ಮ್ಯಾಪ್ ಮೈಇಂಡಿಯಾ ಜೊತೆ ಫ್ಲಿಪ್ ಕಾರ್ಟ್ ದೋಸ್ತಿ : ಗ್ರಾಹಕರಿಗೆ ಹತ್ತಿರವಾಗಲು ದಿಟ್ಟ ಹೆಜ್ಜೆ ..

ಟೀಮ್​ ವೈ.ಎಸ್​. ಕನ್ನಡ

ಮ್ಯಾಪ್ ಮೈಇಂಡಿಯಾ ಜೊತೆ ಫ್ಲಿಪ್ ಕಾರ್ಟ್ ದೋಸ್ತಿ : ಗ್ರಾಹಕರಿಗೆ ಹತ್ತಿರವಾಗಲು ದಿಟ್ಟ ಹೆಜ್ಜೆ ..

Monday December 07, 2015,

3 min Read

ಆನ್ ಲೈನ್ ಬ್ಯುಸಿನೆಸ್ ನಲ್ಲಿ ಪ್ರತೀ ದಿನ ಕ್ರಾಂತಿಗಳು ನಡೆಯುತ್ತಲೇ ಇವೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗಿಳಿದಿರುವ ಪ್ರತಿಷ್ಠಿತ ಇ ಕಾಮರ್ಸ್ ಕಂಪೆನಿಗಳು ಗ್ರಾಹಕರನ್ನ ಸೆಳೆಯಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿವೆ . ಅಲ್ಲದೆ ತಾವು ನೀಡುತ್ತಿರುವ ಸೇವೆಗಳಲ್ಲಿ ಸುಧಾರಣೆಗಳನ್ನ ತಂದು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿವೆ. ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಆದ ಪ್ಲಾನ್ ಗಳಿಗಂತೂ ಬರವಿಲ್ಲ. ಇದೀಗ ಟಾಪ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳ ಪೈಕಿ ಒಂದಾಗಿರುವ ಫ್ಲಿಪ್ ಕಾರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರನ್ನ ಮತ್ತಷ್ಟು ಸೆಳೆಯಲು ಡಿಜಿಟಲ್ ಮ್ಯಾಪಿಂಗ್ ದಿಗ್ಗಜ ಮ್ಯಾಪ್ ಮೈಇಂಡಿಯಾದೊಂದಿಗೆ ಫ್ಲಿಪ್ ಕಾರ್ಟ್ ಕೈಜೋಡಿಸಿದೆ. ಇದರೊಂದಿಗೆ ಡಿಜಿಟಲ್ ಮ್ಯಾಪ್ ಡಾಟಾ, ಜಿಪಿಎಸ್ ನ್ಯಾವಿಗೇಷನ್ ಗಳನ್ನ ಹೊಂದಿರುವ ಆಪ್ ಸರ್ವೀಸನ್ನ ಒದಗಿಸಲು ಫ್ಲಿಕ್ ಕಾರ್ಟ್ ಮುಂದಾಗಿದೆ.

ಬೆಂಗಳೂರು ಮೂಲದ ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಮ್ಯಾಪ್ ಮೈಇಂಡಿಯಾದ ಲೊಕೇಶನ್ ಸರ್ವೀಸ್ ಬಳಸುವ ಮೂಲಕ ನೆಟ್ ವರ್ಕ್ ಲಿಂಕನ್ನ ಅಭಿವೃದ್ಧಿಪಡಿಸಿಕೊಳ್ಳಲಿದೆ. ಅಲ್ಲದೆ ವಿವಿಧ ಏರಿಯಾಗಳ ವಿಳಾಸವನ್ನ ಸುಲಭವಾಗಿ ಪತ್ತೆ ಹಚ್ಚುವಿಕೆ, ಶಿಪ್ ಮೇಟ್ ಟ್ರ್ಯಾಕಿಂಗ್, ಹೆಚ್ಚುವರಿ ಸೌಲಭ್ಯಗಳ ವಿವರ ಹಾಗೂ ಸುರಕ್ಷತೆಗಳ ಬಗ್ಗೆ ಮ್ಯಾಪ್ ಮೈಇಂಡಿಯಾ ಹೆಚ್ಚು ನಿಗಾವಹಿಸಲಿದೆ. ಹೀಗಾಗಿ ಮ್ಯಾಪ್ ಮೈಇಂಡಿಯಾದೊಂದಿಗೆ ಸುಮಾರು 34% ದಷ್ಟು ಶೇರು ಪಡೆದಿರುವ ಫ್ಲಿಪ್ ಕಾರ್ಟ್, ಇದಕ್ಕಾಗಿ ಸುಮಾರು 1600 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ.

image


“ ಸೇವೆಯಲ್ಲಿ ಸಮಗ್ರ ಏಕೀಕರಣವನ್ನ ತರಲು ಹಾಗೂ ಪ್ರಾಡೆಕ್ಟ್ ಗಳ ಸುಲಭ ಡೆಲಿವರಿಗಾಗಿ ಲೊಕೇಶನ್ ಗಳನ್ನ ಪತ್ತೆ ಹಚ್ಚಲು ಮ್ಯಾಪ್ ಮೈಇಂಡಿಯಾದ ತಂತ್ರಜ್ಞಾನ ಸಹಾಯವಾಗಲಿದೆ. ಈ ಮೂಲಕ ಗ್ರಾಹಕರನ್ನ ಸಂತೃಪ್ತಿಗೊಳಿಸುವ ಪ್ರಯತ್ನ ನಮ್ಮದು ” ಅಂತ ಫ್ಲಿಕ್ ಕಾರ್ಟ್ ಸಿಒಒ ಹಾಗೂ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಅಭಿಪ್ರಾಯಪಟ್ಟಿದ್ದಾರೆ.. ಅಲ್ಲದೆ ಮ್ಯಾಪ್ ಮೈಇಂಡಿಯಾದೊಂದಿಗಿನ ಈ ಒಪ್ಪಂದ ಹಾಗೂ ಮೌಲ್ಯಗಳನ್ನ ಬನ್ಸಾಲ್ ತೆರೆದಿಟ್ಟಿದ್ದಾರೆ. ಇನ್ನು ಫ್ಲಿಪ್ ಕಾರ್ಟ್ ನ ಈ ಒಪ್ಪಂದದಿಂದಾಗಿ ಮ್ಯಾಪ್ ಮೈಇಂಡಿಯಾದ ಆರಂಭಿಕ ಹೂಡಿಕೆದಾರರಾದ ನೆಕ್ಸಸ್ ವೆಂಚರ್ಸ್ ಪಾರ್ಟನರ್ಸ್ ಹಾಗೂ ಲೈಟ್ ಬಾಕ್ಸ್ ವೆಂಚರ್ಸ್ ಕಂಪೆನಿಗಳು ವಾಣಿಜ್ಯ ವ್ಯವಹಾರಗಳ ಸಂಬಂಧಗಳನ್ನ ಕಡಿದುಕೊಳ್ಳಲಿವೆ.

ಬೃಹತ್ ರಿಟೈಲ್ ಮಾರಾಟ ಕಂಪೆನಿಗಳಲ್ಲಿ ಒಂದಾಗಿರುವ ಡಬ್ಲ್ಯೂಎಸ್ ಸಂಸ್ಥೆ ಜೊತೆ ಫ್ಲಿಪ್ ಕಾರ್ಟ್ ತನ್ನ ಒಪ್ಪಂದವನ್ನ ನವೀಕರಣಗೊಳಿಸಿಕೊಂಡ ಎರಡೇ ತಿಂಗಳಲ್ಲಿ ಮ್ಯಾಪ್ ಮೈಇಂಡಿಯಾದೊಂದಿಗೂ ಷೇರು ಪಡೆದಿರೋದು ವಿಶೇಷ. ಇದರೊಂದಿಗೆ ತನ್ನ ನೇರ ಪ್ರತಿಸ್ಪರ್ಧಿಗಳಾದ ಅಮೆಜಾನ್ ಹಾಗೂ ಸ್ನ್ಯಾಪ್ ಡೀಲ್ ಕಂಪೆನಿಗಳೊಂದಿಗೆ ಫ್ಲಿಪ್ ಕಾರ್ಟ್ ಪೈಪೋಟಿಗಿಳಿದಿದೆ. ಅಲ್ಲದೆ ಪ್ರಾಡಕ್ಟ್ ಗಳ ಡೆಲಿವರಿ ಸಿಸ್ಟಮ್ ನಲ್ಲೂ ಗುಣಮಟ್ಟ ಸುಧಾರಿವತ್ತ ಹೆಜ್ಜೆ ಇಟ್ಟಿದೆ. ಆನ್ ಲೈನ್ ಬ್ಯುಸಿನೆಸ್ ದೈತ್ಯ ಸ್ಯ್ಯಾಪ್ ಡೀಲ್ ಈಗಾಗಲೇ ಆಯ್ದ ಪ್ರದೇಶಗಳಲ್ಲಿ ಕೇವಲ 90 ನಿಮಿಷಗಳಲ್ಲೇ ರಿವರ್ಸ್ ಪಿಕ್ ಅಪ್ ಸರ್ವೀಸನ್ನ ಕಲ್ಪಿಸಿದೆ. ಮತ್ತೊಂದೆಡೆ ಅಮೆಜಾನ್ ವೇಗದ ಡೆಲಿವರಿ ಸರ್ವೀಸನ್ನ ಪರಿಚಯಿಸಿದೆ. ಇವುಗಳ ಮಧ್ಯೆ ಫ್ಲಿಪ್ ಕಾರ್ಟ್ ಕೆಲವು ಪ್ರದೇಶಗಲ್ಲಿ ಬೆಳಗ್ಗೆ ಬಹುಬೇಗನೆ ಹಾಗೂ ತಡರಾತ್ರಿ 11 ಗಂಟೆವರೆಗೂ ಡೆಲಿವರಿ ಸರ್ವೀಸನ್ನ ನೀಡಲು ಮುಂದಾಗಿದೆ.

ಫ್ಲಿಪ್ ಕಾರ್ಟ್ ನೊಂದಿಗೆ ಷೇರು ಹಂಚಿಕೊಂಡಿದ್ರೂ, ಮ್ಯಾಪ್ ಮೈಇಂಡಿಯಾದೊಂದಿಗೆ ಸ್ವತಂತ್ರವಾಗಿ ತನ್ನ ವ್ಯವಹಾರಗಳನ್ನ ನಡೆಸಬಹುದಾಗಿದೆ. ಇತ್ತೀಚೆಗಷ್ಟೇ ಆಟೋಮೊಬೈಲ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಓಲಾ ಕಂಪೆನಿಯೊಂದಿಗೆ ಬಹುವಾರ್ಷಿಕ ಲೈಸೆನ್ಸ್ ಒಪ್ಪಂದವನ್ನ ಮ್ಯಾಪ್ ಮೈಇಂಡಿಯಾ ಮಾಡಿಕೊಂಡಿತ್ತು. ಈ ಮೂಲಕ ಓಲಾ ತನ್ನ ನ್ಯಾವಿಗೇಷನ್ ಮತ್ತು ಮ್ಯಾಪಿಂಗ್ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿಕೊಂಡಿತ್ತು.

“ ಪ್ರಮುಖ ಇ ಕಾಮರ್ಸ್ ಕಂಪೆನಿಗಳು, ಆಟೋಮೊಬೈಲ್ ಕ್ಷೇತ್ರದ ಕಂಪನಿಗಳು ಹಾಗೂ ಸರ್ಕಾರದ ಹಲವು ಏಜೆನ್ಸಿಗಳು ಮ್ಯಾಪ್ ಮೈಇಂಡಿಯಾದೊಂದಿಗೆ ಕೈಜೋಡಿಸಲು ಉತ್ಸುಕವಾಗಿವೆ. ನಾವು ಎಲ್ಲಾ ರೀತಿಯ ಗ್ರಾಹಕರಿಗೂ ಸಹಕಾರ ನೀಡಲು ಸಿದ್ಧ ” ಅಂತ ಮ್ಯಾಪ್ ಮೈಇಂಡಿಯಾದ ಸಹ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ವರ್ಮಾ ಅಭಿಮಾನದಿಂದ ಹೇಳುತ್ತಾರೆ. ಅಲ್ಲದೆ ಫ್ಲಿಪ್ ಕಾರ್ಟ್ ಸಂಸ್ಥೆಯೊಂದಿಗೆ ಷೇರು ಹೊಂದಿರುವುದು ನಮ್ಮ ಉತ್ಸಾಹ ಹೆಚ್ಚಿಸಿದ್ದು ಮ್ಯಾಪಿಂಗ್ ಹಾಗೂ ಲೊಕೇಶನ್ ಟೆಕ್ನಾಲಜಿಯಲ್ಲಿ ಇನ್ನಷ್ಟು ಸುಧಾರಣೆ ತರಬಹುದು ಅನ್ನೋದು ವರ್ಮಾರ ವಿಶ್ವಾಸ.

ಹೀಗೆ ಇ ಕಾಮರ್ಸ್ ನಲ್ಲಿರುವ ಸ್ಪರ್ಧೆ ಹೊಂದಿಕೊಳ್ಳಲು ಫ್ಲಿಪ್ ಕಾರ್ಟ್ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ಮೂಲಕ ಕಸ್ಟಮರ್ ಸರ್ವೀಸನ್ನ ಹೆಚ್ಚಿಸಲು ಹೆಚ್ಚು ಒತ್ತುಕೊಟ್ಟಿದೆ. ಆದ್ರೆ ಫ್ಲಿಪ್ ಕಾರ್ಟ್ ಮ್ಯಾಪ್ ಮೈಇಂಡಿಯಾದೊಂದಿಗೆ ಕೈ ಜೋಡಿಸಿದ್ರೂ, ಭವಿಷ್ಯದಲ್ಲಿ ಇತರೆ ಇ ಕಾಮರ್ಸ್ ಕಂಪೆನಿಗಳು ಮತ್ತಷ್ಟು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟರೂ ಸಂಶಯವಿಲ್ಲ.

ಲೇಖಕರು: ಜೈ ವರ್ಧನ್​​

ಅನುವಾದಕರು: ಬಿಆರ್​​​ಪಿ