ಕಿರಾಣಿ ಅಂಗಡಿಯಿಂದ ರಿಂಗಿಂಗ್ ಬೆಲ್ಸ್ ಕಟ್ಟಿದ ಮೋಹಿತ್ ಗೋಯೆಲ್

ರವಿ

ಕಿರಾಣಿ ಅಂಗಡಿಯಿಂದ ರಿಂಗಿಂಗ್ ಬೆಲ್ಸ್  ಕಟ್ಟಿದ ಮೋಹಿತ್ ಗೋಯೆಲ್

Sunday February 21, 2016,

2 min Read

ಸದ್ಯ ಎಲ್ಲಿ ನೋಡಿದರು ರಿಗಿಂಗ್ ಬೆಲ್ಸ್​ನ 251 ರೂಪಾಯಿ ಮೊಬೈಲ್ ಮಾತು. ಹೌದು ಇಂದು ಇಡೀ ಭಾರತ ಸೇರಿದಂತೆ ಜಗತ್ತಿನಾದ್ಯಂತ ರಿಂಗಿಂಗ್ ಬೆಲ್ಸ್​​ನ 251 ರೂಪಾಯಿಯ ಫ್ರೀಡಂ ಸ್ಮಾರ್ಟ್ ಫೋನ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ರಿಂಗಿಂಗ್ ಬೆಲ್ಸ್​​ನ ಕನಸು ನನಸು ಮಾಡಿದ್ದು, 28ರ ಹರೆಯದ ಮೋಹಿತ್ ಗೋಯೆಲ್ ಎಂಬ ಯುವಕ. ಈತ ಒಬ್ಬ ಪುಟ್ಟ ಕಿರಾಣಿ ಅಂಗಡಿ ಮಾಲೀಕನ ಮಗ.

image


251 ರೂಪಾಯಿಗೆ ಸ್ಮಾರ್ಟ್ ಫೋನ್ ಸಿಗುತ್ತೆ ಎಂದರೆ, ಬೆರಗಾದ ಅದೇಷ್ಟೋ ಜನರು ಈಗಲೂ ಅದು ಹೇಗಿರಬಹುದು..?, ಅದರಲ್ಲಿರುವ ಗುಣಗಳ್ಯಾವು..? ಒಳ್ಳೆ ಕ್ವಾಲಿಟಿನಾ. ಅಥವಾ ಪಂಗನಾಮ ಹಾಕೋ ಕಂಪನಿನ ಎಂಬ ಗೊಂದಲ, ಭಯ ಮತ್ತು ಅಚ್ಚರಿಯ ಹಲವರಿಗಿದೆ. ಇಂದಿಗೂ ಅನೇಕರು ನಂಗ್ಯಾಕೋ ಡೌಟ್ ಇದೆಯೆಂದು, ಎಂದು ಅಚ್ಚರಿ, ಆತಂಕ ವ್ಯಕ್ತಪಡಿಸುತ್ತಿರುವವರ ಸಂಖ್ಯೆ ಹೆಚ್ಚಿದೆ.

ಸದ್ಯ ಎಲ್ಲರಿಗೂ ಈ ಅದ್ಭುತ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೆಯಿರುತ್ತದೆ. ನನ್ನ ಮಗ ಒಂದಲ್ಲ ಒಂದು ಮಹತ್ತರವಾದುದನ್ನು ಸಾಧಿಸುತ್ತಾನೆ ಎಂಬ ನಂಬಿಕೆ ಇತ್ತು. ಅದೀಗ ನಿಜವಾಗಿದೆ ಎಂದು ಪುಟ್ಟ ಕಿರಾಣಿ ಅಂಗಡಿಯಲ್ಲಿರುವ ಮೋಹಿತ್ ತಂದೆ, ರಾಜೇಶ್ ಗೋಯಲ್ ಸಂತಸ, ಅಭಿಮಾನದಿಂದಿದ್ದಾರೆ.. 

ಪುಟ್ಟ ಕಿರಾಣಿ ಅಂಗಡಿ ಮೇಲಿನ ಬೋರ್ಡ್​ನಲ್ಲಿ ರಾಮ್ ಜೀ ಎಂದು ಬರೆಸಲಾಗಿದೆ. ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಗರ್ಹಿಪುಖ್ತ್ ಎಂಬ ಸಣ್ಣ ಪಟ್ಟಣದಲ್ಲಿ ಗೋಯಲ್ ಅವರ ತವರು. 251 ರೂಪಾಯಿ ಮೊಬೈಲ್ ರೂವಾರಿಯಾದ ಗೋಯಲ್, ಸದ್ಯ ಸುದ್ದಿಯಲ್ಲಿದ್ದು, ಗ್ರಾಮಸ್ಥರೇ ಗೋಯಲ್ ಬಗ್ಗೆಯೇ ಚರ್ಚಿಸುತ್ತಿದ್ದಾರೆ.

ಈಡೀ ಭಾರತದ ಮನೆಮಾತಾಗಿರುವ ರಿಂಗಿಂಗ್ ಬೆಲ್ಸ್ ಕಂಪನಿಯ ಡೈರೆಕ್ಟರ್​ಗಳಲ್ಲಿ ಗೋಯಲ್ ಕೂಡಾ ಒಬ್ರು. ತನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಮೋಹಿತ್ ನೋಯ್ಡಾಗೆ ತೆರಳಿ ಅಲ್ಲಿನ ಆಮಿಟಿ ವಿವಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಒಂದು ಕಂಪನಿ ತೆರೆಯುವ ಆಸೆ ಅವರದಾಗಿತ್ತು. ಬಯಸಿದ ಕಂಪನಿ ಆರಂಭಕ್ಕಾಗಿ ಸಾಲ ಮಾಡಿ ಕಂಪನಿ ಆರಂಭಿಸಿದ್ರು, ಇದೀಗ ಮೊಬೈಲ್ ಫೋನ್ ಕಂಪನಿ ಆರಂಭಿಸಿದ್ದಾರೆ.

image


ಕಷ್ಟಪಟ್ಟು ಮೇಲೆ ಬಂದಿರುವ ಮೋಹಿತ್ ರಿಂಗಿಂಗ್ ಬೆಲ್ಸ್​ನ ಆಡಳಿತ ನಿರ್ದೇಶಕರಾಗಿದ್ದಾರೆ. ಬಹುತೇಕ ತಮ್ಮ ಜೀವನವನ್ನು ಮೋಹಿತ್ ತಮ್ಮ ತಂದೆಯ ಜೊತೆಯೇ ಕಳೆದಿದ್ದರು. ತಂದೆಯ ಕಿರಾಣಿ ಅಂಗಡಿಯಲ್ಲಿ ಕುಳಿತು ನೆರವಾಗುತ್ತಿದ್ದರು. ಈಗ ರಿಂಗಿಂಗ್ ಬೆಲ್ಸ್ ಫ್ರೀಡಂ 251 ಸ್ಮಾರ್ಟ್ ಫೋನ್ ಅನ್ನು ದೆಹಲಿಯಲ್ಲಿ ಬಿಡುಗಡೆಗೊಂಡಿದೆ. ಕಂಪನಿಗಾಗಿ ಗೋಯಲ್ ಕುಟುಂಬ ಸುಮಾರು 200 ಕೋಟಿ ರೂಪಾಯಿಯಷ್ಟು ಬಂಡವಾಳ ಹೂಡಿದೆ. ಇದರಲ್ಲಿ ನೋಯ್ಡಾ ಮತ್ತು ಉತ್ತರಾಖಂಡ್ ನಲ್ಲಿ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ಅನ್ನು ಉತ್ಪಾದಿಸುವ ಪ್ಲ್ಯಾಂಟ್ ಅನ್ನು ತೆರೆಯುವ ಉದ್ದೇಶ ಹೊಂದಿದ್ದಾರೆ ಕಂಪನಿ ಮೂಲಗಳು ತಿಳಿಸಿವೆ..

ಗೋಯೆಲ್ ಕುಟುಂಬ ಕೃಷಿಯಾಧಾರಿತ ವ್ಯವಹಾರ ನಡೆಸುತ್ತಿದೆ. ಈ ಸ್ಮಾರ್ಟ್ ಫೋನ್ ಉದ್ಯಮದಿಂದ ಜನರನ್ನು ಬೆರಗುಗೊಳಿಸಿರುವ ಮೋಹಿತ್ ಗೋಯಲ್, ಜನರ ನಿರೀಕ್ಷೆಯಂತೆ, ಒಂದು ಅದ್ಭುತ ಫೋನ್ ನೀಡಿ ವಿಶ್ವಕ್ಕೆ ಸವಾಲು ಹಾಕ್ತಾರಾ. ಮೋದಿ ಕಂಡ ಮೆಕ್ ಇನ್ ಇಂಡಿಯಾ, ಡಿಜಿಟಿಲ್ ಇಂಡಿಯಾ ಕನಸನ್ನು ನನಸಾಗಿಸುವ ಹಾದಿಯಲ್ಲಿ ಯಶಸ್ವಿಯಾಗುತ್ತಾರ ಎಂಬ ಪ್ರಶ್ನೆಗೆ ಶೀಘ್ರವೆ, ಮೋಹಿತ್ ಉತ್ತರ ನೀಡಲಿದ್ದಾರೆ..