ಬಂದಿದೆ ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ..!

ಎನ್​ಎಸ್​ಆರ್​

0

ದಿನನಿತ್ಯ ಪ್ಲಾಸ್ಟಿಕ್ ಬಳಕೆ ಹೀಗೆ ಸಾಗಿದ್ದಲ್ಲಿ 2050ರ ಹೊತ್ತಿಗೆ ಸಮುದ್ರ-ಸಾಗರಗಳಲ್ಲಿ ಮೀನಿಗಿಂತ ಹೆಚ್ಚು ಪ್ಲಾಸ್ಟಿಕ್ನಿಂದ ತುಂಬಿರಲಿದೆ. ಹೌದು ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಾರ (WEF), ನಾವು ಬಳಸುವ 14 ಪ್ರತಿಶತ ಪ್ಲಾಸ್ಟಿಕ್ ಮಾತ್ರ ಪುನರ್ಬಳಕೆಯಾಗುತ್ತಿರುವುದು. ಉಳಿದ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗುತ್ತಿದೆ. ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ಪ್ಲಾಸ್ಟಿಕ್ ಇಲ್ಲದ ವಿಶ್ವ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಪ್ಲಾಸ್ಟಿಕ್ ತಿನ್ನುವಂತಹ ಬ್ಯಾಕ್ಟೀರಿಯಗಳನ್ನು ಕಂಡು ಹಿಡಿದಿದ್ದಾರೆ. ಇದರಿಂದ ಇಡೀ ವಿಶ್ವವೇ ಪ್ಲಾಸ್ಟಿಕ್ ಮುಕ್ತವಾಗಲಿದೆ..

ಹೌದು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಎಂಜೈಮ್​​ಗಳನ್ನು ಬಳಸಿ ಪ್ಲಾಸ್ಟಿಕ್ ಅನ್ನು ಮುರಿದು ಜೀರ್ಣಿಸಬಲ್ಲ ಬ್ಯಾಕ್ಟೀರಿಯಾ ಕಂಡುಹಿಡಿದಿದ್ದಾರೆ. ಕಳೆದ ಐದು ವರ್ಷದಿಂದ ಈ ಕುರಿತು ಸಂಶೋಧನೆ ನಡೆದಿದ್ದು. ಈಗ ಸಂಪೂರ್ಣ ಯಶಸ್ವಿಯಾಗಿದೆಯೆಂದು, ಜರ್ನಲ್ ಸೈನ್ಸ್ ಪತ್ರಿಕೆ ವರದಿ ಮಾಡಿದೆ. ಶೀಘ್ರದಲ್ಲೆ ಇವುಗಳ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಈ ಬ್ಯಾಕ್ಟೀರಿಯಗಳ ಮತ್ತಷ್ಟೂ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವುದಾಗಿ, ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!

ಕಳೆದ ಐದು ವರ್ಷಗಳ ಕಾಲ ಮೈಕ್ರೋಬ್​​ಗಳು ಮತ್ತು ಪ್ಲಾಸ್ಟಿಕ್ ಜೊತೆ ಕೆಲಸ ಮಾಡಿದ ಮೇಲೆ, ಇಡೆಯೋನೆಲ್ಲಾ ಸಾಕೈನೆಸಿಸ್ ಎಂಬ ಬ್ಯಾಕ್ಟೀರಿಯಾ ಪ್ಲಾಸ್ಟಿಕ್ ವಸ್ತುಗಳಲ್ಲಿ ಬಳಸುವ ಪಾಲಿಥೀನ್ ತೆರೆಪ್ಥಲೇಟ್ಅನ್ನು ಕರಗಿಸಬಲ್ಲದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಇದರಿಂದ ಎಂತಹ ಪ್ಲಾಸ್ಟಿಕ್ ಬೇಕಾದ್ರು ಕರಗಿಸಬಲ್ಲ ಬ್ಯಾಕ್ಟೀರಿಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಜ್ಞಾನಿಗಳಿಗೆ ಸಹಾಯವಾಗಲಿದೆ. ಸಣ್ಣ ಪ್ರಮಾಣದಲ್ಲಿ ಈ ಕೆಲಸ ನಡೆದ್ರು. ಬಹು ಪರಿಣಾಮಕಾರಿಯಾಗಿ ಇದು ಉಪಯೋಗವಾಗಲಿದೆ. ಈಡೀ ವಿಶ್ವಕ್ಕೆ ತಲೆನೋವಾಗಿರುವ ಪ್ಲಾಸ್ಟಿಕ್ ಕರಗಿಸುವಲ್ಲಿ ಇದು ಸಹಾಯಕಾರಿಯಾಗಲಿದೆ..

ಇನ್ನೊಂದು ಆಘಾತಕಾರಿ ಸಂಗತಿಯೆಂದರೆ 2013ರಲ್ಲೇ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ೫೬ ಮಿಲಿಯನ್ ಟನ್ ಇತ್ತು. ಈಗ ಅದರ ಉಪಯೋಗ ದುಪ್ಪಟಾಗಿದೆ. ಇದು ಪರಿಸರಕ್ಕೆ ತೀವ್ರ ಸವಾಲಾಗಿದೆ. ವಿಜ್ಞಾನಿಗಳು ಪ್ಲಾಸ್ಟಿಕ್ ಅನ್ನು ಕೊಳೆಯುವಂತೆ ಮಾಡಬಲ್ಲ ಫಂಗೈ ಅನ್ನು ಈ ಹಿಂದೆ ಕಂಡುಹಿಡಿದಿದ್ದರು, ಪ್ಲಾಸ್ಟಿಕ್ ತಿನ್ನಬಲ್ಲ ಬ್ಯಾಕ್ಟೀರಿಯಾ ಬೆಳಕಿಗೆ ಬಂದಿರುವುದು ಇದೇ ಮೊದಲು. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯಾದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ ಕರಗಿಸುವುದು ಮತ್ತಷ್ಟೂ ಸುಲಭವಾಗಲಿದೆ.

ಸದ್ಯ ಈಗ ಜಪಾನಿಯರು ಅಭಿವೃದ್ಧಿಪಡಿಸಿರುವ ಬ್ಯಾಕ್ಟೀರಿಯಾ ೩೦ ಡಿಗ್ರಿ ಉಷ್ಣಾಂಶದಲ್ಲಿ , ಆರು ವಾರಗಳಲ್ಲಿ ತೆಳುವಾದ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಕೊಳೆಯುವಂತೆ ಮಾಡಬಲ್ಲದ್ದು. ಹಾಗಾಗಿ ಇನ್ಮುಂದೆ ಈ ಬ್ಯಾಕ್ಟೀರಿಯಾಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. 

ಇದನ್ನು ಓದಿ

1. ಹಳೆ ಬಟ್ಟೆಗಳಿಗೆ ಹೊಸ ರೂಪ

2. ಮಣ್ಣಿನ ಒಲೆಯಲ್ಲಿ ಸರ್ಕಸ್ ಮಾಡೋದನ್ನು ಬಿಡಿ...ಗ್ರೀನ್‍ವೇ ಸ್ಟವ್‍ನಿಂದ ಆರಾಮಾಗಿ ಅಡುಗೆ ಮಾಡಿ

3. 80ರ ದಶಕದಲ್ಲಿ ನೀರಿನಮೇಲೆ ನಡೆದ ಮತ್ತು ಸಮುದ್ರದ ಮೇಲೆ ಸೈಕಲ್ ನಡೆಸಿದ ವ್ಯಕ್ತಿ