ಹಸಿತ್ಯಾಜ್ಯ ಸಂಸ್ಕರಣೆಯಿಂದ ಅಡುಗೆ ಅನಿಲ, ತರಕಾರಿ ಬೆಳೆದ ಬೆಂಗಳೂರಿಗರು

ಉಷಾ ಹರೀಶ್​

0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ಸುದ್ದಿ ಮಾಡಿದಷ್ಟು ಬೇರೆ ಯಾವುದೂ ಸುದ್ದಿಯಾಗಲಿಲ್ಲ. ಸರಿಯಾದ ರೀತಿಯಲ್ಲಿ ಕಸ ವಿಲೇವಾರಿಯಾಗದೇ ಬೆಂಗಳೂರು ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿತು. ಅದಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೆ ತರಲಾಯಿತು ಆದರೂ ನಗರದ ಬೀದಿ ಬೀದಿಗಳಲ್ಲಿ ಕಸ ತುಂಬಿಕೊಂಡು ಗಾರ್ಡನ್ ಸಿಟಿ ಬೆಂಗಳೂರನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದೆ ಈ ಕಸ.

ಆದರೆ ಬೆಂಗಳೂರಿನ ನಿವಾಸಿಯೊಬ್ಬರು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನೆಲ್ಲಾ ಕಸವನ್ನೆಲ್ಲಾ ಸಂಸ್ಕರಿಸಿ ಇದರಿಂದ ಉತ್ಪತ್ತಿಯಾಗುವ ಜಯವಿಕ ಅನಿಲವನ್ನು ಅಡುಗೆಗೆ ಬಳಸುತ್ತಿದ್ದಾರೆ. ಅಷ್ಟೆ ಅಲ್ಲದೇ ಸಂಸ್ಕರಣೆ ಮೂಲಕ ಉಳಿಯುವ ದ್ರಾವಣ ಉಪಯುಕ್ತ ಗೊಬ್ಬರವಾಗಿರುವ ಕಾರಣ ತಮ್ಮ ಮನೆ ಮೇಲಿರುವ ತಾರಸಿಯಲ್ಲಿ ಅದರ ಸಹಾಯದಿಂದ ಕೆಲ ತರಕಾರಿಗಳನ್ನು ಬೆಳೆಯುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು .

ಇದನ್ನು ಓದಿ

ವಕೀಲರಾಗಿ ಕೆಲ್ಸ ಆರಂಭಿಸಿದ್ರು, ಆದಾಯಕ್ಕೆ ದ್ರಾಕ್ಷಿ ಕೃಷಿ ಕೈಹಿಡಿಯಿತು.

ಹೌದು ಬೆಂಗಳೂರಿನ ಗಿರಿನಗರ 2ನೇ ಹಂತದಲ್ಲಿರುವ ಕಂಟ್ರಾಕ್ಟರ್ ಕೆಲಸ ಮಾಡುತ್ತಿರುವ ಸಿ ಎನ್ ಆನಂದ್ ಎಂಬುವವರ ಮನೆಯಲ್ಲಿ ಈ ಪ್ರಯೋಗ ಚಾಲನೆಯಲ್ಲಿದ್ದು ಅದು ಯಶಸ್ವಿಯು ಆಗಿದೆ. ಅವರ ಮನೆಯಲ್ಲಿ ಉತ್ಪತ್ತಿಯಾಗುವ ಎರಡು ಕೆ ಜಿ ಕಸವನ್ನು ರಸ ಮಾಡಿ ಅದರಿಂದ ತರಕಾರಿ ಬೆಳೆಯುತ್ತಿದ್ದಾರೆ.

ಆನಂದ್ ಅವರು ವಾಸವಾಗಿರುವ ಎರಡು ಮಹಡಿ ಕಟ್ಟಡದಲ್ಲಿ ಹತ್ತಾರು ಮಂದಿ ನೆಲೆಸಿದ್ದಾರೆ. ಈ ಹಿಂದೆ ನಗರದಲ್ಲಿ ತಾಂಡವವಾಡಿದ ತ್ಯಾಜ್ಯ ಸಮಸ್ಯೆ, ಮಂಡೂರು ಘಟಕದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿ–ದಿರುವುದರಿಂದ ಸ್ಥಳೀಯರು ಅನುಭವಿ–ಸುತ್ತಿರುವ ತೊಂದರೆ, ಕಸದ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಬೆಂಗಳೂರಿಗೆ ಬಂದ ಕೆಟ್ಟ ಹೆಸರಿನ ಬಗ್ಗೆ ಅರಿತ ಆನಂದ್ ಮತ್ತವರ ಕುಟುಂಬ ಆರಂಭಿಸಿದ ಪ್ರಯತ್ನದ ಫಲವಾಗಿ ಈಗ, ಅವರ ಗೃಹದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನೆಲ್ಲಾ ಮನೆಯಲ್ಲೇ ವಿಲೇವಾರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ದಿನ ಇವರ ಮನೆಯಿಂದ ಹಸಿ ಕಸ ಒಣ ಕಸವನ್ನು ಪ್ರತ್ಯೇಕಿಸಿ ನೀಡುತ್ತಿದ್ದರು. ಇದೀಗ ವಾರದಲ್ಲಿ ಒಮ್ಮೆ ಪೌರಕಾರ್ಮಿಕರು ಒಣ ಕಸವನ್ನು ಪಡೆದು ಹೊಗುತ್ತಿದ್ದಾರೆ.

ಜೈವಿಕ ಅನಿಲ ಬಳಕೆ: ಮನೆಯಲ್ಲಿ ನಿತ್ಯ ಸುಮಾರು 2 ಕೆ.ಜಿ.ಯಷ್ಟು ಹಸಿ ಕಸ ಉತ್ಪತ್ತಿಯಾಗುತ್ತಿತ್ತು. ಹಸಿ ಕಸವನ್ನು ಸಂಸ್ಕರಿಸಿ ಅದರಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಅಡುಗೆಗೆ ಬಳಸಲು ನಿರ್ಧರಿಸಿದರು. ಎರಡು ಕೆ.ಜಿ ಸಾಮರ್ಥ್ಯದ ಎರಡು ಸಂಸ್ಕರಣಾ ಸಾಧನಗಳು ಹಾಗೂ ಎರಡು ಸ್ಟೌ ಅಳವಡಿಸಿಕೊಂಡರು. ಇದೀಗ ನಿತ್ಯ ಎರಡು ಕೆ.ಜಿ ಹಸಿ ಕಸವನ್ನು ಈ ಸಾಧನದೊಳಗೆ ಹಾಕಿದರೆ ನಿತ್ಯ 1ರಿಂದ 1.30 ಗಂಟೆ ಕಾಲ ಜೈವಿಕ ಅನಿಲವನ್ನು ಅಡುಗೆ ಕಾರ್ಯಕ್ಕೆ ಬಳಸಬಹುದಾಗಿದೆ.

ತರಕಾರಿ ಬೆಳೆ: 

ಹಸಿ ಕಸ ಸಂಸ್ಕರಣೆ ಬಳಿಕ ಉಳಿ– ಯುವ ದ್ರಾವಣ ಪ್ರತ್ಯೇಕವಾಗಿ ಡಬ್ಬದಲ್ಲಿ ಸಂಗ್ರಹ–ವಾಗುತ್ತದೆ. ಇದು ಉಪಯುಕ್ತ ಗೊಬ್ಬರವಾಗಿರುವು–ದರಿಂದ ತಾರಸಿಯಲ್ಲಿ ಕೈತೋಟ ಸಿದ್ಧಪಡಿಸಿ ತರಕಾರಿ ಗಿಡಗಳಿಗೆ ಬಳಸಲಾರಂಭಿಸಿ ಅದರಿಂದ ನಂತರ ಬೆಂಡೇ–ಕಾಯಿ, ಕುಂಬಳಕಾಯಿ, ಗೋರಿ–ಕಾಯಿ, ಚಪ್ಪರದ ಅವರೇ–ಕಾಯಿ, ಹಾಗಲಕಾಯಿ, ಬದನೆಕಾಯಿ ಇತರೆ ತರಕಾರಿ ಬೆಳೆದು ಬಳ–ಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಮನೆಗೆ ಟೊಮೆಟೊ, ಹಸಿ ಮೆಣಸಿನ ಕಾಯಿಯನ್ನು ಖರೀದಿಸದೆ ತಾರಸಿಯಲ್ಲೇ ಬೆಳೆದು ಬಳಸುತ್ತಿದ್ದಾರೆ. ಹೆಚ್ಚಾದಾಗ ಅಕ್ಕಪಕ್ಕದವರಿಗೂ ನೀಡಿದ್ದಾರೆ.

ವೆಚ್ಚ 24,000 ರೂ.: ಜೈವಿಕ ಅನಿಲ ಉತ್ಪಾದನಾ ಸಾಧನ, ಕೊಳವೆ ಅಳವಡಿಕೆ, ಸ್ಟೌ ಎಲ್ಲವೂ ಸೇರಿ 24 ಸಾವಿರ ರೂ. ವೆಚ್ಚವಾಗಿದೆ. ಆದರೆ ಈ ಹಿಂದೆ ತಿಂಗಳಿಗೆ ಖಾಲಿಯಾಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಒಂದೂವರೆ ತಿಂಗಳವರೆಗೆ ಬಳಕೆಯಾಗುತ್ತಿದೆ. ಹಾಗಾಗಿ ಪ್ರತಿ ತಿಂಗಳು ಉಳಿತಾಯದ ಪ್ರಯೋಜನ ಪಡೆಯುತ್ತಿದ್ದಾರೆ.

ಮನೆ ಮಂದಿಯಿಂದಲೂ ಸಾಥ್

ಮನೆಯಲ್ಲಿ ಉತ್ಪತ್ತಿಯಾಗುವ ಅಷ್ಟೂ ಕಸವನ್ನು ರಸವನ್ನಾಗಿಸುವಲ್ಲಿ ಆನಂದ್ ಮಾತ್ರವಲ್ಲದೆ ಅವರ ಮನೆಯ ಸದಸ್ಯರೆಲ್ಲಾ ತೊಡಗಿಸಿಕೊಂಡಿದ್ದಾರೆ. ತಂದೆ ನರಸಿಂಹಮೂರ್ತಿ ಅವರು ಮೊಮ್ಮಕ್ಕಳೊಂದಿಗೆ ತಾರಸಿಯಲ್ಲಿ ಗಿಡಗಳನ್ನು ಪೋಷಿಸುವುದರಲ್ಲೇ ಸಂತಸಪಡುತ್ತಿದ್ದಾರೆ. ಗುರುರಾಜ್, ಮನೋರಮಾ ಮತ್ತಿತರರು ಸಹಕಾರ ನೀಡುತ್ತಿದ್ದಾರೆ. ಈವರೆಗೆ 2000 ತುಳಸಿ ಸಸಿಗಳನ್ನು ಸಾರ್ವಜನಿಕರಿಗೆ ಹಂಚಿದ್ದಾರೆ. ಈ ಪ್ರಯತ್ನ ಕಂಡು ಆಕರ್ಷಿತರಾದವರು ಶಾಲಾ ಮಕ್ಕಳನ್ನು ಕರೆತಂದು ಕಸ ಸಂಸ್ಕರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಇದನ್ನು ಓದಿ

1. ಬಾಹ್ಯ ಸೌಂದರ್ಯ ಹಾಳಾದಾಗ ಕೈ ಹಿಡಿದಿದ್ದು ಅಂತರಂಗ ಸೌಂದರ್ಯ..!

2. ಗ್ರಾಮೀಣ ಭಾರತದ ರೂಪಾಂತರಕ್ಕೆ ಪಣ - ಬಡತನ ನಿರ್ಮೂಲನೆಗೆ ಶ್ರಮಿಸುತ್ತಿರುವ ಜರೀನಾ ಸ್ಕ್ರೆವಾಲಾ

3. ನಾರಿಯ ಶೃಂಗಾರಕ್ಕೆ ಸಕಲವೂ ಇಲ್ಲಿದೆ

Related Stories

Stories by YourStory Kannada