ಸ್ಮಾರ್ಟ್​ಫೋನ್​ನಲ್ಲಿ ಅಡಗಿಕುಳಿತಿರುವ ಡಾಕ್ಟರ್​..!

ಉಷಾಹರೀಶ್​

0

ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾದದ್ದು. ನಮ್ಮಲ್ಲಿರುವ ರೋಗಕ್ಕೆ ಉತ್ತಮ ಔಷಧ ನೀಡುವುದರ ಜೊತೆಗೆ ಮುಂದಿನ ನಾಲ್ಕೈದು ದಿನಗಳಿಗೆ ಆಗುವಷ್ಟು ಔಷಧಿಗಳನ್ನು ಮತ್ತು ಅದನ್ನು ತೆಗೆದುಕೊಳ್ಳುವ ಸಮಯವನ್ನು ಬರೆದು ಕೊಡುತ್ತಾರೆ. ವೈದ್ಯರ ಸಲಹೆಯನ್ನು ಕಾಲ ಕಾಲಕ್ಕೆ ತೆಗೆದುಕೊಡಂರೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ರೋಗಿಗಳು ಸರಿಯಾದ ಸಮಯಕ್ಕೆ ಮೆಡಿಸಿನ್​​ ತೆಗೆದುಕೊಳ್ಳುವುದನ್ನು ಮರೆತರೆ ಹೇಗೆ ಎಂಬ ಪ್ರಶ್ನೆಗೆ ಹುಟ್ಟಿಕೊಂಡಿರುವುದು ಎಂತತ್ವ ಆ್ಯಪ್.

ಹೌದು ಮನೆಯಲ್ಲಿರುವ ವೃದ್ಧರಿರುತ್ತಾರೆ ಅವರಿಗೆ ಕಾಲ ಕಾಲಕ್ಕೆ ಸರಿಯಾಗಿ ಔಷಧಿ ನೀಡಬೇಕು ಆದರೆ ಮನೆಯಲ್ಲಿ ಎಲ್ಲ ಸಮಯದಲ್ಲೂ ಎಲ್ಲರೂ ಇರುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇನ್ನು ಕೆಲವರು ಸದಾ ಕೆಲಸದ ಮೇಲೆ ಓಡಾಡುತ್ತಿರುರತ್ತಾರೆ . ಅವರು ಯಾವಾಗ ಎಲ್ಲಿರುತ್ತಾರೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಔಷಧ ಮಾತ್ರೆ ತೆಗೆದುಕೊಳ್ಳಬೇಕೆಂಬುದನ್ನು ಮರೆತಿರುತ್ತಾರೆ. ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳದೇ ಸಾಕಷ್ಟು ಸಮಸ್ಯೆಯಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಇದನ್ನು ಓದಿ: ಇದು ಮಕ್ಕಳಿಂದ ಮಕ್ಳೇ ಮಾಡಿದ ಚಿತ್ತಾರದ ಶಾಲೆ

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಅಭಿವೃದ್ಧಿಯಾಗಿರುವುದೇ ಎಂತತ್ವ ಆ್ಯಪ್. ಈ ಆ್ಯಪ್ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಔಷಧಗಳನ್ನು ತೆಗೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ದೆಹಲಿಯ ಐಐಟಿಯ ಹಳೇ ವಿದ್ಯಾರ್ಥಿಗಳಾದ ಪ್ರವೀಣ್ ಪ್ರಕಾಶ್ ಮತ್ತು ಬಲ್ಜಿತ್ ಸಿಂಗ್ ಸೇರಿಕೊಂಡು ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಇಟ್ಟುಕೊಂಡಿರುತ್ತಾರೆ. ಆ ಸ್ಮಾರ್ಟ್ ಫೋನ್​ನಲ್ಲಿ ಈ ಆ್ಯಪ್ ಇದ್ದರೆ ಸಾಕು ನಿಮ್ಮ ಜೊತೆಗೆ ಒಬ್ಬ ಡಾಕ್ಟರ್ ಇದ್ದಂತೆ.

ಸಮಯಕ್ಕೆ ಸರಿಯಾಗಿ ಅಲರ್ಟ್

ಈ ಆ್ಯಪ್​ನ್ನು  ನಿಮ್ಮ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡಿದ್ದರೆ ಸಾಕು. ನಿಮಗೆ ನೀವು ತೆಗೆದಕೊಳ್ಳಬೇಕೆಂದು ಅದು ನಿಮಗೆ ಎಚ್ಚರಿಕೆ ನೀಡುತ್ತದೆ. ಮನೆಯಲ್ಲಿರುವ ವೃದ್ಧರಿದ್ದರೆ ಅವರಿಗೂ ಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂಬುದನ್ನು ಈ ಆ್ಯಪ್ ಅಲರ್ಟ್ ಮಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ದೂರದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳಿಗೂ ಈ ಅಲರ್ಟ್ ಹೋಗುತ್ತದೆ. ಆಗ ಮಕ್ಕಳು ಫೋನ್ ಮಾಡಿ ಮಾತ್ರೆ ತೆಗೆದುಕೊಳ್ಳುವಂತೆ ಸೂಚನೆ ನೀಡಬಹುದು.

ಮೊದಲು ಸಂಗ್ರಹಿಸಿಡಬೇಕು

ನಿಮ್ಮ ಮೊಬೈಲ್​ಗೆ  ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ನಂತರ ಮೊದಲು ಮಾಡಬೇಕಿರುವ ಕೆಲಸವೆಂದರೆ ನಿಮ್ಮ ಮನೆಯ ಹಿರಿಯರು ನಿಮ್ಮ ಮಕ್ಕಳು ನಿಮ್ಮ ಕುಟುಂಬದ ಅಷ್ಟು ಮಂದಿಯ ಆರೋಗ್ಯದ ವಿವರಗಳನ್ನು ಅಲ್ಲಿ ದಾಖಲಿಸಬೇಕು. ಅಷ್ಟೇ ಅಲ್ಲದೇ ನಿಮ್ಮ ಲ್ಯಾಬ್ ರಿಪೋರ್ಟ್ ಬಿಪಿ ಶುಗರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಡಬಹುದು.

ಇದರಿಂದ ನೀವು ಯಾವ ಊರಿನಲ್ಲಿದ್ದರೂ ಆ ಸಮಯದಲ್ಲಿ ಆರೋಗ್ಯದಲ್ಲಿ ತೊಂದರೆಯಾದರೆ ನೀವು ವೈದ್ಯರ ಬಳಿ ಹೋದಾಗ ನಿಮ್ಮ ಈ ಮಾಹಿತಿಗಳನ್ನು ಅವರಿಗೆ ತೋರಿಸಬಹುದು.

ಬಿಪಿ ಶುಗರ್​ ಅಲರ್ಟ್

ಈ ಆ್ಯಪ್ ನಿಮಗೆ ಕಾಲಕಾಲಕ್ಕೆ ಬಿಪಿ ಶುಗರ್ ಕೊಲೆಸ್ಟ್ರಾಲ್​ಗಳನ್ನು ಪರೀಕ್ಷೆ ಮಾಡಿಸಿಕೊಳ್ಳಲು ಅಲರ್ಟ್ ನೀಡುತ್ತಿರುತ್ತದೆ. ಇದರಲ್ಲಿ ತಾಯಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್ಲೋಡ್ ಮಾಡಬಹುದು ಆಗ ಯಾವಗ ಯಾವ ಚಿಕಿತ್ಸೆಯನ್ನು ಮಗುವಿಗೆ ನೀಡಬೇಕು ಎಂಬುದನ್ನು ಇದು ತಿಳಿಸುತಿರುತ್ತದೆ.

ಪ್ರಾಣಯಾಮದ ವಿಡಿಯೋಗಳು ಲಭ್ಯ

ಈ ಆ್ಯಪ್​ನಲ್ಲಿ ಮತ್ತೊಂದು ವಿಶೇಷತೆ ಎಂದರೆ ಯೋಗಾಸನ ಪ್ರಾಣಾಯಾಮ ಕಪಾಲಬಾತಿ ಸೇರಿದಂತೆ ಮತ್ತಿತರ ನೈಸರ್ಗಿಕ ವ್ಯಾಯಮಗಳ ವಿಡಿಯೋಗಳು ಲಭ್ಯವಿರುತ್ತವೆ ಅವನ್ನು ನೋಡಿಕೊಂಡು ಅದರಂತೆ ಪ್ರಾಕ್ಟೀಸ್ ಮಾಡಬಹುದು.

ಮೂರು ಲಕ್ಷ ರೋಗಿಗಳು ಬಳಕೆ

ಈ ಆ್ಯಪ್​ನ್ನು  ಸಧ್ಯಕ್ಕೆ ಮೂರು ಲಕ್ಷ ಮಂದಿ ಉಪಯೋಗಿಸುತ್ತಿದ್ದಾರೆ. ಈ ಮೂರು ಜನ ಸ್ನೇಹಿತರು ಕೆಲ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಆ ಆಸ್ಪತ್ರೆಯ ರೋಗಿಗಳಿಗೆ ಪೋಸ್ಟ್ ಪ್ರಿಸ್ಕಿಪ್ಷನ್ ಸೇವೆಗಳನ್ನು ಕಲ್ಪಿಸಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ MTatva ಆ್ಯಪ್ ಹೈದರಾಬಾದ್​​ನಲ್ಲಿ ಶಾಖಾ ಕಚೇರಿ ಇದೆ. ಸಾಕಷ್ಟು ಫಾರ್ಮಕಾಲಾಜಿಸ್ಟ್​​ಗಳು ಈ ಆ್ಯಪ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಸಧ್ಯಕ್ಕೆ ಇರುವ ಗ್ರಾಹಕರು ಗ್ರಾಮೀಣ ಪ್ರದೇಶದವರೇ ಹೆಚ್ಚು ಅದಕ್ಕಾಗಿ ಮುಂದಿನ ದಿನಗಳಲ್ಲಿ ಇದನ್ನು ಎರಡನೇ ದರ್ಜೆ ನಗರಗಳಿಗೂ ವಿಸ್ತರಣೆ ಮಾಡುವ ಆಲೋಚನೆ ಈ ಸ್ನೇಹಿತರಿಗಿದೆ. ಒಟ್ಟಿನಲ್ಲಿ ಈ ಎಂತತ್ವ ಆ್ಯಪ್ ಡಿಜಿಟಲ್ ನರ್ಸ್ ಡಿಜಿಟಲ್ ವೈದ್ಯರ ರೀತಿಯಲ್ಲಿ ಕಾರ್ಯನಿರ್ವಹಿಸಿ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ.

ಇದನ್ನು ಓದಿ

1. ರಾಸಾಯನಿಕ ಐಟಂಗಳಿಗಿಂತ- ಹ್ಯಾಂಡ್‍ಮೇಡ್ ಐಟಂಗಳಿಗೆ ಭಾರೀ ಡಿಮ್ಯಾಂಡ್​​..!

2. ರೈಲು ಪ್ರಯಾಣಕ್ಕೆ ವೇಗ ನೀಡಿದ ಗತಿಮಾನ್..!

3. ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!