ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!

ಟೀಮ್​ ವೈ.ಎಸ್​.ಕನ್ನಡ

0

ಮೊದಲೆಲ್ಲ ಹಸಿವು ಆಯಿತು ಅಂದ್ರೆ, ಕಿಲೋಮೀಟರ್‍ಗಟ್ಟಲೆ ಹೋಟೆಲ್ ಹುಡುಕುತ್ತಾ ಹೋಗಬೇಕಿತ್ತು. ಆದ್ರೆ ಈಗ ಹಾಗಿಲ್ಲ. ನೀವು ಕುಳಿತ ಕಡೆಯೇ ನಿಮಗಿಷ್ಟವಾದ ಊಟ ಕ್ಷಣ ಮಾತ್ರದಲ್ಲೇ ಬರುತ್ತದೆ.  ನಿಮಗೆ ಎಲ್ಲಾ ವೆರೈಟಿ ಊಟಗಳು ಒಂದೇಕಡೆ ಸೆಲಟಕ್ಟ್ ಮಾಡೋದಕ್ಕೆ ಅವಕಾಶವೂ ಸಿಗುತ್ತದೆ. ಚೈನೀಸ್, ನಾರ್ತ್​ಇಂಡಿಯನ್, ಸೌಥ್‍ಇಂಡಿಯನ್, ಹೀಗೆ ಹತ್ತಕ್ಕೂ ಹೆಚ್ಚು ಶೈಲಿಯ ಫುಡ್‍ ಒಂದೇ ಕಡೆ ಆಯ್ಕೆ ಮಾಡಿಕೊಳ್ಳಬಹುದು. ಅದು ನಿಮಗೆ ಇಂತಹದ್ದೇ ಹೋಟೆಲ್​​ನಲ್ಲಿ ಬೇಕು ಅಂತ ಇದ್ರೆ ಅಲ್ಲಿಂದನೇ ಪಾರ್ಸೆಲ್ ಬರುತ್ತದೆ. ಹಾಗಂತ ನೀವು ನಿಮಗಿಷ್ಟವಾದ ಹೋಟೆಲ್‍ಗೆ ಕಾಲ್ ಮಾಡಿ ಆರ್ಡರ್ ಮಾಡಬೇಕಿಲ್ಲ. ಜಸ್ಟ್​ ಕ್ಲಿಕ್ ಫುಡ್​ಪಂಡಾ. ನಿಮಗಿಷ್ಟವಾದ ಫುಡ್ ಸೆಲೆಕ್ಟ್ ಮಾಡಿ. ಕೇವಲ 19 ನಿಮಿಷಗಳಲ್ಲಿ ನಿಮ್ಮ ಊಟ ನಿಮ್ಮ ಮುಂದೆ ಇರತ್ತದೆ.

ಏನಿದು ಫುಡ್​ಪಂಡಾ...?

ಫುಡ್​ಪಾಂಡ ಆನ್​ಲೈನ್ ಫುಡ್‍ ಡೆಲವೆರಿ ಮಾಡೋ ಸಂಸ್ಥೆ ಅಂತ ಕರೆಯಬಹುದು. ಒಮ್ಮೆ ನೀವು ಫುಡ್‍ಪಾಂಡಗೆ ಲಾಗ್‍ಇನ್ ಮಾಡಿ ನಿಮ್ಮ ಲೊಕೇಷನ್ ಸೆಲೆಕ್ಟ್ ಮಾಡಿದ್ರೆ ಸಾಕು. ಫುಡ್​ಪಾಂಡಾದಲ್ಲಿ ರಿಜಿಸ್ಟರ್‍ ಆಗಿರೋ, ನೀವು ಇರೋ ಏರಿಯಾದಲ್ಲಿರೋ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಪ್ರತಿಯೊಂದು ಲಿಸ್ಟ್​ಗಳು ಡಿಸ್ಲ್ಪೇ ಆಗುತ್ತದೆ. ಅದ್ರಲ್ಲಿ ನಿಮಗೆ ಬೇಕಾದ ಫುಡ್‍ಅನ್ನ ಸೆಲೆಕ್ಟ್ ಮಾಡಿದ್ರೆ ಆಯ್ತು. ನಿಮ್ಮ ಊಟ ನಿಮ್ಮ ಮುಂದೆರೆಡಿ ಇರುತ್ತದೆ. ಇದಕ್ಕಾಗಿ ಹೆಚ್ಚುವರಿ ಚಾರ್ಜ್ ಮಾಡೋದಿಲ್ಲ. ವಿಶೇಷ ಅಂದ್ರೆ ಇಲ್ಲಿ ನಿಮಗೆ ಫುಡ್ ಮೇಲೆ ಡಿಸ್ಕೌಂಟ್‍ ಕೂಡ ಸಿಗುತ್ತದೆ.

ಇದನ್ನು ಓದಿ: ಇದು ಬರೀ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

ದೇಶದ ಮೂಲೆ ಮೂಲೆಯಲ್ಲೂ ಫುಡ್​ಪಾಂಡ...

ಫುಡ್​ಪಾಂಡ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗೂ ಫುಡ್ ಸರ್ವಿಸ್ ಮಾಡುತ್ತದೆ. ಭಾರತ ಸೇರಿದಂತೆ ಮಲೇಷಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪೂರ್,ಹಾಂಕ್​ಕಾಂಗ್​, ಇಂಡೋನೇಷಿಯಾ, ಫಿಲಿಪೈನ್ಸ್​ , ರಷ್ಯಾ, ಸೌದಿ ಅರೇಬಿಯಾ,  ಹೀಗೆ ಇನ್ನೂ ಅನೇಕ ದೇಶಗಳಲ್ಲಿ ಫುಡ್​ಪಂಡಾ ತನ್ನ ಸರ್ವೀಸ್‍ ಅನ್ನ ಹೊಂದಿದೆ. ಅಷ್ಟೇ ಅಲ್ಲದೆ ಫುಡ್​ಪಂಡಾ ತನ್ನದೇಯಾದ ಆ್ಯಪ್‍ ಅನ್ನ ಹೊಂದಿದ್ದು, ಆ ಆ್ಯಪ್‍ ಅನ್ನ ಡೌನ್​ಲೋಡ್ ಮಾಡಿಕೊಂಡ್ರೆ, ನಿಮ್ಮ ಫುಡ್‍ ಆರ್ಡರ್ ಮಾಡೋಕೆ ಸಖತ್ ಸುಲಭ.

ಫಂಕ್ಷನ್​ಗಳಲ್ಲೂ ಫುಡ್​ಪಂಡಾ..!

ಫುಡ್​ಪಂಡಾ ಟೀಮ್​ನ ತಮ್ಮ ನೆಟ್​​ವರ್ಕ್​ ಅನ್ನ ತುಂಬಾ ದೊಡ್ಡದಾಗಿ ಬೆಳೆಸಿರೋದ್ರಿಂದ, ಕೇವಲ ಸಿಂಗಲ್ ಫುಡ್‍ ಸರ್ವಿಸ್ ಮಾತ್ರವಲ್ಲದೆ ಪಾರ್ಟಿ ಮತ್ತು ಫಂಕ್ಷನ್​ಗಳಿಗೂ ಫುಡ್ ಸರ್ವಿಸ್ ಮಾಡಲಾಗುತ್ತದೆ. ನಿಮಗೆ ಬೇಕಾದ ಹೋಟೆಲ್​ನಿಂದ ಇಷ್ಟು ಮೀಲ್ಸ್​ ಅಥವಾ ಪಾರ್ಟಿಗೆ ಬೇಕಾದ ಫುಡ್ ,ಸ್ಯಾಕ್ಸ್​ ಆರ್ಡರ್ ಮಾಡಿದ್ರೆ ಆಯ್ತು, ಫುಡ್​ಪಂಡಾ ಟೀಮ್​ನವ್ರು ಬಂದು ನಿಮ್ಮ ಫಂಕ್ಷನ್​ನಲ್ಲಿ ಫುಡ್ ಸರ್ವಿಸ್ ಮಾಡಿ ಹೋಗ್ತಾರೆ. ಬೆಳಗಿನ ಕಾಫಿಯಿಂದ, ಮಧ್ಯರಾತ್ರಿ 3 ಗಂಟೆವರೆಗೂ ಫುಡ್​ಪಂಡಾದ ಟೀಮ್​ ಕೆಲಸ ಮಾಡುತ್ತದೆ.

ಫುಡ್​ಪಂಡಾಕ್ಕೆ ನೀವು ಯಾವಾಗ ಬೇಕಿದ್ರು ಫುಡ್‍ಆರ್ಡರ್ ನೀಡಬಹುದು. ಫುಡ್​ಪಂಡಾದಲ್ಲಿ ಒಂದೆರೆಡಲ್ಲ ಸರಿಸುಮಾರು 4000 ರೆಸ್ಟೋರೆಂಟ್​ಗಳು ರಿಜಿಸ್ಟರ್‍ ಆಗಿದ್ದು, ಆಯಾ ದೇಶದ ಸಂಸ್ಕೃತಿಗೆ ತಕ್ಕಂತಹ ಫುಡ್ ಅನ್ನ ಒಂದೇಕ್ಲಿಕ್​ನಲ್ಲಿ ನೀವು ಪಡೆದು, ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಬಹುದು. ದೇಶ ಹಾಗೂ ವಿದೇಶದಲ್ಲೂ ಹರಡಿರುವ ಫುಡ್​ಪಂಡಾ ಸರ್ವಿಸ್ ಸಖತ್ ಹೆಲ್ಪ್ ಫುಲ್‍ ಆಗಿದ್ದು ಜನರಿಂದ ಸೂಪರ್‍ ರೆಸ್ಪಾನ್ಸ್​ ಕೂಡ ಬರ್ತಿದೆ. ನಿಮಗೇನಾದ್ರೂ ಫುಡ್​ಪಂಡಾದ ಮೂಲಕ ಫುಡ್​ ತರಿಸಿಕೊಳ್ಳುವ ಆಸಯಾಗಿದ್ರೆ, ತಡ ಯಾಕೆ ಮಾಡ್ತಿರಾ.. ಒಂದು ಕ್ಲಿಕ್​ ಮಾಡಿ, ನಿಮ್ಮಿಷ್ಟದ ಫುಡ್​ ತರಿಸಿಕೊಳ್ಳಿ.

ಇದನ್ನು ಓದಿ:

1. ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!

2. ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

3. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

Related Stories