ಟೀಮ್ ವೈ.ಎಸ್. ಕನ್ನಡ
ಭಾರತದಲ್ಲಿ ಐಪಿಎಲ್ ಇದೆ. ಆಸ್ಟ್ರೇಲಿಯಾದಲ್ಲಿ ಬಿಗ್ಬ್ಯಾಷ್ ಇದೆ. ಕ್ರಿಕೆಟ್ನ ಜನಪ್ರಿಯತೆಯ ಲಾಭ ಪಡೆದು ಇಂಡಿಯನ್ ಪ್ರೀಮಿಯರ್ ಲೀಗ್ ಮಿಂಚು ಹರಿಸಿತು. ಹಾಕಿಗೆ ಒಂದು ಪ್ರೈವೇಟ್ ಲೀಗ್ ಇದೆ. ಕಬ್ಬಡ್ಡಿಗೂ ಒಂದು ಲೀಗ್ ಇದೆ. ವಾಲಿಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್ ಸೇರಿದಂತೆ ಎಲ್ಲವೂ ಕೂಡ ಇವತ್ತು ಫ್ರಾಂಚೈಸಿ ಆಧಾರಿತ ಆಟವಾಗಿ ಬದಲಾಗಿದೆ. ಆದ್ರೆ ಕ್ರಿಕೆಟ್ ಮತ್ತು ಹಾಕಿ ಲೀಗ್ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿದೆ. ಭಾರತದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರು ಇದ್ರೂ ಅದಕ್ಕೊಂದು ಲೀಗ್ ಫಾರ್ಮೆಟ್ ಇಲ್ಲ. ಆದ್ರೆ ಈಗ ಮಹಿಳಾ ದಿನದಂದೇ ಭಾರತದ ಮಹಿಳಾ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಮಿಂಚಲು ದೊಡ್ಡ ವೇದಿಕೆ ಸಿಗಲಿದೆ.
ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಈಗಾಗಲೇ ದೊಡ್ಡ ಸುದ್ದಿ ಮಾಡಿದ್ದಾರೆ. ಆಸ್ಟ್ರೇಲಿಯಾದ ವುಮನ್ಸ್ ಬಿಗ್ ಬ್ಯಾಷ್ ಲೀಗ್, ಇಂಗ್ಲೆಂಡ್ನ ವುಮನ್ಸ್ ಸೂಪರ್ ಲೀಗ್ ಲಂಡನ್ ಈಗಾಗಲೇ ಮಹಿಳಾ ಕ್ರಿಕೆಟ್ ಲೀಗ್ನಲ್ಲಿ ಸಂಚಲನ ಸೃಷ್ಟಿಸಿವೆ. ಈಗ ಭಾರತದಲ್ಲಿ ಮಹಿಳಾ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಪರೂಲ್ ಜೈನ್ ಇಂಡಿಯನ್ ವುಮನ್ ಕ್ರಿಕೆಟ್ ಲೀಗ್ನ ರೂವಾರಿ. ಪುರುಷ ಕ್ರಿಕೆಟಿಗರಷ್ಟೇ ಮಹತ್ವ ಮತ್ತು ಪಾಪ್ಯುಲಾರಿಟಿಯನ್ನು ಭಾರತೀಯ ಮಹಿಳೆಯರು ಕೂಡ ಸಂಪಾದಿಸಬೇಕು ಅನ್ನುವ ಉದ್ದೇಶದಿಂದ ಈ ಲೀಗ್ ಆರಂಭವಾಗುತ್ತಿದೆ.
ಇದನ್ನು ಓದಿ: ಭಾರತ ಶ್ರೀಮಂತವಾಗುತ್ತಿದೆ- ಯಾಕೆ ಅಂತೀರಾ.. ಇದನ್ನು ಓದಿ..!
ಭಾರತದ ಮಹಿಳಾ ಕ್ರಿಕೆಟ್ ತಂಡ 3 ದಶಕಗಳಿಂದ ಕ್ರಿಕೆಟ್ ಆಡುತ್ತಿದ್ದರೂ, ಆಟಗಾರ್ತಿಯರ ಹೆಸರುಗಳು ಕ್ರಿಕೆಟ್ ಪ್ರಿಯದೇಶದಲ್ಲಿ ಯಾರಿಗೂ ಗೊತ್ತಿಲ್ಲ. ಮಿಥಾಲಿ ರಾಜ್, ಸ್ಮೃತಿ ಮಂದಾನಾ, ಹರ್ಮನ್ ಪ್ರಿತ್ ಕೌರ್ರಂತಹ ಆಟಗಾರ್ತಿರು ಸಾಕಷ್ಟು ದಾಖಲೆಗಳನ್ನು ಬರೆದರೂ, ಅವರ್ಯಾರೂ ಮನೆಮಾತಾಗಿಲ್ಲ ಅನ್ನುವುದನ್ನು ಮರೆಯುವಂತಿಲ್ಲ.
“ ಭಾರತದ ಮಹಿಳಾ ಕ್ರಿಕೆಟಿಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು. WCL ಟಿ20 ಕ್ರಿಕೆಟ್ ಲೀಗ್ ಐಪಿಎಲ್, ಆಸ್ಟ್ರೇಲಿಯಾದ ವುಮನ್ಸ್ ಬಿಗ್ ಬ್ಯಾಷ್ ಲೀಗ್ನಂತೆ ಸಂಚಲನ ಸೃಷ್ಟಿಸಲಿದೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ಇದು ಸಹಕಾರ ನೀಡಲಿದೆ. ಭಾರತದ ಪುರುಷ ಕ್ರಿಕೆಟಿಗರಂತೆ ಮಹಿಳಾ ಆಟಗಾರ್ತಿಯರು ಕೂಡ ಮಿಂಚು ಹರಿಸಲಿದ್ದಾರೆ. ”
- ಪರೂಲ್ ಜೈನ್, WCL ಸಂಸ್ಥಾಪಕರು
ಮಹಿಳಾ ಕ್ರಿಕೆಟ್ ಲೀಗ್ ಆರಂಭವಾಗುತ್ತಿರುವ ಬಗ್ಗೆ ಆಟಗಾರ್ತಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಕ್ರಿಕೆಟ್ ಮೂಲಕ ಭಾರತೀಯ ಕ್ರಿಕೆಟ್ ಆಟಗಾರ್ತಿಯರ ಭವಿಷ್ಯ ಕೂಡ ಬದಲಾಗಲಿದೆ ಅನ್ನುವ ನಿರಿಕ್ಷೆ ಇದೆ.
“ ಭಾರತೀಯ ಆಟಗಾರ್ತಿಯರು ಕಳೆದ 3 ದಶಕಗಳಿಂದ ವಿಶ್ವದೆಲ್ಲೆಡೆ ಕ್ರಿಕೆಟ್ ಆಡಿದ್ದಾರೆ. ಆದ್ರೆ ಪುರುಷ ಕ್ರಿಕೆಟಿಗರಂತೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರನ್ನು ಯಾರೂ ಗುರುತಿಸುವುದಿಲ್ಲ. ಆದ್ರೆ ಇನ್ನುಮುಂದೆ ಮಹಿಳಾ ಆಟಗಾರ್ತಿಯರು ಕೂಡ ಮಿಂಚು ಹರಿಸಲಿದ್ದಾರೆ. ಅನೇಕರಿಗೆ ರೋಲ್ ಮಾಡೆಲ್ಗಳಾಗಲಿದ್ದಾರೆ.”
- ಸುನೀತಾ ಶರ್ಮಾ, ಮಾಜಿ ಕ್ರಿಕೆಟ್ ಆಟಗಾರ್ತಿ
ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ವುಮನ್ಸ್ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಟಿ20 ಫಾರ್ಮೆಟ್ ಆಗಿರುವುದರಿಂದ ಮಹಿಳಾ ಆಟಗಾರ್ತಿಯರ ಆಟ ನೋಡುವುದಕ್ಕೆ ಸುಲಭದ ಅವಕಾಶವೂ ಸಿಗಲಿದೆ. ಒಟ್ಟಿನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ಗೆ ಹೊಸ ಸ್ಪರ್ಶ ಸಿಗುತ್ತಿದೆ. ಇನ್ನುಮುಂದಾದರೂ ಮಹಿಳಾ ಕ್ರಿಕೆಟಿಗರಿಗೂ ಉತ್ತಮ ಅವಕಾಶ ಸಿಗಲಿ ಅನ್ನುವುದೇ ಎಲ್ಲರ ಆಶಯ.
1. ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್ನೆಟ್ಗೆ ಮೊದಲ ಸ್ಥಾನ..!
Related Stories
March 31, 2017
March 31, 2017
Stories by YourStory Kannada