ಮೋದಿ ಗೆಲುವಿನ ಸೂತ್ರಧಾರನೇ ನಿತೀಶ್ ಗೆಲುವಿಗೆ ಕಾರಣ..!

ಉಷಾ ಹರೀಶ್​​

0

ಗೇಮ್​​ಪ್ಲಾನ್​​ ಅನ್ನೋದು ಎಲ್ಲಾ ಕಡೆಯೂ ಅತಿ ಮುಖ್ಯವಾದದ್ದು. ಮೈದಾನದಲ್ಲಿ ಆಟ ಆಡುವಾಗ ಇರಬಹುದು ಅಥವಾ ಕೆಲವನ್ನು ಮಾಡುವಾಗಲೇ ಇರಬಹುದು ಎಲ್ಲಾ ಕಡೆಯೂ ಪ್ಲಾನ್​​ ಅನ್ನೋದು ಮಹತ್ವದ ಪಾತ್ರವಹಿಸುತ್ತದೆ. ಇನ್ನು ರಾಜಕೀಯದ ಆಟದಲ್ಲಂತೂ ಪ್ಲಾನ್​​ಗೆ ಭಾರಿ ಬೆಲೆಯಿದೆ. ಇಂತಹ ಪ್ಲಾನ್​​ಗಳಿಂದಲೇ ಗೆಲುವಿನ ಸೂತ್ರದಾರನಾಗಿದ್ದಾನೆ ಬಿಹಾರದ ಯುವಕ. ದೇಶದ ಅತೀ ಮುಖ್ಯ ಚುನಾವಣೆಗಳಲ್ಲಿ ಈ ಬಿಹಾರಿ ಟ್ರಂಪ್​​ಕಾರ್ಡ್​ ಆಗಿಬಿಟ್ಟಿದ್ದಾನೆ.

ಪ್ರಧಾನಿ ನರೇಂದ್ರ ಮೋದಿಯವರ ಕಳೆದ ಬಾರಿಯ ಸಂಸತ್ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿದ್ದ ಒಂದು ಮೆದುಳು ಈ ಬಾರಿ ನಿತೀಶ್ ಅವರ ಪರ ಕೆಲಸ ಮಾಡಿದೆ. ಮೋದಿ ಗ್ಯಾಂಗ್ ಬಿಟ್ಟು ನಿತೀಶ್ ಬಣ ಸೇರಿದ್ದೇ ಮೋದಿ ಸೋಲಿಗೆ ಪ್ರಮುಖ ಕಾರಣ ಎಂದು ಕೆಲವರು ಹೇಳುತ್ತಾರೆ.

ಈ ಹಿರೋ ಹೆಸರು ಪ್ರಶಾಂತ್​​ ಕಿಶೋರ್. ಮೂಲತಃ ಬಿಹಾರದ ಬಕ್ಸರ್​​ಗೆ ಸೇರಿದ ಪ್ರಶಾಂತ್​​ ಕಿಶೋರ್ ಅವರ ಅದ್ಭುತ ರಣ ತಂತ್ರದಿಂದಲೇ ಕಳೆದ ಬಾರಿ ಮೋದಿ ಗೆಲುವಿನ ಅಲೆಯಲ್ಲಿ ತೇಲಾಡಿದ್ರು. ಕಳೆದ ಬಾರಿ ಸಂಸತ್ ಚುನಾವಣೆಯಲ್ಲಿ ಮೋದಿ ಪರ ಇದ್ದ ಕಿಶೋರ್ ಈ ಬಾರಿ ಬಣ ಬದಲಾಯಿಸಿದರು ಎಂದೇ ಹೇಳಬಹುದು. ಮೋದಿ ಪರ ಬಿಟ್ಟು ನಿತೀಶ್ ಗ್ಯಾಂಗ್ ಸೇರಿದ ಕಿಶೋರ್, ಖಾಸಗಿ ವಾಹಿನಿಯೊಂದರ ಇಂಟರ್​​ವೀವ್ಯೂನಲ್ಲಿ ಬಿಹಾರದಂತಹ ರಾಜ್ಯಕ್ಕೆ ನಿತೀಶ್​​​ ಸರಿಯಾದ ಸಾಟಿ ಎಂದು ಹೆಳಿದ್ದರು.

ವಿಶ್ವಸಂಸ್ಥೆ ಕೆಲಸ ತ್ಯಜಿಸಿದ್ದ ಕಿಶೋರ್..!

ಸಾರ್ವಜನಿಕ ಆರೋಗ್ಯ ತಜ್ಞರಾದ ಕಿಶೋರ್​​ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಅದನ್ನು ಬಿಟ್ಟು 2012ರ ಗುಜರಾತ್ ಚುನಾವಣೆಗಳಲ್ಲಿ ಮೋದಿಯವರ ಬೆನ್ನಿಗೆ ನಿಂತ ಯುವ ಸಮೂಹಕ್ಕೆ ಸೇರಿಕೊಂಡರು.

ಸಿಟಿಜನ್ ಫಾರ್ ಅಕೌಂಟೆಬಲ್ ಗವರ್ನನ್ಸ್​​​

ವಿಶ್ವಸಂಸ್ಥೆಯಿಂದ ಹೊರಬಿದ್ದ ಕಿಶೋರ್ ಸಿಟಿಜನ್ ಫಾರ್ ಅಕೌಂಟೆಬಲ್ ಗವರ್ನನ್ಸ್​​​ (ಸಿಎಜಿ) ಎನ್ನುವ ಗುಂಪು ಕಟ್ಟಿಕೊಂಡು ಮೋದಿ ಪರ ದೇಶಾದ್ಯಂತ ಮೋದಿ ಅಲೆ ಸೃಷ್ಟಿ ಮಾಡಿದರು. ಪ್ರಚಾರದಲ್ಲಿ ಹಲವು ಹೊಸ ತಂತ್ರಗಳನ್ನು ಸೃಷ್ಟಿಸಿ ಅವುಗಳನ್ನು ಜಾರಿಗೆ ತಂದು ಯಶಸ್ವಿ ಕೂಡಾ ಆದರು. ಆದರೆ ಮೋದಿ ಆಪ್ತ ಅಮಿತ್ ಶಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಮೋದಿ ಕ್ಯಾಂಪ್ ಬಿಟ್ಟು ಹೊರನೆಡೆದ ಕಿಶೋರ್ ಇಂದು ಮತ್ತೊಮ್ಮೆ ಹೀರೋ ಆಗಿದ್ದಾರೆ.

ಚಾಯ್​​ ಪೇ ಚರ್ಚಾದ ರೂವಾರಿ

ಕಳೆದ ಸಂಸತ್ ಚುನಾವಣೆಯಲ್ಲಿ ಮೊದಿಯವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಚಾಯ್ ಪೇ ಚರ್ಚಾದ ರೂವಾರಿ ಇದೇ ಪ್ರಶಾಂತ್ ಕಿಶೋರ್. 37 ವರ್ಷದ ಪ್ರಶಾಂತ್ ಕಿಶೋರ್ ಅವರ ಮೆದುಳಿನ ಕೂಸಾದ ಚಾಯ್ ಪ ಚರ್ಚಾ ಸಾಕಷ್ಟು ಯಶಸ್ವಿಯಾಗಿತ್ತು. ಇವರ ತಂಡದಲ್ಲಿ ಎಂಬಿಎ ಹಾಗೂ ಐಐಟಿ ಪಧವೀದರರಿದ್ದಾರೆ.

ನಿತೀಶ್ ಗೆಲುವಿಗೆ ಕೆಲ ಹೊಸ ಯೋಜನೆಗಳು

ಮೋದಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಾಯ್​​ ಪೇ ಚರ್ಚಾದಂತೆ ಈ ಬಾರಿ ನಿತೀಶ್ ಅವರಿಗಾಗಿ ಪಾಂಪ್ಲೆಟ್ ಮೂಲಕ ಚರ್ಚೆಯನ್ನು ಆರಂಭಿಸಿದವರು ಇದೇ ಕಿಶೋರ್ ಎನ್ನಲಾಗುತ್ತಿದೆ. ಇನ್ನು ಗ್ರಾಮೀಣ ಪ್ರದೆಶಗಳಿಗೆ ಎಲ್ಇಡಿ ಮಾನಿಟರ್​​ಗಳನ್ನು ತೆಗೆದುಕೊಂಡು ಹೋಗಿ ಅವರ ಅಭಿಪ್ರಾಯ ಸಂಗ್ರಹ ಮಾಡುವುದು, ಬಾಲ ನರೇಂದ್ರ ಕಾಮಿಕ್ಸ್​​ನಂತೆ ಮುನ್ನಾ ಸೆ ನಿತೀಶ್ ಕಾಮಿಕ್ಸ್ ಸರಣಿಯನ್ನು ಹೊರತಂದರು. ಇದರಲ್ಲಿ ನಿತೀಶ್ ಅವರೇ ಹಿರೋ ಆದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಎದುರು ಹಾಕಿಕೊಂಡು ವೃತ್ತಿಪರ ಪ್ರಚಾರಾಂದೋಲನ ನಡೆಸಿದ ಪ್ರಶಾಂತ್ ಕಿಶೋರ್ ನಿತೀಶ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಪರ್ಯಾಸ ಎಂದರೆ ಈಗಾಗಲೇ ನಿತೀಶ್ ಅವರ ಬೆಂಬಲಿಗರಿಗೂ ಕಿಶೋರ್​​ಗೂ ಅಷ್ಟಕಷ್ಟೆ ಸಂಬಂಧ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಿಶೋರ್ ಯಾರ ಬಳಿ ಇರುತ್ತಾರೆಂಬುದು ಹೇಳುವುದು ಕಷ್ಟ.

Related Stories