ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹೊಸ ಪರಿಕಲ್ಪನೆ ಸರ್ಕಾರದ ಜೊತೆ `ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್' ಪಾಲುದಾರಿಕೆ

ಟೀಮ್​ ವೈ.ಎಸ್​. ಕನ್ನಡ

0

ಭಾರತದಲ್ಲಿರುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬಲ್ಲ ಪರಿಸರವನ್ನು ನಿರ್ಮಾಣ ಮಾಡಲು `ದಿ ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್' ಶ್ರಮಿಸುತ್ತಿದೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಗಳಾದ, `ನ್ಯಾಶನಲ್ ಸೈನ್ಸ್ & ಟೆಕ್ನಾಲಜಿ ಎಂಟರ್‍ಪ್ರೆನ್ಯೂರ್‍ಶಿಪ್ ಡೆವಲಪ್‍ಮೆಂಟ್ ಬೋರ್ಡ್', `ಗವರ್ನ್‍ಮೆಂಟ್ ಆಫ್ ಇಂಡಿಯಾ & ದಿ ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್' ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. `ವುಮೆನ್ ಎಂಟರ್‍ಪ್ರೆನ್ಯೂರ್‍ಶಿಪ್ ಕ್ವೆಸ್ಟ್ ಪ್ರೋಗ್ರಾಮ್' ಮೂಲಕ ಅಂತಹ ಪರಿಸರ ನಿರ್ಮಾಣಕ್ಕೆ `ಎಬಿಐ' ಯೋಜನೆ ರೂಪಿಸಿದೆ. ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಡೆದ `5ನೇ ಗ್ರೇಸ್ ಹೋಪರ್ ಇಂಡಿಯಾ ಕಾನ್ಫರೆನ್ಸ್'ನ ಭಾಗವಾದ Wಇಕಿ 2014ರ ಅಂತಿಮ ಸುತ್ತಿನ ಸ್ಪರ್ಧೆ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ.

Wಇಕಿ ತಂತ್ರಜ್ಞಾನ ಉದ್ಯಮದ ಯೋಜನೆಯ ಸ್ಪರ್ಧೆ. `ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್' ಇದನ್ನು ವಿನ್ಯಾಸಗೊಳಿಸಿದೆ. ಹೊಸತನವನ್ನು ಪ್ರಚಾರ ಮಾಡುವುದರ ಜೊತೆಗೆ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶ. ವರ್ಷಕ್ಕೊಮ್ಮೆ ನಡೆಯುವ `ಗ್ರೇಸ್ ಹೋಪರ್ ಸೆಲೆಬ್ರೇಷನ್ ಆಫ್ ವುಮೆನ್ ಇನ್ ಕಂಪ್ಯೂಟಿಂಗ್ ಇಂಡಿಯಾ' ಕಾರ್ಯಕ್ರಮದಲ್ಲಿ Wಇಕಿ ಅನ್ನು ಆಯೋಜಿಸಲಾಗುತ್ತದೆ. Wಇಕಿ 2014ರ ಸ್ಪರ್ಧೆಯಲ್ಲಿ `ಟರ್ನ್​ಅರೌಂಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್'ನ ಶ್ರೀಪ್ರಿಯಾ ಕೊಪ್ಪುಳಾ ವಿಜಯಿಯಾಗಿದ್ದಾರೆ. ಮೂರು ಆಯಾಮದ ಮತ್ತು ಪರಸ್ಪರ ಸಂವಹನಕ್ಕೆ ಅನುಕೂಲವಾಗಬಲ್ಲ `ಟರ್ನ್​ಅರೌಂಡ್ 360' ಹೆಸರಿನ ತಂತ್ರಜ್ಞಾನ ಪರಿಹಾರವುಳ್ಳ ಕೈಪಿಡಿಯನ್ನು ಶ್ರೀಪ್ರಿಯಾ ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಪ್ರಸ್ತುತಿ ಮೂಲಕ ಅವರು ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮೂಲೆ ಮೂಲೆಯಿಂದ ಬಂದ 107 ಉದ್ಯಮಿಗಳ ಪೈಕಿ, 6 ಮಂದಿ ಫೈನಲ್ ಪ್ರವೇಶಿಸಿದ್ರು. ಸಾಹಸೋದ್ಯಮದ ಬಗ್ಗೆ 10 ನಿಮಿಷಗಳ ಪ್ರೆಸೆಂಟೇಶನ್ ನೀಡಿದ್ರು. ಇನ್ನು ತೀರ್ಪುಗಾರರ ಸಾಲಿನಲ್ಲಂತೂ ಘಟನಾನುಘಟಿ ಉದ್ಯಮಿಗಳು, ಸಲಹೆಗಾರರು, ತಂತ್ರಜ್ಞಾನ ನಿಪುಣರು ಹಾಗು ಹೂಡಿಕೆದಾರರಿದ್ರು. ಪಾಲುದಾರಿಕೆ ನಿಯಮದ ಪ್ರಕಾರ Wಇಕಿ ಸ್ಪರ್ಧೆಯಲ್ಲಿ ಆಯ್ಕೆಯಾದ 6 ಮಹಿಳಾ ಉದ್ಯಮಿಗಳನ್ನು ಅಮೆರಿಕ ಪ್ರವಾಸಕ್ಕೆ ಕಳಿಸಿಕೊಡಲಾಗುತ್ತದೆ. ಸಿಲಿಕಾನ್ ವ್ಯಾಲಿಯಲ್ಲಿ ಔದ್ಯಮಿಕ ಸಂಸ್ಕೃತಿ ಯಾವ ರೀತಿ ಇದೆ ಅನ್ನೋದನ್ನು ಅವರು ತಿಳಿದುಕೊಳ್ಳಬಹುದು. ಜೊತೆಗೆ ಮಹಿಳಾ ಉದ್ಯಮಿಗಳ ಯಶಸ್ಸಿಗೆ ಅಗತ್ಯವಾದ ಮಾರ್ಗದರ್ಶನ, ನೆಟ್‍ವರ್ಕಿಂಗ್ ಅವಕಾಶಗಳು ಹಾಗೂ ಬಂಡವಾಳವನ್ನು ಒದಗಿಸಲಾಗುತ್ತದೆ. ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶ. ಇದರ ಜೊತೆಗೆ ಸರ್ಕಾರಿ ಏಜೆನ್ಸಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳೊಂದಿಗೂ ಅವರನ್ನು ಸಂಪರ್ಕಿಸಲಾಗುತ್ತದೆ.

ಪ್ರತಿಕ್ರಿಯೆಗಳು...

``ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ NSTEBD, DST & IUSSTF ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಅತೀವ ಸಂತಸ ತಂದಿದೆ. ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು `ಎಬಿಐ' ಮಿಷನ್‍ನ ಪ್ರಮುಖ ಭಾಗ. ಇದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಕೂಡ ರೂಪಿಸಲಾಗಿದೆ. ಭಾರತದ ಶಕ್ತಿಯುತ ಆರ್ಥಿಕತೆಗೆ ಪೂರಕವಾಗುವಂತೆ ತಳಮಟ್ಟದಿಂದ ಅವರನ್ನು ಪ್ರೋತ್ಸಾಹಿಸುವುದು ಅತ್ಯಂತ ಕಷ್ಟಕರ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮುನ್ನಡೆಸುತ್ತಿರುವ ಉದ್ಯಮಗಳ ಸಂಖ್ಯೆ ಹೆಚ್ಚಾಗಿದೆ, ಇದು ನಿಜಕ್ಕೂ ಉತ್ತಮ ಬೆಳವಣಿಗೆ'' - ಗೀತಾ ಕಣ್ಣನ್ - ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್‍ನ ಇಂಡಿಯಾ ಎಂಡಿ

1982ರಲ್ಲಿ ಭಾರತ ಸರ್ಕಾರ `ದಿ ನ್ಯಾಶನಲ್ ಸೈನ್ಸ್ & ಟೆಕ್ನಾಲಜಿ ಎಂಟರ್‍ಪ್ರೆನ್ಯೂರ್‍ಶಿಪ್ ದೆವಲಪ್‍ಮೆಂಟ್ ಬೋರ್ಡ್' ಅನ್ನು ಸ್ಥಾಪಿಸಿತ್ತು. ಇದೊಂದು ಸಾಂಸ್ಥಿಕ ವ್ಯವಸ್ಥೆ, ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮಾನವ ಶಕ್ತಿಯನ್ನು ಬಳಸಿಕೊಂಡು, ಲಾಭದಾಯಕ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ಉದ್ದೇಶ ಇದರದ್ದು. ಇದು ಸಾಮಾಜಿಕ-ಆರ್ಥಿಕ ಮತ್ತು ವೈಜ್ಞಾನಿಕ ಇಲಾಖೆಗಳು, ಸಚಿವರು, ಪ್ರಧಾನ ಉದ್ಯಮಶೀಲತೆಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಭಾರತದ ಹಣಕಾಸು ಸಂಸ್ಥೆಗಳ ಪ್ರಾತಿನಿಧ್ಯ ಹೊಂದಿದೆ.

``ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಅನ್ನೋದನ್ನು ಅರ್ಥಮಾಡಿಕೊಂಡಿರುವ ಸರ್ಕಾರ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಹಿಳಾ ಸಬಲೀಕರಣ ಚಳವಳಿಯನ್ನು ಸರ್ಕಾರ ಏಕಾಂಗಿಯಾಗಿ ಮುನ್ನಡೆಸಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಸಾಥ್ ನೀಡುವ ಅಗತ್ಯವಿದ್ದಿದ್ರಿಂದ `ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್' ಸರ್ಕಾರದ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ'' ಅನ್ನೋದು NSTEB & DSTಯ ಡಾ. ಅನಿತಾ ಗುಪ್ತಾ ಅವರ ಅಭಿಪ್ರಾಯ.

2000ನೇ ಇಸ್ವಿಯ ಮಾರ್ಚ್‍ನಲ್ಲಿ ಅಮೆರಿಕ ಹಾಗೂ ಭಾರತ ಸರ್ಕಾರದ ಒಪ್ಪಂದವೇರ್ಪಟ್ಟಿತ್ತು, ಅದರಂತೆ `ದಿ ಇಂಡೋ-ಯುಎಸ್ & ಟೆಕ್ನಾಲಜಿ ಫೋರಮ್' ಅನ್ನು ಸ್ಥಾಪಿಸಲಾಯ್ತು. ಇದೊಂದು ಸ್ವಾಯತ್ತ ಸಂಸ್ಥೆ, ಸಮಾಜದ ಲಾಭಕ್ಕಾಗಿ ಅಲ್ಲ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಬಯೋಮೆಡಿಕಲ್ ವಿಭಾಗದ ಸಂಶೋಧನೆಯಲ್ಲಿ ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ಸಂಬಧವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ. ಅವಕಾಶಗಳನ್ನು ಒದಗಿಸುವುದು, ಪರಿಕಲ್ಪನೆಗಳ ವಿನಿಮಯ, ಕೌಶಲ್ಯ ಮತ್ತು ತಂತ್ರಜ್ಞಾನ ಹಾಗೂ ಪರಸ್ಪರ ಹಿತಾಸಕ್ತಿಯ ತಾಂತ್ರಿಕ ಪ್ರಯತ್ನಗಳಿಗೆ ಸಹಕರಿಸುವುದು ಇದರ ಉದ್ದೇಶ.

``ಮಹಿಳೆಯರು ಮುಂದಡಿ ಇಡುತ್ತಿದ್ದಾರೆ, ಸ್ವಪ್ರಯತ್ನದಿಂದ್ಲೇ ಯಶಸ್ಸಿನತ್ತ ಸಾಗುತ್ತಿದ್ದಾರೆ. ಈ ವೇಗವನ್ನು ಹೆಚ್ಚಿಸಲು ದೇಶದ ಉದ್ದಗಲಕ್ಕೆ ಪ್ರಚಂಡ ಮೌಲ್ಯವುಳ್ಳ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಮಹಿಳಾ ಸಬಲೀಕರಣದ ಭಾಗವಾಗಬಲ್ಲ ಪರಿಸರವನ್ನು ಸೃಷ್ಟಿಸಲು ಇಂತಹ ಪಾಲುದಾರಿಕೆಯ ಅಗತ್ಯವಿದೆ'' ಅನ್ನೋದು `ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್'ನ ಡಾ.ಸ್ಮೃತಿ ಟ್ರಿಖಾ ಅವರ ಅಭಿಪ್ರಾಯ. ಮುಖಂಡರಾಗಿ, ಉದ್ಯಮ ಮಾಲೀಕರಾಗಿ, ಉದ್ಯೋಗಿಗಳಾಗಿ, ಪ್ರಮುಖ ಸ್ಟೇಕ್ ಹೋಲ್ಡರ್‍ಗಳಾಗಿ ಗುರುತಿಸಿಕೊಂಡಿರುವ ಸಾಹಸಿ ಮಹಿಳೆಯರನ್ನು ಪ್ರೋತ್ಸಾಹಿಸುವುದು `ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್'ನ ಪ್ರಮುಖ ಗುರಿ.


ಲೇಖಕರು: ಹರ್ಶಿತ್​ ಮಲ್ಯ

ಅನುವಾದಕರು: ಭಾರತಿ ಭಟ್​​