ನಮ್ಮ ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರಿಗೆ ಸೂಕ್ತ ವೈದ್ಯೋಪಚಾರ ಸಿಗ್ತಿಲ್ಲ..!

ಟೀಮ್​ ವೈ.ಎಸ್​. ಕನ್ನಡ

ನಮ್ಮ ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರಿಗೆ ಸೂಕ್ತ ವೈದ್ಯೋಪಚಾರ ಸಿಗ್ತಿಲ್ಲ..!

Thursday December 24, 2015,

1 min Read

ಭಾರತ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. ನಗರ ಪ್ರದೇಶಗಳಲ್ಲಿ ಅತ್ಯಾಧುನಿಕ ಆರೋಗ್ಯ ಸಂಬಂಧಿತ ಸೇವೆಗಳು ಲಭ್ಯವಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ತೀರ ಭಿನ್ನವಾಗಿದೆ. ಈಗಲೂ ಸೂಕ್ತ ಸೌಲಭ್ಯಗಳು ಮರೀಚಿಕೆಯಾಗಿವೆ. ಇದು ಮುಖ್ಯವಾಗಿ ಗರ್ಭಿಣಿಯರ ಆರೋಗ್ಯ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ.

ಅಧ್ಯಯನ ವೊಂದರಲ್ಲಿ ಅತ್ಯಂತ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಅರಿವು ಇಲ್ಲದಿರುವುದು, ಪೌಷ್ಟಿಂಕಾಶದ ಕೊರತೆಯಿಂದ ಬಳಲುತ್ತಿರುವುದು ಪತ್ತೆಹಚ್ಚಲಾಗಿದೆ. ಯಾಕೆ ಹೀಗೆ ಎಂಬ ಪ್ರಶ್ನೆ ಅರಸಿ ಹೊರಟರೆ , ದೊರಕುವ ಉತ್ತರ ಅಜ್ಞಾನ, ತಿಳುವಳಿಕೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ.

ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ 135. ವಿಶ್ವದ 147 ರಾಷ್ಟ್ರಗಳ ಪೈಕಿ ಮಹಿಳಾ ಸಬಲೀಕರಣ ವಿಷಯ ಬಂದರೆ ಭಾರತಕ್ಕೆ ದೊರೆತಿರುವುದು 135ನೇ ಸ್ಥಾನ. ಸಂಸತ್ತಿನಲ್ಲಿಯೇ ಇದನ್ನು ಸ್ಪಷ್ಟಪಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ಸಂಸತ್ತಿಗೆ ಈ ಮಾಹಿತಿ ನೀಡಿದ್ದಾರೆ.

image


ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು- 2015ರ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ವರದಿ, ಇನ್ನಷ್ಟು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಮುಖ್ಯವಾಗಿ ಮಹಿಳೆಯರು ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು ಎದುರಿಸುತ್ತಿರುವ ಸವಾಲು ಮತ್ತು ಸಂಕಷ್ಟಗಳ ಬಗ್ಗೆ ಈ ವರದಿ ಬೆಳಕು ಚೆಲ್ಲಿದೆ. ಗರ್ಭಿಣಿಯರ ಪೈಕಿ ದೇಶದ ಶೇಕಡಾ 80 ಮಂದಿಗೆ ಸೂಕ್ತ ವೈದ್ಯಕೀಯ ನೆರವು ದೊರೆಯುತ್ತಿಲ್ಲ ಎಂಬುದು ಕಳವಳಕಾರಿಯಾದ ವಿದ್ಯಮಾನವಾಗಿದೆ.

ಮಕ್ಕಳ ಕುರಿತಾದ ಶೀರ್ಘ ವರದಿ - 2013ರ ಪ್ರಕಾರ ಕಬ್ಬಿಣದ ಅಂಶ ಇರುವ ಮಾತ್ರೆಗಳು ಹಾಗೂ ಅಗತ್ಯ ಔಷಧಿಗಳು ಶೇಕಡಾ 19.7 ಜನರಿಗೆ ಮಾತ್ರ ತಲುಪಿದೆ. ಇದರ ಪ್ರಕಾರ ಶೇಕಡಾ 80 ಮಂದಿ ಗರ್ಭಿಣಿಯರು ಇದರಿಂದ ವಂಚಿತರಾಗಿದ್ದಾರೆ. ಇದು ಸಮೀಕ್ಷೆ ಬಹಿರಂಗ ಪಡಿಸಿದ ಮಾಹಿತಿ.

ಔಷಧಿ ದೊರೆಯದಿರುವುದು, ಅನಕ್ಷರತೆ , ಅಜ್ಞಾನ ಮತ್ತು ಸಾಮಾಜಿಕ ಕಟ್ಟುಪಾಡು ಈ ಎಲ್ಲ ಅಂಶಗಳು ಗರ್ಭಿಣಿಯರನ್ನು ಅಗತ್ಯ ಇರುವ ಔಷಧಿಗಳಿಂದ ದೂರ ಇರುವಂತೆ ಮಾಡಿದೆ. ಇದು ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಸಮಾಜ ತಕ್ಷಣ ಈ ಬಗ್ಗೆ ಗಮನ ಹರಿಸಬೇಕಿದೆ.

ಅನುವಾದಕರು: ಎಸ್​.ಡಿ