ಗುಡ್​ಮಾರ್ನಿಂಗ್​​...! ಎದ್ದು ಬಿಡಿ... ಯಶಸ್ಸಿನ ಕಥೆಯನ್ನು ನೀವೇ ಬರೆಯಿರಿ..!

ಟೀಮ್​ ವೈ.ಎಸ್​. ಕನ್ನಡ

ಗುಡ್​ಮಾರ್ನಿಂಗ್​​...! ಎದ್ದು ಬಿಡಿ... ಯಶಸ್ಸಿನ ಕಥೆಯನ್ನು ನೀವೇ ಬರೆಯಿರಿ..!

Tuesday September 13, 2016,

4 min Read

ಗುಡ್ ಮಾರ್ನಿಂಗ್..! ಬೆಳಗ್ಗೆ ಬೆಡ್​ನಿಂದ ಎದ್ದೇಳುವ ಸಮಯ ನಿಮ್ಮ ಏಳಿಗೆಯ ಲೆಕ್ಕಾಚಾರ ಬರೆಯಬಲ್ಲದು. ಯಸ್. ಬೆಳಗ್ಗೆ ಬೇಗನೆ ಏಳುವುದರಿಂದ ಹಲವು ಲಾಭಗಳಿವೆ. ಬೇಗನೆ ಏಳುವ ಅಭ್ಯಾಸ ನಿಮ್ಮ ಮನಸ್ಸಿನ ನಿಯಂತ್ರಣದಲ್ಲೂ ಸಾಕಷ್ಟು ಕಾರ್ಯ ನಿರ್ವಹಿಸುತ್ತದೆ. ಬೇಗನೆ ಮಲಗು, ಬೇಗನೆ ಎದ್ದೇಳು ಅನ್ನೋ ನಾಣ್ನುಡಿ ಮನುಷ್ಯನಿಗೆ ಬುದ್ದಿ ಬಂದಾಗಿನಿಂದಲೂ ಚಾಲ್ತಿಯಲ್ಲಿರುವ ವೇದ ವಾಕ್ಯ.

ಜಗತ್ತಿನ ಉದ್ಯಮಿಗಳೆಲ್ಲಾ ಬೆಳಗ್ಗೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ವೈಜ್ಞಾನಿಕವಾಗಿಯೂ ಬೇಗನೆ ಏಳುವುದು ಉತ್ತಮ ಹವ್ಯಾಸವೂ ಹೌದು. ಬೇಗನೆ ಎದ್ರೆ ಆರೋಗ್ಯದ ಜೊತೆಗೆ ಬುದ್ದಿಯೂ ಚುರುಕುಗೊಳ್ಳುತ್ತದೆ ಅನ್ನೋದು ಕೂಡ ಸತ್ಯವೇ.

ಎಲ್ಲಕ್ಕಿಂತಲೂ ಮಿಗಿಲಾಗಿ ಬೆಳಗ್ಗೆ ಬೇಗನೆ ಏಳುವುದರಿಂದ ಹೆಚ್ಚು ಸಮಯ ಲಭ್ಯವಾಗುತ್ತೆ. ಪ್ರತಿಯೊಬ್ಬ ಯಶಸ್ವಿ ಮನುಷ್ಯನಿಗೂ ಸಮಯದ ಬಗ್ಗೆ ಹೆಚ್ಚು ಚಿಂತೆಯಿದೆ. ಬೆಳಗ್ಗೆ ಏಳುವುದರಿಂದ ಇದನ್ನು ಕೂಡ ಬಗೆಹರಿಸಿಕೊಳ್ಳಬಹುದು. ವೈಜ್ಞಾನಿಕ ಕಾರಣವೂ ಬೆಳಗ್ಗೆ ಬೇಗನೆ ಏಳುವ ಅಭ್ಯಾಸದ ಲಾಭವನ್ನು ವಿವರಿಸುತ್ತದೆ. ಲಾರಾ ವಂದೇರ್ಕಮ್ ಪ್ರಕಾರ ಬೆಳಗ್ಗೆ ಬೇಗನೆ ಏಳುವುದು, ದಿನದ ಉಳಿದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಉಪಯೋಗಕಾರಿ ಆಗುತ್ತದೆ ಎನ್ನುತ್ತಾರೆ. ಲಾರೋ 20 ಉತ್ತಮ ಎಕ್ಸಿಕ್ಯುಟಿವ್​ಗಳ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ಹಲವರ ಅಭಿಪ್ರಾಯವೂ ಬೆಳಗ್ಗೆ ಬೇಗನೆ ಏಳುವ ಲಾಭದ ಬಗ್ಗೆಯೇ ಆಗಿದೆ. ಬೆಳಗ್ಗೆ 6ಗಂಟೆಗಿಂತ ಬೇಗನೆ ಏಳುವುದು ಹಲವು ಮಹಾನ್ ವ್ಯಕ್ತಿಗಳ ದಿನಚರಿಯ ಬಹುಮುಖ್ಯ ಭಾಗವೂ ಆಗಿದೆ. ಜಗತ್ತಿನ ಖ್ಯಾತ ವ್ಯಕ್ತಿಗಳ ಏಳುವ ಸಮಯದ ಬಗೆಗಿನ ಅಧ್ಯಯನವೂ ಸಖತ್ ಇಂಟರೆಸ್ಟಿಂಗ್ ಆಗಿದೆ.

image


ಜಾಕ್​ಮಾ - ಅಲಿಬಾಬ ಗ್ರೂಪ್ ಸಂಸ್ಥಾಪಕ

“ನಾನು ಪ್ರತಿದಿನ ನನಗೇ ಹೇಳಿಕೊಳ್ಳುವುದು ಒಂದೇ. ನಾನು ಹುಟ್ಟಿರುವುದು ಕೇವಲ ಕೆಲಸ ಮಾಡುವುದಕ್ಕೆ ಮಾತ್ರವಲ್ಲ. ಬದಲಾಗಿ ಬದುಕನ್ನು ಎಂಜಾಯ್ ಮಾಡಲು. ನಮ್ಮ ಕೈಯಲ್ಲಾಗುವ ಬದಲಾವಣೆಗೆ ನಾವು ಸಾಥ್ ನೀಡಬೇಕು. ಕೆಲಸವೊಂದೇ ಮುಖ್ಯವಲ್ಲ. ಸಂತೋಷವೂ ಅತೀ ಮುಖ್ಯ. ಇದನ್ನು ತಪ್ಪಿಸಿಕೊಂಡ್ರೆ ನಾವು ಪಶ್ಚಾತಾಪ ಪಡಬೇಕಾಗುತ್ತದೆ”
image


ಇದು ಅಲಿಬಾಬ ಗ್ರೂಪ್ ಸಂಸ್ಥಾಪಕ ಜಾಕ್​ಮಾ ಹೃದಯದಲ್ಲಿ ಅಡಗಿರುವ ಸೆಂಟಿಮೆಂಟ್. ಈ ಕಾರಣಕ್ಕಾಗಿಯೇ ಜಾಕ್​ಮಾ ಬೇಗೆನ ಏಳುತ್ತಾರೆ. ಬೆಳ್ಳಂಬೆಳಗ್ಗೆ 6ರಿಂದ 7 ಗಂಟೆಯ ಅವಧಿಯಲ್ಲಿ ಜಾಕ್​ಮಾ ನಿದ್ದೆಯಿಂದ ಎದ್ದಾಗಿರುತ್ತದೆ. ಯಾಕಂದ್ರೆ ಇವರಿಗೆ ಒಂದೇ ಒಂದು ಸೆಕೆಂಡ್​ನ್ನು ಕೂಡ ಕಳೆದುಕೊಳ್ಳಲು ಇಷ್ಟವಿಲ್ಲ. ಅಷ್ಟೇ ಅಲ್ಲ ಬೆಳಗ್ಗಿನ ಸಮಯವನ್ನು ಕುಟುಂಬದ ಜೊತೆ ಕೂಡ ಕಳೆದು ಸಂತೋಷ ಪಡುತ್ತಾರೆ.

ಜೆಫ್ ಬೆಝೋಸ್- ಸಿಇಒ, ಅಮೆಜಾನ್

ಗ್ರಾಹಕ ಸೇವೆ ಬಗ್ಗೆ ಇವರ ಫೋಕಸ್ ಎಂದೂ ಕಡಿಮೆ ಆಗಿಲ್ಲ. ಯಾಕಂದ್ರೆ ಅಮೆಜಾನ್​ನ ಸಿಇಒ ಜೆಫ್ ಬೆಝೋಸ್ ಕೆಲಸದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುವ ವ್ಯಕ್ತಿತ್ವದವರು. ಆದ್ರೆ ನಿದ್ದೆಗೆ ಮತ್ತು ಬೆಳಗ್ಗೆ ಎದ್ದೇಳುವ ವಿಚಾರದಲ್ಲಿ ಇವರು ರಾಜಿಮಾಡಿಕೊಳ್ಳುವುದಿಲ್ಲ. ಮಲಗುವ ಮತ್ತು ಬೆಳಗ್ಗೆ ಏಳುವ ಸಮಯದ ಬಗ್ಗೆ ಅಂತಹ ರೂಟಿನ್ ಇಲ್ದೇ ಇದ್ರೂ, ಸಾಮಾನ್ಯವಾಗಿ ಬೆಳಗ್ಗೆ ಬೇಗನೆ ಎದ್ದು, ಬೇಗನೆ ಮಲಗುವ ರೂಢಿ ಇಟ್ಟುಕೊಂಡಿದ್ದಾರೆ.

ಟಿಮ್​ಕುಕ್, ಸಿಇಒ ಆ್ಯಪಲ್

image


ಟಿಮ್​ಕುಕ್ ಬೆಳಂಬೆಳಗ್ಗೆ 4.30ಕ್ಕೆಲ್ಲಾ ಉದ್ಯೋಗಿಗಳಿಗೆ ಇ-ಮೇಲ್ ಮಾಡತ್ತಿರುತ್ತಾರೆ. 5 ಗಂಟೆಗೆಲ್ಲಾ ಕುಕ್ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುತ್ತಾರೆ. ಕೆಲಸದಲ್ಲೂ ಸಮಯದ ಲೆಕ್ಕ ಹಾಕುವುದಿಲ್ಲ. ಬೆಳಗ್ಗೆ ಆಫೀಸ್​ಗೆ ಮೊದಲಿಗರಾಗಿ ಬಂದ್ರೆ, ಕೊನೆಯವರಾಗಿ ಮನೆ ಕಡೆ ಹೆಜ್ಜೆ ಹಾಕುತ್ತಾರೆ.

ಬಿಲ್​ಗೇಟ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ

image


ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ಗೇಟ್ಸ್ ಕನಿಷ್ಟ ಒಂದುಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ. ಟ್ರೆಡ್​ಮಿಲ್ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಚಾಚು ತಪ್ಪದೆ ಮಾಡುತ್ತಾರೆ. ಇದಕ್ಕೆಲ್ಲಾ ಬಿಲ್​ಗೇಟ್ಸ್ ವಿಡೀಯೋ ಟೀಚಿಂಗ್​ನ್ನು ಬಳಸಿಕೊಳ್ಳುತ್ತಾರೆ.

ಮಾರ್ಕ್​ಝುಕರ್​ಬರ್ಗ್, ಸಿಇಒ, ಸಹಸಂಸ್ಥಾಪಕ ಫೇಸ್​ಬುಕ್

image


ಮಾರ್ಕ್​ಝುಕರ್​ಬರ್ಗ್ ಸಾಮಾನ್ಯವಾಗಿ ಬೆಳಗ್ಗೆ 6ಗಂಟೆಗೆಲ್ಲಾ ಎದ್ದು ಆಫೀಸ್​ಗೆ ಹೊರಡಲು ಸಜ್ಜಾಗುತ್ತಾರೆ. ಅಷ್ಟೇ ಅಲ್ಲ ಮಾರ್ಕ್ ಕಡಿಮೆ ನಿದ್ದೆ ಕೂಡ ಮಾಡುತ್ತಾರೆ. ಪ್ರೋಗ್ರಾಮರ್​ಗಳ ಜೊತೆಗೆ ಬೆಳಗ್ಗೆ 6 ಗಂಟೆ ತನಕ ಚಾಟ್ ಮಾಡಿರುವ ಉದಾಹರಣೆಗಳು ಕೂಡ ಇವೆ.

ಜಾಕ್​ಡೋರ್ಸೆ- ಟ್ವಿಟ್ಟರ್ ಸಹಸಂಸ್ಥಾಪಕ

ಸಾಮಾಜಿಕ ಜಾಲತಾಣ ಟ್ವಿಟ್ಟರ್​ನ ಸಹಸಂಸ್ಥಾಪಕ ಜಾಕ್ ಡೋರ್ಸೆ ಬೆಳಗ್ಗೆ 5.30ಕ್ಕೆಲ್ಲಾ ಎದ್ದು 5 ಕಿಲೋಮೀಟರ್ ಜಾಗಿಂಗ್ ಮಾಡ್ತಾರೆ ಅನ್ನೋದನ್ನ ಕೂಡ ನಂಬಲೇಬೇಕು.

ಇದನ್ನು ಓದಿ: 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

ರಿಚರ್ಡ್ ಬ್ರಾನ್ಸನ್, ವಿರ್ಜಿನ್ ಗ್ರೂಪ್ ಮುಖ್ಯಸ್ಥ

image


ವಿರ್ಜಿನ್ ಗ್ರೂಪ್ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಬೆಳಗ್ಗೆ ಬೇಗನೆ ಎದ್ದು ತನ್ನದೇ ಐಲೆಂಡ್​ನಲ್ಲಿ ಈಜಾಡುತ್ತಾರೆ. ಟೆನಿಸ್ ಮತ್ತು ಉತ್ತಮ ಉಪಹಾರವಿಲ್ಲದೆ ತನ್ನ ದಿನವನ್ನು ಆರಂಭಿಸುವುದೇ ಇಲ್ಲ.

ವಾರೆನ್ ಬಫೆಟ್, ಬ್ರಿಕ್​ಶೈರ್ ಹಾಥ್​ವೇ ಸಿಇಒ

image


ಬ್ರಿಕ್​ಶೈರ್​ ಹಾಥ್​ವೇ ಸಿಇಒ ವಾರೆನ್ ಬಫೆಟ್ ಬೆಳಗ್ಗೆ 6.45ಕ್ಕೆಲ್ಲಾ ಬೆಡ್​​ನಿಂದ ಮೇಲೆದ್ದು 6 ನ್ಯೂಸ್ ಪೇಪರ್​ಗಳನ್ನು ಓದುತ್ತಾರೆ. ದಿನದ ಸುಮಾರು 80 ಪ್ರತಿಶತ ಸಮಯವನ್ನು ಬಫೆಟ್ ಓದಿನಲ್ಲೇ ಕಳೆಯುತ್ತಾರೆ.

ರತನ್ ಟಾಟಾ- ಟಾಟಾ ಸನ್ಸ್ ಮುಖ್ಯಸ್ಥರು

image


ರತನ್​ಟಾಟಾ ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆಗೆಲ್ಲಾ ಟಾಟಾಸನ್ಸ್​ನ ವಿವಿಧ ಕಂಪನಿಗಳಿಗೆ ಭೇಟಿ ನೀಡುತ್ತಾರೆ. ವೀಕೆಂಡ್​ಗಳಲ್ಲಿ ಸಾಮಾನ್ಯವಾಗಿ ಬೆಳಗ್ಗಿನ ಹೊತ್ತಲ್ಲಿ ಲಾಂಗ್​ಡ್ರೈವ್ ಅಥವಾ ತನ್ನ ಫಾಲ್ಕನ್ ವಿಮಾನವನ್ನು ಚಲಾಯಿಸುತ್ತಾರೆ.

ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ

image


ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾಗಿರುವ ಮುಕೇಶ್ ಅಂಬಾನಿ ಬೆಳಗ್ಗೆ 5ರಿಂದ 5.30ರ ಒಳಗೆ ಎದ್ದು ಬಿಡುತ್ತಾರೆ. ತನ್ನ ಮನೆ ಅಂಟಿಲಿಯಾದ 2ನೇ ಮಹಡಿಯಲ್ಲಿರುವ ಜಿಮ್​ನಲ್ಲಿ ಕೆಲ ಸಮಯವನ್ನು ಕಳೆಯುತ್ತಾರೆ. ನ್ಯೂಸ್​ಪೇಪರ್ ಓದುವುದು ಮತ್ತು ಈಜಾಡುವುದು ಮುಕೇಶ್ ಹವ್ಯಾಸಗಳಲ್ಲಿ ಅತೀ ಮುಖ್ಯವಾಗಿವೆ.

ಇಂದ್ರ ನೂಯಿ, ಸಿಇಒ ಪೆಪ್ಸಿಕೊ

image


ಪೆಪ್ಸಿಕೋ ಸಿಇಒ ಇಂದ್ರನೂಯಿ ಕೂಡ ಬೆಳ್ಳಂಬೆಳಗ್ಗೆ ಏಳುವವರ ಪಟ್ಟಿಯಲ್ಲಿದ್ದಾರೆ. ಉಳಿದವರು ಏಳುವುದಕ್ಕಿಂತ ಮುನ್ನವೇ ಏಳುವ ಇಂದ್ರನೂಯಿ ಅದ್ಭುತ ಪ್ಲಾನ್​ಗಳನ್ನು ವರ್ಕೌಟ್ ಮಾಡೋದೇ ಬೆಳಗ್ಗಿನ ಸಮಯದಲ್ಲಿ.

ನರೇಂದ್ರ ಮೋದಿ, ಪ್ರಧಾನಮಂತ್ರಿಗಳು

www.narendramodi.in ಪ್ರಕಾರ ಪ್ರಧಾನಿ ನರೇಂದ್ರ ಮೋದಿಯ ದಿನ ಬೆಳಗ್ಗಿನ ಜಾವ 5ಗಂಟೆಗೆ ಆರಂಭವಾಗುತ್ತದೆ. ಮೋದಿಯವರು ಪ್ರತಿದಿನ ಪ್ರಾಣಾಯಾಮ, ಸೂರ್ಯನಮಸ್ಕಾರ ಮತ್ತು ಯೋಗವನ್ನು ತಪ್ಪದೇ ಮಾಡುತ್ತಾರೆ.

ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕ. ಅದ್ರ ಅಧ್ಯಕ್ಷರು ಬರಾಕ್ ಒಬಾಮ ಬೆಳಗ್ಗೆ 6.30ಕ್ಕೆಲ್ಲಾ ಎದ್ದೇಳುವ ಹವ್ಯಾಸ ಇಟ್ಟುಕೊಂಡಿದ್ದಾರೆ. ವೇಯ್ಟ್ ಟ್ರೈನಿಂಗ್ ಮಾಡಿದ ನಂತ್ರ, ಅಮೆರಿಕ ಅಧ್ಯಕ್ಷರು ಕುಟುಂಬದ ಜೊತೆ ಬ್ರೇಕ್​ಫಾಸ್ಟ್ ಕೂಡ ಮಾಡುತ್ತಾರೆ.

ಡೇವಿಡ್​ಕೆಮರೂನ್, ಬ್ರಿಟಿಷ್ ಪ್ರೈಮ್​ಮಿನಿಸ್ಟರ್

ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಡೇವಿಡ್ ಕೆಮರೂನ್ ಕೂಡ 6 ಗಂಟೆಗೆ ಏಳುತ್ತಾರೆ. 8 ಗಂಟೆ ತನಕ ಸರ್ಕಾರದ ಕೆಲಸಗಳನ್ನು ಮಾಡಿ, ಬೆಳಗ್ಗಿನ ಉಪಹಾರವನ್ನು ಕೂಡ ಮುಗಿಸುತ್ತಾರೆ. ಈ ಸಮಯದಲ್ಲಿ ಟಿವಿ ನೋಡುವ ಅವಕಾಶವನ್ನು ಕೂಡ ಕೆಮರೂನ್ ಒದಗಿಸುವುದಿಲ್ಲ.

ವಿರಾಟ್ ಕೊಹ್ಲಿ, ಕ್ರಿಕೆಟಿಗ

image


ಟೀಮ್ ಇಂಡಿಯಾದ ಯೂತ್ ಐಕಾನ್​, ವಿರಾಟ್ ಕೊಹ್ಲಿಯ ಯಶಸ್ಸಿನ ಹಿಂದೆಯೂ ಅಡಗಿರುವುದು ಬೆಳಗ್ಗೆ ಬೇಗನೆ ಏಳುವ ರಹಸ್ಯ. ಬೆಳಗ್ಗೆ 6 ಗಂಟೆಗೆ ಏಳುವ ವಿರಾಟ್ ಹಲವು ವ್ಯಾಯಾಮಗಳನ್ನು ಮಾಡುತ್ತಾರೆ. ಈ ವ್ಯಾಯಾಮಗಳು ಅವರ ಪವರ್ ಹಿಟ್ಟಿಂಗ್ ಮತ್ತು ಬ್ಯಾಟಿಂಗ್ ಯಶಸ್ಸಿನ ಸೀಕ್ರೆಟ್ ಕೂಡ ಆಗಿದೆ.

ಒಟ್ಟಿನಲ್ಲಿ ಬೆಳಗ್ಗೆ ಬೇಗನೆ ಏಳುವ ಹವ್ಯಾಸ ಯಶಸ್ಸಿನ ದಾರಿ ಕೂಡ ಹೌದು. ಸಮಯದ ಉಳಿತಾಯಕ್ಕೆ ಬೆಳಗ್ಗೆ ಬೇಗನೆ ಏಳುವುದು ಕೂಡ ಸಾಕಷ್ಟು ನೆರವು ನೀಡುತ್ತದೆ. ಇನ್ಯಾಕೆ ತಡ.. ನೀವು ಕೂಡ ಬೆಳಗ್ಗೆ ಬೇಗನೆ ಎದ್ದೇಳಿ…!

ಇದನ್ನು ಓದಿ:

1. ವೀಕೆಂಡ್​ಗೂ ಒಂದೇ ದರ, ವೀಕ್​ಡೇಸ್​ನಲ್ಲೂ ಅದೇ ರೇಟ್​​..!

2. 60 ರೂಪಾಯಿ ಸಂಬಳ ತರುತ್ತಿದ್ದವ ಈಗ ಕೋಟಿ ಒಡೆಯ

3. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ