2014 ರ ಮಿಸ್ ವೀಲ್‌ಚೇರ್ ಸ್ಪರ್ದೆ ಜಯಿಸಿದ ಡಾ. ರಾಜಲಕ್ಷ್ಮಿ ಯ ಕಥಾನಕ

0

ನನ್ನ ಜೀವನದಲ್ಲಿ ನಾನು ಎರಡು ರೀತಿಯ ಜೀವನ ನೋಡಿದ್ದೇನೆ ಒಂದು ಸಾಮಾನ್ಯ ಮನುಷ್ಯಳಾಗಿ ಮತ್ತು ಇನ್ನೊಂದು ಅಂಗವೈಕಲ್ಯ ಮನುಷ್ಯಳಾಗಿ ಎಂದು ಮುಂಬೈ ನಲ್ಲಿ ನಡೆದ 2014 ರ ಮಿಸ್ ವೀಲ್‌ಚೇರ್ ಸ್ಪರ್ಧೆಯಲ್ಲಿ ಜಯಿಸಿದ 29 ವರ್ಷದ ಡಾ. ರಾಜಲಕ್ಷ್ಮಿ ಹೇಳುತ್ತಾರೆ. ಅಂಗವೈಕಲ್ಯ ಹೊಂದಿದ್ದರು ಹೇಗೆ ಜೀವನದಲ್ಲಿ ಅದನ್ನು ಒಂದು ಸವಾಲಾಗಿ ತೆಗೆದುಕೊಂಡು ಜಯಿಸಬೇಕು ಎಂದು ನನಗೆ ತಿಳಿದಿತ್ತು ಎಂದು ರಾಜಲಕ್ಷ್ಮಿ ಹೇಳುತ್ತಾರೆ.

2007ರಲ್ಲಿ ಚೆನ್ನೈ ಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಪಘಾತವಾದ ಪರಿಣಾಮ ಬೆನ್ನು ಮೂಳೆ ಮುರಿದರಿಂದ ಲಕ್ಷ್ಮಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡರು. ಬಿಡಿಎಸ್ ಪರಕ್ಷೆಯಲ್ಲಿ ಪ್ರಥಮ ಶ್ರೇಯಾಂಕ ಗಳಿಸಿದ ನಂತರ ಪ್ರೊಫೆಸ್ಸರ್ಸ್ ನ್ಯಾಶನಲ್ ಕಾನ್ಫರೆನ್ಸ್ ನಲ್ಲಿ ಕೆಲವು ದಾಖಲೆಗಳನ್ನು ಪ್ರಸ್ತುತ ಪಡಿಸಲು ಹೇಳಿದ ಕಾರಣ ನಾನು ಚೆನ್ನೈ ಗೆ ಹೋಗುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿತು ಎಂದು ಲಕ್ಷ್ಮಿ ನೆನೆಪು ಮಾಡಿಕೊಳ್ಳುತ್ತಾರೆ.

ಈ ಒಂದು ಅಪಘಾತವಾಗಿ ಆರು ತಿಂಗಳಾದ ಬಳಿಕ ಕೇವಲ ಕುಳಿತುಕೊಳ್ಳಲು ಮಾತ್ರ ಸಾಧ್ಯವಾಯಿತು. ಆದರೆ ವೀಲ್‌ಚೇರ್ ಉಪಯೋಗಿಸುವ ಯೋಜನೆಯನ್ನು ಅಸಮಾಧಾನದಿಂದ ತಿರಸ್ಕಾರ ಮಾಡಿದೆ. ವೀಲ್‌ಚೇರ್ ಉಪಯೋಗ ಮಾಡುವ ಯೋಜನೆಯನ್ನು ಹೀಗೆ ತಿರಸ್ಕಾರ ಮಾಡುತ್ತಾ ಹೋದರೆ ನಾನು ಶಾಶ್ವತವಾಗಿ ಒಂದೇ ಕಡೆ ಇರಬೇಕಾಗುತ್ತದೆ ಮತ್ತು ಏನು ಸಾಧಿಸಲು ಸಾಧ್ಯವಿಲ್ಲ ಎಂದು ನನಗೆ ನಂತರ ಅರಿವಾಯಿತು . ಇವಾಗ ಆ ವೀಲ್‌ಚೇರ್ ನನಗೆ ಒಳ್ಳೆಯ ಸ್ನೇಹಿತ ಎಂದು ರಾಜಲಕ್ಷ್ಮಿ ಹೇಳುತ್ತಾರೆ.

ನನಗೆ ಅಪಘಾತವಾದ ನಂತರ ನನ್ನ ಕುಟುಂಬದ ಸದಸ್ಯರಿಂದ ಒಳ್ಳೆಯ ಬೆಂಬಲ ದೊರಕಿತು. ಆದರೆ ಆ ಬೆಂಬಲ ನನ್ನ ಸುತ್ತ ಮುತ್ತ ಇರುವ ಜನಗಳಿಂದ ಸಿಗಲಿಲ್ಲ. ಎಲ್ಲರೂ ಅವಳಿಗೆ ಅಯ್ಯೋ ನಿನಗೆ ಅಪಘಾತವಾಯಿತಂತೆ ಎಂದು ಸಹಾನುಭೂತಿ ತೋರಿಸುತ್ತಿದ್ದರು ಅದು ನನಗೆ ಬೆಂಬಲ ನೀಡುತ್ತಿರಲಿಲ್ಲ ನನಗೆ ಅದು ಸಿಟ್ಟು ತರುತ್ತಿತ್ತು ಎಂದು ರಾಜಲಕ್ಷ್ಮಿ ಹೇಳುತ್ತಾರೆ. ಅಂಗವೈಕಲ್ಯ ಜನರಿಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ ಅವರಿಗೆ ಕೇವಲ ನಿಮ್ಮ ಬೆಂಬಲ ಬೇಕು ಅಷ್ಟೇ. ನೀವು ಬೆಂಬಲ ಕೊಡದಿದ್ದರೂ ಪರವಾಗಿಲ್ಲ ಆದರೆ ಅವರನ್ನು ಧೈರ್ಯಗೆಡಿಸಬೇಡಿ ಎಂದು ಎಂಡಿ ಪರೀಕ್ಷೆಯನ್ನು ಶೇಕಡಾ 78 ಅಂಕಗಳೊಂದಿಗೆ ಉತ್ತೀರ್ಣಲಾದ ರಾಜಲಕ್ಷ್ಮಿ ಹೇಳುತ್ತಾರೆ. ಅದು ಅಷ್ಟೊಂದು ಸುಲಭವಾಗಿರಲಿಲ್ಲ ಸಂವಿಧಾನ ದ ಪ್ರಕಾರ ಅಂಗವಿಕಲ ಜನರಿಗೆ ಶೇಕಡಾ 3 ರಷ್ಟು ಮೀಸಲಾತಿ ಇದೆ ಆದರೆ ಅದನ್ನು ಯಾರು ಪಾಲಿಸುತ್ತಿಲ್ಲ. ಅವಳು 2010 ರಲ್ಲಿ ಸ್ನಾತಕೋತ್ತರ ಪಡಿವಿಗೆ ಸೇರಲು ನ್ಯಾಲಯದಲ್ಲಿ ಶಿಕ್ಷಣಿಕ ಸಂಸ್ಥೆಗಳ ವಿರಿದ್ಧ ಹೋರಾಟ ಮಾಡಿ ಜಯಿಸಿ ಮುಂದುವರೆಸಬೇಕಾಯಿತು. ಅವಳಿಗೆ ಸರ್ಕಾರಿ ಕಾಲೇಜ್ ನಲ್ಲಿ ದಂತ ಆರೋಗ್ಯ ಅಧಿಕಾರಿ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಆಸೆ ಇತ್ತು ಆದರೂ ಅದು ಅವಳಿಗೆ ಸಾಧ್ಯವಾಗಲಿಲ್ಲ. ಇವಾಗ ರಾಜಲಕ್ಸ್ಮಿ ಅವರದೇ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ.

ರಾಜಲಕ್ಷ್ಮಿಯ ಪೋಷಕರು ವೈದ್ಯರು ಅವರು ಕ್ಲಿನಿಕ್ ನಡೆಸುತ್ತಿದ್ದನ್ನು ನೋಡಿ ರಾಜಲಕ್ಷ್ಮಿ ಗೂ ಬಾಲ್ಯದಿಂದಲೂ ವೈದ್ಯೆ ಆಗಬೇಕು ಎಂಬ ಕನಸು ಇತ್ತು. ಜನರ ಜೀವ ಉಳಿಸಿದಾಗ ಅವರ ತಂದೆ ತಾಯಿಯನ್ನು ದೇವರು ಎಂದು ಹೇಳುತ್ತಿದ್ದರು ಅದು ನೋಡಿ ನನಗೂ ಒಬ್ಬ ವೈದ್ಯೆ ಆಗಬೇಕು ಎಂದು ಆಸೆ ಹುಟ್ಟಿತ್ತು ಎಂದು ರಾಜಲಕ್ಷ್ಮಿ ಹೇಳುತ್ತಾರೆ. ರಾಜಲಕ್ಷ್ಮಿ ತಂದೆ ಅವಳು 10 ನೇ ತರಗತಿಯಲ್ಲಿ ಇರಬೇಕಾದರೆ ನಿಧನ ಹೊಂದಿದ್ದರು.

ರೂಪದರ್ಶಿ ಆಗಬೇಕು ಎಂದು ರಾಜಲಕ್ಷ್ಮಿ ಗೆ ಮೊದಲಿನಿಂದಲೂ ಅಶಕ್ತಿ ಇತ್ತು. ಅವಳು ಮಧ್ಯದಲ್ಲಿ ಫ್ಯಾಶನ್ ಡಿಸೈನಿಂಗ್ ಮುಂದುವರೆಸಲು ಕೆಲವು ದಿನಗಳು ಶಿಕ್ಷಣವನ್ನು ಬಿಟ್ಟಿದ್ದರು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದಾಗ ಅವಳು ಚಿಂತಿಸದೆ ಒಪ್ಪಿಕೊಂಡಳು. ಅವಳು ವೀಲ್‌ಚೇರ್ ಮೇಲೆ ಕುಳಿತುಕೊಂಡೆ ಸ್ಪರ್ಧೆಗೆ ತಯಾರು ನಡೆಸಿದಳು.

ಮಿಸ್ ವೀಲ್‌ಚೇರ್ ಸ್ಪರ್ಧೆ ಅವಳಿಗೆ ತುಂಬಾ ರೋಮಾಂಚನ ಉಂಟು ಮಾಡಿತು 250 ಸ್ಪರ್ಧಿಗಳಲ್ಲಿ ಈ ಡಾಕ್ಟರ್ ಜಯಶಾಲಿಯಾದರು. ಇದೆಲ್ಲ ಸಾಧ್ಯವಾಗಿದ್ದು ತೀರ್ಪುದಾರರು ಕೇಳಿದ ಪ್ರಶ್ನೆಗೆ ರಾಜಲಕ್ಷ್ಮಿ ಕೊಟ್ಟ ಒಂದು ಉತ್ತರ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಅದೇನೆಂದರೆ ನಿಮಗೆ ಅವಕಾಶ ದೊರಕಿದರೆ ಯಾರ ಜೀವನವನ್ನು ಮರು ಜೀವನ ಕೊಡಿಸಲು ಇಷ್ಟ ಪಡುತ್ತೀರಾ ಎಂದು ಕೇಳಿದರು ಅದಕ್ಕೆ ರಾಜಲಕ್ಷ್ಮಿ ನನ್ನ ಜೀವನ ಏಕಂದರೆ ನಾನು ಸಾಮಾನ್ಯ ಮನುಷ್ಯಲಾಗಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ದೇಶದ ಅಂಗವಿಕಲ ಪರಿಸ್ಥಿತಿಯನ್ನು ಸರಿಪಡಿಸಲು ಇಷ್ಟ ಪಡುತ್ತೇನೆ ಎಂದು ಉತ್ತರ ನೀಡಿದಳು.

ಅಪಘಾತವಾದ ನಂತರ ಹಲವು ಭೌತಚಿಕಿತ್ಸೆಯ ಅವಧಿಗಳ ನಂತರ ರಾಜಲಕ್ಷ್ಮಿ ತಾನೇ ಸ್ವತಃ ಕಾರು ಚಲಾಯಿಸಿಕೊಂಡು ಬಹಳ ದೂರ ಪ್ರಯಾಣ ಮಾಡುತ್ತಾಳೆ. ವೀಲ್‌ಚೇರ್ ಉಪಯೋಗ ಪಡೆದುಕೊಂಡೆ ದೇಶದ ಹಲವು ಕಡೆ ಪ್ರಯಾಣ ಮಾಡಿದ್ದಾಳೆ ಹಾಗೆಯೇ ವಿದೇಶಗಳಿಗೂ ಹೋಗಿ ಬಂದಿದ್ದಾರೆ, ಆದರೆ ನಮ್ಮ ದೇಶವೇ ಅತ್ಯಂತ ಸುಂದರವಾಗಿದೆ ಎಂದು ರಾಜಲಕ್ಷ್ಮಿ ಹೇಳುತ್ತಾರೆ.