ಭಾಷಾ ನಿರ್ಬಂಧ ತಡೆಯಲು ಹೊಸ ಫ್ಲಾಟ್​​ಫಾರಂ..!

ಟೀಮ್​​ ವೈ.ಎಸ್​​.

0

ನಾನು ಮಧ್ಯಪ್ರದೇಶದಲ್ಲಿ ನನ್ನ ವ್ಯಾಸಂಗ ಮುಗಿಸಿದ ನಂತರ ಮೊದಲು ಪಿಲಾನಿಯಲ್ಲಿ ಬಂದಿಳಿದಾಗ , ನನ್ನನ್ನು ಕೇಳಲಾದ ಮೊದಲ ಪ್ರಶ್ನೆ - ಬಸ್ ನಲ್ಲಿ ಇದ್ದ ಇತರೆ ವಿದ್ಯಾರ್ಥಿಗಳು ಎಲ್ಲಿ? ನಾನು ಇಂಗ್ಲೀಷ್​​ನಲ್ಲಿ ಉತ್ತರಿಸಲಿ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾನು ನನ್ನ ಜೀವನದಲ್ಲಿ ಎಂದಿಗೂ ಇಂಗ್ಲೀಷ್ ನಲ್ಲಿ ಮಾತನಾಡಿರಲಿಲ್ಲ, ಇದು ನಾನು ಎದುರಿಸಿದ ಮೊದಲ ಭಾಷೆ ಸಮಸ್ಯೆಯ ಅನುಭವವಾಗಿತ್ತು," ಎಂದು, ಪ್ರೋಸೆಸ್ 9 ನ ಸಹ- ಸ್ಥಾಪಕ ಮತ್ತು ಸಿಇಒ ರಾಕೇಶ್ ಕಪೂರ್ ಹೇಳುತ್ತಾರೆ.

ಈ ಘಟನೆ ರಾಕೇಶ್ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು ಮತ್ತು ಅವರ ದೇಶೀಯ ಭಾಷೆಗಳ ಡೊಮೈನ್​​ನಲ್ಲಿ ದೊಡ್ಡ ಅವಕಾಶವೇನೂ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿತು. ತನ್ನ ಪದವಿ ಶಿಕ್ಷಣ ಮುಗಿದ ಕೂಡಲೇ ಸಹ ಸಂಸ್ಥಾಪಕರಾದ ದೇವೇಂದ್ರ ಜೋಶಿ ಮತ್ತು ವಿಧೂಷಿ ಕಪೂರ್ ಅವರೊಟ್ಟಿಗೆ, ಭಾರತೀಯ ಭಾಷೆಗಳಲ್ಲಿ ಆ್ಯಪಲ್ ಉತ್ಪನ್ನಗಳು ಪ್ರಾದೇಶೀಕರಿಸುವ ಅವಕಾಶ ಅವರಿಗೆ ಸಿಕ್ಕಿತು. ಅವರು ಶೀಘ್ರದಲ್ಲೇ ಸ್ಥಳೀಯ ಆ್ಯಪಲ್ ಐಫೋನ್ ಹಂಚಿಕೆ ಕಂಪೆನಿಗೆ ಸೇರಿದರು. ಮೊದಲ ಬಾರಿಗೆ, ಮ್ಯಾಕಿಂಟೋಷ್ ಭಾರತೀಯ ಭಾಷೆಗಳಲ್ಲಿ ಅಳವಡಿಸಿದರು.

ಭಾಷೆಗಳ ನಡುವೆ ಸೇತುವೆ

ಅಲ್ಲಿಂದ ಈ ಮೂವರಿಗೆ ಮತ್ತೊಂದು ಅವಕಾಶ ವಿಂಡೋಸ್ 3.1 ಮೂಲಕ ದೊರೆಯುತ್ತದೆ. ಆ್ಯಪಲ್ ಫೋನ್ ವಿತರಣೆಯ ವ್ಯಾಪಾರ ತ್ಯಜಿಸಿದ ನಂತರ ಅವರು ಆಯೋಜಿಸಿದ ಶೃಂಗಸಭೆ ಬಿಡುಗಡೆ ಮತ್ತು ಇಂಡಿಕಾ ಅಭಿವೃದ್ಧಿ - ಭಾರತೀಯ ಭಾಷೆಗಳಲ್ಲಿ ಕೈಬರಹ, ಇವೆಲ್ಲವೂ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ಈ ಹೊತ್ತಿಗೆ ನಾವು ಇಂಟರ್ನೆಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಂಡಿದ್ದೆವು. ನಾವು ಅನುವಾದ ಮತ್ತು ಲಿಪ್ಯಂತರದ ಮೇಲೆ ದೊಡ್ಡ ಅವಕಾಶವನ್ನು ಕಂಡುಕೊಂಡಿದ್ದೆವು. ಮಾರುಕಟ್ಟೆಯಲ್ಲಿ ಅದಾಗಲೇ ಇಂಗ್ಲೀಷ್ ಭಾಷೆಯಲ್ಲಿ ಬಹಳಷ್ಟು ವಿಷಯಗಳಿದ್ದವು. ಇದನ್ನು ಅನುವಾದಿಸುವ ಅಗತ್ಯವಿದೆ ಎಂದು ಗೊತ್ತಿತ್ತು. ಇಂಟರ್ನೆಟ್ ಅನ್ನು ಹೆಚ್ಚಾಗಿ ಇಂಗ್ಲೀಷ್ ಮಾತನಾಡುವವರು ಬಳಸುತ್ತಾರೆ ಆದರೆ ಅನುವಾದಿಸುವ ಕೆಲಸ ಯಾರೂ ಮಾಡಿರಲಿಲ್ಲ," ಎಂದು ರಾಕೇಶ್ ಹೇಳುತ್ತಾರೆ.

ಮೊಬೈಲ್ ತರಂಗದೊಂದಿಗೆ ಸವಾರಿ

ಈ ತಂಡವು ದೊಡ್ಡ ಕಾರ್ಯಕ್ಕಾಗಿ ಕಾಯುವ ಅವಶ್ಯಕತೆ ಏನೂ ಇರಲಿಲ್ಲ. ಆದರೂ ಆ ಅವಕಾಶ ಮೊಬೈಲ್ ಫೋನ್ ರೂಪದಲ್ಲಿ ದೊರಕಿತ್ತು . ರಾಕೇಶ್ ಮತ್ತು ಅವರ ತಂಡ ಮೊಬೈಲ್ ತಂತ್ರಜ್ಞಾನ ಜನಸಾಮಾನ್ಯರಿಗೆ ತಲುಪಲಿ ಮತ್ತು ಎಲ್ಲಾ ಉತ್ಪನ್ನಗಳೂ ಭಾಷೆಯ ನಿರ್ಭಂದಗಳಿಲ್ಲದೆ ಉಚಿತವಾಗಿ ಜನಸಾಮಾನ್ಯರಿಗೆ ದೊರಕಲಿ ಎಂದುಕೊಂಡಾಗ, ತರಂಗ ಜನ್ಮ ತಾಳಿತು. ಇದು ಒಟ್ಟು ಒಂಭತ್ತು ಭಾರತೀಯ ಭಾಷೆಗಳನ್ನು ಬೆಂಬಲಿಸುವ ಆನ್‍ಲೈನ್, ಕ್ಲೌಡ್ ಆಧಾರಿತ ಹಾಗೂ ಅನುವಾದಿಸುವ ತಂತ್ರಜ್ಞಾನವನ್ನುಹೊಂದಿದೆ. ಮುಂದಿನ ಆವೃತ್ತಿ ಎಮ್‍ಓಎಕ್ಸ್ ಮೊಬೈಲ್, ಅನುವಾದ, ಕೀಲಿಮಣೆಗಳನ್ನು ಮತ್ತು ಫಾಂಟ್ ಗಳನ್ನು ಸಂಯೋಜಿಸುವ, ಪ್ರಸ್ತುತ 21 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಈ ಉತ್ಪನ್ನ ಆಕ್ರಮಣಕಾರಿಯಲ್ಲದ ವೆಬ್ ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗಳಿಗೆ ಸ್ಥಳೀಕರಣ ವೇದಿಕೆಗೆ ಎಮ್‍ಓಎಕ್ಸ್ ಹೆಬ್ಬಾಗಿಲಾಗಿದೆ.

"ನಾವು ಸುಮಾರು ಒಂದು ಡಜನ್ ಮೊಬೈಲ್ ಸಾಧನ ತಯಾರಕರೊಂದಿಗೆ ಅವರ ಸಾಧನಗಳಲ್ಲಿ ಎಮ್‍ಓಎಕ್ಸ್ ಮೊಬೈಲ್ ಸಂಯೋಜಿಸಲು ಜಿಯೋನಿ, ಲಾವಾ, ಇಂಟೆಕ್ಸ್, ಐಬಾಲ್ ಸೇರಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ಪೂರ್ವ ಇಂಟಿಗ್ರೇಟೆಡ್ ಫೋನ್ ಎಮ್‍ಓಎಕ್ಸ್ ಮೊಬೈಲ್ ಗಳು ಮಾರಾಟವಾಗುತ್ತವೆ. ಇ-ವಾಣಿಜ್ಯ ಕಂಪನಿಗಳು ವಿಷಯವನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಎಮ್‍ಓಎಕ್ಸ್ ತರಂಗ ಸಹಾಯ ಮಾಡುತ್ತದೆ," ಎಂದು ರಾಕೇಶ್ ಹೇಳುತ್ತಾರೆ.

ನಮ್ಮ ತಂಡಕ್ಕೆ ಲಭಿಸಿದ ಒಂದು ದೊಡ್ಡ ಗ್ರಾಹಕ ಎಂದರೆ ಅದು ಸ್ನ್ಯಾಪ್‍ಡೀಲ್. ಪ್ರೋಸೆಸ್ 9 ಮೂಲಕ ಈಗ ವಿವಿಧ ಭಾಷೆಗಳಿಗೆ ಇ-ಕಾಮರ್ಸ್ ಮೂಲಕ ಉತ್ಪನ್ನಗಳ ಎಲ್ಲಾ ವಿವರಗಳನ್ನು ಅನುವಾದಿಸಲಾಗುತ್ತದೆ.

ಸವಾಲುಗಳು

ಅದೇನೇ ಇರಲಿ, ಆರಂಭದಲ್ಲಿ, ಈ ತಂಡವೂ ತುಂಬಾ ಸವಾಲುಗಳನ್ನು ಎದುರಿಸಬೇಕಾಯಿತು. ತಂಡದಲ್ಲಿ ಇನ್ನೂ ಜಾಗೃತಿಯ ಕೊರತೆ ಮತ್ತು ಸ್ಥಳೀಕರಣದ ಬಗ್ಗೆಯ ಮಾಹಿತಿಯ ಕೊರತೆ ಇದೆ ಎಂಬದು ರಾಕೇಶ್ ಅಭಿಪ್ರಾಯ. "ಅನೇಕ ಸಂಸ್ಥೆಗಳು ಜಾಹಿರಾತುಗಳಲ್ಲಿ ಹಿಂದಿ ಭಾಷೆಯಲ್ಲಿ ಚುಟುಕು ಮತ್ತು ಟ್ಯಾಗ್ ಲೈನ್ಸ್ ಪ್ರಕಟಿಸುವುದಕ್ಕಿಂತ ಇಂಗ್ಲೀಷ್ ಭಾಷೆ ತಮ್ಮ ಗ್ರಾಹಕರಿಗೆ ಆರಾಮದಾಯಕ ಎಂದು ಭಾವಿಸುತ್ತಾರೆ," ಎಂದು ರಾಕೇಶ್ ಹೇಳುತ್ತಾರೆ.

ಮಾರುಕಟ್ಟೆ ಮತ್ತು ಭವಿಷ್ಯದ ಯೋಜನೆಗಳ

ಭವಿಷ್ಯದಲ್ಲಿ 95 ಕೋಟಿ ಮೊಬೈಲ್ ಫೋನ್ ಮತ್ತು ದೇಶದಲ್ಲಿ 30 ಕೋಟಿ ಇಂಟರ್ನೆಟ್ ಸಂಪರ್ಕಗಳನ್ನು ತಲುಪಲಿದ್ದು, ಭಾಷೆ ಸೇವೆ ಒದಗಿಸುವವರ ವಿಭಾಗದಲ್ಲಿ 38 ಬಿಲಿಯನ್ ಡಾಲರ್ ಜಾಗತಿಕ ವ್ಯಾಪಾರ ವಾಗಲಿದೆ ಎಂದು ರಾಕೇಶ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಕಡಿಮೆ ಎಂದರೂ 15% ಜನ ಇಂಗ್ಲೀಷ್ ಭಾಷೆ ಬಳಸುತ್ತಾರೆ. ಇಡೀ ದೇಶಕ್ಕೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡಲು ಇದೊಂದು ಬೃಹತ್ ಅವಕಾಶವಾಗಲಿದೆ. ಎಲ್ಲಾ ಭಾರತೀಯ ಭಾಷೆಗಳ ಸ್ಥಳೀಕರಣ ಮಾಡುವುದರಿಂದ ಈ ಅವಕಾಶವನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು ಎಂದು ರಾಕೇಶ್ ಹೇಳುತ್ತಾರೆ.

ರಾಕೇಶ್ ಪ್ರಸ್ತುತ ತನ್ನ ಪಟ್ಟಿಗೆ ಭಾರತೀಯ ಭಾಷೆಗಳಷ್ಟೇ ಅಲ್ಲದೆ ಇತರ ದೇಶಗಳ ಭಾಷೆಗಳನ್ನೂ ಕೂಡ ಸೇರಿಸಲು ತೀರ್ಮಾನಿಸಿದೆ. ಹೀಗೆ ಎಮ್‍ಓಎಕ್ಸ್ ತರಂಗ ಬಳಸಿಕೊಂಡು ವರ್ಷದಿಂದ ವರ್ಷಕ್ಕೆ 250% ಆದಾಯ ಹೆಚ್ಚಳ ಸಾಧಿಸಲು ಮತ್ತು ತಿಂಗಳಿಗೆ ಒಂದು ಬಿಲಿಯನ್ ಗಿಂತ ಹೆಚ್ಚು ಅನುವಾದಗಳನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ.

Related Stories