ಯಶಸ್ಸಿಗೆ ಸರಳ ಸೂತ್ರ-ಉದ್ಯಮಿಗಳಿಗೆ ಲಿಂಕ್ನರ್ ಮಂತ್ರ

ಟೀಮ್​​ ವೈ.ಎಸ್​​.

0

ಉದ್ಯಮ ಕ್ಷೇತ್ರದಲ್ಲಿ ಸೋಲು - ಗೆಲುವು ಇದ್ದೇ ಇದೆ. ತೀರಾ ಸಾಮಾನ್ಯ ಕಾರಣಗಳಿಂದಾಗಿ ನಷ್ಟದ ಸುಳಿಗೆ ಸಿಲುಕುವವರೂ ಇದ್ದಾರೆ. ಪೈಪೋಟಿ ಹಾಗೂ ಹೊಸ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು. ಜೊತೆಗೆ ಯಶಸ್ಸು ಗಳಿಸಲು ಮರು ಶೋಧ ಅತ್ಯಂತ ಅವಶ್ಯ ಎನ್ನುತ್ತಾರೆ ಲೇಖಕ ಜೋಶ್ ಲಿಂಕ್ನರ್. ದಿ ರೋಡ್ ಟು ರಿ ಇನ್‍ವೆನ್ಷನ್: ಹೌ ಟು ಡ್ರೈವ್ ಡಿಸ್ರಪ್ಷನ್ & ಎಕ್ಸಲರೇಟ್ ಟ್ರಾನ್ಸ್​​ಫರ್ಮೇಶನ್ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಉದ್ಯಮಿಗಳಿಗೆ ಟಿಪ್ಸ್ ಕೊಟ್ಟಿದ್ದಾರೆ. ಜೋಶ್ ಲಿಂಕ್ನರ್ ಕೇವಲ ಲೇಖಕರು ಮಾತ್ರವಲ್ಲ. ಉದ್ಯಮಿಯಾಗಿ, ಗಿಟಾರ್ ವಾದಕರಾಗಿ, ಹೂಡಿಕೆದಾರರಾಗಿ ಅಪಾರ ಅನುಭವ ಗಳಿಸಿದ್ದಾರೆ. ಇವರು ಬರೆದ ಡಿಸಿಪ್ಲಿನ್ಡ್ ಡ್ರೀಮಿಂಗ್ ಎಂಬ ಪುಸ್ತಕ ಕೂಡ ಭಾರೀ ಜನಪ್ರಿಯತೆ ಗಳಿಸಿತ್ತು.

ದಿ ರೋಡ್ ಟು ರಿ ಇನ್‍ವೆನ್ಷನ್ ಎಂಬ 260 ಪುಟಗಳ ಪುಸ್ತಕದಲ್ಲಿ ಜೋಶ್, ಉದ್ದಿಮೆದಾರರಿಗೆ ನೀಡಿರುವ 10 ಅತ್ಯಮೂಲ್ಯ ಸಲಹೆಗಳನ್ನು ಒಂದೊಂದಾಗಿ ನೋಡೋಣ.

1. ಮರುಶೋಧ ಏಕೆ ಅವಶ್ಯಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು

ಮರುಶೋಧ ಅನ್ನೋದು ಬದುಕಿನ ದಾರಿ. ಕಠಿಣ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಯಶ ಕಾಣಬೇಕೆಂದರೆ ಸದಾ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರಲೇಬೇಕು. ಪೈಪೋಟಿಯನ್ನು ಎದುರಿಸಲು ಸೃಜನಾತ್ಮಕ ವಿಚಾರಗಳಿರಬೇಕು. ಸೂಕ್ಷ್ಮಗ್ರಾಹಿಯಾಗಿರಬೇಕು, ಕಾರ್ಯಕ್ಷಮತೆಯ ಜೊತೆಗೆ ವೇಗವೂ ಅತ್ಯಗತ್ಯ. ಸ್ಯಾಮ್‍ಸಂಗ್, ಆ್ಯಪಲ್‍ನಂತಹ ಕಂಪನಿಗಳ ಯಶಸ್ಸು ಇದಕ್ಕೊಂದು ಉತ್ತಮ ಉದಾಹರಣೆ.

2. ಮರುಶೋಧದ 8 ತತ್ವಗಳನ್ನು ಅಳವಡಿಸಿಕೊಳ್ಳಿ

ಪುನರ್ ಶೋಧದ ಎಂಟು ತತ್ವಗಳನ್ನು ಲಿಂಕ್ನರ್ ವ್ಯಾಖ್ಯಾನಿಸಿದ್ದಾರೆ. ಭೂತಕಾಲದಿಂದ ಹೊರಬನ್ನಿ, ಸಂಸ್ಥೆಯಲ್ಲಿ ಧೈರ್ಯವನ್ನು ಪ್ರೋತ್ಸಾಹಿಸಿ, ವೈಫಲ್ಯವನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಿ, ಸದ್ಯ ಮಾರುಕಟ್ಟೆಯನ್ನು ಆಳುತ್ತಿರುವವರು ಏನು ಮಾಡ್ತಿದ್ದಾರೋ ಅದಕ್ಕೆ ವಿರುದ್ಧವಾದ ತಂತ್ರ ರೂಪಿಸಿ, ಭವಿಷ್ಯವನ್ನು ಮೊದಲೇ ಊಹಿಸಿಕೊಳ್ಳಿ, ನಿಮ್ಮೊಂದಿಗೆ ನೀವೇ ಪೈಪೋಟಿಗಿಳಿಯಿರಿ, ಮಿತಿಯನ್ನು ತಿರಸ್ಕರಿಸಿ, ನಿಮ್ಮ ಗುರಿ ದೊಡ್ಡದಾಗಿರಲಿ ಎನ್ನುತ್ತಾರೆ ಲಿಂಕ್ನರ್. ನೀವು ಅದನ್ನು ನೋಡಿದಾಗ ನಂಬಿ, ನಂಬಿದ ಮೇಲೆ ಅದನ್ನು ನೋಡಿಯೇ ನೋಡುತ್ತೀರಾ ಅನ್ನೋದು ಅವರ ವ್ಯಾಖ್ಯಾನ. ಮನುಷ್ಯನಾದವನು ಜೀವನ ಪೂರ್ತಿ ಕಲಿಯುತ್ತಲೇ ಇರಬೇಕು ಅನ್ನೋದು ಲಿಂಕ್ನರ್ ವಾದ.

3. ನಿಮ್ಮ ಕೊಡುಗೆಗಳನ್ನು ನೀವೇ ಅನುಭವಿಸಿ

ಸಾಫ್ಟ್​​​ವೇರ್ ಉತ್ಪನ್ನಗಳ ಕಂಪನಿಗಳು ಹೊಸತನಕ್ಕೆ ಹೆಸರು ಮಾಡಿವೆ. ಹಳೆಯದನ್ನು ಮರೆಸಿ ಹೊಸ ತಂತ್ರಜ್ಞಾನದ ಆವಿಷ್ಕಾರ ಮಾಡುವುದೇ ಇಲ್ಲಿನ ವಿಶೇಷತೆ. ಕಲ್ಪನೆಗಳ ಬೇಟೆ, ಮೇಕ್ ಓವರ್, ವಿವಿಧ ವಿಭಾಗಗಳ ವಿಸ್ತರಣೆಯಲ್ಲಿ ಸಾಫ್ಟ್​​ವೇರ್ ಸಂಸ್ಥೆಗಳ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ. ಚಾಣಾಕ್ಷ ಸ್ಪರ್ಧಿಗಳು ನಿಮ್ಮ ಬಂಡವಾಳ ಮತ್ತು ತಂತ್ರದ ವಿರುದ್ಧ ಅನಿರೀಕ್ಷಿತ ಕಾರ್ಯಾಚರಣೆ ಮೂಲಕ ನಿಮ್ಮನ್ನು ದಿಕ್ಕುಗೆಡಿಸಬಹುದು.

4. ನಿಮ್ಮ ಕಾರ್ಯಚರಣೆಯನ್ನು ಪುನರ್ ಸಜ್ಜುಗೊಳಿಸಿ

ಪುನರ್ ಶೋಧ ಅನ್ನೋದು ಬರೀ ಉತ್ಪನ್ನ ಮತ್ತು ಸೇವೆಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಸ್ಥಳ ಹಾಗೂ ಆಂತರಿಕ ಕಾರ್ಯಾಚರಣೆಗೂ ಅನ್ವಯಿಸುತ್ತದೆ. ಹಳೆಯದನ್ನು ಪತ್ತೆ ಮಾಡಿ ಅದನ್ನು ಕಿತ್ತು ಹಾಕಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು.

5. ಸೃಜನಾತ್ಮಕವಾದ ಉಜ್ವಲ ಅನುಭವ

ಎದ್ದು ಕಾಣುವಂಥ ಅನುಭವಗಳು ಎಲ್ಲಾ ಗ್ರಾಹಕರನ್ನು ತಲುಪಬೇಕು. ಅಚ್ಚರಿ ಹಾಗೂ ಸಂತೋಷವನ್ನು ಕೊಡುವಂತಿರಬೇಕು. ಸ್ಥಿರತೆ ಮತ್ತು ಸ್ಪೂರ್ತಿ ಜೊತೆಯಾಗಿದ್ದಲ್ಲಿ ಮಾತ್ರ ಯಶಸ್ಸು ನಿಮ್ಮನ್ನು ಅರಸಿ ಬರುತ್ತದೆ.

6. ಸ್ಮರಣೀಯ ಕಥೆಯೊಂದನ್ನು ಹೇಳಿ

ಉದ್ಯಮದ ಕಥೆ ಹೇಳಲು ಪರಿಣಾಮಕಾರಿ ವಿಧಗಳನ್ನು ಬಳಸಲೇಬೇಕು. ಪ್ರಶ್ನೆಗಳುಳ್ಳ, ವಿಚಿತ್ರವಾದ, ಪ್ರೀತಿಯ, ಬಡತನದಿಂದ ಸಿರಿತನಕ್ಕೇರಿದ ಹಾಗೂ ಸೇಡಿನ ಕಥೆಗಳನ್ನು ಗ್ರಾಹಕರ ಮುಂದಿಡಬೇಕು. ಸುದ್ದಿಗಳು ಸರಳ, ಸ್ಪಷ್ಟ, ಸಂಕ್ಷಿಪ್ತ, ಸ್ಮರಣೀಯ ಹಾಗೂ ಕ್ರಿಯಾಶೀಲವಾಗಿರಬೇಕು. ಕೆಲಸದ ಒತ್ತಡ, ಪೈಪೋಟಿಯ ಆತಂಕವನ್ನೆಲ್ಲ ದೂರ ಮಾಡಲು ಕೊಂಚ ಹಾಸ್ಯಮಯ ಕಥೆಗಳನ್ನೂ ಪ್ರಸ್ತುತಪಡಿಸಿ.

7. ನಿಮ್ಮ ಸಂಸ್ಕೃತಿಯನ್ನು ಸರಿಪಡಿಸಿ

ದೃಷ್ಟಿಕೋನವನ್ನು ಬದಲಾಯಿಸಿಕೊಂಡಲ್ಲಿ ಮಾತ್ರ ಸಂಸ್ಕೃತಿಯನ್ನು ಸರಿಪಡಿಸಲು ಸಾಧ್ಯ. ಪರಿಣಾಮಕಾರಿಯಾದ ಆಂತರಿಕ ಬದಲಾವಣೆ, ಹೊಸ ತತ್ವಗಳು, ಸಾಂಸ್ಥಿಕ ಆಚರಣೆ, ಸಂಪೂರ್ಣ ಬದಲಾವಣೆ ಸುಲಭವಲ್ಲ. ಆಸಕ್ತಿ, ಆವೇಗ, ಪ್ರಯತ್ನ, ಸೃಜನಶೀಲತೆ ಮತ್ತು ಧೈರ್ಯ ಇರಲೇಬೇಕು. ಕಂಪನಿಯ ಹಿತಾಸಕ್ತಿ ಮತ್ತು ಪ್ರಗತಿಗಾಗಿ ಹಳೆಯ ಸಿಬ್ಬಂದಿಯನ್ನು ಶುದ್ಧೀಕರಿಸಲು ಇವೆಲ್ಲವೂ ಅವಶ್ಯಕ.

8. ನಿಮ್ಮ ಗ್ರಾಹಕರನ್ನು ಊಹಿಸಿಕೊಳ್ಳಿ

ಗ್ರಾಹಕರ ಒಳನೋಟ ಮತ್ತು ವಿಶ್ಲೇಷಣೆಯಿಂದ ಹೊಸ ಹೊಸ ಐಡಿಯಾಗಳು ಬರಬಹುದು. ಅಂದುಕೊಂಡಿದ್ದನ್ನು ಮಾಡಲು ಸ್ಪಷ್ಟತೆಯೋ ಸಿಗಬಹುದು. ಗ್ರಾಹಕರ ಖರೀದಿ ಹವ್ಯಾಸ ಆಗಾಗ ಬದಲಾಯಿಸುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಸಂಸ್ಥೆಗಳಲ್ಲೂ ಬದಲಾವಣೆಯಾಗಬೇಕು. ಬೇರೆ ಬೇರೆ ಕೈಗಾರಿಕೆಗಳಿಂದ ಹೊಸ ಹೊಸ ಐಡಿಯಾಗಳನ್ನು ಒಮ್ಮೊಮ್ಮೆ ಎರವಲು ಪಡೆಯುವುದು ಅನಿವಾರ್ಯ.

9. ನಿಮ್ಮ ವೃತ್ತಿ ರೂಪಾಂತರವಾಗಲಿ

ಪುನರ್ ಶೋಧ ಕೇವಲ ಸಂಸ್ಥೆಗೆ ಮಾತ್ರವಲ್ಲ ವೈಯಕ್ತಿಕವಾಗಿಯೂ ಅನ್ವಯಿಸುತ್ತದೆ. ಯೋಜನೆ, ಪ್ರತಿಬಿಂಬ, ಕಲಿಕೆ ಮತ್ತು ಸಾಹಸ ಪ್ರಜ್ಞೆಯನ್ನು ಪುನಶ್ಚೇತನಗೊಳಿಸಲು ನಿಮ್ಮ ವೃತ್ತಿ ಸಹಾಯ ಮಾಡಬಹುದು. ಭವಿಷ್ಯ ಬಯಸಿದ ರಾಜ್ಯದಲ್ಲಿ ಬಧ್ದತೆಯ ಹಾಗೂ ಗಮನಾರ್ಹ ಕೆಲಸ ಮಾಡಲು ವೃತ್ತಿ ನೆರವಾಗಬಹುದು.

10. ನಿಮ್ಮ ಆಸ್ತಿಯನ್ನು ನೀವೇ ಕಲ್ಪಿಸಿಕೊಳ್ಳಿ..

ಸತ್ತ ಮೇಲೂ ನೀವು ನೆನಪಿಸುವಂಥದ್ದು ಯಾವುದು? ಯಾವುದು ನಿಮಗೆ ಅತ್ಯಂತ ಅವಶ್ಯಕ? ಅತಿ ಹೆಚ್ಚು ಪರಿಣಾಮವಾಗಿದ್ದೆಲ್ಲಿ? ನೀವು ಯಾವುದರಲ್ಲಿ ಪ್ರವೀಣರು? ಈ ಎಲ್ಲ ಪ್ರಶ್ನೆಗಳಿಗಿರುವ ಉತ್ತರವೇ ನಿಮ್ಮ ಆಸ್ತಿ. ನಿಜವಾದ ಯಶಸ್ಸು ನಿಮ್ಮ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಸಾಮಾಜಿಕ ತೃಪ್ತಿ ಮತ್ತು ಆಧ್ಯಾತ್ಮಿಕ ಆನಂದವಿಲ್ಲದೆ ವ್ಯಾಪಾರದಲ್ಲಿ ಯಶಸ್ಸು ಅಸಾಧ್ಯ. ನಿಮ್ಮ ಉದ್ಯೋಗ ನಿಮಗೆ ತೃಪ್ತಿ ತಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಲೇಖಕ ಲಿಂಕ್ನರ್. ನಿರಂತರ ಹಾಗೂ ಶಿಸ್ತಿನ ಕಾರ್ಯವೈಖರಿ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ನಡೆಸುತ್ತದೆ. ಲಿಂಕ್ನರ್ ಅವರ ಈ ಎಲ್ಲಾ ಸಲಹೆಗಳನ್ನು ಪಾಲಿಸಿದ್ರೆ ಉದ್ಯಮಿಗೆ ಯಶಸ್ಸು ಖಚಿತ.

Related Stories

Stories by YourStory Kannada