ಶಿಕ್ಷಣ ಜಗತ್ತಿಗೆ ಡಾ.ರಾಜ್ ಫ್ಯಾಮಿಲಿ- ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹೊಸ ಕನಸು

ಟೀಮ್​ ವೈ.ಎಸ್​.ಕನ್ನಡ

ಶಿಕ್ಷಣ ಜಗತ್ತಿಗೆ ಡಾ.ರಾಜ್ ಫ್ಯಾಮಿಲಿ- ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹೊಸ ಕನಸು

Tuesday February 14, 2017,

2 min Read

ಸಿನೆಮಾ ಜಗತ್ತಿನಲ್ಲಿ ಡಾ. ರಾಜ್​ಕುಮಾರ್​ ಹೆಸರು ಅಜರಾಮರ. ಎಲ್ಲಾ ನಟರಿಗೂ ಅಣ್ಣಾವ್ರು ಮಾದರಿ ವ್ಯಕ್ತಿ. ನಟನೆಯಿಂದ ಹಿಡಿದು ಸಾಮಾಜಿಕ ಕಳಕಳಿಯ ತನಕ ಡಾ. ರಾಜ್​​ ಇಟ್ಟಿದ್ದೇ ಹೆಜ್ಜೆ. ವರನ ನಟನ ಹೆಸರಿನಲ್ಲಿ ಅದೆಷ್ಟೋ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಮಾಜದ ಒಳಿತಿಗಾಗಿ ಸಾಕಷ್ಟು ಜನರು ಶ್ರಮಿಸುತ್ತಿದ್ದಾರೆ. ಆದ್ರೆ ಈಗ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರು ಮಿಂಚಬೇಕು ಅನ್ನುವ ಕನಸಿನೊಂದಿಗೆ ಡಾ. ರಾಜ್​ಕುಮಾರ್​ ಕುಟುಂಬದವರು ಐಎಸ್​ಎಸ್​ ಆಕಾಂಕ್ಷಿಗಳ ನೆರವಿಗೆ ನಿಂತಿದ್ದಾರೆ.

image


ಡಾ. ರಾಜ್ ಅಂದ್ರೆ ಅಭಿನಯಕ್ಕೆ ಮಾತ್ರ ಸೀಮಿತವಲ್ಲದೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಹೆಸರನ್ನ ಚಿರಪರಿಚಿತ ಮಾಡಿದಂತ ವ್ಯಕ್ತಿ. ಇದೀಗ ಡಾ.ರಾಜ್ ಕುಮಾರ್ ಹೆಸರು ಶಿಕ್ಷಣ ಕ್ಷೆತ್ರದಲ್ಲಿ ಹೊಸ ಹೆಸರು ಬರೆಯಲು ಮುಂದಾಗಿದೆ. ಈಗಾಗಲೇ ತಿಳಿದಿರುವಂತೆ ಡಾ. ರಾಜ್ ಕುಮಾರ್ ಅನೇಕ ಮಕ್ಕಳ ಪಠ್ಯ ಪುಸ್ತಕವಾಗಿದ್ದಾರೆ. ಇಷ್ಟೆಲ್ಲ ಜನಮನ್ನಣೆ ಪಡೆದಿರುವ ರಾಜ್ ಎಂದಿಗೂ ಜೀವಂತ. ಅವರ ಹೆಸರಲ್ಲಿ ಮತ್ತಷ್ಟು ಜೀವನಡೆಸಬೇಕು ,ಅದು ಸಾರ್ಥಕವಾಗಬೇಕು ಅನ್ನೋ ನಿಟ್ಟಿನಲ್ಲಿ ವರನಟನ ಕುಟುಂಬದಿಂದ ವಿದ್ಯಾರ್ಥಿಗಳಿಗಾಗಿ ಐಎಎಸ್ ತರಬೇತಿ ಕೇಂದ್ರಗಳು ಪ್ರಾರಂಭವಾಗಿದೆ.

ಇದನ್ನು ಓದಿ: ಆಮೆಗಳನ್ನು ಉಳಿಸಿ- ಇದು ನೌಕಾದಳದ ಅಭಿಯಾನ..!

ಐಎಎಸ್ ಆಕಾಂಕ್ಷಿಗಳಿಗೆ ವಿನೂತನ ಕೊಡುಗೆ

ಕರ್ನಾಟಕದ ಗ್ರಾಮೀಣ ಭಾಗದ ರೈತರು ಮತ್ತು ಕಾರ್ಮಿಕ ವರ್ಗದ ಬಡ ಮಕ್ಕಳು ಸಿವಿಲ್ ಸರ್ವೀಸ್ ಮತ್ತು ಯುಪಿಎಸ್​​ಸಿ ಪರೀಕ್ಷೆ ತರಬೇತಿಗೆಂದು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಅಲ್ಲಿ ದುಂದು ವೆಚ್ಚ ಮಾಡಿ ತರಬೇತಿ ಪಡೆಯುವುದರ ಜೊತೆಗೆ ನಾನಾ ತರಹದ ಅನಾನುಕೂಲಗಳನ್ನು ಎದುರಿಸುತ್ತಿದ್ದಾರೆ. ಇಂತಹ ಹಲವು ಅಂಶಗಳನ್ನು ಗಮನಿಸಿ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಕುಟುಂಬದವರು, ಕಡಿಮೆ ದರದಲ್ಲಿ ಕನ್ನಡಿಗರಿಗೆ ಗುಣಮಟ್ಟದ ತರಬೇತಿ ನೀಡಲು 'ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್' ಎಂಬ ಸಂಸ್ಥೆಯನ್ನು ತೆರೆದಿದ್ದಾರೆ. ಈಗಾಗಗಲೇ ರಾಜ್ಯದ ಮೂಲೆ ಮೂಲೆಯಲ್ಲಿ ಸಂದರ್ಶನ ಮಾಡಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ತರಬೇತಿಗಳಷ್ಟೇ ಬಾಕಿ ಉಳಿದಿದೆ.

ತರಬೇತಿ ಯಾರಿಂದ ಸಿಗಲಿದೆ? ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ

ಡಾ.ರಾಜ್ ಕುಮಾರ್ ಕುಟುಂಬದವರು ತೆರೆದಿರುವ 'ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್' ಸಂಸ್ಥೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಯುಪಿಎಸ್​ಸಿಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿಗಳಾಗಿ ಬಂದು ಮಾರ್ಗದರ್ಶನ ನೀಡಲಿದ್ದಾರೆ. ಈ ಮೂಲಕ ಕ್ವಾಲಿಟಿ ಟ್ರೈನಿಂಗ್​​ ಐಎಎಸ್​ ಮತ್ತು ಐಪಿಎಸ್​ ಆಕಾಂಕ್ಷಿಗಳಿಗೆ ಸಿಗಲಿದೆ. 

'ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್' ಸಂಸ್ಥೆ ಉದ್ದೇಶ

ದೊಡ್ಮನೆ ಸಂಸ್ಥೆಯಿಂದ ವರನಟ ಡಾ.ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ ಐಎಎಸ್ ತರಬೇತಿ ಸಂಸ್ಥೆ ತೆರೆದಿರುವುದು ಸಾವಿರಾರು ಐಎಎಸ್ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಆಗಬೇಕು ಎಂಬುದೇ ಅಕಾಡೆಮಿಯ ಉದ್ದೇಶವಾಗಿದೆ. ಪ್ರತಿ ಐದು ಅಭ್ಯರ್ಥಿಗಳಿಗೆ ಮೆಂಟರ್​ಶಿಪ್ ಸೇವೆ, 24*7 ಗ್ರಂಥಾಲಯ ವ್ಯವಸ್ಥೆ, ಯುಪಿಎಸ್​ಸಿ ಪರೀಕ್ಷೆ ಗಳಿಗೆ ಸಬಂಧಪಟ್ಟ ಎಲ್ಲಾ ರೀತಿಯ ಸ್ಟಡಿ ಮೆಟೀರಿಯಲ್​ಗಳು ಅಕಾಡೆಮಿಯಲ್ಲಿ ಲಭ್ಯವಿರಲಿದೆ. ಇದನ್ನು ಬಳಸಿಕೊಂಡು ಅಭ್ಯರ್ಥಿಗಳು ಉನ್ನತ ಸಾಧನೆ ಕೂಡ ಮಾಡಬಹುದು.

image


ಬೆಂಗಳೂರಿಗರಿಗೂ ತರಬೇತಿ ಲಭ್ಯ

ಕಡಿಮೆ ದರದಲ್ಲಿ ಯುಪಿಎಸ್​ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅವಕಾಶವಿರುವ 'ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್' ಸಂಸ್ಥೆ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರವಿದೆ. ಈ ತಿಂಗಳಿಂದ ಅಡ್ಮಿಷನ್ ಪ್ರಾರಂಭವಾಗುತ್ತಿದೆ. ಫೆಬ್ರವರಿ ಮೂರನೇ ವಾರದಿಂದ ತರಗತಿಗಳು ಪ್ರಾರಂಭವಾಗುವ ಸಾಧ್ಯತೆಗಳಿವೆ . ಒಟ್ಟಿನಲ್ಲಿ ಡಾ. ರಾಜ್​ ಕುಟುಂಬ ಸಿನೆಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಸಮಾಜ ಸೇವೆಯಲ್ಲೂ ಗಮನ ಸೆಳೆಯುವಂತಹ ಕೆಲಸಗಳನ್ನು ಮಾಡುತ್ತಿದೆ.

ಇದನ್ನು ಓದಿ:

1. ದುಬಾರಿ ಗಿಫ್ಟ್​​ಗಳನ್ನು ತಯಾರಿಸಿ ಲಾಭದಾಯಕ ಉದ್ಯಮ ಸ್ಥಾಪಿಸಿದ ಮಹಿಳಾಮಣಿಗಳು..!

2. ಮಹಿಳೆಯರ ಒಳಿತಾಗಿ ಎದ್ದು ನಿಂತ ನಾರಿಯರು- "ಸ್ಕಿಲ್ ಶ್ರೀ"ನಿಂದ ಹೆಣ್ಣುಮಕ್ಕಳ ಜೀವನಕ್ಕೆ ಶ್ರೀಕಾರ 

3. ಮಕ್ಕಳಿಗಾಗಿ ಬಂತು ಬ್ಯೂಟಿ ಪಾರ್ಲರ್​- ಮೇಕ್​ಓವರ್​ ಜೊತೆಗೆ ಮಸ್ತಿ ಗ್ಯಾರೆಂಟಿ..!