ಯಾರೇ ಕೂಗಾಡಲಿ...ಇವನ ಸಾಧನೆಗೆ ಕೊನೆಯೇ ಇಲ್ಲ..

ವಿಸ್ಮಯ

ಯಾರೇ ಕೂಗಾಡಲಿ...ಇವನ ಸಾಧನೆಗೆ ಕೊನೆಯೇ ಇಲ್ಲ..

Tuesday February 16, 2016,

2 min Read

ಸಾಧನೆಗೆ ಶ್ರದ್ಧೆ ಭಕ್ತಿಯೊಂದು ಇದ್ದರೆ ಸಾಕು. ಏನ್ ಬೇಕಾದ್ರೂ ಮಾಡಬಹುದು. ವಯಸ್ಸು ಅನ್ನೋದು ಲೆಕ್ಕಕ್ಕೆ ಬರೊಲ್ಲ. ಎಳೆ ಮಕ್ಕಳಿಂದ ಹಣ್ಣುಹಣ್ಣು ಮುದುಕರವರೆಗೂ ಸಾಧನೆಯನ್ನ ಮಾಡಲು ಕಾಯುತ್ತಿರುತ್ತಾರೆ. ಈಗಿನ ಕಾಲದ ಮಕ್ಕಳು ಸಿಕ್ಕಾಪಟ್ಟೆ ಪ್ರತಿಭಾವಂತರು. ಹಿಂದೆಲ್ಲ ಬೆರಳು ಕೊಟ್ಟರೆ ಹಸ್ತವನ್ನೇ ನುಂಗುತ್ತಾರೆ ಅನ್ನೋ ಮಾತಿತ್ತು. ಆದರೆ ಈಗಿನ ಮಕ್ಕಳು ಬೆರಳು ತೋರಿಸಿದ್ರೆ, ಇಡೀ ದೇಹವನ್ನೇ ನುಂಗಿ ಬಿಡ್ತಾರೆ. ಅಷ್ಟರ ಮಟ್ಟಿಗೆ ಬುದ್ಧಿವಂತರಾಗಿತ್ತಾರೆ, ಜೊತೆಗೆ ಸಾಹಸಿಗಳಾಗಿರ್ತಾರೆ.

image


ಈಗ ಮಕ್ಕಳ ಬಗ್ಗೆ ಯಾಕೆ ಚರ್ಚೆ ನಡೀತಿದೆ ಅಂತ ನಿಮಗೆ ಅನುಮಾನ ಕಾಡುತ್ತಿರಬಹುದು. ಅದಕ್ಕೂ ಕಾರಣವಿದೆ. ಯಾಕೆಂದ್ರೆ ಇಲ್ಲಿ ಒಬ್ಬ ಪೋರ ತನ್ನ ಹಲ್ಲಿನಿಂದಲೇ ಜೀಪ್ ಅನ್ನು ಸರ ಸರನೇ ಎಳೆದು ಬಿಡುತ್ತಾನೆ. ಅಬ್ಬಾ.. ಜೀಪ್​ನ್ನು ಹಲ್ಲಿನಿಂದ ಎಳೆಯೋದು ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ.. ಪುಟಾಣಿಯ ಹಲ್ಲು ಅಷ್ಟೊಂದು ಗಟ್ಟಿಯಾಗಿದೆಯಾ ಅಂತ ಯೋಚನೆ ಬರುತ್ತೆ ಅಲ್ವಾ? ಆದರೆ ಈ ಬಾಲಕ ತನ್ನ ಹಲ್ಲಿನಿಂದ ಜೀಪನ್ನು ಆರಾಮಾಗಿ ಎಳೆಯುತ್ತಾನೆ. ಅಷ್ಟೇ ಅಲ್ಲ ಆ್ಯಕ್ಟಿಂಗ್ ಕೂಡ ಮಾಡ್ತಾನೆ. ಪಟಪಟನೇ ಡೈಲಾಗ್‍ಗಳ ಸುರಿಮಳೆ ಸುರಿಸುತ್ತಾನೆ. ಕರಾಟೆಯಲ್ಲೂ ಇವನು ಎತ್ತಿದ ಕೈ. ಅರೇ ಇಷ್ಟೆಲ್ಲ ಟ್ಯಾಲೆಂಟ್ ಹೊಂದಿರೋ ಈ ಹುಡುಗ ಯಾರು ಅಂತ ನಾವ್​ ಹೇಳ್ತೀವಿ ನೋಡಿ.

ಇದನ್ನು ಓದಿ

ಇರಾಕಿ ರ್ಯಾಂಬೋ- ಐಸಿಸ್ ವಿರುದ್ಧ ಹೋರಾಡ್ತಿರೋ ಸಾವಿನ ದೇವತೆ

ಈ ಪೋರನನ್ನ ಸರಿಯಾಗಿ ನೋಡಿದ್ರೆ ಎಲ್ಲೋ ನೋಡಿದ ಹಾಗೇ ಇದೆಯಲ್ಲ ಅಂತ ನಿಮಗನಿಸಬಹುದು. ಯಾವುದೋ ಸಿನಿಮಾದಲ್ಲಿ ನೋಡಿದ್ದೀನಿ ಅಂದ್ಕೋತಿದ್ದೀರಾ ಅಲ್ವಾ? ಹೌದು ನಿಮ್ಮ ಊಹೆ ಸರಿಯಾಗಿದೆ. ಈತ ಕನ್ನಡದ ಸೂಪರ್ ಡೂಪರ್ ಸಿನಿಮಾ ಯಾರೇ ಕೂಗಡಾಲಿ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಕನ್ನಡದ ಪವರ್ ಸ್ಟಾರ್ ಪುನೀತ್ ಅಭಿನಯದ ಸಿನಿಮಾ ಇದು. ಪುನೀತ್​, ಕುಮಾರ್​ ಎಂಬ ಪಾತ್ರವನ್ನು ಮಾಡಿದ್ದಾರೆ. ಇದ್ರಲ್ಲಿ ಬಾಲ ನಟನ ಪಾತ್ರ ಮಾಡಿದ್ದ ಹುಡುಗನೇ ಈತ..

image


ಹೆಸರು ನಿಖಿಲ್.. ವಯಸ್ಸು ಕೇವಲ 14 ವರ್ಷ ಮಾತ್ರ.. ಆದರೆ ಸಾಹಸದಲ್ಲಿ ಮಾತ್ರ ಯಾರಿಗೂ ಕಮ್ಮಿಯಿಲ್ಲ. ಚಿಕ್ಕದಿನಿಂದಲೂ ಪಾಠದೊಂದಿಗೆ ಆಟದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಸಿನಿಮಾ ರಂಗದಲ್ಲೂ ಹೆಚ್ಚು ಸಕ್ರಿಯವಾಗಿದ್ದು, ಕರಾಟೆಯಂತಹ ಸಾಹಸಿ ಕ್ರೀಡೆಯಲ್ಲೂ ತೊಡಗಿದ್ದಾನೆ. ಈಗಾಗಲೇ ಸಾಕಷ್ಟು ಪ್ರಶಸ್ತಿಯನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾನೆ. ನಿಖಿಲ್‍ ಸಾಧನೆಗೆ ಅಪ್ಪ ಅಮ್ಮ ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.

ಶಾಲಾ ವಾರ್ಷಿಕೋತ್ಸವದಲ್ಲಿ ಹಲ್ಲಿನಿಂದ ಜೀಪ್ ಎಳೆದು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಬರೆಸಿಕೊಂಡಿದ್ದಾನೆ. ಅಷ್ಟೇ ಅಲ್ಲ 50ಕ್ಕೂ ಹೆಚ್ಚು ಬಲ್ಬ್​ಗಳನ್ನು ಒಡೆದು ಹಾಕಿದ್ದಾನೆ. ಈತನ ಸಾಧನೆಯನ್ನ ಶಾಲೆಯ ಮುಖ್ಯಸ್ಥರು, ಆತನ ಸಹಪಾಠಿಗಳು ಎಲ್ಲರೂ ಬೆರಗು ಕಣ್ಣಿನಿಂದ ನೋಡಿದ್ದರು.

image


ಈತನ ಗೆಳೆಯರು ಏನು ಹೇಳ್ತಾರೆ?

ನಿಖಿಲ್​​ ಸಾಧನೆಗೆ ಗೆಳೆಯರು ಸಂತೋಷ ವ್ಯಕ್ತಪಡಿಸುತ್ತಾರೆ. ಈತನನ್ನ ನಮ್ಮ ಗೆಳಯ ಅಂತ ಹೇಳಿಕೊಳ್ಳೊದೇ ಒಂದು ಖುಷಿ ವಿಷಯ.. ನಮಗೂ ಆ್ಯಕ್ಟಿಂಗ್, ಕರಾಟೆ ಹೇಳಿಕೊಡುತ್ತಾನೆ ಅಂತ ಹೆಮ್ಮೆಯಿಂದ ಹೇಳ್ತಾರೆ.

ನಿಖಿಲ್ ಇಷ್ಟು ಚಿಕ್ಕ ವಯಸ್ಸಿಗೆ ಸಾಧನೆ ಮಾಡಿರೋದಕ್ಕೆ ನನ್ನ ಅಪ್ಪ-ಅಮ್ಮನೇ ಕಾರಣ ಅಂತಾನೇ. ನಾನು ಏನೇ ಕೇಳಿದ್ರೂ ಇಲ್ಲ ಅಂತ ಯಾವತ್ತು ಹೇಳಿಲ್ಲ. ಪ್ರತಿಯೊಂದಕ್ಕೂ ಪ್ರೋತ್ಸಾಹವನ್ನು ನೀಡ್ತಾರೆ. ಹೀಗಾಗಿಯೇ ಇಷ್ಟು ಸಾಧನೆಯನ್ನ ಮಾಡೋಕ್ಕೆ ಸಾಧ್ಯವಾಗಿದೆ ಅನ್ನೋದು ನಿಖಿಲ್​ ಮನದ ಮಾತು. ಇನ್ನು ಕರಾಟೆಯಲ್ಲೂ ವಿವಿಧ ಪಟ್ಟುಗಳನ್ನು ಹಾಕಿ ಎಲ್ಲರನ್ನ ಅಚ್ಚರಿಗೊಳಿಸುತ್ತಾನೆ. ಇಟ್ಟಿಗೆಯನ್ನು ಜೋಡಿಸಿ ಅದನ್ನು ಒಂದೇ ಸಲಕ್ಕೆ ಒಡೆದು ಬೀಳಿಸುತ್ತಾನೆ.

ಆಟ-ಪಾಠಕ್ಕೂ ಸೈ, ಸಾಹಸಕ್ಕೂ ಜೈ, ಆ್ಯಕ್ಟಿಂಗ್‍ಗೂ ಜೈ ಜೈ ಅನ್ನೋ ಈ ಹುಡುಗನ ಸಾಹಸಕ್ಕೆ ನಿಜಕ್ಕೂ ಒಂದು ಸಲಾಂ ಹೇಳಲೇಬೇಕು. ಈತ ಮುಂದೊಂದು ದಿನ ರಾಜ್ಯದ ಕೀರ್ತಿಯನ್ನು ಹೆಚ್ಚಿಸುವುದ್ರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ

1. ಶಾಂತಿನಗರದಲ್ಲೊಂದು ಟೀ ಕ್ರಾಂತಿ : ರಿಲ್ಯಾಕ್ಸ್ ಮೂಡ್​​ಗಾಗಿ ಸಿಗುತ್ತೆ ವೆರೈಟಿ ಚಹಾ

2. ಅಪ್ಪನ ಪ್ರೀತಿ ಜೊತೆಗೆ ಕೇಕ್ ಉದ್ಯಮದಲ್ಲಿ ಯಶಸ್ವಿಯಾದ ಬೆಂಗಳೂರಿನ ಯುವತಿ

3. ಬೇಟೆಗೂ ಸೈ ..ಪ್ರೀತಿಗೂಜೈ ..ನಾನು ಮುಧೋಳ