ಓಲಾ, ಉಬರ್​ಗಳಿಗೆ ಟಾಂಗ್ ನೀಡಲು ಸಿದ್ಧತೆ- ಸದ್ದಿಲ್ಲದೆ ರೆಡಿಯಾಗುತ್ತಿದೆ ಹೊಸ ಆ್ಯಪ್..!

ಟೀಮ್​ ವೈ.ಎಸ್​. ಕನ್ನಡ

ಓಲಾ, ಉಬರ್​ಗಳಿಗೆ ಟಾಂಗ್ ನೀಡಲು ಸಿದ್ಧತೆ- ಸದ್ದಿಲ್ಲದೆ ರೆಡಿಯಾಗುತ್ತಿದೆ ಹೊಸ ಆ್ಯಪ್..!

Tuesday March 07, 2017,

2 min Read

ರಾಜ್ಯಸರಕಾರದ ಸಾರಿಗೆ ನೀತಿಗಳು ಕ್ಯಾಬ್ ಸರ್ವೀಸ್​ಗಳಾದ ಓಲಾ ಮತ್ತು ಉಬರ್ ಸೇವೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಓಲಾ ಮತ್ತು ಉಬರ್ ಡ್ರೈವರ್​ಗಳು ಹೊಟ್ಟೆ ತುಂಬಿಸಲು ಕೂಡ ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಓಲಾ, ಉಬರ್ ಡ್ರೈವರ್​ಗಳು ಕೂಡ ಕಂಗೆಟ್ಟಿದ್ದಾರೆ. ಓಲಾ, ಉಬರ್​ ಡ್ರೈವರ್​ಗಳು ತಮ್ಮ ಅಸೋಸಿಯೇಶನ್​ಗಳ ಮೂಲಕ ಕಂಪನಿಗಳ ವಿರುದ್ಧ ನಡೆಸಿದ್ದ ಪ್ರತಿಭಟನೆಯೂ ಯಶಸ್ಸು ಕಂಡಿಲ್ಲ. ಆದ್ರೆ ಕ್ಯಾಬ್ ಸರ್ವೀಸ್ ಡ್ರೈವರ್​ಗಳು ಈಗ ಹೊಸ ಲೆಕ್ಕಾಚಾರ ಹಾಕೊಕೊಂಡಿದ್ದಾರೆ. ಓಲಾ, ಉಬರ್​ಗಳಂತೆ ತಮ್ಮದೇ ಆ್ಯಪ್ ಒಂದನ್ನು ತಯಾರಿಸಿ, ಗ್ರಾಹಕರಿಗೆ ಸೇವೆ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ.

image


ಹೊಸ ಆ್ಯಪ್ ಮೂಲಕ ಓಲಾ ಮತ್ತು ಉಬರ್​ಗಳಿಗೆ ಟಾಂಗ್ ನೀಡುವುದಕ್ಕೆ ಡ್ರೈವರ್​ಗಳ ಅಸೋಸಿಯೇಶನ್ ಮಾತುಕತೆಯನ್ನೂ ನಡೆಸಿದೆ. ಮಾರ್ಚ್ 1ರಂದು ಫ್ರೀಡಂ ಪಾರ್ಕ್​ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವೇಳೆ ಈ ನಿರ್ಧಾರ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೊತೆ ಡ್ರೈವರ್​ಗಳ ಅಸೋಸಿಯೇಶನ್ ಮುಖ್ಯಸ್ಥ ತನ್ವೀರ್ ಪಾಶಾ ಮಾತುಕತೆ ಕೂಡ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಂದ ಪಾಸಿಟಿವ್ ರಿಪ್ಲೈ ಕೂಡ ಬಂದಿದೆ.

ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ ಡ್ರೈವರ್​ಗಳ ಅಸೋಸಿಯೇಶನ್ ತಯಾರು ಮಾಡುವ ಆ್ಯಪ್​ಗೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಫಂಡಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಆ್ಯಪ್ ತಯಾರಿಸಲು ಎಂಜಿನಿಯರ್​ಗಳನ್ನು ಕೂಡ ನೇಮಕ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಡ್ರೈವರ್ಸ್​ ಯೂನಿಯನ್​ಗಳು ಕೂಡ ಹೊಸ ಆ್ಯಪ್​ಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ಸುಮಾರು 8000 ಕ್ಯಾಬ್ ಡ್ರೈವರ್​ಗಳು ಹೊಸ ಆ್ಯಪ್ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಟಾಂಗ್ ಕೊಡಲು ತಮ್ಮ ಬೆಂಬಲವನ್ನೂ ಸೂಚಿಸಿದ್ದಾರೆ. ಕಸ್ಟಮರ್ ಸರ್ವೀಸ್ ಟೀಮ್ ಅನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ.

ಇದನ್ನು ಓದಿ: ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!

ಡ್ರೈವರ್​ಗಳು ಓಲಾ, ಉಬರ್​ಗಳಂತಹ ವಿದೇಶಿ ಕಂಪನಿಗಳ ನಿಯಮಗಳಿಗೆ ತಲೆಬಾಗಬಾರದು ಅನ್ನುವ ಉದ್ದೇಶದಿಂದ ಕೆಲಸ ಶುರುಮಾಡಲಾಗಿದೆ. ಆ್ಯಪ್ ಅಭಿವೃದ್ಧಿಯ ಜೊತೆಗೆ ವಿವಿಧ ನಗರಗಳ ಡ್ರೈವರ್​ಗಳನ್ನು ಕೂಡ ಒಂದುಗೂಡಿಸಲು ಪ್ರಯತ್ನಗಳು ಸಾಗುತ್ತಿವೆ. ಈಗಾಗಲೇ ಓಲಾ ಮತ್ತು ಉಬರ್ ಕಂಪನಿಗಳು ಡ್ರೈವರ್​ಗಳಿಂದ ಹೆಚ್ಚಿನ ಕಮಿಷನ್​ಗಳನ್ನು ಪಡೆಯುತ್ತಿವೆ. ಕಡಿಮೆ ಇನ್ಸೆಂಟಿವ್ಸ್ ನೀಡುವ ಮೂಲಕ ಡ್ರೈವರ್​ಗಳ ಪಾಲಿಗೆ ರಾಕ್ಷಸನಾಗಿಬಿಟ್ಟಿದೆ. ಕಡಿಮೆ ಆದಾಯ ಮತ್ತು ಹೆಚ್ಚು ಅವಧಿ ಕೆಲಸ ಡ್ರೈವರ್​ಗಳ ಜೀವನಕ್ಕೆ ಮುಳ್ಳಾಗಿ ಬಿಟ್ಟಿವೆ. ಈ ಬಗ್ಗೆ ಟ್ಯಾಕ್ಸಿ ಡ್ರೈವರ್​ಗಳು ಸ್ಟ್ರೈಕ್ ಮಾಡಿದರೂ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ಈ ಡ್ರೈವರ್​ಗಳು ಕಂಪನಿ ಕೊಡುವಷ್ಟು ದುಡ್ಡಿಗೆ ಮತ್ತು ಅವರ ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡುವ ಅನಿವಾರ್ಯತೆಗೆ ಬಿದ್ದಿದ್ದಾರೆ.

ಉಬರ್ ಮತ್ತು ಓಲಾ ವಿರುದ್ಧ ಪ್ರತಿಭಟನೆ ಮುಂದುವರೆಯುತ್ತಾ ಇದ್ರೂ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವ ಡ್ರೈವರ್​ಗಳ ಸಂಖ್ಯೆ ಹೆಚ್ಚಿದೆ. ಡ್ರೈವರ್​ಗಳು ಮತ್ತು ಕಂಪನಿಗಳ ನಡುವೆ ಸಂಭಂಧ ಗಟ್ಟಿಯಾಗುವುದು ಸಂಶಯವೇ ಆಗಿದೆ. ಹೀಗಾಗಿ ಹೊಸ ಆ್ಯಪ್​ನ ಕನಸಿನಲ್ಲಿ ಡ್ರೈವರ್​ಗಳು ಕಾಲ ಕಳೆಯುತ್ತಿದ್ದಾರೆ. 

ಇದನ್ನು ಓದಿ:

1. ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ

2. ಧರೆಗುರುಳುವ 5000 ಮರಗಳನ್ನು ಕಾಪಾಡಿದ ಪರಿಸರ ಪ್ರೇಮಿ..! 

3. ಔಷಧ ಉದ್ಯಮದ ಯಶಸ್ವಿ ಸಾರಥಿ : ದೇಶದ 2ನೇ ಶ್ರೀಮಂತ ದಿಲೀಪ್ ಸಾಂಘ್ವಿ