ಆತ್ಮ ವಿಶ್ವಾಸವೇ ಈ ಕುಸುಮಗಳ ಬಂಡವಾಳ..

ವಿಸ್ಮಯ

0

ಸ್ವಚ್ಛ, ಸ್ವಚ್ಛಂದ ಜೀವನ ಕಟ್ಟಿಕೊಳ್ಳಬೇಕು ಅನ್ನೋ, ಅದೆಷ್ಟೋ ಎಳೆಯ ಕನಸುಗಳಿಗೆ ಹುಟ್ಟಿನೊಂದಿಗೆ ಶಾಪವೂ ಅಂಟಿಕೊಂಡಿರುತ್ತೆ. ಆಡಿ ಬೆಳೆಯಬೇಕಾಗಿದ್ದ ಇವರು ಯಾವ್ಯಾವುದೋ ಕಾರಣಗಳಿಂದ ನಮ್ಮ ನಿಮ್ಮಂದ ದೂರನೇ ಇರುತ್ತಾರೆ. ಆದ್ರೆ ಇವರಿಗಿರೋ ಕೊರತೆಗಳನ್ನು ದೂರ ಮಾಡಿ, ಒಂದಿಷ್ಟೋ ಚೈತನ್ಯ ತುಂಬಿ ಹೊಸ ಶಕ್ತಿ ನೀಡೋ ಕೆಲಸ ಮಾಡ್ತಿದೆ ನಚಿಕೇತನ ಸಂಸ್ಥೆ. ಇದು ಬೆಂಗಳೂರಿನಲ್ಲಿರೋ ವಿಶೇಷ ಮಕ್ಕಳ ಬದುಕಿಗೆ ಆಸರೆಯಾಗಿರೋ ಸ್ಫೂರ್ತಿಯ ನೆಲೆ.

ನಚಿಕೇತನದಲ್ಲಿ ಮಕ್ಕಳು, ಮಕ್ಕಳ ಮನಸಿಗರು ಎಲ್ಲರೂ ಇದ್ದಾರೆ. ಇಲ್ಲಿ ಕೇವಲ ಲೌಕಿಕ ಶಿಕ್ಷಣ ನೀಡಲಾಗ್ತಿಲ್ಲ. ಬದಲಾಗಿ ಅವರಲ್ಲಿರೋ ಕೌಶಲ್ಯ ಹೊರಗೆಳೆದು, ಅವರಿಂದಲೇ ಒಂದಿಷ್ಟು ಕಲೆಗಳನ್ನ ಅರಳೀಸೋ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಹೀಗೆ ಈ ನಚಿಕೇತನದಲ್ಲಿರುವ ಈ ಮುಗ್ದ ಮನಸ್ಸುಗಳು ತಮ್ಮದೇ ಜಗತ್ತಿನಲ್ಲಿ ತಮ್ಮದೇ ಕಲ್ಪನೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರೊಳಗೆ ಅವರನ್ನು ಗುರುತಿಸುತ್ತಾ, ಸವಾಲುಗಳನ್ನು ಎದುರಿಸುತ್ತಾ ನಗುನಗುತ್ತಲೇ ಬದುಕಿನಲ್ಲಿ ಹೆಜ್ಜೆ ಹಾಕ್ತಾ ಇದ್ದಾರೆ..

ಮಕ್ಕಳು, ಅವರಿಗೊಂದು ದಿನ ಅಂದುಕೂಡಲೇ ಕೆಲವು ಸ್ಕೂಲ್‍ಗೊ ಅಥವಾ ಇನ್ನೆಲ್ಲಿಗೋ ಹೋಗಿ ಒಂದಿಷ್ಟು ಮುದ್ದಾದ ಮಕ್ಕಳನ್ನು ಮುದ್ದಾಡಿ ವಿಶ್ ಮಾಡಿ ಬರ್ತೀವಿ. ಆದರೆ ನಾವು ನಿಮಗೆ ಹೇಳತ್ತಿರೋದು ಒಂದು ವಿಶೇಷ ಜೀವಿಗಳ ಬಗ್ಗೆ. ಇಲ್ಲಿ ಮಕ್ಕಳೂ ಇದ್ದಾರೆ.. ಮಕ್ಕಳ ಮನಸ್ಸಿನವರೂ ಇದ್ದಾರೆ. ಇಲ್ಲಿ ಕನಸುಗಳಿವೆ. ಅದಕ್ಕೆ ಆಸರೆಯಾಗೋ ಮನಸ್ಸುಗಳೂ ಇವೆ. ಹಾಗಾದ್ರೆ ಯಾವುದು ಆ ಜಾಗ ಅಂತೀರಾ..

ಜಗತ್ತಿನೊಂದಿಗೇ ಇದರೂ, ಇವರಿಗೆ ಜಗದ ಅರಿವಿಲ್ಲ.. ಹಾಗಂತ ಇವರ ಬದುಕು ಯಾವತ್ತೂ ಕತ್ತಲಲ್ಲೂ ಇಲ್ಲ. ಇವ್ರೊಗಿರೋ ಪ್ರತಿಭೆಯೇ ಬಂಡವಾಳ.. ಆತ್ಮವಿಶ್ವಾಸನೇ ಎಲ್ಲವನ್ನೂ ಗೆಲ್ಲೋದಿಕ್ಕೆ ಇವರಿಗಿರೋ ಅಸ್ತ್ರ.. ಇಲ್ಲಿರೋ ಮಕ್ಕಳೆಲ್ಲ ಬುದ್ದಿಮಾಂದ್ಯ ಮಕ್ಕಳು. ಲೋಕದ ಅರಿವೇ ಇಲ್ಲದೇ.. ಹೆಚ್ಚು ಜನರ ಸಂಪರ್ಕವೂ ವಿಲ್ಲದೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಹೌದು ನಚಿಕೇತನ ಎಂಬ ಸಂಸ್ಥೆಯಲ್ಲಿ ಇವರು ಸಾಮಾನ್ಯ ಶಿಕ್ಷಣವನ್ನು ಪಡೆದು, ತಮ್ಮ ಜೀವನಕ್ಕೂ ಅಲ್ಪ ಮಟ್ಟಿಗೆ ಸ್ವಂತ ದುಡಿಮೆಯನ್ನು ಮಾಡುತ್ತಿದ್ದಾರೆ.

ನಚಿಕೇತನದ ಸಾರಥಿ ನರಸಿಂಹ.. ಇವರು ಈ ಮಕ್ಕಳನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಪ್ರತಿಫಲವನ್ನು ಆಪೇಕ್ಷಿಸದೇ ಈ ಮಕ್ಕಳನ್ನು ನೋಡಿಕೊಳ್ಳೋ ಹೊಣೆ ಹೊತ್ತಿದ್ದಾರೆ.. ಈ ಮಕ್ಕಳಿಗೆ ಶಿಕ್ಷಣವನ್ನು ನೀಡಿ, ನಂತ್ರ ಇವರ ಕೈನಲ್ಲೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ, ಅವರ ಕಾಲ್ಮೇಲೇ ನಿಲ್ಲುವಂತೆ ಪ್ರೋತ್ಸಾಹಿಸುತ್ತಾರೆ.. ಇನ್ನು ಇಲ್ಲಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಮಕ್ಕಳಿಗೆ ಆಟ -ಪಾಠ, ದುಡಿಮೆ ಎಲ್ಲವನ್ನೂ ಕಲಿಸುತ್ತಿದ್ದಾರೆ.

ಈ ಮಕ್ಕಳು ತಾವೇ ಕ್ಯಾಂಡಲ್, ವಿಸಿಟಿಂಗ್ ಕಾರ್ಡ್, ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಇದನ್ನು ಮಾರಾಟ ಕೂಡ ಮಾಡುತ್ತಾರೆ. ಸಾಕಷ್ಟು ಚಿತ್ರಗಳನ್ನು ಬಿಡಿಸುತ್ತಾರೆ. ಸ್ವಯಂ ಉದ್ಯೋಗಿಗಳಾಗಿರೋ ಇವರು ತಮ್ಮ ಊಟವನ್ನು ತಾವೇ ಸಂಪಾದಿಸುವ ಮಟ್ಟಕ್ಕೆ ಹೋಗಿದ್ದಾರೆ. ಇದರಲ್ಲಿ ಖುಷಿಯನ್ನು ಪಡುತ್ತಾರೆ.                                                                                                                                    - ನರಸಿಂಹ,ನಚಿಕೇತ ಸಂಸ್ಥೆಯ ಸ್ಥಾಪಕ

ಇನ್ನು ಮಕ್ಕಳು ಹುಟ್ಟುತ್ತಲ್ಲೇ ಬುದ್ದಿಮಾಂದ್ಯರಾಗಿ ಹುಟ್ಟುಲು ಕಾರಣವೇನೂ ಎಂಬುದನ್ನು ಕಾಲೇಜು ಮಕ್ಕಳಿಗೆ ಮಾಹಿತಿ ನೀಡುತ್ತಾರೆ. ಉಪನ್ಯಾಸ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತೆ ಅಂತಾರೆ ನರಸಿಂಹ.

ಇನ್ನು ಆದೆಷ್ಟೋ ಜನ್ರು ಮಾನಸಿಕವಾಗಿ, ದೈಹಿಕವಾಗಿ ಎಲ್ಲವೂ ಸರಿ ಇದ್ರೂ ಕೆಲಸವನ್ನು ಮಾಡಲು ಸೋಮರಿತನವನ್ನು ತೋರುತ್ತಾರೆ. ಬೇರೆಯವರ ಹಂಗಿನಲ್ಲಿ ಜೀವನ ರೂಪಿಸಿಕೊಳ್ಳುತ್ತಾರೆ. ಆದರೆ ಈ ಮಕ್ಕಳು ಯಾರಾ ಹಂಗು ಇಲ್ಲದೇ, ನಾವು ಸ್ವಂತ ಜೀವನವನ್ನು ರೂಪಿಸಿಕೊಳ್ಳತ್ತೀವೆ ಅಂತಾರೆ.

ಈ ಮಕ್ಕಳಲ್ಲಿ ಕೆಲವರಿಗೆ ನೆನಪಿನ ಶಕ್ತಿ ಹೆಚ್ಚಾಗಿ ಇದ್ದಾರೆ. ಇನ್ನು ಕೆಲವರಿಗೆ ಯಾವುದೂ ನೆನಪುಗಳು ಇಲ್ಲದೇ ಕ್ಷಣಕ್ಕೆ ಮರೆಯುವ ಖಾಯಿಲೆ ಇವೆ. ಸದ್ಯಕ್ಕೆ ಇವರಲ್ಲಿ ಒಬ್ಬೊಬ್ಬರೇ ಬುದ್ದಿಜೀವಿಗಳಾಗುತ್ತಿದ್ದಾರೆ. ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೆ ಕಾಲ ಮುಂದೆ ಇದೆ ಅನ್ನೋದು ಇವರ ನಂಬಿಕೆ. ಆತ್ಮಬಲ ಜೊತೆಗಿದ್ರೆ ಆಕಾಶವನ್ನೇ ಅಂಗೈಲಿ ಹಿಡಿತೀನಿ ಅನ್ನೋದು ಇವರ ವಿಶ್ವಾಸ.. ಇಲ್ಲಿರೋ ತಪ್ತ ಮನಸ್ಸುಗಳಿಗೆ ಬೇಕಿರೋದು ನಮ್ಮ ನಿಮ್ಮಂಥವರಿಂದ ಒಂದಿಷ್ಟು ಹಾರೈಕೆ ಅಷ್ಟೇ.. ಎಲ್ಲರಂಥೆ ಇವರಿಗೂ ಆ ಪ್ರೀತಿ ವಿಶ್ವಾಸ ಸಿಕ್ಕಿದ್ದಾರೆ ಇಲ್ಲಿರೋ ಮಕ್ಕಳ ಮನಸ್ಸುಗಳಿಗೆ ಅದೇ ಆನೆ ಬಲ..

Related Stories

Stories by YourStory Kannada