ವರ್ಷಕ್ಕೆ 1 ಕೋಟಿ ರೂಪಾಯಿ ಆದಾಯ ತಂದು ತರುವ ಕೋಣ

ನಿನಾದ

ವರ್ಷಕ್ಕೆ 1 ಕೋಟಿ ರೂಪಾಯಿ ಆದಾಯ ತಂದು ತರುವ ಕೋಣ

Tuesday December 01, 2015,

2 min Read

ನಾವು ಕಥೆಗಳಲ್ಲಿ ಬೇಡಿದ್ದನ್ನು ಕೊಡುವ ಕಾಮಧೇನುವಿನ ಬಗ್ಗೆ ಕೇಳಿದ್ದೇವೆ. ಚಿನ್ನದ ಮೊಟ್ಟೆ ಇಡುವ ಕೋಳಿ ಬಗ್ಗೆಯೂ ಕೇಳಿದ್ದೇವೆ.ಆದ್ರೆ ಒಂದು ಕೋಣ ವರ್ಷಕ್ಕೆ ಕೋಟಿ ರೂಪಾಯಿ ಆದಾಯ ತಂದು ಕೊಡುತ್ತೆ ಅಂದ್ರೆ ನಂಬ್ತೀರಾ. ನಂಬೋದು ಅಸಾಧ್ಯವಾದ್ರೂ ಇದು ನಿಜವೇ...

image


ಹರ್ಯಾಣ ಚಂಡೀಗಢದ ಸನಾರಿಯಾ ಗ್ರಾಮದಲ್ಲಿರುವ ರೈತ ಕರಮ್ ವೀರ್ ಸಿಂಗ್ ಎಂಬವರ ಕೋಣ ಕರಮ್ ವೀರ್ ಸಿಂಗ್ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅವರ ಕೋಣ ಯುವರಾಜ ಪ್ರತಿ ವರ್ಷ ಕರಮ್ ವೀರ್ ಗೆ 80 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಯವರೆಗೆ ಆದಾಯ ತಂದು ಕೊಡುತ್ತೆ. ಮುರ್ರಾ ತಳಿಯ ಯುವರಾಜನನ್ನು ಕರಮ್ ವೀರ್ ರಾಜನಂತೆ ನೋಡಿಕೊಳ್ಳುತ್ತಿದ್ದಾರೆ. ದಿನವೊಂದಕ್ಕೆ ಯುವರಾಜನಿಗೆ 20 ಲೀಟರ್ ಹಾಲು, ಐದು ಕೆ.ಜಿ. ಸೇಬು, ಮತ್ತು ಉತ್ತಮ ಗುಣಮಟ್ಟದ ಹದಿನೈದು ಕೆ.ಜಿ ಪಶು ಆಹಾರವನ್ನು ನೀಡುತ್ತಾರೆ. ಜೊತೆಗೆ 4 ರಿಂ0 5 ಲೀಟರ್ ನೀರು ಕುಡಿಯುತ್ತಾನೆ. ಬಳಿಕ ನಾಲ್ಕೈದು ಕಿಲೋ ಮೀಟರ್ ವಾಕಿಂಗ್ ಕೂಡ ಮಾಡಿಸುತ್ತಾರೆ. ಇನ್ನು ಇಷ್ಟೆಲ್ಲಾ ತಿಂದು, ಕುಡಿದ ಮೇಲೆ ಯುವರಾಜ ಹೇಗಿರಬೇಡ ಹೇಳಿ. ಯುವರಾಜ ಬರೋಬ್ಬರಿ 14 ಅಡಿ ಉದ್ದ, 5.9 ಅಡಿ ಎತ್ತರ, 1400 ಕೆ.ಜಿ ತೂಕವಿದ್ದಾನೆ.

image


ಅಂದ್ಹಾಗೆ ಕರಮ್ ವೀರ್ ಗೆ ಯುವರಾಜ ಇಷ್ಟೊಂದು ಆದಾಯ ಹೇಗೆ ತಂದು ಕೊಡುತ್ತಾನೆ ಅಂತಾ ನಿಮಗೆಲ್ಲಾ ಪ್ರಶ್ನೆ ಮೂಡಬಹುದು. ಕರಮ್ ವೀರ್ ಗೆ ಆದಾಯ ತಂದು ಕೊಡುತ್ತಿರೋದು ಕೋಣದ ವೀರ್ಯವಂತೆ. ಕೋಣದ ವೀರ್ಯ ಮಾರಾಟದಿಂದಲೇ ಕರಮ್ ವೀರ್ ಗೆ ದಿನಕ್ಕೆ 2 ಲಕ್ಷ ರೂಪಾಯಿ ಆದಾಯ ಬರುತ್ತೆ. ಕೃತಕ ಸಂತಾನೋತ್ಪತ್ತಿಗೂ ಇದೇ ವೀರ್ಯವನ್ನು ಬಳಸಲಾಗುತ್ತಿದೆ. ಪ್ರತಿದಿನ ಯುವರಾಜನಿಂದ ಮೂರರಿಂದ ಐದು ಮಿಲಿ ಲೀಟರ್ ನಷ್ಟು ವೀರ್ಯ ಸಂಗ್ರಹಿಸಲಾಗುತ್ತೆ. ಅದನ್ನು ತೆಳ್ಳಗೆ ಮಾಡಿದಾಗ 35 ಮಿಲಿಲೀಟರ್​​​ ವೀರ್ಯ ದೊರಕುತ್ತದೆ. ಯುವರಾಜನ ಒಂದು ಮಿ.ಲೀ. ವೀರ್ಯಕ್ಕೆ ಆರು ಸಾವಿರ ರೂಪಾಯಿ ಬೆಲೆಯಿದೆ. ಹೀಗಾಗಿ ಕೋಣದ ವೀರ್ಯದಿಂದಲೇ ಕರಮ್ ವೀರ್ ಗೆ ದಿನವೊಂದಕ್ಕೆ 2 ಲಕ್ಷ ರೂಪಾಯಿ ಆದಾಯ ಬರುತ್ತೆ.

ಇನ್ನು 2011ರಲ್ಲಿ ಮೊದಲ ಬಾರಿಗೆ ಕರಮ್ ವೀರ್ ತನ್ನ ಕೋಣದ ವೀರ್ಯ ಮಾರಾಟ ಮಾಡಿದಾಗ ಅದರ ಬೆಲೆ ಒಂದು ಮಿ.ಲೀಗೆ ಕೇವಲ 300 ರೂಪಾಯಿಯಿತ್ತಂತೆ. ಆದ್ರೀಗ ಅದು ಆರು ಸಾವಿರ ರೂಪಾಯಿಗೇರಿದೆ.ಇನ್ನು ಒಂದು ವರ್ಷದಲ್ಲಿ ಈ ಕೋಣದ ವೀರ್ಯದಿಂದ 50 ಕರುಗಳನ್ನು ಪಡೆಯಲಾಗುತ್ತಿದೆಯಂತೆ. ಯುವರಾನನ ವೀರ್ಯಕ್ಕೆ ಉತ್ತರಭಾರತದಾದ್ಯಂತ ಭಾರೀ ಬೇಡಿಕೆಯಿದೆಯಂತೆ.ಅಲ್ಲದೇ ಅಳಿವಿನಂಚಿನಲ್ಲಿರುವ ಮುರ್ರಾ ತಳಿಯನ್ನು ಉಳಿಸುವಲ್ಲಿ ಯುವರಾಜ ಮಹತ್ವದ ಕೊಡುಗೆ ನೀಡುತ್ತಿದ್ದಾನಂತೆ.

ಯುವರಾಜನಂತೆ ಆತನ ತಾಯಿ ಸರಸ್ವತಿ ಕೂಡ ಮಾಲೀಕನಿಗೆ ಭರ್ಜರಿ ಆದಾಯ ತಂದುಕೊಡುತ್ತಿದ್ದಳಂತೆ. ದಿನಕ್ಕೆ 27ಲೀಟರ್ ಹಾಲು ನೀಡುತ್ತಿದ್ದಳಂತೆ. ಇನ್ನು ಇತ್ತೀಚೆಗೆ ರಾಜಸ್ಥಾನದ ಮೇರಠ್ ನಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಎಮ್ಮೆಗಳ ಪ್ರದರ್ಶನದಲ್ಲಿ ಯುವರಾಜ ಚಾಂಪಿಯನ್ ಆಗಿದ್ದ. ಅಲ್ಲದೇ ಹಿಂದೆ ಕರ್ನಾಲ್‌ನಲ್ಲಿ ನಡೆದ ಪ್ರದರ್ಶನದಲ್ಲಿಯೂ ಯುವರಾಜ 24 ಸಾವಿರ ರೂಪಾಯಿ ಮತ್ತು ಹಿನಾರ್‌ನಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ 16 ಸಾವಿರ ರೂಪಾಯಿಗಳ ಬಹುಮಾನ ಗೆದ್ದಿದ್ದ.

image


ಈಗಾಗಲೇ ದೇಶಾದ್ಯಂತ ಹೆಸರು ಮಾಡಿರುವ ಯುವರಾಜನನ್ನು ಇತ್ತೀಚೆಗೆ ಚಂಡೀಗಢದ ರೈತರೊಬ್ಬರು 7 ಕೋಟಿ ರೂಪಾಯಿ ನೀಡಿ ಖರೀದಿಸಲು ಮುಂದೆ ಬಂದಿದ್ದರು. ಆದರೆ ಕರಮ್ ವೀರ್ ಮಾತ್ರ ನಾನು ನೂರು ಕೋಟಿ ಕೊಟ್ಟರೂ ಯುವರಾಜನನ್ನು ಯಾರಿಗೂ ಮಾರಾಟ ಮಾಡಲ್ಲ ಅಂದ್ರಂತೆ. ಕೆಲ ವರ್ಷಗಳ ಹಿಂದೆ ಕರಣ್ ವೀರ್ ಯುವರಾಜನನ್ನು ಖರೀದಿಸುವಾಗ 50 ಲಕ್ಷ ರೂಪಾಯಿ ನೀಡಿದ್ದರಂತೆ. ಆದ್ರೀಗ ಯುವರಾಜನ ಬೆಲೆ ಕೋಟ್ಯಂತರ ರೂಪಾಯಿಯಾಗಿದೆ. ಜೊತೆಗೆ ದಿನದಿಂದ ದಿನಕ್ಕೆ ಕರಮ್ ವೀರ್ ಆದಾಯನೂ ಹೆಚ್ಚಾಗಿದೆ. ಕೆಲ ರೈತರಂತೂ ನಮಗೂ ಯುವರಾಜನಂತಹ ಕೋಣ ಸಿಕ್ಕಿದ್ರೆ ಎಷ್ಟು ಚೆನ್ನಾಗಿರುತ್ತಲ್ವಾ ಅಂತಾ ಲೆಕ್ಕಾಚಾರ ಹಾಕುತ್ತಿದ್ದಾರಂತೆ.