ಗಣಿತದ ಕ್ಲಿಷ್ಟಕರ ಸಮಸ್ಯೆಗಳಿಗೆ ಸುಲಭ ಪರಿಹಾರ-ಎಜು 3ಡಿಯಿಂದ ವಿದ್ಯಾರ್ಥಿಗಳಿಗೆ ಸಹಾಯ

ಟೀಮ್​​ ವೈ.ಎಸ್​​.

ಗಣಿತದ ಕ್ಲಿಷ್ಟಕರ ಸಮಸ್ಯೆಗಳಿಗೆ ಸುಲಭ ಪರಿಹಾರ-ಎಜು 3ಡಿಯಿಂದ ವಿದ್ಯಾರ್ಥಿಗಳಿಗೆ ಸಹಾಯ

Thursday October 08, 2015,

4 min Read

ಸಾಫ್ಟ್​​ವೇರ್​​ ರಿಸರ್ಜ್ ಎಂಜಿನಿಯರ್​​ನಿಂದ ತಾಯಿಯಾಗಿ ಬಳಿಕ ಶೈಕ್ಷಣಿಕ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ರಾಖಿ ಚಾವ್ಲಾ. ತಮ್ಮ ಎಂ-ಟೆಕ್​​ನ ಕೊನೆಯ ಸೆಮಿಸ್ಟರ್ ಕಲಿಯುತ್ತಿರುವ ವೇಳೆ ಹೈದರಾಬಾದ್​​ನ ಪ್ರಸಿದ್ಧ ಮಲ್ಟಿ ನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ರಾಖಿ ಅದರ ಮುಂದಿನ ತಿಂಗಳೇ ಮದುವೆಯನ್ನೂ ಆದರು. ಅವರ ಪತಿ ಶ್ಲಂಭರ್ಗ್​ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಹೈದರಾಬಾದ್​ನಲ್ಲಿ ಉಳಿದ ರಾಖಿ ತಮ್ಮ ರಜೆಯ ದಿನಗಳಲ್ಲಿ ಪತಿಯೊಂದಿಕೆ ಕಾಲ ಕಳೆಯುತ್ತಿದ್ದರು.

image


ಮಗ ಜನಿಸಿದ ಬಳಿಕ ತಮ್ಮ ತವರು ಆಗ್ರಾಕ್ಕೆ ಸಮೀಪದ ನೋಯ್ಡಾಗೆ ಶಿಫ್ಟ್ ಆದ ರಾಖಿ, ಒಂದು ವರ್ಷಗಳ ಕಾಲ ಅಲ್ಲಿ ಕೆಲಸ ನಿರ್ವಹಿಸಿದರು. ಇದೇ ವೇಳೆ ಅವರ ಪತಿ ಭಾರತಕ್ಕೆ ಮರಳಿದರು.

ಆಗ ನನ್ನ ಬಳಿ ಎರಡು ಆಯ್ಕೆಗಳಿದ್ದವು. ಎಲ್ಲವನ್ನೂ ಬಿಟ್ಟು ಪತಿಯೊಂದಿಗೆ ಅವರು ಕೆಲಸ ಮಾಡುವ ಸ್ಥಳಗಳಿಗೆಲ್ಲಾ ಹೋಗಿ ಪ್ರಪಂಚ ಪರ್ಯಟನೆ ನಡೆಸುವುದು ಅಥವಾ ಮಾಡುವ ವೃತ್ತಿಯನ್ನು ತೊರೆದು ಮಗನ ಬೆಳವಣಿಗೆಯ ಸುಖಮಯ ಕ್ಷಣಗಳನ್ನು ಸವಿಯುವುದು. ನಾನು ಎರಡನೆಯದನ್ನು ಆಯ್ಕೆ ಮಾಡಿಕೊಂಡೆ ಅನ್ನುತ್ತಾರೆ ರಾಖಿ.

ಬಳಿಕ ರಾಖಿ ಪದವಿ, ಎಂಜಿನಿಯರಿಂಗ್ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್ ಕಲಿಸಲು ಆರಂಭಿಸಿದರು. ಶಿಕ್ಷಕಿಯಾಗಿ ಕಲಿಸುತ್ತಿದ್ದ ಸಂದರ್ಭದಲ್ಲಿ ಶಿಕ್ಷಣದ ಕಲೆಯಲ್ಲಿ ಭಾರತ ಅತ್ಯಂತ ಹಿಂದುಳಿದಿರುವುದು ಅವರ ಗಮನಕ್ಕೆ ಬಂದಿತು. ವಿದ್ಯಾರ್ಥಿಗಳು ಏನನ್ನೂ ಸಮರ್ಪಕವಾಗಿ ಕಲಿಯದೆ ಕೇವಲ ಅಂಕಗಳನ್ನು ಪಡೆಯುವ ಅಥವಾ ಡಿಗ್ರಿ ಗಳಿಸುವ ಏಕಮಾತ್ರ ಉದ್ದೇಶ ಹೊಂದಿದ್ದ ವಿಷಯವನ್ನು ಅವರು ಮನಗಂಡರು.

ರಾಖಿ ಶೈಕ್ಷಣಿಕ ವ್ಯವಸ್ಥೆಯ ಕುರಿತಾಗಿ ಕೆಲವು ಸಂಶೋಧನೆಗಳನ್ನು ಆರಂಭಿಸಿದರು. ಅವರು ಶಿಕ್ಷಕಿಯಾಗಿದ್ದ 2 ವರ್ಷಗಳಲ್ಲಿ ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದರು ವಿದ್ಯಾರ್ಥಿಗಳು ಮಾತ್ರ ಹೊಸ ಶೈಲಿಯ ಬದಲಿಗೆ ಪ್ರಾಥಮಿಕ ಸಾಮಾನ್ಯ ವಿಧಾನವನ್ನೇ ಅನುಸರಿಸಲು ಮನಸು ಮಾಡುತ್ತಿದ್ದರು.

image


ರಾಖಿ ಅರ್ಥ ಮಾಡಿಕೊಂಡ ಸಮಸ್ಯೆ ಎಂದರೆ ಪ್ರಾಥಮಿಕ ಹಾಗೂ ಸೆಕೆಂಡರಿ ಹಂತಗಳ ಅಂದರೆ 8ನೇ ತರಗತಿಯವರೆಗೆ ವಿದ್ಯಾಭ್ಯಾಸದಲ್ಲೇ ತೊಡಕಿತ್ತು. ಹತ್ತನೇ ತರಗತಿ ಕಲಿಯುವ ವಿದ್ಯಾರ್ಥಿಗಳು ಶಾಲೆಯಲ್ಲಿ, ಮನೆಯಲ್ಲಿ ಮಾತ್ರವಲ್ಲದೇ ಕೋಚಿಂಗ್ ಸೆಂಟರ್​​ಗಳನ್ನು ಆಶ್ರಯಿಸಬೇಕಿತ್ತು. ಅತಿಯಾದ ಒತ್ತಡ, ಹೆಚ್ಚಿನ ನಿರೀಕ್ಷೆ, ಎಂಟ್ರೆನ್ಸ್ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಒತ್ತಡವನ್ನು ಹೇರುತ್ತಿವೆ. ಓರ್ವ ಶೈಕ್ಷಣಿಕ ಉದ್ಯಮಿಯಾಗಿ ಹಾಗೂ ಶಿಕ್ಷಕಿಯಾಗಿ ರಾಖಿ ಮುಖ್ಯವಾಗಿ ಸ್ಮಾರ್ಟ್ ಶಿಕ್ಷಕಿಯರನ್ನು ಸೃಷ್ಟಿಸಿ, ಸ್ಮಾರ್ಟ್ ವಿಧಾನಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹುಟ್ಟುಹಾಕುವ ಆಲೋಚನೆ ಮಾಡಿದರು. 

ಆಗ್ರಾದಲ್ಲಿ ರಾಖಿ ಸ್ಥಾಪಿಸಿದ ಸಂಸ್ಥೆಯೇ ಎಜು3ಡಿ. ಈ ಸಂಸ್ಥೆಗೆ ರಾಖಿ ಸಂಸ್ಥಾಪಕಿ ಹಾಗೂ ಸಿಇಓ. ಪ್ರತಿಯೊಂದು ವಿಷಯದ ಕಷ್ಟಕರ ಅಧ್ಯಾಯವನ್ನೂ ಪ್ರಾಥಮಿಕ ಅಂಶಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಎಡ್3ಡಿಯ ಮೂರು ಲ್ಯಾಲ್​ಗಳಲ್ಲಿ ಮ್ಯಾಥ್​ಮಟಿಕ್ಸ್, ಲಾಜಿಕ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳನ್ನು ಹೊಂದಿತ್ತು.

ರಾಖಿ ಗಣಿತಶಾಸ್ತ್ರವನ್ನು ಬೇರೆ ಬೇರೆ ಹಂತಗಳ ಕಾರ್ಯ ವಿಧಾನಗಳಿಂದ ಪರಿಚಯ ಮಾಡಿಕೊಡಲು ಯೋಜಿಸಿದರು. ವಿಶ್ಯುವಲ್, ಟೆಕ್ಟೈಲ್ ಹಾಗೂ ಪ್ರಯೋಗಾತ್ಮಕ ಮಾದರಿಯ ವಿಧಾನಗಳಿಂದ ಇದನ್ನು ಸರಳೀಕರಿಸುವ ಪ್ರಯತ್ನಕ್ಕೆ ರಾಖಿ ಮುಂದಾದರು. 2013ರ ಕೊನೆಯಲ್ಲಿ 5ರಿಂದ 13ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಈ ವಿಧಾನಗಳಿಂದ ಗಣಿತ ಕಲಿಸುವ ಪ್ರತ್ಯೇಕ ಅಧ್ಯಾಯ ರಚಿಸಿದ್ದರು. ತಮ್ಮ ಮಗನನ್ನೇ ಈ ಪ್ರಯೋಗಕ್ಕೆ ಒಳಪಡಿಸಿದ ರಾಖಿ, ಸರಳವಾದ ಕಲಿಕೆಯ ವ್ಯವಸ್ಥೆ ಹೇಗೆ ತಮ್ಮ ಮಗನಂತಹ ಕಲಿಯಲು ಆರಂಭಿಸಿದ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಅನ್ನುವ ಬಗ್ಗೆ ಸಂಶೋಧಿಸಿ, ಅಧ್ಯಯನ ನಡೆಸಿ, ಹಲವು ಪ್ರಯೋಗಗಳ ಮೂಲಕ ಕಾರ್ಯರೂಪಕ್ಕೆ ತಂದರು.

ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದ ರಾಖಿಯ ವಿಭಿನ್ನ ಹಾಗೂ ಕ್ರಿಯಾಶೀಲ ಪ್ರಯೋಗ:

ಆಗ್ರಾದಲ್ಲಿ ತಮ್ಮ ಬಿಎಸ್ಸಿ ಹಾಗೂ ಎಂಎಸ್ಸಿ ಕಲಿಕೆಯನ್ನು ಗಣಿತಶಾಸ್ತ್ರದಲ್ಲೇ ಕಲಿತಿದ್ದ ರಾಖಿ, ತಮ್ಮ ಕಾಲೇಜು ದಿನಗಳಲ್ಲೆ ಎಂಟಿಟಿಎಸ್(ಮ್ಯಾಥಮಟಿಕ್ಸ್ ತರಗತಿ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮ)ಗೆ ಆಯ್ಕೆ ಯಾಗಿದ್ದರು. ಮುಂಬೈ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಹಾಗೂ ಐಐಟಿ ಮುಂಬೈನಲ್ಲಿ ನಡೆದ ಕಾರ್ಯಾಗಾರದಲ್ಲಿ ಸುಮಾರು ಒಂದು ತಿಂಗಳ ಕಾಲ ಭಾರತದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ರಾಖಿ ಭಾಗವಹಿಸಿದ್ದರು.

ಮನೆಯನ್ನು ಬಿಟ್ಟು ನಗರದಿಂದ ಅದೇ ಮೊದಲ ಬಾರಿಗೆ ಹೊರಗೆ ಹೋಗಿದ್ದ ರಾಖಿ ತಮ್ಮ ಆಗಿನ ಅನುಭವಗಳು ಹಾಗೂ ಅವರ ತಾಯಿ ಅತ್ತಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಆದರೆ ಅಂದು ತೆಗೆದುಕೊಂಡ ಆ ನಿರ್ಧಾರ ಗಣಿತಶಾಸ್ತ್ರದಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿತು ಪ್ರಾವಿಣ್ಯ ಸಾಧಿಸಲು ಅವರಿಗೆ ನೆರವಾಯ್ತು. ಅದಾದ ಬಳಿಕ ರಾಖಿ ಸಂಶೋಧನಾ ಪ್ರಾಜೆಕ್ಟ್ ಒಂದರ ಮೇಲೆ ಕೆಲಸ ಮಾಡಲು ಕಾನ್ಪುರದ ಐಐಟಿ ಸೇರಿದರು. ಬಳಿಕ ಎಂ-ಟೆಕ್ ಮುಗಿಸಿದರು ಜೊತೆಗೇ ಗೇಟ್ ಪ್ರವೇಶ ಪರೀಕ್ಷೆಗೆ ಸಿದ್ಧರಾಗತೊಡಗಿದರು. ಆನ್​​ಲೈನ್​​​ ತರಬೇತಿ ಹಾಗೂ ಕಲಿಕಾ ಕೇಂದ್ರಗಳಲ್ಲಿ ಪಡೆದುಕೊಂಡ ತರಬೇತಿಯ ಕಾರಣ ಕಠಿಣ ಪರಿಶ್ರಮದೊಂದಿಗೆ ಓದಿ ಗೇಟ್ ಪರೀಕ್ಷೆಯನ್ನು ಉತ್ತಮ ದರ್ಜೆಯಲ್ಲಿಯೇ ಬರೆದಿದ್ದರು. ಫಲವಾಗಿ ಆಲ್ ಇಂಡಿಯಾ ಶ್ರೇಯಾಂಕದಲ್ಲಿ ಅವರಿಗೆ 66 ನೇ ಗ್ರೇಡ್ ಲಭಿಸಿತ್ತು.

ಎಜು3ಡಿಯ ಯೋಜನೆ ಹಾಗೂ ಕಾರ್ಯಕ್ರಮ:

ಈ ಎಜು3ಡಿ ಸಮಸ್ಥೆಯಲ್ಲಿ ಮಕ್ಕಳನ್ನು ಒಟ್ಟುಗೂಡಿಸಿವುದು ಗ್ರೇಡ್​​ಗಳಿಂದ ಅಥವಾ ವಯೋಮಾನದ ಮಾನದಂಡದಿಂದಲ್ಲ. ಬದಲಿಗೆ ಮಕ್ಕಳಲ್ಲಿರುವ ಸಮಾನ ಆಸಕ್ತಿ, ಸಾಮರ್ಥ್ಯ ಹಾಗೂ ಕಲಿಯುವ ಉತ್ಸಾಹಗಳಿಂದ ಅನ್ನುತ್ತಾರೆ ರಾಖಿ. ಬೇರೆ ಬೇರೆ ಮಕ್ಕಳು ಬೇರೆ ಬೇರೆ ವಿಷಯಗಳಲ್ಲಿ ಸಾಮರ್ಥ್ಯ ಹೊಂದಿರುತ್ತಾರೆ. ಎಲ್ಲರಿಂದಲೂ ಸಮಾನ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಮಗುವಿನ ಪ್ರಾಥಮಿಕ ಬುದ್ದಿಮತ್ತೆ ಪರೀಕ್ಷಿಸಲು ಎಂಟ್ರೆನ್ಸ್ ಟೆಸ್ಟ್ ಇಟ್ಟಿದ್ದೇವೆ. ಇದರಲ್ಲಿ ಆ ಮಗು ಗಣಿತದ ಕಲಿಕೆಯನ್ನು ಹೇಗೆ ಕಲಿಯುತ್ತದೆ ಅನ್ನುವುದು ಗೊತ್ತಾಗುತ್ತದೆ. ಇಲ್ಲಿ ನಮಗೆ ಅಚ್ಚರಿಯಾಗುವ ಸತ್ಯ ಎಂದರೆ ಈ 2 ವರ್ಷದಲ್ಲಿ ಸುಮಾರು 50 ಟೆಸ್ಟ್​​ಗಳನ್ನು ನಡೆಸಿದ್ದೇವೆ. ಆದರೆ ತಮ್ಮ ತರಗತಿ ಹಂತವನ್ನು ದಾಟುವ ಸಾಮರ್ಥ್ಯ ತೋರಿದ್ದು ಕೇವಲ ಶೇ 4 ರಷ್ಟು ಮಕ್ಕಳು ಮಾತ್ರ. ಸರಾಸರಿ ಪಡೆದ ಅಂಕ 3.5 ಎಂದು ಮಾಹಿತಿ ನೀಡಿದ್ದಾರೆ ರಾಖಿ.

ಹೀಗಾಗಿ ನಿಧಾನವಾಗಿ ಆ ವಿದ್ಯಾರ್ಥಿಗಳಿಗೆ ಒಂದಾದ ನಂತರ ಒಂದೊಂದು ಪಾಠಗಳನ್ನು ಸರಳವಾಗಿ ಹೇಳಿಕೊಡಲಾಗುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥಮಾಡಿಸಿ ಪ್ರಾಥಮಿಕ ಹಂತಗಳ ಕಲಿಕೆಯ ನಂತರವಷ್ಟೇ ಗಣಿತದ ಮೂಲಭೂತ ವಿಷಯಗಳನ್ನು ಆರಂಭಿಸಲಾಗುತ್ತಿದೆ. ಇದು ಸಾಕಷ್ಟು ಸಮಯ ತೆಗೆದುಕೊಂಡರೂ ಅತ್ಯುತ್ತಮ ಫಲಿತಾಂಶ ನೀಡುತ್ತಿದೆ. ಸಮಸ್ಥೆ ಇತ್ತೀಚೆಗಷ್ಟೆ ತರಗತಿಯ ಸಂಸ್ಕ್ರತಿಯನ್ನು ಬದಲಾಯಿಸಿ ಹೊಸ ವಿಧಾನದಲ್ಲಿ ಕ್ಲಾಸ್ ರೂಂ ಆರಂಭಿಸಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಚಾರಕ್ಕೆ ಸಂಬಂಧಪಟ್ಟ ವೀಡಿಯೋ ಪರಿಶೀಲಿಸಿ ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಿಡಿಸುವುದು, ತರ್ಕಿಸುವುದು ಹಾಗೂ ಚರ್ಚಿಸುವುದನ್ನು ನಡೆಸುತ್ತಿದ್ದಾರೆ. ಇದರಿಂದ ಅವರಲ್ಲಿ ಯೋಚಿಸುವ ಹಾಗೂ ವಿಷಯಕ್ಕೆ ಸಂಬಧಂಪಟ್ಟಂಥೆ ಹೆಚ್ಚು ತೊಡಗಿಸಿಕೊಳ್ಳುವ ಗುಣ ಹೆಚ್ಚಾಗುತ್ತಿದೆ.

ಸವಾಲುಗಳು ಹಾಗೂ ನೆರವು:

ರಾಖಿಯವರ ಮುಂದಿನ ಅತಿ ದೊಡ್ಡ ಸವಾಲೆಂದರೆ, ಎಜು3ಡಿ ಸಂಸ್ಥೆಯ ಹೊಸ ವಿಧಾನದ ಅನ್ವಯ ಮಕ್ಕಳಿಗೆ ಕಲಿಸುವ ವಿಚಾರದಲ್ಲಿ ಪೋಷಕರನ್ನು ಒಪ್ಪಿಸುವುದು. ಈಗಾಗಲೆ ಎಜು3ಡಿ ನಗರದ ವಿದ್ಯಾರ್ಥಿಗಳಿಗಾಗಿ ಕೋಡಿಂಗ್ ಅನ್ನು ಪರಿಚಯಿಸಿದೆ.

ತಮ್ಮ ವೃತ್ತಿ ತೊರೆದು ಶೈಕ್ಷಣಿಕ ಸಂಬಂಧಿ ಉದ್ಯಮ ಆರಂಭಿಸುತ್ತೇನೆ ಅಂದಾಗ ಮನೆಯವರಿಂದ ಸಾಕಷ್ಟು ನೆರವು ಸಿಕ್ಕಿತು. ನಿತ್ಯ 20 ಗಂಟೆಗಳ ಕಾಲ ಪರಿಶ್ರಮಪಡುತ್ತಿದ್ದಾಗಲೂ ಮನೆಯವರು, ಸ್ನೇಹಿತರು ಬೆಂಬಲ ನೀಡಿದರು. ತಮ್ಮ ಸಂಸ್ಥೆಯ ತಂಡಕ್ಕೆ, 6 ವರ್ಷದ ಮಗ ಹಾಗೂ ಪತಿಯಿಂದಲೂ ಯೋಗ್ಯ ಸಹಕಾರ ಸಿಗುತ್ತಿದೆ. ಇದೇ ಕಾರಣದಿಂದ ಇಂದು ಎಜು3ಡಿ ಸಂಸ್ಥೆ ನಿಧಾನವಾಗಿ ತಲೆ ಎತ್ತಿ ನಿಲ್ಲತೊಡಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ರಾಖಿ.