ಮಹಿಳಾ ಉದ್ಯಮದಿಂದ ಭಾರತದ 2.4% ಜಿಡಿಪಿ ಅಭಿವೃದ್ದಿ ಸಾಧ್ಯ..!

ಟೀಮ್​​ ವೈ.ಎಸ್​. ಕನ್ನಡ

ಮಹಿಳಾ ಉದ್ಯಮದಿಂದ ಭಾರತದ  2.4% ಜಿಡಿಪಿ ಅಭಿವೃದ್ದಿ ಸಾಧ್ಯ..!

Thursday December 03, 2015,

3 min Read

ಕೆಲವು ಅಪವಾದಗಳನ್ನು ಹೊರತು ಪಡಿಸಿದ್ರೆ, ಭಾರತದ ಮಹಿಳಾ ಉದ್ಯಮ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತದ ಮಹಿಳಾ ಉದ್ಯಮಿಗಳು ಸದ್ಯ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಹಲವು ಕ್ಷೇತ್ರದಲ್ಲಿ ಮಹಿಳೆಯರು ಪ್ರಗತಿಯತ್ತ ಹೆಜ್ಜೆ ಇಡುತ್ತಿದ್ದು ಇದರಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ವಿ ಮಹಿಳಾ ಉದ್ಯಮಿಗಳ ಪಟ್ಟಿ ಇಲ್ಲಿದೆ ನೋಡಿ..

ಸ್ಲೈಡ್ ಶೇರ್ ಸಂಸ್ಥೆಯ ಸಂಸ್ಥಾಪಕಿ ಕೀರ್ತಿ ರಶ್ಮಿ 2012ರ ವೆಬ್2.0 ಕ್ಷೇತ್ರದ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಅವರಿಗೆ 8ನೇ ಸ್ಥಾನ ಪಡೆದಿದ್ದವರು. ತದ ನಂತರ ಆ ಕಂಪನಿಯನ್ನು ಲಿಂಕ್ಡಿನ್ ಸಂಸ್ಥೆ ಸ್ವಾದೀನಪಡಿಸಿಕೊಳ್ತು.

ಅಶ್ವಿನಿ ಅಶೋಕನ್: ಮ್ಯಾಡ್​ಸ್ಟ್ರೀಟ್ ಡೆನ್ ಸಂಸ್ಥಾಪಕಿಯಾದ ಇವರು ತಮ್ಮ ಅರ್ಟಿಫಿಶಿಯಲ್ ಇಂಟಲಿಜೆನ್ಸ್​​ನಿಂದ ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದ ಕಂಪನಿ ಸ್ಥಾಪಿಸಿದ ಶ್ರೇಯಸ್ಸು ಅಶ್ವಿನಿ ಅಶೋಕನ್​ಗೆ ಸಲ್ಲುತ್ತದೆ. ಇನ್ನೂ ಮಿಲಿಯನ್​​ಗಟ್ಟಲ್ಲೇ ಲಾಭಗಳಿಸುತ್ತಿರುವ, ಆನ್ಲೈನ್ ರಿಟೈಲ್ ಶಾಪಿಂಗ್​​ಗೆ ಹೇಳಿ ಮಾಡಿಸಿದ ಇನ್ಫಿಬೀಮ್ ಕಂಪನಿ ಸ್ಥಾಪಿಸಿದ್ದು ನೀರು ಶರ್ಮಾ. ನೆಕ್ಸ್​​ಡ್ರಾಪ್ ಕಂಪನಿಯ, ಸಂಸ್ಥಾಪಕಿ ಅನು ಶ್ರೀಧರನ್. ಸ್ಲಂ ನಿವಾಸಿಗಳಿಗೆ ವ್ಯಾಪಾರ ಮಾಡಲು ಸಣ್ಣ ಪ್ರಮಾಣದ ಸಾಲ ಕೊಡಲು ಆರಂಭವಾಗಿರುವ ಶಾಂತಿ ಲೈಫ್ ಸಂಸ್ಥೆಯನ್ನು ಶೀತಲ್ ವಾಲ್ಷ್ ಆರಂಭಿಸಿದ್ದಾರೆ. ಮತ್ತೊಂದೆಡೆ ಪ್ರತಿಭಾವಂತ ಮಹಿಳೆಯರಿಗೆ ಅವರ ಕ್ಷೇತ್ರದಲ್ಲೇ ಅವಕಾಶ ಒದಗಿಸಿ ಕೊಡಬಲ್ಲಂತಹ ಶೇರೋಸ್ ಕಂಪನಿಯನ್ನು ಸೈರಿ ಚಾಹಲ್ ಹುಟ್ಟುಹಾಕಿದ್ದಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೆ ಸಾಗುತ್ತದೆ. ಭಾರತದ ಸದೃಢ ಆರ್ಥಿಕತೆಯಲ್ಲಿ ಸ್ತ್ರೀಶಕ್ತಿಯ ಪಾತ್ರವೇನು ಎಂಬುದನ್ನು ಈ ಮೇಲಿನ ಉದಾಹರಣೆಗಳು ತಿಳಿಸುತ್ತವೆ.

image


ಸ್ತ್ರೀ ಶಕ್ತಿ..!

ಮಹಿಳೆಯರು ಉದ್ಯಮದಲ್ಲಿ ತೊಡಗುತ್ತಿರುವ ಟ್ರೆಂಡ್ ಸಣ್ಣ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಇದು ಸಾಮಾನ್ಯ ಸಂಗತಿ. ಮೊದಲಿನಿಂದಲೂ ಭಾರತದಲ್ಲಿ ಗೃಹ ಕೈಗಾರಿಕೆಯನ್ನು ಕಾಣಬಹುದು. ಹಪ್ಪಳ ಮಾಡುವುದು, ಉಪ್ಪಿನಕಾಯಿ ಹಾಕುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. 1959ರಲ್ಲಿ ‘ಲಿಜ್ಜತ್ ಪಾಪಡ್’ ಸಹಕಾರ ಸಂಸ್ಥೆ ಹುಟ್ಟಿಕೊಳ್ತು. ಇದು ಭಾರತ ಮಹಿಳೆಯರ ಮೊದಲ ಕೋ-ಆಪರೇಟಿವ್ ಉದ್ಯಮ. ಇಂದು 42 ಸಾವಿರ ಕಾರ್ಮಿಕರನ್ನು ಹೊಂದಿರುವ ಈ ಸಂಸ್ಥೆ 800 ಕೋಟಿ ಟರ್ನ್ಓವರ್ ಮಾಡುತ್ತಿದೆ. ತನ್ನದೆಯಾದ ಹೆಜ್ಜು ಗುರುತು ಮೂಡಿಸಿರುವ ಈ ಸಂಸ್ಥೆ, ಭಾರತದಲ್ಲಿ ಮಹಿಳಾ ಉದ್ಯಮ ಯಶಸ್ವಿಯಾಗಬಹುದು, ಮಹಿಳೆಯರು ಮುಂದುಬರಲು ಪ್ರೇರಣೆಯಾಗಿದೆ...

ಮಹಿಳಾ ಉದ್ಯಮಕ್ಕೆ ಹೇಳಿ ಮಾಡಿಸಿದ ರಾಷ್ಟ್ರ ಭಾರತ. ಹೀಗಂತ ನಾವ್ ಹೇಳ್ತಿಲ್ಲ ಬಿಎನ್​​ಪಿ ಪಾರಿಬಾಸ್ ನಡೆಸಿರುವ ಸಮೀಕ್ಷೆ ತಿಳಿಸುತ್ತದೆ. ಅಮೇರಿಕಾ, ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಸಮೀಕ್ಷೆ ನಡೆಸಿರುವ ಬಿಎನ್​​ಪಿ ಪಾರಿಬಾಸ್ ಸಂಸ್ಥೆ. ಮಹಿಳಾ ಉದ್ಯಮದಲ್ಲಿ ಭಾರತ ಅತ್ಯಂತ ಯಶಸ್ವಿ ರಾಷ್ಟ್ರವೆಂದು ವರದಿ ಮಾಡಿದೆ. ಭಾರತದಲ್ಲಿ 49% ಉದ್ಯಮಗಳು ಮಹಿಳೆಯರಿಂದ ಕೂಡಿವೆ. ಹಾಗಾಗಿ ಭಾರತ ಹಾಂಕಾಂಗ್​​​, ಫ್ರಾನ್ಸ್​​​ಗಿಂತ ಸಕ್ರೀಯ ಸ್ತ್ರಿಶಕ್ತಿ ಉದ್ಯಮಗಳು ಹೊಂದಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.

ಮಹಿಳಾ ಉದ್ಯಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಲು ದೊಡ್ಡ-ದೊಡ್ಡ ಸಂಸ್ಥೆಗಳು ಇಂದು ಮುಂದೆ ಬಂದಿವೆ. ಮಾರ್ಚ್ 2014ರಲ್ಲಿ ಗರ್ಲ್ ಇನ್ ಟೆಕ್ನಾಲಜಿ (GIT) ಎಂಬ ಹೊಸ ಯೋಜನೆಯನ್ನು NASSCOM ಪರಿಚಯಿಸಿತು. ಇಂಟರ್​​ನೆಟ್ ಆಧಾರಿತ ಕೆಲಸಗಳನ್ನು ಹುಡುಗಿಯರು ಮಾಡುವಂತೆ ಪ್ರೋಗ್ರಾಂ ರೂಪಿಸಲಾಯ್ತು. ಇದು ಮಹಿಳೆಯರಿಗೆ ಅನೇಕ ಉದ್ಯೋಗ ಸೃಷ್ಟಿಸಿತು. ಮಹಿಳಾ ಉದ್ಯಮಕ್ಕೆ ಸಹಾಯವಾಗುವಂತೆ ಎಚ್ಎಸ್​​ಬಿಸಿ ಬ್ಯಾಂಕ್ ಅಹ್ಮದಾಬಾದ್​​ನಲ್ಲಿ ‘ಸ್ವಯಂ’ ಎಂಬ ಯೋಜನೆಯನ್ನು ಪರಿಚಯಿಸಿದ್ದು, ಮಹಿಳಾ ಉದ್ಯಮ ಸ್ಥಾಪಿಸುವವರಿಗೆ ಸಹಾಯ ಮಾಡುವುದು ನಮ್ಮ ಗುರಿಯೆಂದು ಎಚ್ಎಸ್​​​​ಬಿಸಿ ಮುಖ್ಯಸ್ಥ ನೈನಾ ಲಾಲ್ ಕಿದ್ವಾಯಿ ತಮ್ಮ ಉದ್ದೇಶವನ್ನು ತಿಳಿಸಿದ್ರು.

ಮಹಿಳೆಯರಿಗೆ ಶಿಕ್ಷಣ ಮತ್ತು ಸೂಕ್ತ ತರಬೇತಿ ನೀಡುವುದರಿಂದ ಅವರು ಹೊಸ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ. ಪೆಟ್ ಕೇರ್ ಕ್ಲಿನಿಕ್, ಸಾಲ ವಸೂಲತಿ ಉದ್ಯಮ, ವ್ಹೀಲ್​​ಚೇರ್ ನಿರ್ಮಾಣ ಟೆಲಿಮಾರ್ಕೆಟಿಂಗ್ ಮತ್ತು ಹರ್ಬಲ್ ಕೇರ್ ಉತ್ಪನ್ನಗಳ ಉದ್ಯಮ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಉದ್ಯಮಗಳನ್ನು ಮಹಿಳೆಯರು ಸ್ಥಾಪಿಸುತ್ತಿದ್ದಾರೆ. ಸದ್ಯ ಭಾರತದ ಮಹಿಳೆಯರು ಕೂಡ ಹೆಚ್ಚು ವ್ಯಾಸಾಂಗ ಮಾಡುತ್ತಿದ್ದು ಉದ್ಯಮ ಸ್ಥಾಪನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಮನೆಯ ಸಾಂಪ್ರದಾಯಿಕ ಉದ್ಯಮದಲ್ಲೂ ಮಹಿಳೆ ಗಮನವಹಿಸುತ್ತಿದ್ದಾಳೆ. ಭಾರತೀಯರು ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಹೆಣ್ಣು-ಗಂಡು ಎಂಬ ಬೇಧಭಾವ ಕಡಿಮೆಯಾಗಿದೆ.

ಭಾರತದಲ್ಲಿ ಸ್ತ್ರೀಶಕ್ತಿ ಬೆಳವಣಿಗೆಗಾಗಿ ಸರ್ಕಾರ ಹಲವು ಯೋಜನೆಗಳು ರೂಪಿಸಿದೆ. ಮಹಿಳೆಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿ ಕೊಡುವುದರ ಜೊತೆಗೆ ಸುಲಭವಾಗಿ ಸಾಲ ಕೂಡ ನೀಡುತ್ತಿದೆ. ಉದಾಹರಣೆಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಉದ್ಯಮಗಳ ಮಂತ್ರಾಲಯ, ಮಹಿಳಾ ಉದ್ಯಮಕ್ಕೆ 30% ಸಬ್ಸಿಡಿ ನೀಡುತ್ತಿದೆ. ಹಲವು ಬ್ಯಾಂಕ್​​ಗಳು ಕೂಡ ಇದಕ್ಕೆ ಮುಂದೆ ಬಂದಿವೆ. 2013ರಲ್ಲಿ ಮಹಿಳೆಯರಿಗಾಗಿಯೇ ಭಾರತೀಯ ಮಹಿಳಾ ಬ್ಯಾಂಕ್​​ನ್ನು ಆರಂಭಿಸಿದ್ದು. ಅನಂತ್ ಸುಬ್ರಮಣಿಯನ್ ಅದನ್ನು ನಡೆಸುತ್ತಿದ್ದಾರೆ. ಇದು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯಮ ಸ್ಥಾಪಿಸುವಲ್ಲಿ ಸಹಾಯ ಮಾಡಲಿದೆ..

ಒಂದುವೇಳೆ ಭಾರತ ಸರಿಯಾಗಿ ಈ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಭಾರತದ ಜಿಡಿಪಿಯಲ್ಲಿ ಒಟ್ಟು 2.4% ಪ್ರತಿಶತ ಹೆಚ್ಚಲಿದೆಯೆಂದು ಅರ್ಗನೈಸೇಶನ್ ಫಾರ್ ಎಕನಾಮಿಕ್ಸ್ ಕೋ-ಆಫರೇಶನ್ ಎಂಡ್ ಡೇವಲಪ್​ಮೆಂಟ್ (OECD) ತನ್ನ ವರದಿಯಲ್ಲಿ ತಿಳಿಸಿದೆ. ಸ್ತ್ರಿ ಶಕ್ತಿಯನ್ನು ಭಾರತ ಸಮರ್ಪಕವಾಗಿ ಬಳಸಿಕೊಳ್ಳಬೇಕು ಆಗಮಾತ್ರ ಅಭಿವೃದ್ಧಿ ಸಾಧ್ಯ. ಮಹಿಳೆಯರು ಇಂದು ಹಲವು ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿರುವ ಮಹಿಳೆ ಮಾರುಕಟ್ಟೆಯ ಗಾತ್ರವೇನು ಎಂದು ಅರಿತಿದ್ದಾರೆ. ಒಂದು ಉದ್ಯಮ ಸ್ಥಾಪಿಸುವಾಗ ಉಂಟಾಗುವ ತೊಂದರೆಗಳ ಬಗ್ಗೆ ಕೂಡ ಅರಿತ್ತಿದ್ದು, ದಿನನಿತ್ಯ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಮಹಿಳಾ ಉದ್ಯಮದಿಂದ ಹಲವರಿಗೆ ಉದ್ಯಮ ನೀಡಬಹುದಾಗಿದೆ. ಸ್ತ್ರೀಶಕ್ತಿ ಭಾರತದ ಅತ್ಯಂತ ಅಮೂಲ್ಯವಾದ ಸಂಪನ್ಮೂಲವಾಗಿದೆ. ಮಹಿಳೆಯರು ಬಲಿಷ್ಠವಾಗಿದ್ದು. ತಾಳ್ಮೆಯಿಂದ ಯಾವುದೇ ಕೆಲಸವನ್ನು ಮಾಡಬಲ್ಲಂತ ಶಕ್ತಿ ಪರಿಸರದತ್ತವಾಗಿ ಅವರಿಗೆ ಬಂದಿದೆ. ಹೊಸ-ಹೊಸ ಅನ್ವೇಷಣೆಯಲ್ಲೂ ಮಹಿಳೆಯರು ಮುಂದಿದ್ದಾರೆ. ಆಧುನಿಕ ವ್ಯವಹಾರ ಕೌಶಲ್ಯದಿಂದ ಯಶಸ್ಸು ಹೊಸ ಉದ್ಯಮದಲ್ಲಿ ಯಶಸ್ಸು ಸ್ವಲ್ಪ ಕಷ್ಟವಾಗಿರಬಹುದು. ಆದರೆ ಮಹಿಳೆಯರು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ವರ್ಲ್ಡ್ ಎಕಾನಮಿಕ್ ಫೋರಮ್ ಪ್ರಕಾರ ಭಾರತದಲ್ಲಿರುವ ಉದ್ಯಮಗಳಲ್ಲಿ, ಮೂರರಲ್ಲಿ ಒಬ್ಬರು ಮಹಿಳೆಯಿದ್ದಾರೆ. ಹಾಗಾಗಿ ದೇಶದ ಜಿಡಿಪಿ (ರಾಷ್ಟ್ರೀಯ ನಿವ್ವಳ ಉತ್ಪನ್ನ)ಯಲ್ಲಿ ಮಹಿಳೆಯರ ಕೊಡುಗೆ ಕೂಡ ಮಹತ್ವದಾಗಿದೆ. ಮಹಿಳಾ ಉದ್ಯಮ ಹೆಚ್ಚು ಉದ್ಯೋಗ ಸೃಷ್ಟಿತ್ತಿರುವುದರಿಂದ ಭವಿಷ್ಯದಲ್ಲಿ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವದರಲ್ಲಿ ಮಹಿಳಾ ಉದ್ಯಮ ಮಹತ್ವದ ಪಾತ್ರವಹಿಸಲಿದೆ..

ಅನುವಾದಕರು: ಎನ್.ಎಸ್ .ರವಿ