ಸಾಮಾಜಿಕ ಮಾಧ್ಯಮದ ಹೀರೋ "ಬಕ್​​ಸಾಲಾ”

ಟೀಮ್​​ ವೈ.ಎಸ್​​.

ಸಾಮಾಜಿಕ ಮಾಧ್ಯಮದ ಹೀರೋ "ಬಕ್​​ಸಾಲಾ”

Wednesday November 04, 2015,

3 min Read

ಒಬ್ಬ ಹುಡುಗ ತನ್ನ 10ನೇ ವಯಸ್ಸಿನಲ್ಲೇ ಅಪಹರಣಕ್ಕೊಳಗಾಗುತ್ತಾನೆ. ಅಪಹರಣ ಅಂತ ಮಹತ್ವದ ವಿಷಯ ಅಲ್ಲದಿದ್ದರೂ ಅದರ ನಂತರದ ಘಟನೆಗಳು ಆತನಿಗೆ ಖ್ಯಾತಿಯನ್ನು ತಂದು ಕೊಡುತ್ತವೆ. ಅಪಹರಣಕಾರರ ಕೈನಿಂದ ತಪ್ಪಿಸಿಕೊಂಡ ಆತ ಅದೇ ಕಾರಣಕ್ಕಾಗಿ ರಾಜ್ಯಪಾಲರ ಶೌರ್ಯ ಪ್ರಶಸ್ತಿ ಪಡೆದುಕೊಳ್ಳುತ್ತಾನೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ವಿಚಿತ್ರ ಕಾರಣಕ್ಕಾಗಿ ಪ್ರಸಿದ್ದಿಗೆ ಬಂದ ರಾಹುಲ್ ರಾಜ್ ಹುಟ್ಟಿದ್ದು ಪಾಟ್ನಾದಲ್ಲಿ. ಆರನೇ ತರಗತಿಯಿಂದ ರಾಹುಲ್​​ರನ್ನು ಸೈನಿಕ ಶಾಲೆಗೆ ಸೇರಿಸಲಾಗುತ್ತದೆ. ಸೈನಿಕನಾಗಲು ಬೇಕಾದ ಶಿಸ್ತು ತನ್ನಲ್ಲಿನ್ನೂ ಮೈಗೂಡಲಿಲ್ಲ ಎಂದು ಅರಿವಾಗಲು ರಾಹುಲ್​​ಗೆ ನಾಲ್ಕು ವರ್ಷ ತಗಲುತ್ತದೆ. ಭುವನೇಶ್ವರದ ಐಐಟಿ ಸೇರಿಕೊಂಡಾಗಲೂ ರಾಹುಲ್​​ಗೆ ಇಂತದೇ ಅನುಭವ ಆಗುತ್ತದೆ. ಐಐಟಿ ಪದವಿಯ ಮೂರನೇ ವರ್ಷವೇ ಕಲಿಕೆಯನ್ನು ನಿಲ್ಲಿಸಿದ ರಾಹುಲ್ ಸಂಗೀತ, ಓದು, ಬರವಣಿಗೆ ಮತ್ತು ವಿಜ್ಞಾನದೆಡೆಗೆ ಆಕರ್ಷಿತರಾಗ್ತಾರೆ.

ಈ ಘಟನೆಗಳೆಲ್ಲ ಸಾಮಾನ್ಯ ಎನಿಸಿದರೂ ಇವೇ ಮುಂದೆ ಅಸಾಮಾನ್ಯವಾದ “ಬಕ್ ಸಾಲಾ” ಎಂಬ ಫೇಸ್​​​ಬುಕ್ ಪುಟದ ಸೃಷ್ಠಿಗೆ ನಾಂದಿಯಾಗುತ್ತವೆ. ಅತಿರೋಚಕವೆನಿಸುವ ರೀತಿಯಲ್ಲಿ ತಮ್ಮ ಯೋಚನಾ ಶೈಲಿಯನ್ನು “ಬಕ್​​ಸಾಲಾ”ದ ಆರಂಭದ ದಿನಗಳಿಂದಲೇ ರಾಹುಲ್ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. 2010ರ ಅಕ್ಟೋಬರ್​ನಲ್ಲಿ ಸಂತಾ-ಬಂತಾ ಜೋಕ್ಸ್ ಆರಂಭಿಸುವಾಗ ಮುಂದೊಮ್ಮೆ ದೇಶದ ತುಂಬ ರಾಜಕೀಯ ಪ್ರಜ್ನೆ ಮೂಡಿಸುವ ತನ್ನ ಕನಸು “ಬಕ್​​​ಸಾಲಾ’’ ಮೂಲಕ ನನಸಾಗುತ್ತದೆ ಎಂದು ಕಲ್ಪನೆ ಕೂಡ ಮಾಡಿರಲಿಲ್ಲ. ನಾವೆಲ್ಲ ಗಣಿತಶಾಸ್ತ್ರರಾಗುವ ಬದಲು ಕಲ್ಕ್ಯುಲೇಟರ್ ಆಗುತ್ತಿದ್ದೇವೆ ಎಂದು ಕಾಲೇಜಿನ ದಿನಗಳಲ್ಲಿ ಅರಿತ ರಾಹುಲ್ ಎಲ್ಲಕ್ಕಿಂತ ಹೆಚ್ಚಿನ ಸಮಯವನ್ನು ಜನರೊಡನೆ ಬೆರೆತು ಮತ್ತು ಅದರಿಂದ ಪ್ರಭಾವಿತ ಕಥೆಗಳನ್ನು ಹೆಣೆಯುವುದರಲ್ಲೇ ಕಳೆದರು. ಗಣಿತವನ್ನು ಸಾಹಿತ್ಯದ ಜೊತೆ ಅಥವಾ ಕಲೆಯನ್ನು ವಿಜ್ಞಾನದ ಜೊತೆ ಬೆಸೆಯುವ ಅವರ ಕಲ್ಪನಾ ಶಕ್ತಿ “ಪಲ್ಸ್" ಎಂಬ ಕಾಲೇಜಿನ ಪ್ರಪ್ರಥಮ ವರ್ಣಮಯ ಪತ್ರಿಕೆ ಆರಂಭಿಸಲು ಸಹಾಯಕವಾಯ್ತು.

image


ಹಲವು ಪ್ರತಿಭಾವಂತರ ನಿಸ್ವಾರ್ಥ ಕೊಡುಗೆ “ಬಕ್​​ಸಾಲಾ’’ದ ಯಶಸ್ಸಿನ ಹಿಂದಿದೆ. ಪ್ರಾಮಾಣಿಕವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಬಲ್ಲ, ಸೃಜನಶೀಲ, ಬರವಣಿಗೆಯಲ್ಲಿ ಅಭಿರುಚಿಯುಳ್ಳ ಮತ್ತು ಯಾವುದೇ ಭಾವೋದ್ವೇಗಕ್ಕೆ ಒಳಗಾಗದೇ ಪರಿಣಾಮಕಾರಿಯಾಗಿ ಭಾಷೆಯನ್ನು ಬಳಸಿಕೊಂಡು ಬರೆಯಬಲ್ಲವರನ್ನೇ ತಮ್ಮ “ಬಕ್​​ಸಾಲಾ” ಪುಟಕ್ಕೆ ಬರಹಗಾರರಾಗಿ ಆಯ್ದುಕೊಳ್ಳುವುದಾಗಿ ರಾಹುಲ್ ಹೇಳುತ್ತಾರೆ. ಇಂದು ಸರಿಸುಮಾರು ಐದೂವರೆ ಲಕ್ಷ ಅನುಯಾಯಿಗಳನ್ನು ಹೊಂದಿರುವ “ಬಕ್​​ಸಾಲಾ” ಬಹಳಷ್ಟು ಕಲಾವಿದರಿಗೆ ಯಾವುದೇ ಲಾಭದ ಉದ್ದೇಶವಿಲ್ಲದೇ ಪ್ರೋತ್ಸಾಹ ಮತ್ತು ಪ್ರಚಾರಕ್ಕೆ ವೇದಿಕೆಯನ್ನೂ ಕಲ್ಪಿಸುತ್ತಿದೆ. ರಾಹುಲ್​​ರವರ ಅಪ್ಪಟ ದೇಶಪ್ರೇಮವನ್ನು ಅವರ ಸ್ವಂತ ಫೇಸ್​​ಬುಕ್​​ ಪ್ರೊಫೈಲ್​​​ನಲ್ಲಿ ಮತ್ತು “ಬಕ್​​ಸಾಲಾ” ಪುಟದಲ್ಲೂ ಕಾಣಬಹುದು. ಇದೇ ದೇಶಪ್ರೇಮ ಭಾರತೀಯ ರಾಜನೀತಿಯ ಬಗ್ಗೆ ನಿಜ ಮೇಧಾವಿಗಳು ಮತ್ತು ಅಂಧಾಭಿಮಾನಿಗಳ ನಡುವಿನ ಅಭಿಪ್ರಾಯ ಭೇದ ವ್ಯಕ್ತಪಡಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ತಮ್ಮ ಸುತ್ತಲೂ ವ್ಯಾಪಿಸಿರುವ ಅರಾಜಕತೆಯನ್ನು ಚೆನ್ನಾಗಿ ಅರಿತಿರುವ ರಾಹುಲ್ ಕತ್ತಲೆಯನ್ನು ತಕ್ಷಣಕ್ಕೆ ತೊಡೆದು ಹಾಕಲು ಸಾಧ್ಯವಿಲ್ಲದಿದ್ದರೂ ಚಿಕ್ಕದೊಂದು ದೀಪ ಹೊತ್ತಿಸುವ ಭರವಸೆ ಹೊಂದಿದ್ದಾರೆ.

“ಬಕ್ ಸಾಲಾ’’ಪುಟದ ಅನುಯಾಯಿಗಳಲ್ಲಿ ಹೆಚ್ಚಿನವರು ದೇಶದಾದ್ಯಂತ ಹರಡಿರುವ ವಿದ್ಯಾರ್ಥಿಗಳೇ ಆಗಿರುವುದರಿಂದ ಪುಟದಲ್ಲಿ ಪ್ರಕಟವಾಗುವ ಅನಿಸಿಕೆ, ಅಭಿಪ್ರಾಯಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಂದಿನ ಪೀಳಿಗೆಯ ಬಗ್ಗೆ ಮಾತನಾಡುತ್ತಾ ರಾಹುಲ್ ಈ ಕೆಳಗಿನ ಸಂತುಲಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಋಣಾತ್ಮಕ ಅಂಶಗಳು:

1) ನಾವೀಗ ಎಲ್ಲವನ್ನೂ ಅತಿಯಾಗಿ ದೂರುವ ತಲೆಮಾರಿನ ನಡುವೆ ಇದ್ದೇವೆ

2) ಸಾಮಾಜಿಕ ಮಾದ್ಯಮಗಳಿಂದ ನಮ್ಮ ಕೈಗೆ ವಿಶೇಷ ಅಧಿಕಾರ ಸಿಕ್ಕಿದೆ ಎಂದೆನಿಸಿದರೂ ನಾವು ಉತ್ತಮ ವಿಚಾರಗಳಿಂದ ವಿಕೇಂದ್ರೀಕೃತರಾಗುತ್ತಿದ್ದೇವೆ.

ಧನಾತ್ಮಕ ಅಂಶಗಳು

1) ಕಾಲೇಜಿನ ದಿನಗಳಲ್ಲಿ ಅಥವಾ ಕಲಿಕೆ ಮುಗಿದ ತಕ್ಷಣ ಕವಿತೆ, ಕಲೆ ಅಥವಾ ಬರವಣಿಗೆಯಂತ ನಮ್ಮ ಆಸಕ್ತಿಗಳಲ್ಲಿ ಮುಕ್ತವಾಗಿ ನಮ್ಮನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತಿದೆ

2) ಆರಂಭಿಕ ಉದ್ಯಮಗಳ ಸ್ಥಾಪನೆಗೆ ವಿದ್ಯಾರ್ಥಿಗಳು ಅತೀ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ಅವರ ಆತ್ಮವಿಶ್ವಾಸವೂ ಹೆಚ್ಚಿದೆ.

ತಮ್ಮ ಗಣಿತ ಮತ್ತು ಅಂಕೆ-ಸಂಖ್ಯೆಗಳ ಮೇಲಿನ ಒಲವಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಸ್ವತಃ ರಾಹುಲ್ ಕೂಡ ವಿಶ್ಲೇಷಣೆಯ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಜನೆಯಲ್ಲಿ ತೊಡಗಿರುವ ಯುವವೃಂದಕ್ಕೆ ರಾಹುಲ್ ನೀಡುವ ಈ ಸಲಹೆಗಳನ್ನು ನೀಡುತ್ತಾರೆ.

1) ನಿಮ್ಮ ಪದವಿಯನ್ನು ಶೃದ್ದೆಯಿಂದ ಮತ್ತು ಉತ್ತಮ ದರ್ಜೆಯ ಕಾಲೇಜಿನಲ್ಲಿ ಮಾಡಿ.

2) ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವದಕ್ಕೂ ಮುನ್ನ ವಿಷಯದ ಬಗೆಗಿನ ಓದು ಅತ್ಯಗತ್ಯ.

3) ಸದಾ ನಾವೀನ್ಯತೆಯ ತುಡಿತವಿರಲಿ ಮತ್ತು ಎಲ್ಲದನ್ನೂ ದೂರುವ ಮನಸ್ಥಿತಿ ಬಿಟ್ಟು ನಿಮ್ಮ ಬುನಾದಿಯನ್ನು ಭದ್ರಪಡಿಸಿಕೊಳ್ಳಿ.

4) ನೀವಿಡುವ ಮೊದಲ ಹೆಜ್ಜೆ ಕೇವಲ ನಿಮ್ಮ ಯಶಸ್ಸಿನ ಪಥದ ಪರಿಭಾಷೆ ಬರೆಯುವದಷ್ಟೇ ಅಲ್ಲದೇ ನಿಮ್ಮ ಸಾಮರ್ಥ್ಯಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಇನ್ನಷ್ಟು ಮುಂದುವರೆಯಲು ಸಹಾಯಕವಾಗುತ್ತದೆ.

5) ಪರೀಕ್ಷೆಯ ಮುಂಚಿನ ರಾತ್ರಿಯ ಪರಿಶ್ರಮ ಮತ್ತು ವಿಷಯಗಳನ್ನು ವೈಭವೀಕರಿಸುವುದೇ ಇಂಜಿನಿಯರಿಂಗ್ ಎಂಬ ಭ್ರಮೆಗೆ ಒಳಗಾಗದೇ ಮೂಲಭೂತ ಅರಿವು ಪಡೆಯಲು ಪ್ರಯತ್ನಿಸಬೇಕು.

ಜಟಿಲವಲ್ಲದ ಶುದ್ಧ ಮನೋರಂಜನೆ ನೀಡುವುದನ್ನು “ಬಕ್​​​ಸಾಲಾ” ಮುಂದುವರೆಸಿಕೊಂಡು ಹೋಗಲಿ ಎನ್ನುವುದೇ ನಮ್ಮ ಆಶಯ.