ಕರ್ನಾಟಕದಲ್ಲಿ ಸಿದ್ದವಾಯ್ತು ಸುಲ್ತಾನ್ ಗೇಮ್

ಟೀಮ್​ ವೈ.ಎಸ್​. ಕನ್ನಡ

0

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸುಲ್ತಾನ್ ಈಗಾಗಲೇ ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡ್ತಿದೆ. ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿದೆ. ಇದರ ಜೊತೆಗೆ ಸುಲ್ತಾನ್​ ಚಿತ್ರ ತಂಡಕ್ಕೆ ಮತ್ತು ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಈಗಾಗಲೇ ಪೋಸ್ಟರ್ ಮತ್ತು ಸಾಂಗ್, ಟ್ರೇಲರ್​ಗಳಿಂದಳಿಂದ ಸುದ್ದಿ ಮಾಡಿರುವ ಸುಲ್ತಾನ್ ಇದೀಗ ಮೊಬೈಲ್ ಗೇಮ್​ನಲ್ಲಿ ಬಂದಿದೆ. ಈ ಗೇಮ್ ಕರ್ನಾಟಕದಲ್ಲೇ ರೂಪಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತಿದೆ ಅನ್ನೋದು ಮತ್ತೊಂದು ವಿಶೇಷ.

ಇತ್ತೀಚಿಗೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೆ ಗೇಮ್ ಅಂದ್ರೆ ಅಚ್ಚುಮೆಚ್ಚು. ಕಾಲೇಜು ವಿದ್ಯಾರ್ಥಿಗಳು ಅದ್ರಲ್ಲೂ ಯಂಗ್ ಸ್ಟಾರ್ಸ್ ಅಂದ್ರೆ ಕೇಳ್ಬೇಕಾ, ದಿನದ 24 ಗಂಟೆಯೂ ಮೊಬೈಲ್ ಮತ್ತು ಗೇಮ್​ಗಳಲ್ಲೇ ಮುಳುಗಿರ್ತಾರೆ ಅನ್ನೋದು ಕಾಮನ್.  ಈಗಾಗಲೇ ಮಾರುಕಟ್ಟೆಯಲ್ಲಿರುವ ಗೇಮ್​ಗಳಿಂದ ಬೋರ್ ಆಗಿದ್ರೆ, ಇಲ್ಲೊಂದು ಹೊಸ ಗೇಮ್ ಬಂದಿದೆ. ಆಟದ ರೂಪದಲ್ಲಿ ನಟ ಸಲ್ಮಾನ್ ಖಾನ್ ನಿಮ್ಮನ್ನ ರಂಜಿಸಲಿದ್ದಾರೆ.

ಇದನ್ನು ಓದಿ: ಬಾಡಿಗೆಗೆ ಬೈಕ್​​ ತೆಗೆದುಕೊಳ್ಳಿ- ಸಿಲಿಕಾನ್​ ಸಿಟಿಯಲ್ಲಿ ಎಂಜಾಯ್​ ಮಾಡಿ

ಸುಲ್ತಾನ್ ಚಿತ್ರದಲ್ಲಿ ಕುಸ್ತಿ ಕಾಳಗದಲ್ಲಿ ಎದುರಾಳಿಯನ್ನ ಮಣಿಸುವ ಸಲ್ಮಾನ್ ಖಾನ್ ಇದೀಗ ಗೇಮ್​ನಲ್ಲಿ ಮೂಡಿ ಬಂದಿದ್ದಾರೆ. ಗೇಮ್​​ನಲ್ಲಿ ಬಾಕ್ಸರ್ ಆಗಿದ್ದು, ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಈ ಗೇಮ್​ನಲ್ಲಿ ಸಲ್ಮಾನ್ ಪ್ರಧಾನ ಬಾಕ್ಸರ್ ಆಗಿದ್ದು, ಆತನಿಗೆ ಎದುರಾಳಿಗಳಾಗಿ ಪ್ರಪಂಚದ ಪ್ರಸಿದ್ಧ ಬಾಕ್ಸರ್​ಗಳು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವೆ ನಡೆಯುವ ಫೈಟೇ ಈ ಗೇಮ್​ನ ಪ್ರಮುಖ ಆಕರ್ಷಣೆ. ಸಿನಿಮಾದಲ್ಲಿ ಸಲ್ಮಾನ್ ಫೈಟ್ ಮಾಡುವ ಶೈಲಿಯನ್ನೇ ಇಲ್ಲಿ ಅನುಕರಿಸಲಾಗಿದೆ. ಒಟ್ಟು 60 ಹಂತಗಳಲ್ಲಿ ಆಟವಿದ್ದು, ಗೇಮ್​ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಪ್ರತೀ ಹಂತದಲ್ಲಿ ಆಟಗಾರನ ಉತ್ಸಾಹ ಹೆಚ್ಚಿಸುವಂತಿದ್ದು, ಸಲ್ಮಾನ್ ಖಾನ್ ಎದುರಾಳಿಯನ್ನು ಹೇಗೆಲ್ಲಾ ಮಣಿಸಬಹುದು ಅನ್ನೋದೇ ಈ ಆಟ. ಹಂತ ಹಂತಗಳಲ್ಲಿ ಪ್ರತಿಸ್ಪರ್ಧಿಯನ್ನ ಮಣಿಸ್ತಿದ್ರೆ, ಸಿಗೋ ಮಜಾ ಕೂಡ ಅದ್ಭುತ. ಒಬ್ಬರಾದ ಮೇಲೊಬ್ಬರಂತೆ ಎದುರಾಗುವ ವಿಘ್ನಗಳಿಗೆ ನಟ ಸಲ್ಮಾನ್ ಚಿತ್ರದಲ್ಲಿ ಬುದ್ಧಿ ಕಲಿಸಿದಂತೆ, ಗೇಮ್​ನಲ್ಲೂ ಸಲ್ಮಾನ್ ಎದುರಾಳಿಯನ್ನ ಹೊಡೆದುರುಳಿಸ್ತಾನೆ. ಅಂದಹಾಗೇ ಈ ಗೇಮ್​ಅಭಿವೃದ್ಧಿಗೊಂಡಿರೋದು ಕರ್ನಾಟಕದ ಮಂಗಳೂರಿನಲ್ಲಿ ಅನ್ನೋದು ಮತ್ತೊಂದು ವಿಶೇಷ. ಕರ್ನಾಟಕದ ಉಡುಪಿಯಲ್ಲಿ ಸುಲ್ತಾನ್ ಗೇಮ್ ಡೆವಲಪ್ ಆಗಿದ್ರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಲ್ಲು ಅಭಿಮಾನಿಗಳನ್ನ ಸೆಳೆಯುತ್ತಿದೆ.

ಉಡುಪಿ ಜಿಲ್ಲೆಯ ರೋಬೋ ಸಾಫ್ಟ್ ಎಂಬ ಅಪ್ಪಟ ದೇಸೀ ಸಾಫ್ಟ್ ವೇರ್ ಕಂಪನಿ ಸುಲ್ತಾನ್ ಗೇಮ್ ಡೆವಲಪ್ ಮಾಡಿದೆ. ಯುವ ಸಮೂಹವನ್ನು ಆಕರ್ಷಿಸುವ ಮೊಬೈಲ್ ಗೇಮ್​ಗಳನ್ನು ತಯಾರಿಸುವ ಮೂಲಕ ಕನ್ನಡ ನಾಡಿಗೆ ಕೀರ್ತಿ ತಂದಿದೆ. ಲೇಟೆಸ್ಟ್ ವಿಷಯ ಏನಪ್ಪಾ ಅಂದ್ರೆ, ಸಲ್ಮಾನ್ ಖಾನ್ ಅಭಿನಯದ ಚಿತ್ರ ಸುಲ್ತಾನ್ ಹೆಸರಿನ ಮೊಬೈಲ್ ಗೇಮ್ ಬಿಡುಗಡೆಯಾಗಿದೆ. ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮೋಶನ್ ಗೆ ಈ ಗೇಮ್ ಅಪ್ಲಿಕೇಷನ್ ಸಹಾಯ ಮಾಡುತ್ತಿದೆ ಎನ್ನುತ್ತಾರೆ ಟೀಂ ಹೆಡ್ ಅನಿಲ್.

ಕುಸ್ತಿ ಆಟವು ಒಂದು ಸ್ಪರ್ಧೆಯಲ್ಲ. ಅದು ತನ್ನ ಅಂತರಂಗದ ಭಾವನೆಗಳೊಂದಿಗೆ ನಡೆಸುವ ಹೋರಾಟ, ಅನ್ನೋದು ಸುಲ್ತಾನ್ ಸಿನಿಮಾದ ಥೀಮ್, ಇದೇ ಸ್ಟೋರಿ ಲೈನ್ ಇರಿಸಿಕೊಂಡು ಗೇಮ್ ಡಿಸೈನ್ ಮಾಡಲಾಗಿದೆ. ಆಡುವ ಕ್ರಮ ಸುಲಭವಾಗಿದ್ದು, 20 ಹಂತಗಳ ವರೆಗೆ ಉಚಿತವಾಗಿ ಮತ್ತು ಆನಂತರ ಆಟದ ವೇಗ ಹೆಚ್ಚಿಸಿಕೊಳ್ಳಲು ಹಣ ಪಾವತಿಸಿ ಆಡಬಹುದುದಾಗಿದೆ. ಎಷ್ಟು ಹೊತ್ತು ಆಡಿದ್ರೂ ಗೇಮ್ ಬೋರ್ ಅನ್ಸೋದಿಲ್ಲ. ಬದಲಾಗಿ ಮತ್ತಷ್ಟು ಸ್ಕೋರ್ ಮಾಡುವ, ಎದುರಾಳಿಗಳನ್ನ ಮಣಿಸುವ ಹುಮ್ಮಸ್ಸು ಕೂಡಾ ಹೆಚ್ಚಾಗುತ್ತಿದೆ.

ರೋಬೋ ಸಾಫ್ಟ್ ಕಂಪೆನಿಯ ಅಂಗ ಸಂಸ್ಥೆಯಾಗಿರುವ 99 ಗೇಮ್ಸ್ ಈ ಸುಲ್ತಾನ್ ಗೇಮ್ ಶೋ ಡಿಸೈನ್ ಮಾಡಿದೆ. ಇದಕ್ಕಾಗಿ ಸುಮಾರು 6 ತಿಂಗಳು ಶ್ರಮಿಸಿದ್ದು, 75 ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ. ಸಂಸ್ಥೆಯ 8 ಮಂದಿ ಎಂಜಿನಿಯರ್​​ಗಳು ಈ ಸಾಫ್ಟ್ ವೇರ್ ಡೆವಲಪ್ ಮಾಡಿದ್ದಾರೆ.  99 ಗೇಮ್ಸ್ ಸಂಸ್ಥೆ ಈ ರೀತಿಯ ಮೊಬೈಲ್ ಗೇಮ್ ಸಿದ್ಧಪಡಿಸಿರುವುದು ಇದೇ ಮೊದಲಲ್ಲ. ಪ್ರತಿಷ್ಠಿತ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡಿರುವ ಈ ಸಂಸ್ಥೆಯಿಂದ ಬಿಡುಗಡೆಯಾಗುವ ಎಲ್ಲಾ ಚಿತ್ರಗಳಿಗೆ ಈ ರೀತಿಯ ಅಪ್ಲಿಕೇಷನ್ ಸಿದ್ಧಪಡಿಸಿ ಕೊಡುತ್ತಿದೆ. ಈ ಹಿಂದೆ ತಯಾರಿಸಿದ ಅಮೀರ್ ಖಾನ್ ನಟನೆ ಧೂಮ್-3 ಗೇಮ್ ದೇಶದಲ್ಲೇ ಅತ್ಯಂತ ಜನಪ್ರಿಯ ಮೊಬೈಲ್ ಅಪ್ಲಿಕೇಷನ್ ಅನ್ನುವ ಕೀರ್ತೀಗೂ ಪಾತ್ರವಾಗಿತ್ತು. ಎರಡು ಕೋಟಿ ಜನರು ಇದನ್ನು ಡೌನ್ ಲೋಡ್ ಮಾಡಿದ್ದರು. ನಂತರ ಶಾರುಕ್ ಅಭಿನಯದ ಫ್ಯಾನ್ ಚಿತ್ರದ ಗೇಮ್​ನ್ನು ಕೂಡ ಇದೇ ಸಂಸ್ಥೆ ಅಭಿವೃದ್ಧಿ ಮಾಡಿತ್ತು.

ಕೇವಲ ಸಿನಿಮಾ ಆಧಾರಿಯ Appಗಳು ಮಾತ್ರವಲ್ಲ, ಜಗತ್ತಿನ ನಂ 1 ಕುಕರಿ ಗೇಂ ‘ಸ್ಟಾರ್ ಚೆಫ್’ ಕೂಡಾ 99 ಗೇಮ್ಸ್ ಸಂಸ್ಥೆಯಿಂದ ತಯಾರಾದ ಮೊಬೈಲ್ ಗೇಮ್​ ಆಗಿದೆ. ವಿಶ್ವದ ನಾನಾ ದೇಶಗಳ ಕೋಟ್ಯಂತರ ಜನರು ಈ ಆಟಕ್ಕೆ ಫಿದಾ ಆಗಿದ್ದಾರೆ. ಬಾಲಿವುಡ್ ಚಿತ್ರ ಆಧಾರಿತ ಗೇಮ್​ಗಳು ಭಾರತದಲ್ಲಿ ಸದ್ದು ಮಾಡಿದರೆ, ಸ್ಟಾರ್ ಚೆಫ್ ವಿದೇಶಗಳಲ್ಲಿ ಜನಪ್ರಿಯವಾಗಿತ್ತು ಎನ್ನುತ್ತಾರೆ. ರೋಬೋ ಸಾಫ್ಟ್ ಸಿಇಒ ರೋಹಿತ್ ಭಟ್.

ಈ ಮೊಬೈಲ್ ಗೇಮ್​ನಲ್ಲಿ ಗುರಿ ತಲುಪುವ 10 ಮಂದಿ ಆಟಗಾರರನ್ನು ಸಲ್ಮಾನ್ ಖಾನ್ ಭೇಟಿಗೆ ಅವಕಾಶ ಕಲ್ಪಿಸಲಾಗ್ತಿದೆ. ಸಿನಿಮಾ ಪ್ರಚಾರಕ್ಕೆ ಬಾಲಿವುಡ್ ಅನುಸರಿಸುತ್ತಿರುವ ಹೊಸ ತಂತ್ರಕ್ಕೆ ರೋಬೋ ಸಾಫ್ಟ್ ಕಂಪೆನಿ ಸಾಥ್ ನೀಡಿದೆ. ಈ ಮೂಲಕ ಬಾಲಿವುಡ್ ಜಗತ್ತೇ ಕರ್ನಾಟಕದತ್ತ ಮುಖಮಾಡುವಂತಾಗಿದೆ.

ಇದನ್ನು ಓದಿ:

1. ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!

2. ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

3. ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

Related Stories