ಸಂಪೂರ್ಣರ್ಥ್ ಎನ್ವಿರಾನ್​​ಮೆಂಟಲ್ ಸೊಲ್ಯುಷನ್ಸ್ ಸ್ಟೈಲೇ ಬೇರೆ..!

ಟೀಮ್​​ ವೈ.ಎಸ್​.

0

ಇಂಟೆಲ್​​ಕ್ಯಾಪ್​​​ ಇಂಪ್ಯಾಕ್ಸ್ ಇನ್ವೆಸ್ಟ್​​ಮೆಂಟ್ ನೆಟ್​​ವರ್ಕ್ ಝೂರಿಕ್​​ನ ರಿಯಾಂತ ಕ್ಯಾಪಿಟಲ್ ಮತ್ತು ಸಿದ್ಧಾರ್ಥ್ ಪನ್ಸಾರಿಯವರ ಆಹ್ ವೆಂಚರ್ ಜೊತೆಗೂಡಿ ಮುಂಬೈ ಮೂಲದ ತ್ಯಾಜ್ಯ ನಿರ್ವಹಣೆ ಸಂಸ್ಥೆ ಸಂಪೂರ್ಣರ್ಥ್​ನಲ್ಲಿ ಸುಮಾರು 10 ಮಿಲಿಯನ್ ಹೂಡಿಕೆ ಮಾಡಿದೆ. ಅಜಯ್ ದಾಲ್ಮಿಯಾ ಮತ್ತು ನಿರ್ಮಲ್ ಭೋಗಿಲಾಲ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಕಸದಿಂದ ರಸ ಎನ್ನುತ್ತಾರೆ, ಇವರು ಕಸದಿಂದಲೂ ಹಣ ಬಾಚುತ್ತಿದ್ದಾರೆ. ದೇಬಾರ್ಥ್ ಬ್ಯಾನರ್ಜಿ, ಜಯಂತ್ ನಟರಾಜು ಮತ್ತು ರಿತ್ವಿಕ್ ರಾವ್ ಸೇರಿಕೊಂಡು ಸಂಪೂರ್ಣರ್ಥ್ ಸೊಲ್ಯುಷನ್ ಸ್ಥಾಪಿಸಿದರು. ಇದು ಸಂಪೂರ್ಣವಾಗಿ ಎಂಡ್ ಟು ಎಂಡ್ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆ ಸೊಲ್ಯುಷನ್ ಸೇವೆಗಳನ್ನು ನೀಡುತ್ತಿದೆ. ಮುಖ್ಯವಾಗಿ ಒಣ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ, ಜೈವಿಕ ಇಂಧನ ಘಟಕ ಅನುಷ್ಠಾನ, ಗೊಬ್ಬರ ತಯಾರಿಕೆ, ಮೊದಲಾದ ಸಲಹಾ ಸೇವೆಗಳನ್ನು ಒದಗಿಸುತ್ತಿದೆ. ಕಸ ಸಂಗ್ರಹಿಸುವ ಲಾಭೇತರ ಸಂಸ್ಥೆ ಸ್ತ್ರೀ ಮುಕ್ತಿ ಸಂಘಟನೆ ಜೊತೆಗೆ ಸಂಪೂರ್ಣರ್ಥ್ ಕೆಲಸ ಮಾಡುತ್ತಿದೆ. ಇದು ಕಸ ಸಂಗ್ರಹಿಸುವ ಮಹಿಳೆಯರ ಆದಾಯ ಹೆಚ್ಚಳಕ್ಕೂ ಕಾರಣವಾಗಿದೆ. ಮುಖ್ಯವಾಗಿ ನಗರಾಡಳಿತ ಸಂಸ್ಥೆಗಳು, ಕಾರ್ಪೋರೇಟ್ ಪಾರ್ಕ್​ಗಳು, ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್​​ಗಳು ಇವರ ಮುಖ್ಯ ಗ್ರಾಹಕರಾಗಿವೆ.

ಸಧ್ಯ ಜಾರಿಯಲ್ಲಿರುವ ಪದ್ಧತಿಯು ಅಂದರೆ, ಕಸವನ್ನು ಲ್ಯಾಂಡ್​​ಫಿಲ್​​ಗಳಲ್ಲಿ ಭರಿಸುವ ಪದ್ಧತಿಯಿಂದ ಸಾಕಷ್ಟು ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಷ್ಟೇ ಅಲ್ಲ, ಈ ಪದ್ಧತಿಯು ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ. ಸಂಪೂರ್ಣರ್ಥ್, ಪರಿಣಾಮಕಾರಿ ವಿಕೇಂದ್ರೀಕೃತ ಲೈಟ್ ವ್ಯವಹಾರ ಮಾದರಿಯನ್ನು ಪ್ರಸ್ತುತಪಡಿಸುತ್ತಿದ್ದು, ಪರಿಸರವೂ ಇದನ್ನು ಭರಿಸಿಕೊಳ್ಳಬಹುದು. ಉದ್ಯೋಗವನ್ನೂ ಸೃಷ್ಟಿಸುವ ಮೂಲಕ ಲಾಭದಾಯಕವೂ ಆಗಿದೆ.

ಇಂಟೆಲ್​​ಕ್ಯಾಪ್​​ ಸಂಸ್ಥೆಯು ಸಂಪೂರ್ಣರ್ಥ್​ನಲ್ಲಿ ಪಾಲು ಪಡೆದಿದೆ. ಅಸುರಕ್ಷಿತ ರಸ್ತೆಗಳು, ತೆರೆದ ಚರಂಡಿಗಳು, ರೋಗ ಹಬ್ಬಿಸುವ ಸೊಳ್ಳೆ/ಕೀಟಗಳು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನೂ ಮೀರಿ ಮನುಷ್ಯರನ್ನು ಪ್ರತಿನಿತ್ಯ ಬಾಧಿಸುತ್ತವೆ ಎನ್ನುವುದು ಇಂಟೆಲ್​ಕ್ಯಾಪ್ ಅಭಿಪ್ರಾಯ. ಸಂಪೂರ್ಣರ್ಥ್, ಸಾಮಾಜಿಕ ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ಅತ್ಯಂತ ಹತ್ತಿರದಿಂದ ಅಭ್ಯಾಸ ಮಾಡುವ ಕೆಲವೇ ಕೆಲವು ಸಂಸ್ಥೆಗಳಲ್ಲಿ ಒಂದಾಗಿದ್ದು, ಆರ್ಥಿಕ ವಿಚಾರವನ್ನೂ ಗಮದಲ್ಲಿಟ್ಟುಕೊಳ್ಳುತ್ತದೆ.

ತ್ಯಾಜ್ಯ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಂಕಿಅಂಶಗಳನ್ನು ಒದಗಿಸುತ್ತಾರೆ ಸಂಸ್ಥೆಯ ಸಹ ಸಂಸ್ಥಾಪಕರಾದ ಜಯಂತ್ ನಟರಾಜು ಅವರು.

ಮುಂಬೈನಲ್ಲೇ ಪ್ರತಿನಿತ್ಯ ಸುಮಾರು 10 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇಲ್ಲಿ ದೊಡ್ಡ ಅವಕಾಶವಿದೆ. ಸ್ವಚ್ಛ ಭಾರತ್ ಅಭಿಯಾನದಿಂದಾಗಿ ನಮ್ಮ ಸೇವೆಗಳ ಬಗ್ಗೆ ಹೆಚ್ಚಿನ ಮಂದಿಗೆ ಆಸಕ್ತಿ ಹುಟ್ಟಿದೆ, ಅವರು ಇದರ ಭಾಗವಾಗಲು ಮುಂದೆ ಬರುತ್ತಿದ್ದಾರೆ. ನಮ್ಮ ವಹಿವಾಟನ್ನು ವೃದ್ಧಿಸಲು, ಹೂಡಿಕೆದಾರರ ಮಾರ್ಗದರ್ಶನದೊಂದಿಗೆ ನಾವು ಎಲ್ಲಾ ಸವಾಲುಗಳನ್ನು ಗೆಲ್ಲಲು ಸಾಧ್ಯವಿದೆ ಎನ್ನುವ ವಿಶ್ವಾಸ ನಮಗಿದೆ.

ಇತ್ತೀಚಿನ ಕೆಲ ತಿಂಗಳುಗಳಲ್ಲಿ ತ್ಯಾಜ್ಯ ನಿರ್ವಹಣಾ ಕ್ಷೇತ್ರಕ್ಕೆ ಹೂಡಿಕೆ ಹರಿದು ಬರುತ್ತಿದೆ. ಇನ್​ಫ್ಯೂಸ್ ವೆಂಚರ್ ಅವರು ರಿವೈವ್ ಇ-ವೇಸ್ಟ್​​​ನಲ್ಲಿ, ಆವಿಷ್ಕಾರ್ ಅವರು ನೆಪ್ರಾ ರಿಸೋರ್ಸ್ ಮ್ಯಾನೇಜ್​​ಮೆಂಟ್​​ನಲ್ಲಿ , ಅಂಕುರ್ ಕ್ಯಾಪಿಟಲ್​​ನವರು, ಬೆಂಗಳೂರು ಮೂಲದ ಡೈಲಿ ಡಂಪ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಇಂಡಿಯನ್ ಏಂಜಲ್ ನೆಟ್​ವರ್ಕ್ ಅವರು ಕೂಡಾ ಹೂಡಿಕೆ ಘೋಷಿಸಿದ್ದಾರೆ.

2014 ಮಾರ್ಚ್​ನಲ್ಲಿ ಇನ್​ಫ್ಯೂಸ್​​​ ವೆಂಚರ್ ನವರು ಸುಮಾರು 110 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ನೆಪ್ರಾದಲ್ಲಿ ಆವಿಷ್ಕಾರ್ ಅವರು ಸುಮಾರು 2 ಮಿಲಿಯನ್ ಡಾಲರ್ ಹೂಡಿದ್ದಾರೆ.

ಮೂಲದಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸುವುದರಿಂದ ಪರಿಸರದ ಮೇಲೆ ಅಗುವ ಪರಿಣಾಮವನ್ನು ತಡೆಗಟ್ಟಬಹುದು. ಅಲ್ಲದೆ, ತ್ಯಾಜ್ಯ ಸಂಗ್ರಾಹಕರಿಗೂ, ನಗರಾಡಳಿತ ಸಂಸ್ಥೆಗಳಿಗೂ ಆರ್ಥಿಕವಾಗಿ ಲಾಭದಾಯಕವಾಗಿದೆ. ಉದಾಹರಣೆಗೆ, ಸಂಪೂರ್ಣರ್ಥ್ ಟಿಐಎಸ್ಎಸ್ ಕ್ಯಾಂಪಸ್​​ನಲ್ಲಿರುವ ಕೆಫೆಟೇರಿಯಾದಲ್ಲಿ ಜೈವಿಕ ಇಂಧನ ಘಟಕವನ್ನು ಸ್ಥಾಪಿಸಿದೆ. ಕೆಫೆಟೇರಿಯಾದಲ್ಲಿ ಉಳಿಯುವ ಆಹಾರ ತ್ಯಾಜ್ಯವನ್ನು ಘಟಕದಲ್ಲಿ ಸುರಿಯುತ್ತೇವೆ. ಇದರಿಂದ ಪ್ರತಿದಿನ ಸುಮಾರು 1 ಸಿಲಿಂಡರ್​​ನಷ್ಟು ಎಲ್​ಪಿಜಿ ಸೃಷ್ಟಿಯಾಗುತ್ತದೆ. ಸಣ್ಣ ವ್ಯವಹಾರ, ಮತ್ತು ಚಿಕ್ಕ ವಸತಿ ಸಂಕೀರ್ಣಗಳಿಗೆ ಈ ಒಂದು ಸಿಲಿಂಡರ್ ಕೂಡಾ ಲಾಭ ಮಾಡಿಕೊಡುತ್ತದೆ ಎನ್ನುತ್ತಾರೆ ನಿರ್ಮಲ್.

Related Stories

Stories by YourStory Kannada