ಮಾರುಕಟ್ಟೆಯಲ್ಲಿ ಕ್ರಾಂತಿ ಎಬ್ಬಿಸಿದ ಬಡಗಿ

ಟೀಮ್​ ವೈ.ಎಸ್​. ಕನ್ನಡ

ಮಾರುಕಟ್ಟೆಯಲ್ಲಿ ಕ್ರಾಂತಿ ಎಬ್ಬಿಸಿದ ಬಡಗಿ

Thursday December 24, 2015,

3 min Read


ಒಬ್ಬ ಬಡಗಿ ದೇಶದಲ್ಲಿ ಎಲ್ಲಾದರೂ ಸುದ್ದಿಯಾಗುವುದಕ್ಕೆ ಸಾಧ್ಯವೇ? ಬಹುಶಃ ಈ ಯಶೋಗಾಥೆಯನ್ನು ಯಾರು ಕೂಡ ನಂಬಲು ಸಾಧ್ಯವಿಲ್ಲವೇನೋ? ಅನರಕ್ಷಸ್ಥನಾದ ಬಡಗಿ ಇಡೀ ದೇಶದಲ್ಲೇ ಸುದ್ದಿಯಾಗಿದ್ದಾನೆ. ಹೊಸದೊಂದು ಅವಿಷ್ಕಾರದ ಮೂಲಕ ಇಡೀ ದೇಶದ ಗಮನವನ್ನೇ ಸೆಳೆದಿದ್ದಾನೆ.

image


ಇದನ್ನು ಯಾರು ಕೂಡ ಊಹಿಸಲು ಸಾಧ್ಯವಿಲ್ಲದಿದ್ದರೂ ಸತ್ಯ. ರಾಜಸ್ಥಾನದ ಒಬ್ಬ ಶ್ರೀ ಸಾಮಾನ್ಯ ಮದನ್ ಲಾಲ್ ಕುಮಾಟ್ಟೆ ಹೊಸ ಅವಿಸ್ಕಾರದ ಮೂಲಕ ಗಮನ ಸೆಳೆದಿದ್ದಾರೆ. ರೈತರ ಬದುಕನ್ನು ಹಸನುಗೊಳಿಸುವ ಸಲುವಾಗಿ ಇಂಧನ ಸಾಮರ್ಥ್ಯವುಳ್ಳ ಮಲ್ಟಿ ಕಾರ್ಪ್ ಟ್ರೇಷರ್ ಕಂಡು ಹಿಡಿದಿದ್ದಾರೆ. 2010ರಲ್ಲಿ ಪೊರ್ಬ್ಸ್ ಸಂಚಿಕೆಗಳಲ್ಲಿ ಗ್ರಾಮೀಣ ಉದ್ಯಮಗಳು ಶಕ್ತಿಶಾಲಿ ಎಂದು ಗುರುತಿಸಲ್ಪಟ್ಟಿದೆ.

ಮದನ್ ಲಾಲ್ ತಂದೆ ಒಬ್ಬ ಬಡಗಿಯಾಗಿದ್ದರು. ಅವರು ಬಾಲ್ಯದಿಂದಲೂ ಬಡತನದಲ್ಲಿ ಬೆಳೆದವರು. ಹಣಕಾಸು ಹಾಗೂ ಆರೋಗ್ಯ ಸಮಸ್ಯೆಗಳಿಂದ ನಾಲ್ಕನೇ ತರಗತಿ ಮುಗಿಸಿದ ನಂತರ ಶಾಲೆಯನ್ನು ಬಿಟ್ಟ ನಂತರ 11ಕೆವಿ ವಿದ್ಯುತ್ ಶಾಕ್ ಹೊಡೆದು 15 ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದರು.

ಮೊದ ಮೊದಲು ಮದನ್ ಲಾಲ್ ತಮ್ಮ ತಂದೆ ನೆರವಿಗೆ ನಿಂತರು. 5 ವರ್ಷಗಳ ಕಾಲ ಬಡಗಿಯಾಗಿ ಕೆಲಸ ಕೂಡ ನಿರ್ವಹಿಸಿದರು. ಆದರೆ, ಕುಂತಲ್ಲೇ ಕುಳಿತು ಕೆಲಸ ಮಾಡುವುದು ಸ್ವಲ್ಪ ಕಷ್ಟವೇ ಆಗಿತ್ತು. ಭಾರೀ ತೂಕದ ಜೊತೆಗೆ ಆರೋಗ್ಯದ ಸಮಸ್ಯೆಯೂ ಕೂಡ ಎದುರಾಯಿತು. ಮರದ ಧೂಳಿನಿಂದಾಗಿ ಪರಿತಪಿಸುವಂತಾಯಿತು. ಈ ಸಂದರ್ಭದಲ್ಲಿ ಯಾವುದಾದರೂ ಬೇರೆ ಉದ್ಯೋಗ ಮಾಡಲು ಬಯಸಿದರು.

ಆರಂಭದಲ್ಲಿ ಕಾರ್ಯಾಗಾರವೊಂದರಲ್ಲಿ ಮದನ್ ಲಾಲ್ ಕೆಲಸ ಮಾಡಲು ಆರಂಭಿಸಿದರು. ಕಟ್ಟಡ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಗಳನ್ನು ನಿರ್ಮಾಣ ಮಾಡಲು ಬಳಸುವ ಕಬ್ಬಿಣಗಳಲ್ಲಿ ನಿಪುಣತೆ ಹೊಂದಿದ್ದರು. ರೈತರ ಬದುಕನ್ನು ಹಸನು ಮಾಡುವ ಕಾರ್ಯ ಸ್ವಲ್ಪ ಆಸಕ್ತಿಕರವಾಗಿಯೇ ಇತ್ತು. ಸ್ವಲ್ಪ ಕಾಲ ಇಲ್ಲಿ ಕಲಿತ ಮೇಲೆ ಈ ಉದ್ಯೋಗವೂ ಕೂಡ ಬೇಸರ ಉಂಟು ಮಾಡಿತು. ಕೇವಲ ರಿಪೇರಿ ಕೆಲಸಕ್ಕೆ ಮಾತ್ರ ಸೀಮಿತವಾಗಿರುವ ಈ ಉದ್ಯೋಗವನ್ನು ಬಿಟ್ಟು ಬೇರೆ ಯಾವುದಾದರೂ, ಹೊಸದೊಂದು ಅನ್ವೇಷಣೆ ಮಾಡಬೇಕೆಂಬ ಬಯಕೆ ಆಯಿತು ಆಗ ಹೊಳೆದ ಯೋಜನೆಯೇ ಮಲ್ಟಿ ಕಾರ್ಪ್ ಟ್ರೇಷರ್.

ಹೊಟ್ಟು ಹಾಗೂ ದವಸ ಧಾನ್ಯಗಳನ್ನು ಪ್ರತ್ಯೇಕಗೊಳಿಸುವ ಸಲುವಾಗಿ ಹೊಸದೊಂದು ಟ್ರೇಷರ್ ಕಂಡು ಹಿಡಿಯಲು ಮದನ್ ಲಾಲ್ ಬಯಸಿದರು. ಮೊದಲ ಯಂತ್ರವನ್ನು ಕಂಡು ಹಿಡಿಯಲು ಹಲವಾರು ತಿಂಗಳೇ ಕಳೆದರು. ದಿನಕ್ಕೊಂದು ಅನ್ವೇಷಣೆ ಮಾಡಿದರು. ಹಾಲಿ ಇರುವ ಟ್ರಷರ್ ಗಳಿಗಿಂತ ವಿಭಿನ್ನವಾದ ಯಂತ್ರ ಕಂಡು ಹಿಡಿಯುವುದೇ ಅವರ ಗುರಿಯಾಗಿತ್ತು. ಮೊದ ಮೊದಲು ಅವರಿಗೆ ತೃಪ್ತಿಯೇ ಇಲ್ಲ. ದಿನ ಕಳೆದಂತೆ, ಹೊಸ ಹೊಸ ಅನ್ವೇಷಣೆ ಮಾಡಿದ ನಂತರ ಅತ್ಯಾಧುನಿಕ ಮಲ್ಟಿ ಕಾರ್ಪ್ ಟ್ರೇಷರ್ ಕಂಡು ಹಿಡಿದರು.

ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಟ್ರೇಷರ್‌ಗಳು ಅಷ್ಟೊಂದು ಸ್ನೇಹಪೂರ್ವಕವಾಗಿಲ್ಲ. ಬೆಳೆಯ ಗಾತ್ರವನ್ನು ಆಧರಿಸಿ, ಈ ಮಲ್ಟಿ ಕಾರ್ಪ್ ಟ್ರೇಷರ್ ತಯಾರಿಸಲಾಗಿದೆ. ಈ ಯಂತ್ರವನ್ನು ತಯಾರಿಸುವಾಗ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಒಂದೊಂದು ಪರೀಕ್ಷೆಗಳನ್ನು ಮಾಡಲು ತಗುಲಿದ ಸಮಯದ ಎರಡೂ ತಾಸುಗಿಂತ ಹೆಚ್ಚು. ಗಾತ್ರಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ಈ ಮೆಷಿನ್‌ಗಳನ್ನು ಅತ್ಯಂತ ಸುಲಲಿತ ಹಾಗೂ ಸುಸೂತ್ರವಾಗಿ ಬದಲಿಸಬಹುದಾಗಿದೆ. ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಶಿಫ್ಟ್ ಮಾಡಲು ತಗಲುವ ಸಮಯ ಕೇವಲ 15 ನಿಮಿಷ ಮಾತ್ರ.

ಮಷೀನ್‌ಗಳಲ್ಲಿ ಗಾಳಿ ವೇಗವನ್ನು ನಿಯಂತ್ರಿಸಲು, ವಿವಿಧ ಆಕಾರಗಳಲ್ಲಿ, ಗಾತ್ರಗಳ ರಂಧ್ರಗಳಲ್ಲಿ ಧಾನ್ಯಗಳ ನೇರವಾದ ಮೆಸ್‌ಗಳನ್ನು ಮಾಡಲಾಗಿದೆ. ಇದರಲ್ಲಿ ರಾಟೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಡೀಸಲ್ ಉಳಿಸಲು ನೇರವಾದ ತಿರುಗುವ ಡ್ರಮ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಡೀಸೆಲ್ ಉಳಿತಾಯವನ್ನು ಮಾಡಲಾಗಿದೆ. ನಿರಂತರವಾಗಿ ಈ ಮೆಷನ್ ಚಾಲನೆಯಲ್ಲಿರುವುದರಿಂದ ಹೆಚ್ಚು ಡೀಸೆಲ್ ವೆಚ್ಚವಾಗುವುದನ್ನು ಇದು ತಪ್ಪಿಸಲಿದೆ.

ಮದನ್ ಲಾಲ್ ಕಂಡು ಹಿಡಿದಿರುವ ಅತ್ಯಾಧುನಿಕ ಮಲ್ಟಿ ಕಾರ್ಪ್ ಟ್ರೇಷರ್ ಮಿಷನ್ ಭಾರೀ ಉಪಯುಕ್ತವಾಗಿದೆ. ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಲಾಗುತ್ತಿದೆ. ಈ ಹಿಂದೆ, ರೈತರು ಬೆಳೆದ ಬೆಳೆಯನ್ನು ಶುಚಿಗೊಳಿಸಲು ದಿನಗಟ್ಟಲೇ ಗಾಳಿಯನ್ನು ಕಾಯಬೇಕಾಗಿತ್ತು. ಆದರೆ, ಈಗ ವ್ಯವಸ್ಥೆ ಬದಲಾಗಿದೆ. ಈ ಹೊಸ ಕಾರ್ಪ್ ಟ್ರೇಷರ್‌ನಿಂದ ಕ್ಷಣಾರ್ಧದಲ್ಲೇ ಹೊಟ್ಟು ಹಾಗೂ ಬೆಳೆಯನ್ನು ಶುಚಿಗೊಳಿಸಬಹುದಾಗಿದೆ.

ಈ ಅತ್ಯಾಧುನಿಕ ಕಾರ್ಪ್ ಟ್ರೇಷರ್ ವಿನ್ಯಾಸವನ್ನು ಅಹಮದಾಬಾದ್ ನ್ಯಾಷನಲ್ ಇನೋವೇಷನ್ ಫೌಂಡೇಶನ್‌ನಲ್ಲಿ ನೋಂದಣಿ ಮಾಡಲು ನಡೆಸಿದ್ದ ಹೋರಾಟವನ್ನು ಮದನ್ ಲಾಲ್ ನೆನಪಿಸಿಕೊಳ್ಳುತ್ತಾರೆ. ನೋಂದಣಿ ಪ್ರಕ್ರಿಯೆ ಸಾಕಷ್ಟು ವಿಳಂಬ ಕೂಡ ಆಯಿತು. ದೊಡ್ಡ ದೊಡ್ಡ ಕಂಪನಿಗಳು ನನ್ನ ವಿನ್ಯಾಸವನ್ನು ಬಳಕೆ ಮಾಡುತ್ತಿದ್ದು, ಭಾರೀ ಸಂತೋಷವನ್ನೇ ಉಂಟುಮಾಡಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿನ್ಯಾಸಗಳ ಪೈಕಿ, ನನ್ನ ಯಂತ್ರವನ್ನೇ ಬಹುತೇಕರು ನಕಲು ಮಾಡಿದ್ದಾರೆ ಅಂತ ಮದನ್ ಲಾಲ್ ಸಂತೋಷ ಪಡುತ್ತಾರೆ.

ಮದನ್ ಲಾಲ್ ಕಾರ್ಪ್ ಟೇಷರ್ ಈಗ ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಆರಂಭದಲ್ಲಿ ಒಂದು ಲಕ್ಷಕ್ಕೆ ಸಿಗುತ್ತಿದ್ದ ಯಂತ್ರದ ಬೆಲೆ ಈಗ ಮೂರು ಲಕ್ಷವಾಗಿದೆ. ಯಂತ್ರಗಳಲ್ಲಿ ಹೊಸ ಹೊಸ ಅನ್ವೇಷಣೆ ಮಾಡಲಾಗಿದೆ. ಬಡಗಿ ಮದನ್ ಲಾಲ್ ಈಗ ಎಲ್ಲಿಲ್ಲದ ಡಿಮ್ಯಾಂಡ್. ದೇಶದ ಹಲವೆಡೆ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.


ಲೇಖಕರು: ಸೌರವ್​ ರಾಯ್​

ಅನುವಾದಕರು: ಶೃತಿ