ಟೆಕ್ ಸ್ಟಾರ್ಟ್ ಅಪ್ ಗಳಿಗೊಂದು ಚೊಕ್ಕದಾದ ಮೀಟ್ ಅಪ್ : ಇದು ಬ್ಯುಸಿನೆಸ್ ಕುದುರಿಸಿಕೊಳ್ಳುವ ಐಡಿಯಾ ..!

ಟೀಮ್​ ವೈ.ಎಸ್​. ಕನ್ನಡ

ಟೆಕ್ ಸ್ಟಾರ್ಟ್ ಅಪ್ ಗಳಿಗೊಂದು ಚೊಕ್ಕದಾದ ಮೀಟ್ ಅಪ್ : ಇದು ಬ್ಯುಸಿನೆಸ್ ಕುದುರಿಸಿಕೊಳ್ಳುವ ಐಡಿಯಾ ..!

Thursday December 24, 2015,

4 min Read

ಒಂದೇ ವೇಳೆಯಲ್ಲಿ ಒಂದೇ ಕಡೆ ನಾವು ಹಲವರನ್ನ ಭೇಟಿ ಮಾಡಿದ್ರೆ ಅದು ಹೊಸ ಆಲೋಚನೆಗಳಿಗೆ, ಹೊಸ ಆರಂಭಕ್ಕೆ ಅವಕಾಶಗಳನ್ನ ಮಾಡಿಕೊಡುತ್ತದೆ. ಹಾಗೇ ಒಂದು ಹೊಸ ಅನ್ವೇಷಣೆ ಹಾಗೂ ಸ್ಟಾರ್ಟ್ ಅಪ್ ಗಳ ಹುಟ್ಟಿಗೂ ಇದು ಎಡೆಮಾಡಿಕೊಡುತ್ತದೆ. ಇದಕ್ಕೊಂದು ಉದಾಹರಣೆ ಇತ್ತೀಚೆಗೆ ನಡೆದ ‘ಮಿಲಿಯನ್ ಇನ್ಸ್ಟಾಲ್ ಮೀಟ್ ಅಪ್ ’. ಜನರನ್ನ ಅಥವಾ ಗ್ರಾಹಕರನ್ನ ಸಂಪರ್ಕಿಸುವುದಕ್ಕೆ ವಿವಿಧ ದಾರಿಗಳಿವೆ. ಆನ್ ಲೈನ್ ಚಾನೆಲ್ ಗಳು, ಪ್ರತೀ ದಿನ ಕಳಿಸುವ ಈ ಮೇಲ್ ಗಳು, ಫೋನ್ – ಚಾಟಿಂಗ್ ಗಳ ಟೆಕ್ ಸ್ಟಾರ್ಟ್ ಅಪ್ ಗಳು ಸಂವಹನ ನಡೆಸಿದ್ರೂ ಪರಸ್ಪರ ಮುಖ ಭೇಟಿಗಳ ಅವಕಾಶಗಳಿಂದ ಸದಾ ವಂಚಿತವಾಗಿರುತ್ತವೆ. ಹೀಗಾಗಿ ಆಗಾಗ್ಯೆ ಮೀಟ್ ಅಪ್ಸ್ ಗಳನ್ನ ನಡೆಸುವುದರಿಂದ ಸಂಪರ್ಕ ಸೇತುವೆ ಬೆಳೆಯುತ್ತದೆ. ಬಾಯಿಯಿಂದ ಬಾಯಿಗೆ ಸಂವಹನ ಬೆಳೆಯುತ್ತದೆ. ಕಮ್ಯೂನಿಟಿಗಳಲ್ಲಿ ಸಂವಹನ ನಡೆಸುವುದರಿಂದ ಇಲ್ಲಿ ಯಾರಿಗೂ ಬ್ರ್ಯಾಂಡಿಂಗ್ ಮಾಡುವುದು ಕಷ್ಟವೆನಿಸುವುದಿಲ್ಲ. ಹೀಗಾಗಿ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ ಮೀಟ್ ಅಪ್ ಪ್ಲಾನ್ ಗಳನ್ನ ಮಾಡುವುದು ಅತ್ಯಗತ್ಯ. ಹಾಗಂತ ಈ ಒಂದು ಗೂಡುವಿಕೆಯನ್ನ ಹೇಗೆಂದರೆ ಹಾಗೇ ಮಾಡುವುದಕ್ಕೆ ಸಾಧ್ಯವಿಲ್ಲ. ಇದಕ್ಕೂ ಸ್ಪಷ್ಟವಾದ ತಯಾರಿಗಳು ಅನಿವಾರ್ಯ.

image


• ಮೀಟ್ ಅಪ್ ಗೆ ಪೂರ್ವ ವ್ಯವಸ್ಥೆಗಳು

• ಕಾರ್ಯಕ್ರಮದ ದಿನ

• ಕಾರ್ಯಕ್ರಮದ ನಂತ್ರದ ವ್ಯವಸ್ಥೆಗಳು

ಟೆಕ್ ಸ್ಟಾರ್ಟ್ ಅಪ್ ಗಳು ಏನಾದ್ರೂ ಮೇಲೆ ಸೂಚಿಸಿದಂತೆ ಮೀಟ್ ಅಪ್ ಗಳನ್ನ ಮಾಡಿಕೊಂಡ್ರೆ ಒಂದು ಅದ್ಭುತ ರಿಸಲ್ಟ್ ಪಡೆಯೋದ್ರಲ್ಲಿ ಅನುಮಾನವಿಲ್ಲ. ಆದ್ರೆ ಇದೊಂದು ಪಕ್ಕಾ ಬ್ಲೂ ಪ್ರಿಂಟ್ ಅಲ್ಲದಿದ್ರೂ ಯಾವುದಾದರೊಂದು ಆರ್ಗನೈಸೇಷನ್ ಜೊತೆ ಸೇರಿಕೊಳ್ಳುವ ಮೊದಲು ಸೂಕ್ತ ಹೆಜ್ಜೆಗಳನ್ನಿಡಲು ಸಹಕಾರಿಯಾಗುವುದಂತೂ ಸತ್ಯ.

ಮುಖ್ಯವೆನಿಸುವ ದೊಡ್ಡ ಹಾಗೂ ಸಣ್ಣ ಮೀಟಪ್ ಗಳು..

ಮೀಟ್ ಅಪ್ ಗಳು ಯಾವತ್ತಿಗೂ ಒಂದು ಕಾನ್ಫರೆನ್ಸ್ ನ ರೂಪದಲ್ಲಿರಬಾರದು. ಇದೊಂದು ನಿಷ್ಠಾವಂತ ಬಳಕೆದಾರರನ್ನ ಭೇಟಿಯಾಗಲು ನಡೆಯುವ ಅನೌಪಚಾರಿಕ ಭೇಟಿಯಂತಿರಬೇಕು. ಅಲ್ಲದೆ ಸಣ್ಣ ಭೇಟಿಗಳು ಇಂಡಸ್ಟ್ರೀ ಪಾರ್ಟನರ್ ಗಳನ್ನ ಪಡೆಯಲು ಸಹಕರಿಸುತ್ತವೆ. ಅಲ್ಲದೆ ಇದು ಕೇವಲ ಒಂದು ತಂಡದೊಂದಿಗೆ ಮಾತ್ರವಾಗಿದೆ ವೈಯುಕ್ತಿವಾಗಿಯೂ ಸಂವಹನ ನಡೆಸಲು ಅವಕಾಶ ನೀಡುತ್ತದೆ.

ಮೀಟ್ ಅಪ್ ಗೆ ಪೂರ್ವ ವ್ಯವಸ್ಥೆಗಳು

ಮೀಟ್ ಅಪ್ ಪ್ಲಾನ್ ಗಳು ಯಾವತ್ತೂ ಧೈರ್ಯವಂತರಿಗೆ ಆಗಿರುತ್ತದೆಯೇ ಹೊರತು ಪುಕ್ಕಲರಿಗಲ್ಲ. ಯಾಕಂದ್ರೆ ಇಲ್ಲೂ ಸಾಕಷ್ಟು ಸವಾಲುಗಳು ಬರುವುದರಿಂದ ಎದುರಿಸುವ ಎದೆಗಾರಿಕೆ ಬೇಕು. ಹೀಗಾಗಿ ಮೀಟ್ ಅಪ್ ಗಳಿಗೆ ಒಂದಿಷ್ಟು ಪೂರ್ವ ತಯಾರಿಗಳನ್ನ ನಡೆಸಿದ್ರೆ ಸಕ್ಸಸ್ ಆಗುವುದು ಖಚಿತ.

ಪರಿಕಲ್ಪನೆಗಳಿಗೆ ಆಕಾರ

ಆರಂಭದಲ್ಲಿ ಪರಿಕಲ್ಪನೆಯಲ್ಲಿ ಮಾತ್ರ ಇರುವ ಮೀಟ್ ಅಪ್ ಗಳಿಗೆ ಒಂದು ವ್ಯವಸ್ಥಿತ ರೂಪ ಕೊಟ್ಟು ಅದನ್ನ ಕಾರ್ಯಕ್ಕೆ ತರುವುದು ಒಂದು ದೊಡ್ಡ ಸವಾಲು. ಹೀಗಾಗಿ ಕೆಲವು ಅಂಶಗಳ ಬಗ್ಗೆ ಎಚ್ಚರಿಕೆವಹಿಸುವುದು ಅತ್ಯಗತ್ಯ. ಮೊದಲು ನಾವು ಬಯಸುವ ಕಮ್ಯುನಿಟಿ ಬಗ್ಗೆ ಸ್ಪಷ್ಟವಾದ ಚಿತ್ರಣವಿರಬೇಕು. ಪರಸ್ಪರ ಮಾತುಕತೆ ನಡೆಸುವ ವೇಳೆ ಬೆಳವಣಿಗೆಗೆ ಎಷ್ಟು ಅವಕಾಶವಿದೆ ಎಂಬುದನ್ನ ಅರ್ಥಮಾಡಿಕೊಳ್ಳಬೇಕು. ಜೊತೆಗೆ ನೀವು ಸೇರ ಬಯಸುವ ಕಮ್ಯುನಿಟಿಗಳು ಎಷ್ಟು ಪ್ರಾಮಾಣಿಕರು ಅನ್ನೋವುದನ್ನೂ ಮೊದಲು ಇಲ್ಲಿ ಅರಿತುಕೊಳ್ಳಬೇಕು. ಇಂತಹ ಎಲ್ಲಾ ಲೆಕ್ಕಾಚಾರಗಳೊಂದಿಗೆ ನಡೆಸಲ್ಪಟ್ಟ ಮಿಲಿಯನ್ ಇನ್ಸ್ಟಾಲ್ ಮೀಟಪ್ ಅತ್ಯಂತ ದೊಡ್ಡ ಯಶಸ್ಸು ಸಾಧಿಸಿದೆ.

image


ತಂಡದ ಆಯ್ಕೆ

ಮೀಟ್ ಅಪ್ ಈವೆಂಟನ್ನ ಆಯೋಜಿಸುವಾಗ ತಂಡದ ಆಯ್ಕೆಯೂ ತುಂಬಾ ಮುಖ್ಯವಾಗಿರುತ್ತದೆ. ಸಂಕುಚಿತ ತಂಡವಿದ್ದಷ್ಟು ಸಂವಹನಕ್ಕೆ ಹೆಚ್ಚು ಅನುಕೂಲಕರವಾಗಲಿದೆ. ಮಿಲಿಯನ್ ಇನ್ಸ್ಟಾಲ್ ಮೀಟಪ್ ಕೂಡ ಇಂತದ್ದೇ ಲೆಕ್ಕಾಚಾರದಲ್ಲಿ ಸೇಲ್ಸ್, ಮಾರ್ಕೆಟಿಂಗ್ ಮತ್ತು ಸಹ ಸಂಸ್ಥಾಪಕರನ್ನ ದೂರವಿಟ್ಟಿತ್ತು. ಹೀಗಾಗಿ ಹೊಸ ಯೋಜನೆಗಳನ್ನ ತೋರಿಸಬಲ್ಲ ವ್ಯಕ್ತಿಗಳನ್ನ, ಗ್ರೂಪ್ ಗಳನ್ನ ಹೊಂದುವುದು ಸಾಧ್ಯವಾಗುತ್ತದೆ. ಅಲ್ಲದೆ ಇಂತಹ ಕಾರ್ಯಕ್ರಮಗಳನ್ನ ನಿರ್ವಹಿಸಲು ಬ್ರಾಂಡಿಂಗ್, ಪಬ್ಲಿಕ್ ರಿಲೇಶನ್ ಹಾಗೂ ಇತರೆ ಪ್ರಮುಖ ಹೊಣೆಗಳನ್ನ ಹೊರಬಲ್ಲ ವ್ಯಕ್ತಿಗಳು ಮುಖ್ಯವೆನಿಸುತ್ತಾರೆ. ಅಲ್ಲದೆ ಮೀಟಪ್ ಗಳಲ್ಲಿ ಗಮನವಹಿಸಬೇಕಾದ ಇನ್ನು ಕೆಲವು ಅಂಶಗಳು ಅಂದರೆ ಕಾರ್ಯಕ್ರಮಗಳಿಗೆ ನಿಯೋಗಗಳ ರಚನೆ, ಬಜೆಟ್ ಪ್ಲಾನಿಂಗ್, ಪ್ಲಾನ್ ಗಳ ಫಾಲೋ ಅಪ್, ಪ್ಯಾನೆಲ್ ಸೆಲೆಕ್ಷನ್, ಸ್ಥಳದ ಆಯ್ಕೆ, ಪ್ರಾಯೋಜಕರ ಆಯ್ಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಿಗಾವಹಿಸುವುದು ಅತ್ಯವಶ್ಯಕ.

ಇಷ್ಟೆಲ್ಲಾ ತಯಾರಿಗಳನ್ನ ನಡೆಸಿದ್ರೂ ಕಾರ್ಯಕ್ರಮಕ್ಕೆ ಪ್ರಾಯೋಜಕರನ್ನ ಹುಡುಕುವುದೂ ಅಷ್ಟು ಸುಲಭದ ಮಾತಲ್ಲ. ಸ್ಪಾನ್ಸರ್ ಗಳು ಯಾವತ್ತೂ ಬ್ರ್ಯಾಂಡ್ ಹಾಗೂ ಸ್ಟಾರ್ಟ್ ಅಪ್ ಗಳ ಮೂಲವನ್ನ ಗಮನಿಸುತ್ತಾರೆ. ಆದ್ರೆ ನಿಮ್ಮ ನಿಮ್ಮ ನೆಟ್ ವರ್ಕ್ ಗಳಲ್ಲಿ ಸೂಕ್ಷ್ಮವಾಗಿ ನೋಡುತ್ತಾ ಹೋದ್ರೆ ನಿಮಗೊಪ್ಪುವ ಸ್ಪಾನ್ಸರ್ ಗಳು ಸಿಕ್ಕೇ ಸಿಗುತ್ತಾರೆ. ಇದರ ಜೊತೆಗೆ ಪೂರ್ವ ಮಾರುಕಟ್ಟೆಯ ತಂತ್ರ ಹಾಗೂ ಪೂರ್ವ ಪ್ರಚಾರ ತಂತ್ರಗಳ ಮೇಲೆ ನಿಗಾವಹಿಸಿದ್ರೆ ಹಾದಿ ಇನ್ನಷ್ಟು ಸರಳವಾಗುತ್ತದೆ.

image


ಕಾರ್ಯಕ್ರಮದ ದಿನದ ಪ್ಲಾನಿಂಗ್..

ಕಾರ್ಯಕ್ರಮಕ್ಕೆ ಹಿಂದಿನ ತಯಾರಿಗಳು ಎಷ್ಟು ಮುಖ್ಯನೋ, ಕಾರ್ಯಕ್ರಮದ ದಿನದ ಪ್ಲಾನಿಂಗ್ ಗಳು ಕೂಡ ಅಷ್ಟೇ ಮುಖ್ಯಪಾತ್ರವಹಿಸುತ್ತವೆ.

• ಕಾರ್ಯಕ್ರಮ ನಿಗದಿಯಾದ ಸ್ಥಳಕ್ಕೆ ಸೂಕ್ತ ಸಮಯಕ್ಕೆ ತಲುಪುವುದು

• ನೀವು ಭೇಟಿಯಾಗಬೇಕಾಗಿರುವ ವೆಂಡರ್ಸ್ ಗಳು ತಲುಪಬೇಕಾದ ಸ್ಥಳಕ್ಕೆ ಬಂದಿದ್ದಾರಾ ಎಂಬುದನ್ನ ಖಚಿತಪಡಿಸಿಕೊಳ್ಳಿ. ಅವರಿಗಿಂತ ಮುಂಚಿತವಾಗಿ ನೀವು ಸ್ಥಳದಲ್ಲಿರುವುದು ಅನಿವಾರ್ಯ

• ವಿಸಿಟರ್ ಗಳಿಗೆಲ್ಲಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶ ಇದೆಯಾ ಎಂಬುದನ್ನ ಖಚಿತಪಡಿಸಿಕೊಳ್ಳಿ

• ಅತಿಥಿಗಳನ್ನ ಪ್ಯಾನೆಲ್ ಗೆಸ್ಟ್ ಗಳಿಗೆ ಪರಿಚಯಿಸಿಕೊಳ್ಳಿ ಮತ್ತು ಯಾವ ವಿಷಯದ ಬಗ್ಗೆ ಮಾತನಾಡಬೇಕು ಎಂಬುದನ್ನ ಖಚಿತಪಡಿಸಿಕೊಳ್ಳಿ

• ಲೈವ್ ಇವೆಂಟ್ ಗಳ ಬಗ್ಗೆ ಟ್ವಿಟರ್ ಮತ್ತಿತ್ತರ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಅಪ್ ಡೇಟ್ ಮಾಡುತ್ತಿರುವುದು ಪ್ರಚಾರ ಕಲೆಗಿರುವ ಉತ್ತಮ ವೇದಿಕೆ.

• ಕಾರ್ಯಕ್ರಮದ ಬಗ್ಗೆ ಪ್ರಾಮಾಣಿಕರಿಂದ ಫೀಡ್ ಬ್ಯಾಕ್ ಪಡೆಯುವುದು

• ಇನ್ನು ಅತ್ಯಂತ ಪ್ರಮುಖವಾಗಿ ಈವೆಂಟನ್ನ ನಿಮ್ಮ ಬ್ರ್ಯಾಂಡ್ ಆಗಿ ನಿರೂಪಿಸಿಕೊಳ್ಳಬಾರದು. ಬದಲಾಗಿ ನಿಮ್ಮ ಬ್ರ್ಯಾಂಡ್ ಬಗ್ಗೆ ಈವೆಂಟ್ ನಡೆಸುವುದು ಹೆಚ್ಚು ಸೂಕ್ತ

image


ಈವೆಂಟ್ ನಂತ್ರದ ಪ್ಲಾನಿಂಗ್..

ಕಾರ್ಯಕ್ರಮಕ್ಕೆ ಮೊದಲು, ಕಾರ್ಯಕ್ರಮದ ದಿನ ಪ್ಲಾನಿಂಗ್ ಗಳನ್ನ ಮಾಡುವುದು ಎಷ್ಟು ಮುಖ್ಯನೋ ಹಾಗೇ ಕಾರ್ಯಕ್ರದ ನಂತರವೂ ಕೆಲವು ಯೋಜನೆಗಳನ್ನೂ ಮಾಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ನಿಮ್ಮ ಬ್ರ್ಯಾಂಡ್ ಗೆ ಒಟ್ಟಾರೆ ಒಂದು ಶೇಪ್ ನೀಡುತ್ತೆ. ಅಲ್ಲದೆ ಅತೀ ದೊಡ್ಡ ತಿರುವುಗಳನ್ನ ನೀಡಿದ್ರೂ ಅಚ್ಚರಿಯಲ್ಲ.

• ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳಿ ಒಂದು ಮೇಲ್ ಕಳಿಸಿ. ಹಣಕಾಸಿನ ವ್ಯವಸ್ಥೆ ಇನ್ನೂ ಗಟ್ಟಿಯಾಗಿದ್ದಲ್ಲಿ ಗಿಫ್ಟ್ ಗಳನ್ನ ಕಳಿಸುವುದು ಹೆಚ್ಚು ಸೂಕ್ತ

• ಭೇಟಿಯಾದ ವ್ಯಕ್ತಿ ಅಥವಾ ಸಂಸ್ಥೆಗಳ ಬಗ್ಗೆ ಆದಷ್ಟು ಬೇಗ ಡಾಟಾ ಕಲೆಹಾಕುವುದು ಉತ್ತಮ

• ಒಂದೊಮ್ಮೆ ಸಂಭಾವನೆ ನೀಡುವ ಪ್ರಕ್ರಿಯೆ ಇದ್ದಲ್ಲಿ ಅದನ್ನೂ ಬೇಗನೆ ಮುಗಿಸಿಕೊಳ್ಳುವುದರಿಂದ ಸಂಬಂಧಗಳನ್ನ ಉಳಿಸಿಕೊಳ್ಳಬಹುದು.

• ಒಂದೊಮ್ಮೆ ಅವರಿಂದ ಫೀಡ್ ಬ್ಯಾಕ್ ಬಂದಲ್ಲಿ ಅವರಿಗೆ ಕೃತಜ್ಞತೆ ಗಳನ್ನ ತಿಳಿಸುವುದು ಸೂಕ್ತ

• ಅಂತಿಮವಾಗಿ ನಿಮ್ಮ ಅನುಭವವನ್ನು ಅದ್ಭುತವಾಗಿ ವರ್ಣಿಸಿ ಬರೆಯಿರಿ

ಹೀಗೆ ಸ್ಟಾರ್ಟ್ ಅಪ್ ಗಳ ಕನಸಿನಲ್ಲಿರುವವರು ಅದರಲ್ಲೂ ಟೆಕ್ ಸ್ಟಾರ್ಟ್ ಅಪ್ ನ ಹೊಸ್ತಿಲಲ್ಲಿ ಇರುವವರು ಈ ರೀತಿ ಕಾರ್ಯಕ್ರಗಳನ್ನ ಯೋಜಿಸುವುದಿಂದ ವೈಯುಕ್ತಿಕವಾಗಿ ಹಾಗೂ ಔದ್ಯೋಗಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಲೇಖನ – ಲಕ್ಷ್ಮಣ್ ಪಾಪಿನೆನಿ

ಅನುವಾದ – ಬಿ ಆರ್ ಪಿ, ಉಜಿರೆ