಕೊಳ್ತಾರೆ. ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿರುವ ಸುಭಾಷಿಣಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ.

ಇದನ್ನೂ ಓದಿ...

ಸ್ಯಾಂಡಲ್​ವುಡ್​ನಲ್ಲಿ ಟೆಕ್ಕಿಗಳ ಹವಾ- ಎಂಜಿನಿರಿಂಗ್​ ಕಲಿತ್ರೂ ಕಲೆಯೇ ಜೀವ..!

ಗ್ರಾಮಕ್ಕೆ ಗ್ರಾಮವೇ ಫುಲ್​ ಡಿಜಿಟಲ್​ -ಇವರೆಲ್ಲರು ಟೆಕ್​ಫ್ರೆಂಡ್ಲಿಗಳು..!