ಹಚ್ಚಿದ್ದು ಬಣ್ಣ ..ಮಾಡುತ್ತಿರೋದು ಸೇವೆ-ಬಣ್ಣಕ್ಕೂ ಬಂತು ಸೇವೆಯ ನಂಟು ..

ಪೂರ್ವಿಕಾ

0

ಪ್ರಜ್ಞ ಕನ್ನಡ ಚಿತ್ರರಂಗದಲ್ಲಿ ಭರವಸೆ ನಟಿ ಅಂತ ಹೆಸರು ಮಾಡಿದವರು. ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕಾಗಿ ಬಣ್ಣ ಹಚ್ಚಿದ ಪ್ರಜ್ಞ ತನಗೆ ಸಿಕ್ಕ ಸಣ್ಣ ಪ್ರಮಾಣದ ಸಮಯದಲ್ಲಿಯೇ ಸಿನಿಮಾರಂಗದಲ್ಲಿ ಹೆಸರು ಕೀರ್ತಿಯನ್ನ ಸಂಪಾಧಿಸಿದ ನಟಿ. ಗಣೇಶ ಮತ್ತೆ ಬಂದ, ಕೆಂಚ ,ಪ್ರೀತ್ಸೆ ಪ್ರೀತ್ಸೆ, ದೇವ್ರು , ಅನಾರ್ಕಲಿ, ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭೀನಯಿಸುತ್ತಿದ್ದ ನಟಿ ಇಂದು ಸಂಪೂರ್ಣವಾಗಿ ಬದಲಾಗಿದ್ದಾರೆ. ಆಸಕ್ತಿಯಿಂದ ಬಣ್ಣ ಹಚ್ಚಲು ಬಂದ ನಟಿ ಇಂದು ಸಮಾಜ ಸೇವೆಗಾಗಿ ತಮ್ಮ ಜೀವನವನ್ನ ಮುಡಿಪಾಗಿಸಿಕೊಂಡಿರೋದು ವಿಶೇಷ.

ನಟಿ ಕಮ್ ಉದ್ಯಮಿ

ಸ್ಯಾಂಡಲ್​ವುಡ್​ನಲ್ಲಿ ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಪ್ರಜ್ಞ ಸಿನಿಮಾದಲ್ಲಿ ನಟಿಸೋದ್ರ ಜೊತೆಗೆ ಹವ್ಯಾಸಕ್ಕಾಗಿ ಏನಾದ್ರು ಮಾಡಿಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದರು. ಲೈವ್ ಸ್ಪಾಟ್​ಲೈಟ್ ಇವೆಂಟ್ ಮ್ಯಾನೆ ಜ್​​ಮೆಂಟ್​ ಕಂಪನಿಯನ್ನ ಶುರು ಮಾಡಿದ್ರು. ಅದ್ರಿಂದ ಸಾಕಷ್ಟು ಜನರಿಗೆ ಕೆಲಸ ಕೂಡ ನೀಡಿದ್ದಾರೆ ಪ್ರಜ್ಞ. ಲೈವ್ ಸ್ಪಾಟ್​ಲೈಟ್​ ಇವೆಂಟ್ ಮ್ಯಾನೆಜ್ ಮೆಂಟ್ ನಿಂದ ಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನ ಮಾಡಿದ್ದರು ಪ್ರಜ್ಞ. ಮದುವೆ ಸಮಾರಂಭ, ಬರ್ತಡೇ ಪಾರ್ಟಿ, ಆ್ಯನಿವರ್ಸರಿ , ಕಾರ್ಪರೇಟ್ ಶೋ, ಫ್ಯಾಷನ್ ಶೋ ,ಕಿಟ್ಟಿಸ್ ಪಾರ್ಟಿ ಹೀಗೆ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳನ್ನ ಪ್ರಜ್ಞ ಅಂಡ್ ಟೀಂ ಈ ಲೈವ್ ಸ್ಪಾಟ್‍ಲೈಟ್ ಮೂಲಕ ನಡೆಸುತ್ತಾರೆ. ಇದನ್ನ ಶುರು ಮಾಡಿದಾಗಿನಿಂದ ಪ್ರಜ್ಞ ಸುಮಾರು 20 ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದಾರೆ. ಸಮಯ ಸಿಕ್ಕಾಗ ಆಕ್ಟಿಂಗ್ ಅನ್ನೂ ಮಾಡುತ್ತಾ ತನ್ನ ಸ್ವಂತ ಬ್ಯೂಸಿನೆಸ್ ಅನ್ನು ಕೂಡ ಮಾಡುತ್ತಿದ್ದಾರೆ ಪ್ರಜ್ಞ. ಇನ್ನೂ ಈ ಇವೆಂಟ್ ಕಂಪನಿಯಲ್ಲಿ ಪ್ರಜ್ಞ ಜೊತೆಯಲ್ಲಿ ಪ್ರಿನ್ಸ್ ಕರಿಯಪ್ಪ, ಹಾಗೂ ಅಂಕಿತಾ ನಾಯ್ಕ್ ಚೀಫ್ ಆರ್ಗನೈಸರ್ ಆಗಿ ಲೈವ್ ಸ್ಪಾಟ್​ಲೈಟ್​​ನಲ್ಲಿ ಕೆಲಸ ಮಾಡುತ್ತಾರೆ.

ಉದ್ಯಮದ ಜೊತೆ ಸಮಾಜಸೇವೆ

ಒಂದು ಕಡೆ ಚಿತ್ರರಂಗದಲ್ಲಿ ಹೆಸರು ಮತ್ತೊಂದು ಕಡೆ ತನ್ನದೇಯಾದ ಮ್ಯಾನೆಜ್ ಮೆಂಟ್ ಕಂಪನಿ ಶುರು ಮಾಡಿದ ಪ್ರಜ್ಞಗೆ ಒಂದೇ ವರ್ಷದಲ್ಲಿ ಉದ್ಯಮದಲ್ಲಿ ಯಶಸ್ಸು ಸಿಕ್ತು. ನಂತ್ರ ತನ್ನಿಂದ ಸಮಾಜಕ್ಕೆ ಒಂದಿಷ್ಟು ಸಹಾಯ ಆಗಬೇಕು ಅಂತ ಪ್ರಜ್ಞ ನಿರ್ಧರಿಸಿ ಮಕ್ಕಳಿಗಾಗಿ ಫಂಡ್ ರೈಸಿಂಗ್ ಕಾರ್ಯಕ್ರಮವನ್ನ ಶುರು ಮಾಡಿದರು. ತನ್ನದೇಯಾದ ಕಂಪನಿಯ ಮೂಲಕ ಫಂಡ್ ರೈಸ್ ಅನ್ನೋ ಕಾರ್ಯಕ್ರಮವನ್ನ ಪ್ರಾರಂಭ ಮಾಡಿದ ಪ್ರಜ್ಞ, ಇದ್ರಿಂದ ಬಂದ ಹಣದಲ್ಲಿ ಬಡ ಮಕ್ಕಳಿಗೆ ನೀಡಲು ಮುಂದಾಗಿದ್ದಾರೆ. ಅದರಲ್ಲೂ ವಿಶೇಷ ಮಕ್ಕಳಿರೋ ಆಶ್ರಮ ಹಾಗೂ ಮಕ್ಕಳಿಗೆ ಹಣ ನೀಡುವುದು ಅಥವಾ ಅವ್ರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ ಪ್ರಜ್ಞ.ಇದಷ್ಟೆ ಅಲ್ಲದೆ ವಿಕಲಚೇತನ ಮಕ್ಕಳಿಗೆ ಹಾಗೂ ಅನುವಂಶೀಯ ಕಾಯಿಲೆಯಿಂದ ನರಳುತ್ತಿರೋ ಮತ್ತು ಅನಾರೋಗ್ಯದಿಂದ ನರಳುತ್ತಿರೋ ಮಕ್ಕಳ ಆರೋಗ್ಯದ ಚಿಕಿತ್ಸೆಗಾಗಿ ಹಣವನ್ನೂ ನೀಡಿದ್ದಾರೆ. ನಾಯಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೋ ಪ್ರಜ್ಞ ತನ್ನ ಐಡೆಂಟಿಟಿಯನ್ನ ಉಪಯೋಗಿಸಿಕೊಂಡು ಸಮಾಜಕ್ಕೆ ಮತ್ತು ಸಮಾಜದಲ್ಲಿರೋ ಕೆಲ ಮಕ್ಕಳ ಒಳಿತಿಗಾಶಗಿ ಶ್ರಮಿಸುತ್ತಿರೋದು ನಿಜಕ್ಕೂ ಶ್ಲಾಘನೀಯ. ಇತ್ತಿಚಿಗಷ್ಟೆ ಫಂಡ್ ರೈಸಿಂಗ್ ಕಾರ್ಯಕ್ಕೆ ಚಾಲನೆ ನೀಡಿರೋ ಪ್ರಜ್ಞ ಇದ್ರಿಂದ ಸಂಗ್ರಹವಾಗೋ ಹಣವನ್ನ ಸಮಾಜದಲ್ಲಿ ಉತ್ತಮ ಎನ್ ಜಿ ಓ ಎನ್ನಿಸಿಕೊಂಡಿರೋ ಸಂಸ್ಥೆಗಳಿಗೆ ಹಣವನ್ನ ನೀಡಿ ಅದರ ಮೂಲಕ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಸಹಾಯ ಮಾಡಲು ಮುಂದಾಗಿದ್ದಾರೆ. ನಿಮಗೂ ಇಂತಹವ್ರ ಮಹಾನ್ ಕಾರ್ಯಕ್ಕೆ ಸಹಾಯ ಹಸ್ತ ನೀಡಬೇಕೆನ್ನಿಸಿದ್ರೆ ಒಮ್ಮೆ ಇಂಟರ್ನೆಟ್ ನಲ್ಲಿ ಲೈವ್ ಸ್ಪಾಟ್ಲೈಟ್ ಅಂತ ಸರ್ಚ್ ಮಾಡಿ ಲಾಗಿಂನ್ ಆಗಿ ನಿಮ್ಮ ಕೈಲಾದ ಸೇವೆಯನ್ನ ಮಾಡಬಹುದು ಇನ್ನೂ ನೀವು ಮಾಡೋ ಇವೆಂಟ್ ಫರ್ಫೆಕ್ಟ್ ಹಾಗೂ ಕಂಫರ್ಟ್ ಆಗಿ ನೆರವೇರಬೇಕು ಅಂದ್ರೆ ಲೈವ್ ಸ್ಪಾಟ್ ಲೈಟ್ಸ್ ಗೆ ನಿಮ್ಮ ಕಾರ್ಯಕ್ರಮದ ಕೆಲಸವನ್ನ ನೀಡಬಹುದು..