ಮೇಕ್ ಇನ್ ಇಂಡಿಯಾ : ಮೇಕ್ ಇನ್ ಕರ್ನಾಟಕ.. ರಾಜ್ಯಕ್ಕೆ ಸಿಕ್ಕಿದೆ 9700 ಕೋಟಿ ರೂ. ಬಂಪರ್ ಹೂಡಿಕೆ

ಟೀಮ್​ ವೈ.ಎಸ್. ಕನ್ನಡ

ಮೇಕ್ ಇನ್ ಇಂಡಿಯಾ : ಮೇಕ್ ಇನ್ ಕರ್ನಾಟಕ..
ರಾಜ್ಯಕ್ಕೆ ಸಿಕ್ಕಿದೆ 9700 ಕೋಟಿ ರೂ. ಬಂಪರ್ ಹೂಡಿಕೆ

Thursday February 18, 2016,

4 min Read

ಮುಂಬೈನಲ್ಲಿ ನಡೆದ ಮೇಕ್ ಇನ್ ಇಂಡಿಯಾ ವೀಕ್​ ಕಾರ್ಯಕ್ರಮದಲ್ಲಿ ಕರ್ನಾಟಕದ ಸೆಮಿನಾರ್ ಕೂಡ ಆಯೋಜಿಸಲಾಗಿತ್ತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಅವರ ನೇತೃತ್ವದ ನಿಯೋಗ ಸೆಮಿನಾರ್​ಗೆ ಸಾಕ್ಷಿಯಾಯ್ತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ. ರತ್ನ ಪ್ರಭಾ, ಡೆವಲಪ್​ಮೆಂಟ್​ ಕಮಿಷನರ್ ಶ್ರೀಮತಿ ಲತಾ ಕೃಷ್ಣ ರಾವ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಐಟಿ ಬಿಟಿ & ಎಸ್&ಟಿ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ, ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸೆಮಿನಾರ್​ನಲ್ಲಿ ಪಾಲ್ಗೊಂಡಿದ್ದರು.

image


ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮ ಆಯೋಜನೆಯಲ್ಲಿ ಕರ್ನಾಟಕ ಸರ್ಕಾರ ನೀಡಿದ ಸಹಕಾರವನ್ನು ರತ್ನ ಪ್ರಭಾ ಸ್ವಾಗತಿಸಿದ್ರು. ಮೇಕ್ ಇನ್ ಇಂಡಿಯಾವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಉತ್ಪದನಾ ವಲಯದಲ್ಲಿರುವ ಬಲವನ್ನು ಪ್ರದರ್ಶಿಸಲು ಇದು ಸುಸಮಯ ಎಂದು ರತ್ನ ಪ್ರಭಾ ಅಭಿಪ್ರಾಯಪಟ್ರು. ದೇಶದ ಆರ್ಥಿಕತೆಯ ರೂಪಾಂತರಕ್ಕೆ ಇದು ನಾಂದಿ ಅಂತಾ ಹೇಳಿದ್ರು. ಉತ್ಪಾದನಾ ವಲಯದ ಶಕ್ತಿಯನ್ನು ಪ್ರದರ್ಶಿಸಲು ವಿಪುಲ ಅವಕಾಶಗಳಿವೆ. ರಾಜ್ಯಗಳು ಪರಸ್ಪರ ಪೈಪೋಟಿಗೆ ಇಳಿದಿಲ್ಲ, ಬದಲಾಗಿ ಹೂಡಿಕೆ ಆಕರ್ಷಿಸುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದ್ರು. ಭಾರತದ ಸೌಂದರ್ಯ ವೈವಿದ್ಯತೆಯಲ್ಲೂ ಏಕತೆಯನ್ನು ಮೆರೆಯುವುದರಲ್ಲಿದೆ. 2104-19ರ ವರೆಗಿನ ಕೈಗಾರಿಕಾ ನೀತಿ ಉತ್ಪಾದನಾ ವಲಯವನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲಾ ವಲಯಗಳನ್ನು ಸಮರ್ಥನೀಯ ಮತ್ತು ಸಮಗ್ರ ಪ್ರಗತಿಯತ್ತ ಕೊಂಡೊಯ್ಯಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಜಾಗತಿಕ ಟ್ರೆಂಡ್ಗಳು ಮತ್ತು ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲಾಗಿದೆ ಅಂತಾ ರತ್ನಪ್ರಭಾ ತಿಳಿಸಿದ್ರು.

ಇದನ್ನೂ ಓದಿ...

ಸಂಪ್ರದಾಯವೆಂಬ ಸಂಕೋಲೆಯಿಂದ ಮುಕ್ತಿ - ಅಫ್ಘಾನ್ ಮಹಿಳೆಯರ ಸಬಲೀಕರಣಕ್ಕೆ ಯುವತಿಯ ಹೋರಾಟ

ವಿವಿಧೆಡೆಯಿಂದ ಆಗಮಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಉದ್ಯಮಗಳ ಅಗತ್ಯವನ್ನು ಪೂರೈಸಲು ರಾಜ್ಯ ಸರ್ಕಾರಕ್ಕಿರುವ ಸನ್ನದ್ಧತೆ ಮತ್ತು ಸಾಮರ್ಥ್ಯವನ್ನು ಹೈಲೈಟ್ ಮಾಡಿದ್ರು. ``ಬಹಳ ವರ್ಷಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಕರ್ನಾಟಕದಲ್ಲಿ ಆರಂಭವಾಗಿದೆ. 1940ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕರ್ನಾಟಕದಲ್ಲಿ ಮೇಕ್ ಇನ್ ಇಂಡಿಯಾಗೆ ಚಾಲನೆ ಕೊಟ್ಟಿದೆ. ಅದೇ ರೀತಿ ಜರ್ಮನಿಯ ಬಾಶ್ ಕಂಪನಿ 1954ರಲ್ಲಿ ಮೇಕ್ ಇನ್ ಇಂಡಿಯಾಗೆ ನಾಂದಿ ಹಾಡಿತ್ತು. ಇವೆರಡು ಮಾತ್ರವಲ್ಲ ಅದೆಷ್ಟೋ ಬೃಹತ್ ಹಾಗೂ ಸಣ್ಣ ಕಂಪನಿಗಳು ಬಹಳಷ್ಟು ವರ್ಷಗಳಿಂದ ಕರ್ನಾಟಕದಲ್ಲಿವೆ, ಮೇಕ್ ಇನ್ ಇಂಡಿಯಾಗೆ ನೀರೆರೆದು ಪೋಷಿಸುತ್ತಿವೆ'' ಅಂತಾ ದೇಶಪಾಂಡೆ ಹೇಳಿದ್ರು.

ಭಾರತದಲ್ಲಿ ಕೈಗಾರಿಕಾ ರೂಪಾಂತರಕ್ಕೆ ಮುನ್ನುಡಿ ಬರೆದಿದ್ದೇ ಕರ್ನಾಟಕ ಅನ್ನೋದನ್ನು ದೇಶಪಾಂಡೆ ಒತ್ತಿ ಹೇಳಿದ್ರು. ಎಲ್ಲ ಕೈಗಾರಿಕೆಗಳಲ್ಲೂ ಕರ್ನಾಟಕ ತನ್ನ ಛಾಪು ಮೂಡಿಸಿದೆ. ಸ್ಟೀಲ್, ಏರೋಸ್ಪೇಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗ್ರಾನೈಟ್, ಗಾರ್ಮೆಂಟ್ಸ್, ಕಬ್ಬಿಣ, ಅದಿರು, ಬಾಹ್ಯಾಕಾಶ, ರಕ್ಷಣೆ, ಕೃಷಿ, ರೇಷ್ಮೆ, ಹೂ ಬೆಳೆಸುವಿಕೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ರಾಜ್ಯ ಕೈಗಾರಿಕೀಕರಣದತ್ತ ದಾಪುಗಾಲಿಟ್ಟಿದೆ. ಕರ್ನಾಟಕ ಹೊಸ ಆವಿಷ್ಕಾರ ಮತ್ತು ಭಾರತದ ಭವಿಷ್ಯಕ್ಕೆ ಮಾರ್ಗ ಸೃಷ್ಟಿಸಿದೆ ಅನ್ನೋದು ದೇಶಪಾಂಡೆ ಅವರ ಹೆಮ್ಮೆಯ ನುಡಿ. ಕರ್ನಾಟಕ ಜಾಗತಿಕ ಕಂಪನಿಗಳ ಆದ್ಯತೆಯ ಎಫ್ಡಿಐ ತಾಣ ಅನ್ನೋದನ್ನು ಕೂಡ ದೇಶಪಾಂಡೆ ಒತ್ತಿ ಹೇಳಿದ್ರು. ಅತ್ಯಂತ ಪ್ರತಿಭಾವಂತ ಹಾಗೂ ನುರಿತ ಉದ್ಯೋಗಿಗಳನ್ನು ಹೊಂದಿರುವ ಕರ್ನಾಟಕ ಕೇವಲ ಭಾರತ ಮಾತ್ರವಲ್ಲ ವಿಶ್ವದ ಜ್ಞಾನ ರಾಜಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

image


ಕರ್ನಾಟಕದಲ್ಲಿ ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆ ಉದ್ಯಮಕ್ಕಿರುವ ಸಾಮಥ್ರ್ಯ ಮತ್ತು ಅವಕಾಶಗಳನ್ನು ಲತಾ ಕೃಷ್ಣ ರಾವ್ ಪ್ರಸ್ತಾಪಿಸಿದ್ರು. ಕೃಷಿ ಮತ್ತು ಆಹಾರ ಸಂಸ್ಕರಣಾ ನೀತಿ ರಾಜ್ಯದಲ್ಲಿ ಈ ವಲಯಗಳನ್ನು ಪ್ರೋತ್ಸಾಹಿಸಲು ಇನ್ಸೆಂಟಿವ್ಗಳನ್ನು ಕೂಡ ನೀಡುತ್ತಿದೆ ಅಂತಾ ಮಾಹಿತಿ ಕೊಟ್ರು. ಕೈಗಾರಿಕಾ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಏರೋಸ್ಪೇಸ್&ಡಿಫೆನ್ಸ್, ಆಟೊಮೊಬೈಲ್ಸ್, ಮಷಿನ್ ಟೂಲ್ಸ್ ವಲಯಗಳ ಬಗ್ಗೆ ಪ್ರೆಸೆಂಟೇಶನ್ ಪ್ರಸ್ತುತಪಡಿಸಿದರು. ಹೆಚ್ಚಿನ ಮೌಲ್ಯದ ಉತ್ಪಾದನಾ ಕೇಂದ್ರವಾಗಿ ಕರ್ನಾಟಕದ ಸಾಮರ್ಥ್ಯವೇನು ಅನ್ನೋದನ್ನು ಹೈಲೈಟ್ ಮಾಡಿದ್ರು.

ಐಟಿ ಕ್ಷೇತ್ರ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮತ್ತು ಉತ್ಪಾದನೆ, ಬಿಟಿ, ಆಡಿಯೋ ವಿಶುವಲ್ ಮತ್ತು ಗೇಮಿಂಗ್, ಹಾಗೂ ರಾಜ್ಯದ ಸ್ಟಾರ್ಟ್ಅಪ್ ವಲಯದ ಬೆಳವಣಿಗೆಯ ನಿರೀಕ್ಷೆಗಳ ಬಗ್ಗೆ ವಿ.ಮಂಜುಳಾ ಪ್ರೆಸೆಂಟೇಶನ್ ನೀಡಿದ್ರು. ಎಂಜಿನಿಯರಿಂಗ್ ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ತಮ್ಮ ಘಟಕಗಳು ಹಾಗೂ ಇನ್ಕ್ಯುಬೇಶನ್ ಸೆಂಟರ್ಗಳನ್ನು ತೆರೆಯಲು ಸ್ಟಾರ್ಟ್ಅಪ್ ನೀತಿ ಉದ್ಯಮಿಗಳಿಗೆ ಆರ್ಥಿಕ ನೆರವನ್ನು ಕೂಡ ನೀಡಲಿದೆ. ಈ ಮೂಲಕ ಕಡಿಮೆ ವೆಚ್ಚದಲ್ಲಿ ನಾವೀನ್ಯತೆಯನ್ನು ಸಾಧಿಸಬಹುದು ಅಂತಾ ವಿವರಿಸಿದ್ರು. ಕರ್ನಾಟಕವನ್ನು ಹೆಚ್ಚು ಮೌಲ್ಯಯುತ ಕೈಗಾರಿಕಾ ತಾಣವನ್ನಾಗಿ ಮಾಡಲು ಪಟ್ಟ ಪ್ರಯತ್ನಗಳ ಬಗ್ಗೆ ರತ್ನಪ್ರಭಾ ಮಾಹಿತಿ ನೀಡಿದ್ರು. ಐಟಿ ಬಿಟಿ, ಏರೋಸ್ಪೇಸ್ ಹಾಗೂ ವಿವಿಧ ಪ್ರಮುಖ ವಲಯಗಳಲ್ಲಿ ಕರ್ನಾಟಕ ಈಗಾಗ್ಲೇ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದೆ.

ಸರ್ಕಾರದ ಸಹಕಾರದೊಂದಿಗೆ ಕರ್ನಾಟಕದಲ್ಲಿ ಉದ್ಯಮ ಮುನ್ನಡೆಸುವ ಅದ್ಭುತ ಅನುಭವದ ಬಗ್ಗೆ ಕೈಗಾರಿಕಾ ಕ್ಷೇತ್ರದ ದಿಗ್ಗಜರು ಮಾತನಾಡಿದ್ರು. ಪಿಡಬ್ಲ್ಯೂಸಿ ಪಾರ್ಟ್ನರ್ ಧೀರಜ್ ಮಾಥುರ್, ಎಲ್.ಕೃಷ್ಣನ್, ಟೊಯೊಟಾ ಕಿರ್ಲೋಸ್ಕರ್ನ ಶೇಖರ್ ವಿಶ್ವನಾಥನ್, ಶಶಿ ಎಕ್ಸ್ಪೋಟ್ರ್ಸ್ನ ನಿರ್ದೇಶಕ ಜಲಂಧರ್ ಗಿರಿ, ಕಾರ್ಗಿಲ್ನ ಮುಖ್ಯಸ್ಥ ಸಿರಾಜ್ ಚೌಧರಿ, ಜಿಎಸ್ಕೆ ಸೌತ್ ಏಷ್ಯಾ ರೀಜನಲ್ ಸಪ್ಲೈ ಚೈನ್ನ ಮುಖ್ಯಸ್ಥ ರಾಜು ಕೃಷ್ಣಸ್ವಾಮಿ, ಸ್ಟ್ರ್ಯಾಂಡ್ ಲೈಫ್ ಸೈನ್ಸ್ನ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ.ವಿಜಯ್ ಚಂದ್ರು ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಸೆಮಿನಾರ್ನಲ್ಲಿ ಉಪಸ್ಥಿತರಿದ್ರು.

ಈ ಸಮಾವೇಶದಲ್ಲಿ ಕರ್ನಾಟಕಕ್ಕೆ ಸುಮಾರು 9700 ಕೋಟಿ ಬಂಡವಾಳ ಹರಿದುಬಂದಿದೆ.

1. Tar Kovacs Systems Group - ಫ್ರೆಂಚ್ ಮೂಲದ ಕಂಪನಿ. 2284 ಸಾವಿರ ಕೋಟಿ ರೂಪಾಯಿ ಬಂಡವಾಳ ಹಾಕಿ ಸಾಗರ ಆಧಾರಿತ ನವೀಕರಿಸಬಹುದಾದ ಇಂಧನ ಯೋಜನೆ ಹಮ್ಮಿಕೊಂಡಿದೆ.

2. McCormick Ingredients - ಅಮೆರಿಕ ಮೂಲದ ಈ ಕಂಪನಿ 150 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲಿದೆ.

3. - Global Mode & Accessories Pvt. Ltd - ಇದು ಸಿದ್ಧ ಉಡುಪುಗಳನ್ನು ರಫ್ತು ಮಾಡುವ ಸಂಸ್ಥೆಯಾಗಿದ್ದು, ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ತೆರೆಯಲಿದೆ. 2000 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ಇದಕ್ಕಾಗಿ 25 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

4. First Solar - 6000 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಸೆಲ್ ಉತ್ಪಾದನಾ ಘಟಕ ತೆರೆಯಲು ಯೋಜನೆ ರೂಪಿಸಿದೆ.

5. Pert Telecom - ಬೀದಿ ದೀಪಗಳು, ಐಟಿ ಸೆಕ್ಯೂರಿಟಿ, ಕಣ್ಗಾವಲು, ಜಿಪಿಎಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಮಾರ್ಟ್ ಉತ್ಪನ್ನಗಳು ಮತ್ತು ಪರಿಹಾರಗಳುಳ್ಳ ತಯಾರಿಕಾ ನೆಲೆಯನ್ನು ಸ್ಥಾಪಿಸಲಿದೆ. ಇದಕ್ಕಾಗಿ 1250 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.

ಇದನ್ನೂ ಓದಿ...

`ಐ ಲವ್ ಯೂ'ಎನ್ನಲು ನಾಚಿಕೆ ಏಕೆ..?

ನಾರಿಯ ಶೃಂಗಾರಕ್ಕೆ ಸಕಲವೂ ಇಲ್ಲಿದೆ