ಸ್ಟಾರ್ಟ್ ಅಪ್ ಸ್ಥಾಪಕ ಬೇರೆ ಉದ್ಯಮಿಗಳೊಂದಿಗೆ ಮಾತನಾಡುವುದು ಯಾಕೆ ಅವಶ್ಯಕ..?

ಆರ್​​.ಪಿ.

0

2015ರ ಜನವರಿಯ ಮುಂಜಾನೆಯೊಂದರ ಏಕಾಂಗಿ ಸಮಯ. ಇ-ಕಾಮರ್ಸ್ ಅಲೆಯಿಂದ ಬಹಳ ಜನ ದೂರ ಹೋಗುವ ಮತ್ತು ಆ ಅಂತರದ ಅವಲೋಕನ ಐಶಿಪ್ಪೋ ಹುಟ್ಟುವುದಕ್ಕೆ ಕಾರಣವಾಯಿತು. ನನ್ನ ಪತ್ನಿ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸಣ್ಣ ಉದ್ದಿಮೆದಾರರೊಂದಿಗೆ ಅಂದು ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಮಾತುಕತೆಯಲ್ಲಿ ಮನೆಯಲ್ಲೇ ಮಾಡಿದ ವಸ್ತುಗಳ ಮಾರಾಟ - ಸಾಗಾಣಿಕೆಯ ಕಲ್ಪನೆ ಹೊಳೆದಿತ್ತು.

ಅದೇ ಸಮಯದಲ್ಲಿ ನಾನು ಸೋರ್ಸ್‍ಎನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​​ನ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಹಾಲಿಡೇ ಐಕ್ಯೂ ಮತ್ತು ಕ್ವಿಕ್‍ಸಿಲ್ವರ್ ಕಂಪನಿಗೆ ನಮ್ಮ ಪ್ರತಿಭೆಯನ್ನು ಧಾರೆಯೆರೆಯುವ ಸಂದರ್ಭ. ಕ್ಲಿಯರ್ ಟ್ರಿಪ್, ಹಾಲಿಡೇಐಕ್ಯೂ, ಟ್ರಾವೆಲ್​​​ ಮಾಬ್, ಟ್ಯಾಕ್ಸಿ ಫಾರ್ ಶ್ಯೂರ್ ಕಂಪನಿಗಳಿಗೆ ಮೊಬೈಲ್ ಆ್ಯಪ್‍ಗಳನ್ನು ತಯಾರಿಸಿಕೊಟ್ಟ ಅತ್ಯದ್ಭುತವಾದ ನೈಪುಣ್ಯಗಾರರು ನಮ್ಮಲ್ಲಿದ್ದರು. ಕಂಪನಿಗಳಿಗೆ ಉತ್ಪನ್ನಗಳ ಅಭಿವೃದ್ಧಿ ಸೇವೆಗಿಂತ ನಾವೇ ಹೊಸ ಉತ್ಪನ್ನವನ್ನು ಆರಂಭಿಸೋದರ ಬಗ್ಗೆ ನನ್ನಲ್ಲಿ ಹೆಚ್ಚಿನ ನಂಬಿಕೆಯಿತ್ತು. ಅನೇಕ ಹೆಸರುವಾಸಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ನಾವು ಮೊಬೈಲ್ ಅಪ್ಲಿಕೇಷನ್ ತಯಾರು ಮಾಡಿಕೊಡೋದ್ರಲ್ಲಿ ನೈಪುಣ್ಯತೆ ಸಾಧಿಸಿದ್ವಿ. ಆದ್ರೆ ಹೊಸದಾಗಿ ಉತ್ಪನ್ನವನ್ನು ಸೃಷ್ಟಿಸಿ ಅದನ್ನು ಮಾರುಕಟೆಯಲ್ಲಿ ನೆಲೆಗೊಳಿಸೋಕೆ ತಳಮಟ್ಟದಿಂದ ಕಾರ್ಯಾಚರಣೆ ಮಾಡಬೇಕಿತ್ತು. ಅಲ್ಲದೇ ನಮ್ಮ ಗುರಿ, ನೈಪುಣ್ಯತೆ, ತಂತ್ರ, ಮೈತ್ರಿ, ಕಾರ್ಯಾಚರಣೆ ನಡೆಸುವುದು, ವ್ಯಾಪ್ತಿ ಗುರುತಿಸೋ ಸವಾಲುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮತ್ತು ಬದ್ಧತೆ ಬೇಕಿತ್ತು.

ಬೇರೆಲ್ಲ ಸ್ಟಾರ್ಟ್‍ಅಪ್‍ಗಳಂತೆ ನಾವೂ ಸಹ ಐಶಿಪ್ಪೋವನ್ನು ತಳಮಟ್ಟದಿಂದ ಶುರುಮಾಡಿದೆವು. ಚಿಕ್ಕದೊಂದು ತಂಡದ ಜತೆ ನನಗೆ ಸಹ ಸಂಸ್ಥಾಪಕ ಮತ್ತು ಸಿಟಿಒ ಆಗಿರೋ ದೀಪಕ್ ರಾಮಚಂದ್ರನ್ ಸಹಾಯ ದೊರಕಿತು. ಅವಶ್ಯವಿರೋ ನೈಪುಣ್ಯಗಾರರನ್ನು ನಾವು ತಂಡಕ್ಕೆ ತೆಗೆದುಕೊಳ್ಳಲು ಶುರುಮಾಡಿದ್ವಿ. ಜನರಿಗೆ ಹೆಚ್ಚಿನ ಮಾಹಿತಿ ಇಲ್ಲದ ಯಶಸ್ವಿ ಉತ್ಪನ್ನಗಳ ಆರಂಭಕ್ಕೆ ಬೇರೆ ಅಂಶಗಳ ಬಗ್ಗೆಯೂ ಗಮನ ಹರಿಸಬೇಕಿತ್ತು. ನಮ್ಮ ದೃಷ್ಟಿಕೋನ, ಉತ್ಪನ್ನ ಬಿಡುಗಡೆಯ ಸಮಯ, ಹಣಕಾಸು, ಪ್ರಚಾರ, ಮಾರಾಟ ಕೌಶಲ್ಯ, ಉತ್ಪನ್ನದ ಹೆಸರು, ಭದ್ರತೆ ಬಗ್ಗೆ ಪರೀಕ್ಷೆ ಮಾಡಲು ಶುರುಮಾಡಿದೆವು. ಒಬ್ಬ ಉದ್ಯಮಿಯಾಗಿ ಮೇಲಿನ ಹಲವಾರು ಅಂಶಗಳ ಬಗ್ಗೆ ಸಾಮಾನ್ಯ ಕೆಲಸ ಜ್ಞಾನ, ಮುನ್ನಡೆಸುವ ಪರಿಣಿತಿ ಇದ್ದರೂ ಎಲ್ಲದರಲ್ಲೂ ನಾನು ಪರಿಣಿತನಾಗಿರಲಿಲ್ಲ. ಎಲ್ಲವನ್ನೂ ಸರಿಯಾಗಿ ಮಾಡಿದರೂ ಐಶಿಪ್ಪೋ ಯಶಸ್ವಿಯಾಗುವುದು ಅನುಮಾನವಿತ್ತು. ಗ್ರಾಹಕರಿಗೆ ಒಳ್ಳೆಯ ಉತ್ಪನ್ನ ಕೊಡೋದರ ಬಗ್ಗೆ ನನ್ನ ಸಂಶೋಧನೆ ಮತ್ತು ಯೋಜನೆ ನನ್ನಲ್ಲಿ ವಿಶ್ವಾಸ ತುಂಬಿತ್ತು. ಹೀಗಿದ್ದರೂ ಯಶಸ್ವಿ ಉದ್ಯಮಿಗಳ ಅತ್ಯಮೂಲ್ಯ ಯೋಜನೆ ಮತ್ತು ಸಲಹೆ ಸಿಕ್ಕಿತು. ಇದರಿಂದ ಜ್ಞಾನದ ಬಾಗಿಲೇ ತೆರೆಯಿತು.

ಮನದಲ್ಲಿ ಐಶಿಪ್ಪೋ ಮತ್ತು ಅದನ್ನು ಬೇಗನೇ ಕಾರ್ಯಗತಗೊಳಿಬೇಕೆಂಬ ಆತ್ಮವಿಶ್ವಾಸವನ್ನಿಟ್ಟುಕೊಂಡು ಇತರೆ ಉದ್ಯಮಿಗಳ ವ್ಯಾಪಾರ ತಂತ್ರಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆದ್ದರಿಂದ ಆಸ್ಸೆಲ್ ಪಾರ್ಟ್‍ನರ್ಸ್​ನ ಪ್ರಶಾಂತ್ ಪ್ರಕಾಶ್‍ರ ಸಲಹೆ ಪಡೆಯಲು ಅವರ ಭೇಟಿಗೆ ಸಮಯ ಕೇಳಿದೆ. ಮಧ್ಯಾಹ್ನ ಊಟಕ್ಕೆ ಅವರು ನನ್ನ ಕರೆದರು. ಆಗಲೇ ನನ್ನ ಐಶಿಪ್ಪೋ ಬಗ್ಗೆ ಅವರಲ್ಲಿ ಹೇಳಿಕೊಂಡೆ. ಮಾಹಿತಿ ವಿನಿಮಯದ ಸಿಂಹಾವಲೋಕನದಲ್ಲಿ ಉತ್ಪನ್ನ ಅಳೆಯುವ ಮಾನದಂಡದ ಬಗ್ಗೆ ನನಗೆ ಅತ್ಯಮೂಲ್ಯ ಸಲಹೆಗಳು ಸಿಕ್ಕವು. ನನ್ನ ಮಾತುಗಳನ್ನು ಕಿವಿಗೊಟ್ಟು ಕೇಳಿದ ಪ್ರಶಾಂತ್ ಪ್ರಕಾಶ್ ಸಮೂಹ ಸಾಗಾಣಿಕೆ ಜಾಲದ ಜತೆ ನನ್ನ ಮಾರುಕಟ್ಟೆ ಕಲ್ಪನೆಯನ್ನು ಅರ್ಥ ಮಾಡಿಕೊಂಡು ಉತ್ಪನ್ನದ ನಿರ್ಣಾಯಕ ಯಶಸ್ಸಿಗೆ ಕೆಲವೊಂದು ಸೂತ್ರಗಳನ್ನು ಕೊಟ್ಟರು.

ಮತ್ತೊಂದು ಸಮಯದಲ್ಲಿ ವ್ಯವಹಾರದಲ್ಲಿನ ಕೆಲ ಕಾನೂನಾತ್ಮಕ ಅಂಶಗಳ ಬಗ್ಗೆ ಎಂಡಿಟಿ ಪಾರ್ಟ್‍ನರ್ ಮಹೇಶ್ ದೇವಯ್ಯ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ನನ್ನನ್ನು ಸಿಸ್ ಗ್ರೂಪ್ ಸಿಇಓ ಉದಯ್ ಸಿಂಗ್‍ಗೆ ಪರಿಚಯ ಮಾಡಿಸಿಕೊಟ್ಟರು. ಉದಯ್ ಉತ್ಪನ್ನದ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಮುಂದುವರೆಸಲು ಪ್ರೋತ್ಸಾಹಿಸಿದರು. ಸಾಗಾಟದಲ್ಲಿ ಒಬ್ಬರಿಂದ ಮತ್ತೊಬ್ಬರ ಕೈಗೆ ಹೋಗೋದ್ರಿಂದ ಉತ್ಪನ್ನದ ಭದ್ರತೆ, ಪರಿಶೀಲನೆ ಮತ್ತು ಉತ್ಪನ್ನ ದೃಢೀಕರಣದ ಬಗ್ಗೆ ಗಮನ ಹರಿಸಲು ಸೂಚನೆ ನೀಡಿದರು. ಮಾರಾಟಗಾರರು ಮತ್ತು ಸಾಗಾಣೆದಾರರ ಬಗ್ಗೆ ಈಗ ನಾವು ಹೆಚ್ಚಿನ ಪರಿಶೀಲನೆ ಮಾಡುತ್ತಿದ್ದೇವೆ.

ಹಣಕಾಸಿಗೆ ಸಂಬಂಧಪಟ್ಟಂತೆ ಟ್ಯಾಕ್ಸಿ ಫಾರ್ ಶೂರ್ ಸ್ಥಾಪಕ ರಘುನಂದನ್ ಬದಲಾವಣೆಯ ಹಾದಿಯಲ್ಲಿ ತನ್ನ ಕಂಪನಿಗೆ ಫಂಡಿಂಗ್ ತಂದಿದ್ದರ ಬಗ್ಗೆ ಮಾಹಿತಿ ಕೊಟ್ಟರು. ಪ್ರಾಥಮಿಕ ಹಂತದಲ್ಲೇ ಸ್ಟಾರ್ಟ್‍ಅಪ್ ಗಳಿಗೆ ಫಂಡಿಂಗ್ ತರೋದರ ಬಗ್ಗೆ ಮತ್ತು ಕಂಪನಿ ಮೌಲ್ಯಮಾಪನ ಮಾಡೋದರ ಬಗ್ಗೆ ಯೋಚಿಸದೇ ಮುಂದುವರಿಯಲು ಸಲಹೆ ನೀಡಿದರು. ಹಾಗಾಗಿ ಉತ್ಪನ್ನ ಅಭಿವೃದ್ಧಿಗೊಳೊಸಲು ಉದ್ಯಮಿಗಳ ಎಲ್ಲ ಸಲಹೆಗಳನ್ನು ಅಳವಡಿಸಿಕೊಂಡೆವು.

ಬೇರೆ ಸ್ಟಾರ್ಟ್‍ಅಪ್‍ಗಳಂತೆ ಐಶಿಪ್ಪೋನ ಪ್ರಚಾರ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡೆವು. ಮಾರುಕಟ್ಟೆ ಸಮೀಕ್ಷೆ, ಜಾಹೀರಾತು, ಮಾರುಕಟ್ಟೆಯಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಉತ್ಪನ್ನ ಪ್ರಚಾರ ತಂತ್ರಗಳು ಒಳಗೊಂಡಿದ್ದವು. ಈ ಮಧ್ಯೆ ಟ್ರಾವೆಲ್ ಮಾಬ್‍ನ ಸ್ಥಾಪಕ ಪ್ರಶಾಂತ್ ಕೀರ್ತನೆ ಅವರೊಟ್ಟಿಗಿನ ಮಾತುಕತೆ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಸಮತೋಲನ ಕಾಪಾಡಿಕೊಳ್ಳುವುದು. ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭಿಸುವುದು ಅಲ್ಲದೇ ಕುದಿಯುವ ಸಾಗರಕ್ಕೆ ಇಳಿಯೋ ಮುನ್ನ ಬೇಡಿಕೆ ಮತ್ತು ಲಭ್ಯತೆಯ ಬಗ್ಗೆ ಉತ್ಪನ್ನ ಪರೀಕ್ಷೆ ಮಾಡುವುದು ಜತೆಗೆ ಗ್ರಾಹಕ ಮತ್ತು ಮಾರಾಟಗಾರರ ನಿರೀಕ್ಷೆ ತಲುಪದಿದ್ದಾಗ ಏನು ಮಾಡಬೇಕೆಂಬುದರ ಬಗ್ಗೆ ಯೋಜನೆ ರೂಪಿಸುಕೊಳ್ಳುವಂತೆ ಸಲಹೆ ನೀಡಿದರು. ತನ್ನ ಅನುಭವದ ಆಧಾರದಲ್ಲಿ ಗ್ರಾಹಕರಿಗೆ ತಾಳ್ಮೆ ಕಡಿಮೆ ಇರೋ ಕಾರಣ ಹೆಚ್ಚಿನ ಬೇಡಿಕೆ ಮತ್ತು ಪೂರೈಕೆ ಮೊಬೈಲ್ ಆಪ್ ಮಾರುಕಟ್ಟೆಯಲ್ಲಿ ದೊಡ್ಡ ನಿರೋಧಕವಾಗಿದೆ ಎಂದರು. ಇದನ್ನು ಮನದಲ್ಲಿಟ್ಟುಕೊಂಡು ಮಾರುಕಟ್ಟೆ ಸಮೀಕ್ಷೆ ತಂತ್ರವನ್ನು ಬದಿಗಿಟ್ಟು ಬಾಯ್ ಪೆ ಚರ್ಚಾ ವನ್ನು ಮಾರುಕಟ್ಟೆ ತಲುಪುವ ಮೊದಲ ಕಾರ್ಯಕ್ರಮವಾಗಿ ಮಾಡಿಕೊಂಡೆವು.

ಹಾಲಿಡೇಐಕ್ಯೂ ಸ್ಥಾಪಕ ಮತ್ತು ಸಿಇಓ ಹರಿ ನಾಯರ್ ರಿಂದ ಮತ್ತೊಂದು ಅಮೂಲ್ಯ ಸಲಹೆ ಸಿಕ್ಕಿತ್ತು. ನಮ್ಮ ಒಂದು ಭೇಟಿಯಲ್ಲಿ ಹರಿ ನಾಯರ್ ನನಗೆ ಎರಡು ಪ್ರಶ್ನೆ ಕೇಳಿದರು. ನಿಮ್ಮ ಗ್ರಾಹಕರ ಐಶಿಪ್ಪೋ ಅನುಭವ ಈಗಾಗಲೇ ಮಾರುಕಟ್ಟೆಯಲ್ಲಿರುವ ಅಥವಾ ಭವಿಷ್ಯದಲಿ ಬರಲಿರೋ ಇಂತಹುದೇ ವೇದಿಕೆಗಿಂತ ಹೇಗೆ ವಿಭಿನ್ನವಾಗಿರಲಿದೆ? ಬೇರೆಯದ್ದರಿಂದ ನಿಮ್ಮ ಉತ್ಪನ್ನವನ್ನು ಹೇಗೆ ವಿಂಗಡಿಸುತ್ತೀರಿ? ಎಂದು ಕೇಳಿದರು. ನಾವಿಬ್ಬರೂ ಆ ಬಗ್ಗೆ ಆಲೋಚಿಸುತ್ತಿರಬೇಕಾದ್ರೆ ಹರಿ ನಾಯರ್ ಐಶಿಪ್ಪೋ ವಿಭಿನ್ನವಾದ ಮೌಲ್ಯ ಪ್ರತಿಪಾದನೆ ತನ್ನ ಗ್ರಾಹಕರಿಗೆ ಕೊಡಲಿ, ಇಲ್ಲಿ ಮಾರಾಟಕ್ಕಿರೋ ಎಲ್ಲವೂ ‘ಪ್ರೀತಿಯಿಂದ ಮಾಡಿದ’ ಕೈತಯಾರಿಕೆಯ ವಸ್ತುಗಳಾಗಲಿ ಅನ್ನೋ ಸಲಹೆ ಕೊಟ್ಟರು. ನಮ್ಮಲ್ಲಿ ಮಾರಾಟವಾಗುವುದು ‘ಪ್ರೀತಿಯಿಂದ ಮಾಡಿದ’ ವಸ್ತುಗಳು ಎಂಬ ಮಾನದಂಡವನ್ನು ಅಳವಡಿಸಿಕೊಂಡಿದ್ದೇವೆ.

ಈಶಾನ್ಯ ಭಾರತಕ್ಕೆ ವಸ್ತುಗಳ ಸಾಗಣೆ ಮತ್ತು ಸವಾಲುಗಳ ಬಗೆಗಿನ ಸಂಪೂರ್ಣ ಮಾಹಿತಿ ಡೆಲಿವರಿ ಸ್ಥಾಪಕ ಸಾಹಿಲ್ ಬರುವಾ ಜತೆಯ ಮಾತುಕತೆಯಲ್ಲಿ ತಿಳಿಯಿತು. ಆ ಪ್ರದೇಶದ ಕೈತಯಾರಿಕೆ ವಸ್ತುಗಳ ಗುಣಮಟ್ಟ ಅತ್ಯುತ್ತಮವಾಗಿರೋದು ಅಲ್ಲದೇ ಅಭಿವೃದ್ಧಿ ಹೊಂದುತ್ತಿರುವ ಉಣ್ಣೆ ಉದ್ಯಮಗಳಿರೋದು ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಮಾನ್ಯತೆ ಕೊಡೋ ಅವಶ್ಯಕತೆ ಇದೆ. ಕಚ್ಚಾದಾರಿ ಇರೋ ಈಶಾನ್ಯ ರಾಜ್ಯಗಳಿಗೆ ಸಾಗಣೆ ಸಂಪರ್ಕ ಒದಗಿಸಲು ಮುಂದೆ ಬಂದಿರೋ ಡೆಲಿವರಿಯ ಸಾಹಿಲ್, ಶಾಂತನು, ಆಯೆಷಾ ತಂಡದ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಐಶಿಪ್ಪೋ ತಮ್ಮ ಸಾಗಾಣಿಕೆಗೆ ಡಿಲ್ಲಿವರಿಯನ್ನು ಪಾರ್ಟ್‍ನರ್ ಆಗಿ ಮಾಡಿಕೊಂಡಿದೆ.

ಡಿಜಿಟಲ್ ಎಂಪರ್​​ಮೆಂಟ್​​ ಫೌಂಡೇಷನ್‍ನ ಸ್ಥಾಪಕ ಒಸಾಮಾ ಮಂಜರ್ ಜತೆಗಿನ ನನ್ನ ಮಾತುಕತೆ ಐಶಿಪ್ಪೋಗೆ ವೇಗವರ್ಧಕವಾಯಿತು. ಅವರು ಸಮುದಾಯ ಮಾಹಿತಿ ಸಂಪನ್ಮೂಲ ಕೇಂದ್ರವಾಗಿ ಪಾರ್ಟ್‍ನರ್ ಆದರು. ಮಾರುಕಟ್ಟೆಯಲ್ಲಿ ಹಳ್ಳಿಗಾರರ ಕರಕುಶಲ ವಸ್ತುಗಳ ಮಾರಾಟ, ಮೂಲ ವಸ್ತು ವಿವರಣೆಯನ್ನು ಭಾರತದಾದ್ಯಂತ ಸಮುದಾಯ ವೇದಿಕೆಗಳಲ್ಲಿ ಹಂಚಿಕೊಳ್ಳೋ ಕಾರ್ಯ ಇದರ ಮೂಲಕ ಆಗಲಿದೆ.

ಮೊಬೈಲ್ ಪರಿಸರ, ವಿವಿಧ ರೀತಿಯಲ್ಲಿ ಮೊಬೈಲ್ ಆಪ್ ಪ್ರಚಾರದ ಬಗ್ಗೆ ಸಾವನ್‍ನ ಗ್ಲೋಬಲ್ ಸಿಇಓ ಆಗಿರೋ ಮಹೇಶ್ ನಾರಾಯಣ್ ತಮ್ಮ ಜ್ಞಾನವನ್ನು ಹಂಚಿಕೊಂಡರು. ಐಶಿಪ್ಪೋನ ಗುರಿಗೆ ಆಕಾರ ನೀಡಲು ಮತ್ತು ಭವಿಷ್ಯವನ್ನು ರೂಪಿಸಲು ಈ ಎಲ್ಲಾ ಮಾತುಕತೆ ಮತ್ತು ಸಲಹೆಗಳು ಅಮೂಲ್ಯವಾದವು. ಐಶಿಪ್ಪೋ ಈಗ ಬೀಟಾ ಮಾದರಿಯಲ್ಲಿದೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಿದ್ದೇವೆ.

ಐಶಿಪ್ಪೋ ಸಂಸ್ಥಾಪಕರ ಬಗ್ಗೆ..

ಐಶಿಪ್ಪೋನ ಸ್ಥಾಪಕ ಮತ್ತು ಸಿಇಒ ಕಾರ್ಮ. ಐಶಿಪ್ಪೋ ಕೈತಯಾರಿಯ ಅಥವಾ ಮನೆಯಲ್ಲೇ ತಯಾರು ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸೋ ಸ್ಥಳವಾಗಿದೆ. ಕಾರ್ಮ ಇ ಆಡಳಿತ, ಮೊಬೈಲ್ ಆವಿಷ್ಕಾರಗಳು, ಮಾಹಿತಿ ವಿಶ್ಲೇಷಣೆ, ಕ್ಲೌಡ್ ಕಂಪ್ಯೂಟಿಂಗ್, ಬ್ಯಾಂಕಿಂಗ್ ಮತ್ತು ಹಣಕಾಸು, ಟೆಲಕಾಂ ಮತ್ತು ಹಾಸ್ಪಿಟಾಲಿಟಿ ಉದ್ದಿಮೆಗಳಿಗೆ ಪರಿಹಾರ ನೀಡೋದ್ರಲ್ಲಿ ನಿಷ್ಣಾತರು. ಜತೆಗೆ ಗ್ಯಾಂಗ್ಟಾಕ್‍ನಲ್ಲಿ ಸಿಕ್ಕಿಮಿಗಳೇ ನಡೆಸೋ 9ಇನೆ ಹೊಟೆಲ್ ಮಾಲೀಕರು. ಇವರು ಕಟ್ಟಾ ಫುಟ್‍ಬಾಲ್ ಅಭಿಮಾನಿ ಜತೆಗೆ ಗಿಟಾರಿಸ್ಟ್ ಕೂಡ ಆಗಿದ್ದಾರೆ..!

Related Stories