ಜುಲೈ 1ರಿಂದ GST ಯುಗಾರಂಭ : ಇಲ್ಲಿದೆ ಹೊಸ ತೆರಿಗೆಗಳ ಸಮಗ್ರ ವಿವರ

ಟೀಮ್ ವೈ.ಎಸ್.ಕನ್ನಡ 

ಜುಲೈ 1ರಿಂದ GST ಯುಗಾರಂಭ : ಇಲ್ಲಿದೆ ಹೊಸ ತೆರಿಗೆಗಳ ಸಮಗ್ರ ವಿವರ

Wednesday June 14, 2017,

2 min Read

ಹೊಸ ಸರಕು ಮತ್ತು ಸೇವಾ ತೆರಿಗೆ ಕಾನೂನು ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರ್ತಾ ಇದೆ. 1211 ವಸ್ತುಗಳಿಗೆ ಹೊಸ ಜಿಎಸ್ಟಿ ಕಾಯ್ದೆ ಅನ್ವಯವಾಗಲಿದೆ. ಆಯಾ ವಿಭಾಗಕ್ಕೆ ತಕ್ಕಂತೆ ಅವುಗಳ ಮೇಲಿನ ತೆರಿಗೆ ಪ್ರಮಾಣ ಕೂಡ ಬದಲಾಗಲಿದೆ. 0 ಯಿಂದ ಹಿಡಿದು ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್ಟಿ ಜಾರಿಗೆ ಬಂದ ನಂತರ ಯಾವ್ಯಾವ ವಸ್ತುವಿಗೆ ಎಷ್ಟೆಷ್ಟು ತೆರಿಗೆ ಬೀಳಲಿದೆ ಅನ್ನೋ ಲೆಕ್ಕಾಚಾರವನ್ನು ನೋಡೋಣ.

image


ತೆರಿಗೆ ರಹಿತ ವಸ್ತುಗಳು…

* ತಾಜಾ ಮಾಂಸ, ಮೀನು, ಕೋಳಿ, ಮೊಟ್ಟೆ, ಹಾಲು, ಮಜ್ಜಿಗೆ, ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು ಮತ್ತು ತರಕಾರಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

* ಗೋಧಿ ಹಿಟ್ಟು, ಮೈದಾ ಹಿಟ್ಟು, ಕಡಲೆ ಹಿಟ್ಟು, ಪ್ರಸಾದ, ಉಪ್ಪು, ಬಿಂದಿ ಮತ್ತು ಕುಂಕುಮಕ್ಕೂ ತೆರಿಗೆ ವಿಧಿಸಿಲ್ಲ.

* ಸ್ಟಾಂಪ್, ಕಾನೂನು ದಾಖಲೆಗಳು, ಮುದ್ರಿತ ಪುಸ್ತಕಗಳು, ದಿನಪತ್ರಿಕೆ, ಬಳೆಗಳು, ಕೈಮಗ್ಗ, 1000ಕ್ಕಿಂತ ಕಡಿಮೆ ಬೆಲೆಯಹೋಟೆಲ್ ಮತ್ತು ಲಾಡ್ಜ್ ಗಳು ಹಾಗೂ ಹತ್ತಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಶೇ.0.25ರಷ್ಟು ತೆರಿಗೆ …

* ಒರಟು ವಜ್ರಗಳು

ಶೇ.3ರಷ್ಟು ತೆರಿಗೆ…

* ಚಿನ್ನ

ಶೇ.5ರಷ್ಟು ತೆರಿಗೆ

* 1000 ರೂಪಾಯಿಗಿಂತ ಕಡಿಮೆ ಬೆಲೆಯ ವಸ್ತ್ರ

* ಪ್ಯಾಕ್ ಮಾಡಲಾದ ಆಹಾರ ವಸ್ತುಗಳು

* 500 ರೂಪಾಯಿಗಿಂತ ಕಡಿಮೆ ಬೆಲೆಯ ಪಾದರಕ್ಷೆ

* ಕ್ರೀಂ, ಕೆನೆ ತೆಗೆದ ಹಾಲಿನ ಪುಡಿ, ಬ್ರಾಂಡೆಡ್ ಪನೀರ್, ಹೆಪ್ಪುಗಟ್ಟಿದ ತರಕಾರಿಗಳು, ಕಾಫಿ, ಚಹಾ, ಮಸಾಲೆಗಳು, ಪಿಜ್ಜಾ ಬ್ರೆಡ್, ರಸ್ಕ್ ಸಾಬೂದಾನ.

* ಸೀಮೆಎಣ್ಣೆ, ಕಲ್ಲಿದ್ದಲು, ಔಷಧಿಗಳು, ಸ್ಟೆಂಟ್, ಲೈಫ್ ಬೋಟ್ಗಳು, ಸಾರಿಗೆ ಸೇವೆಗಳು (ರೈಲ್ವೆ, ವಾಯು ಸಾರಿಗೆ) ಮತ್ತು ಸಣ್ಣ ರೆಸ್ಟೋರೆಂಟ್ಗಳು ಮತ್ತು ಮೀನಿನ ಮಾಂಸ.

ಶೇ.12ರಷ್ಟು ತೆರಿಗೆ…

* ಹೆಪ್ಪುಗಟ್ಟಿದ ಮಾಂಸದ ಉತ್ಪನ್ನಗಳು, ಬೆಣ್ಣೆ, ಚೀಸ್, ತುಪ್ಪ, ಪ್ಯಾಕ್ ಮಾಡಿರುವ ಡ್ರೈ ಫ್ರೂಟ್ಸ್,

* ಪ್ರಾಣಿಗಳ ಕೊಬ್ಬು, ಸಾಸೇಜ್, ಹಣ್ಣಿನ ರಸಗಳು, ನಮ್ಕೀನ್

* ಆಯುರ್ವೇದಿಕ್ ಔಷಧಗಳು

* ಟೂತ್ ಪೌಡರ್, ಅಗರ್ಬತ್ತಿ, ಕಲರಿಂಗ್ ಪುಸ್ತಕಗಳು, ಚಿತ್ರಪುಸ್ತಕಗಳು ಮತ್ತು ಛತ್ರಿ

* ಹೊಲಿಗೆ ಯಂತ್ರ

* ಸೆಲ್ ಫೋನ್ಗಳು, ಎಸಿ ರಹಿತ ಹೋಟೆಲ್ಗಳು, ಬ್ಯುಸಿನೆಸ್ ಕ್ಲಾಸ್ ಏರ್ ಟಿಕೆಟ್, ರಸಗೊಬ್ಬರ, ಕೆಲಸದ ಗುತ್ತಿಗೆಗಳು.

* 1000 ರೂಪಾಯಿಗೂ ಮೇಲ್ಪಟ್ಟ ವಸ್ತ್ರಗಳು.

ಶೇ.18ರಷ್ಟು ತೆರಿಗೆ…

* 500 ರೂಪಾಯಿಗಿಂತ ಮೇಲ್ಪಟ್ಟ ಪಾದರಕ್ಷೆ

* ಬೀಡಿ ಎಲೆಗಳು, ಬಿಸ್ಕೆಟ್, ಸುವಾಸನೆಯುಳ್ಳ ಸಂಸ್ಕರಿಸಿದ ಸಕ್ಕರೆ, ಪಾಸ್ತಾ, ಪೇಸ್ಟ್ರಿ, ಕೇಕ್ ಮತ್ತು ಕಾರ್ನ್ ಫ್ಲೇಕ್ಸ್.

* ಸಂಸ್ಕರಿಸಲಾದ ತರಕಾರಿ, ಜಾಮ್, ಸಾಸ್, ಸೂಪ್, ಐಸ್ಕ್ರೀಮ್

* ತ್ವರಿತ ಆಹಾರ ಮಿಶ್ರಣಗಳು, ಖನಿಜ, ನೀರು

* ಟಿಶ್ಯೂ, ಎನ್ವಲಪ್, ಟ್ಯಾಂಪೂನ್, ನೋಟ್ ಬುಕ್

* ಸ್ಟೀಲ್ ಉತ್ಪನ್ನಗಳು, ಮುದ್ರಿತ ಸರ್ಕ್ಯೂಟ್ಗಳು, ಕ್ಯಾಮರಾ, ಸ್ಪೀಕರ್, ಮತ್ತು ಮಾನಿಟರ್ಗಳು

* ಮದ್ಯ ಒದಗಿಸುವ ಎಸಿ ಹೋಟೆಲ್, ಟೆಲಿಕಾಂ ಸೇವೆಗಳು, ಐಟಿ ಸೇವೆ, ಬ್ರಾಂಡೆಡ್ ಉಡುಪುಗಳು ಮತ್ತು ಹಣಕಾಸು ಸೇವೆಗಳು.

ಶೇ.28ರಷ್ಟು ತೆರಿಗೆ…

* ಮದ್ಯ, ಬೀಡಿ, ಸಿಗರೇಟ್, ಸಿಗಾರ್, ಚ್ಯೂಯಿಂಗ್ ಗಮ್

* ಮೊಲಾಸಿಸ್, ಕೋಕಾ ರಹಿತ ಚಾಕಲೇಟ್

* ಚಾಕಲೇಟ್ ಲೇಪಿತ ವೇಫಲ್ಸ್ ಮತ್ತು ವೇಫರ್ಸ್, ಪಾನ್ ಮಸಾಲಾ, ಗಾಳಿಸಹಿತ ನೀರು, ಬಣ್ಣ

* ಡಿಯೋಡ್ರಂಟ್, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್, ಕೂದಲಿನ ಶಾಂಪೂ, ಡೈ, ಸನ್ ಸ್ಕ್ರೀನ್, ವಾಲ್ಪೇಪರ್, ಸೆರಾಮಿಕ್ ಟೈಲ್ಸ್

* ವಾಟರ್ ಹೀಟರ್, ಡಿಶ್ ವಾಶರ್, ತೂಕದ ಯಂತ್ರ, ವಾಷಿಂಗ್ ಮಷಿನ್

* ಎಟಿಎಂ, ವೆಂಡಿಂಗ್ ಮಷಿನ್ಸ್, ವ್ಯಾಕ್ಯೂಮ್ ಕ್ಲೀನರ್, ಶೇವರ್ಸ್, ಹೇರ್ ಕ್ಲಿಪ್ಪರ್ಸ್, ಆಟೋಮೊಬೈಲ್ಸ್, ಮೋಟರ್ ಸೈಕಲ್ಸ್, ವೈಯಕ್ತಿಕ ಬಳಕೆಗಾಗಿ ವಿಮಾನ, ಪಂಚತಾರಾ ಹೋಟೆಲ್, ರೇಸ್ ಕ್ಲಬ್ ಬೆಟ್ಟಿಂಗ್ ಮತ್ತು ಸಿನೆಮಾ.

ಇದನ್ನೂ ಓದಿ...

ಸಿರಿಧಾನ್ಯಗಳ ಬೇಕರಿ ಈ"ಹನಿ ಕೆಫೆ"..!

ಪರ್ವತಗಳಲ್ಲೂ ಬೈಕ್ ಓಡಿಸೋ ಚತುರ – ಲಂಕಾ ರೇಸ್​ನಲ್ಲಿ ಪಾಲ್ಗೊಳ್ತಿದ್ದಾನೆ ಭಾರತದ ಕಿರಿಯ ಕುವರ