ಒಂದೇ ವರ್ಷದಲ್ಲಿ 3 ಸಂಸ್ಥೆಗಳ ಸ್ವಾಧೀನ: `ಫ್ರೆಶ್ ಡೆಸ್ಕ್' ತೆಕ್ಕೆಗೆ `ಕೊನೊಟರ್'

ಟೀಮ್​​ ವೈ.ಎಸ್​. ಕನ್ನಡ

0

ಚೆನ್ನೈ ಮೂಲದ ಸಾಫ್ಟ್​ವೇರ್ ಉದ್ಯಮ `ಫ್ರೆಶ್ ಡೆಸ್ಕ್' ದಿನೇ ದಿನೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮೊಬೈಲ್‍ನ ಮೊದಲ ಬಳಕೆದಾರರ ನಿಶ್ಚಿತಾರ್ಥದ ವೇದಿಕೆ `ಕೊನೊಟರ್' ಅನ್ನು ಸ್ವಾಧೀನಪಡಿಸಿಕೊಂಡಿದೆ. 2015ರಲ್ಲಿ `ಫ್ರೆಶ್ ಡೆಸ್ಕ್' ಸ್ವಾಧೀನಕ್ಕೆ ಪಡೆದಿರುವ ಮೂರನೇ ಸಂಸ್ಥೆ `ಕೊನೊಟರ್'. ಈ ಮೂಲಕ ಎಲ್ಲಾ ಕಡೆಗಳಲ್ಲೂ ಗ್ರಾಹಕರಿಗೆ ಸೇವೆಯನ್ನು ಒದಗಿಸುವತ್ತ `ಫ್ರೆಶ್ ಡೆಸ್ಕ್' ಹೆಜ್ಜೆ ಇಟ್ಟಿದೆ.

`ಫ್ರೆಶ್ ಡೆಸ್ಕ್' 2015ರ ಆಗಸ್ಟ್‍ನಲ್ಲಿ 1ಅಐIಅಏ.io ಅನ್ನು ವಶಕ್ಕೆ ಪಡೆದಿತ್ತು. 1ಅಐIಅಏ.io ಇದೊಂದು ಲೈವ್ ವಿಡಿಯೋ ಚಾಟ್ ಒದಗಿಸುವ ವೇದಿಕೆ. ಇನ್ನು 2015ರ ಅಕ್ಟೋಬರ್‍ನಲ್ಲಿ ಸಾಮಾಜಿಕ ಶಿಫಾರಸು ಆ್ಯಪ್ ` ಈಡಿiಟಠಿ' ಅನ್ನು ಫ್ರೆಶ್-ಡೆಸ್ಕ್ ಸ್ವಾಧೀನಪಡಿಸಿಕೊಂಡಿತ್ತು.

``ಗ್ರಾಹಕರಿಗೆ ಅಗತ್ಯ ಬೆಂಬಲ ನೀಡುವುದು ಹಾಗೂ ಬಳಕೆದಾರರನ್ನು ಸದಾ ಎಂಗೇಜ್ ಆಗಿರುವಂತೆ ಮಾಡಲು, ಅವಶ್ಯಕವಾಗಿರುವ ಪರಿಹಾರ ಒದಗಿಸುವ ವಿಷಯಗಳಲ್ಲಿ ಮೊಬೈಲ್ ಫಸ್ಟ್ ಕಂಪನಿಗಳು ಹತ್ತಾರು ಸವಾಲುಗಳನ್ನು ಎದುರಿಸುತ್ತಿವೆ. ಈ ಅಗತ್ಯವನ್ನು ಪೂರೈಸುವಲ್ಲಿ ಕೊನೊಟರ್ ಗಮನಾರ್ಹ ಕೆಲಸ ಮಾಡ್ತಾ ಇದ್ದು, ಆರಂಭಿಕ ಯಶಸ್ಸು ಗಳಿಸಿದೆ. ಇದಕ್ಕಾಗಿ ಬಳಕೆದಾರರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬೇಕಾದಂತಹ ಶ್ರೇಷ್ಠ ಅಪ್ಲಿಕೇಷನ್‍ಗಳನ್ನು ಕೊನೊಟರ್ ಒದಗಿಸಿದೆ'' ಎನ್ನುತ್ತಾರೆ `ಫ್ರೆಶ್ ಡೆಸ್ಕ್'ನ ಸಿಇಓ ಗಿರೀಶ್ ಮಾತೃಭೂತಮ್.

2012ರಲ್ಲಿ `ಕೊನೊಟರ್' ಅನ್ನು ಆರಂಭಿಸಲಾಯ್ತು. ಶ್ರೀಕೃಷ್ಣನ್ ಗಣೇಶನ್, ವಿಘ್ನೇಶ್ ಗಿರಿಶಂಕರ್ ಹಾಗೂ ದೀಪಕ್ ಜೊತೆಯಾಗಿ `ಕೊನೊಟರ್' ಅನ್ನು ಕಟ್ಟಿ ಬೆಳೆಸಿದ್ದಾರೆ. ಚೆನ್ನೈ ಮೂಲದ `ಕೊನೊಟರ್'ನಲ್ಲಿ 2 ವಿಧದ ಸಂವಹನ ಮಾಧ್ಯಮಗಳಿವೆ. ಅಪ್ಲಿಕೇಷನ್ ಜೊತೆಗೆ ಬಳಕೆದಾರರ ಸಂವಹನಕ್ಕಾಗಿ ಆ್ಯಪ್ ಡೆವಲಪರ್‍ಗಳು ಇದನ್ನು ಬಳಸಿಕೊಳ್ಳಬಹುದು. ಕೊನೊಟರ್ ಅನ್ನು ಅಪ್ಲಿಕೇಷನ್ ಜೊತೆಗೆ ಸಂಯೋಜಿಸಲಾಗಿದೆ. ಅದು ವಾಟ್ಸ್‍ಆ್ಯಪ್‍ನಂತೆ ಕಾಣಿಸುತ್ತದೆ. ಇದು ಅಪ್ಲಿಕೇಷನ್ ಇಂಟರ್‍ಫೇಸ್ ಜೊತೆಗೆ ಬೆರೆತುಹೋಗುತ್ತದೆ.

ಆ್ಯಪ್ ಬಳಕೆದಾರರಿಗೆ ಪ್ರತ್ಯೇಕ ಟ್ಯಾಬ್ ಮತ್ತು ಐಕಾನ್‍ಗಳನ್ನು ಒದಗಿಸಲಾಗುತ್ತದೆ. ಈ ಮೂಲಕ ಅವರು ಆ್ಯಪ್ ಡೆವಲಪರ್‍ಗಳನ್ನು ಸಂಪರ್ಕಿಸಬಹುದು. ಆ್ಯಪ್ ಡೆವಲಪರ್‍ಗಳು ಬಳಕೆದಾರರ ಫೀಡ್‍ಬ್ಯಾಕ್ ಪಡೆದುಕೊಳ್ಳುತ್ತಾರೆ. ಗ್ರಾಹಕರಿಗೇನಾದ್ರೂ ಸಮಸ್ಯೆಗಳು ಎದುರಾದಲ್ಲಿ ಅದನ್ನು ಬಗೆಹರಿಸುತ್ತಾರೆ. ಕೊನೊಟರ್, `ಟಾರ್ಗೆಟ್', `ಝೊಮ್ಯಾಟೊ', `ಟೈಮ್ಸ್ ಇಂಟರ್ನೆಟ್', `ಫಾಸೊಸ್' ಮತ್ತು `ಬ್ಯಾಂಕ್ ಬಾಝಾರ್ ಡಾಟ್ ಕಾಮ್'ನ ಗ್ರಾಹಕರನ್ನು ಒಳಗೊಂಡಿದೆ. `ಕೊನೊಟರ್' ಕಂಪನಿಯ ವೇದಿಕೆ ತನ್ನ ಆ್ಯಪ್ ಮೂಲಕ 40 ಮಿಲಿಯನ್‍ಗೂ ಅಧಿಕ ಗ್ರಾಹಕರಿಗೆ ಬೆಂಬಲ ನೀಡುತ್ತಿದೆ. ಈ ಸ್ಟಾರ್ಟ್‍ಅಪ್‍ಗೆ `ಟಾರ್ಗೆಟ್', `ಕ್ವಾಲ್ಕಮ್ ವೆಂಚರ್ಸ್', ಹಾಗೂ `ಎಕ್ಸೆಲ್ ಪಾರ್ಟ್‍ನರ್ಸ್'ನ ಬೆಂಬಲವಿದೆ.

ಸದ್ಯ `ಫ್ರೆಶ್ ಡೆಸ್ಕ್' ಜೊತೆಗೂಡಿ ಕೊನೊಟರ್ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಎರಡೂ ಸಂಸ್ಥೆಗಳು ಒಂದೇ ರೀತಿಯ ಆಸಕ್ತಿ ಹಾಗೂ ದೃಷ್ಟಿಕೋನವನ್ನು ಹೊಂದಿವೆ ಎನ್ನುತ್ತಾರೆ `ಕೊನೊಟರ್'ನ ಸಹಸಂಸ್ಥಾಪಕ ಶ್ರೀಕೃಷ್ಣನ್ ಗಣೇಶನ್. ಫ್ರೆಶ್ ಡೆಸ್ಕ್ ಜೊತೆಗೆ ಕೆಲಸ ಮಾಡುವುದರಿಂದ ನಮ್ಮ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇನ್ನಷ್ಟು ಹೂಡಿಕೆ ಮಾಡಬಹುದು ಅನ್ನೋದು ಅವರ ಅಭಿಪ್ರಾಯ. ಯಾಕಂದ್ರೆ ಗ್ರಾಹಕರನ್ನು ತೃಪ್ತಿಪಡಿಸುವುದರಲ್ಲಿ ಫ್ರೆಶ್ ಡೆಸ್ಕ್ ಎಕ್ಸ್‍ಪರ್ಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನಾವಿಬ್ಬರೂ ಜೊತೆಯಾಗಿ ಆ್ಯಪ್ ಬಳಕೆದಾರರನ್ನು ಬೆಂಬಲಿಸುವ ಜೊತೆಗೆ ಉದ್ಯಮದ ಬೆಳವಣಿಗೆಗೆ ಶ್ರಮಿಸುವುದಾಗಿ ಶ್ರೀಕೃಷ್ಣನ್ ಗಣೇಶನ್ ಅಭಯ ನೀಡಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೊಬೈಲ್-ಫಸ್ಟ್ ಉದ್ಯಮಗಳ ಸುಧಾರಣೆಗೆ ಕೊನೊಟರ್ ಹಾಗೂ ಫ್ರೆಶ್‍ಡೆಸ್ಕ್‍ನ ಸ್ವಾಧೀನ ಪ್ರಕ್ರಿಯೆ ನೆರವಾಗಲಿದೆ ಅನ್ನೋ ವಿಶ್ವಾಸ ಫ್ರೆಶ್ ಡೆಸ್ಕ್‍ನ ಸಿಇಓ ಗಿರೀಶ್ ಮಾತೃಭೂತಮ್ ಅವರಿಗೆ ಇದೆ. 2010ರಲ್ಲಿ ಫ್ರೆಶ್ ಡೆಸ್ಕ್ ಅನ್ನು ಬಿಡುಗಡೆ ಮಾಡಲಾಯ್ತು. ಜಗತ್ತಿನಾದ್ಯಂತ ಸುದ್ದಿಮಾಡಿರುವ ಈ ಸಂಸ್ಥೆ 50,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. 3ಎಂ, ಹೋಂಡಾ, ಹ್ಯೂಗೊ ಬಾಸ್, ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ದಿ ಆಟ್ಲಾಂಟಿಕ್ ಮತ್ತು ಪೆಟ್ರೋನಸ್ ಸೇರಿದಂತೆ ಹಲವು ದಿಗ್ಗಜ ಕಂಪನಿಗಳು ಫ್ರೆಶ್‍ಡೆಸ್ಕ್ ಸೇವೆಯನ್ನು ಪಡೆಯುತ್ತಿವೆ.

ಇ-ಮೇಲ್, ಫೋನ್, ವೆಬ್‍ಸೈಟ್ ಮತ್ತು ಫೋರಮ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಫ್ರೆಶ್‍ಡೆಸ್ಕ್ ಗ್ರಾಹಕರಿಗೆ ಅಗತ್ಯವಾದ ಸೇವೆಯನ್ನು ಒದಗಿಸುತ್ತಿದೆ. ಅವರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಶ್ರೇಷ್ಠ ಹೂಡಿಕೆದಾರರಿಂದ 6 ಸುತ್ತುಗಳಲ್ಲಿ ಫ್ರೆಶ್ ಡೆಸ್ಕ್ 94 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ. `ಟೈಗರ್ ಗ್ಲೋಬಲ್', `ಗೂಗಲ್ ಕ್ಯಾಪಿಟಲ್', `ಎಕ್ಸೆಲ್ ಪಾರ್ಟ್‍ನರ್ಸ್' ಕಂಪನಿಗಳು ಫ್ರೆಶ್ ಡೆಸ್ಕ್‍ಗೆ ಹಣಕಾಸು ನೆರವು ನೀಡಿವೆ. ಇಂಡಸ್ಟ್ರಿಯ ಮೂಲಗಳ ಪ್ರಕಾರ ಫ್ರೆಶ್ ಡೆಸ್ಕ್‍ನ ಸದ್ಯದ ಮೌಲ್ಯ ಸುಮಾರು 500 ಮಿಲಿಯನ್ ಡಾಲರ್‍ನಷ್ಟಿದೆ. 2015ರ ಏಪ್ರಿಲ್‍ನಲ್ಲಿ ಫ್ರೆಶ್ ಡೆಸ್ಕ್ 50 ಮಿಲಿಯನ್ ಬಂಡವಾಳವನ್ನು ಸಂಗ್ರಹಿಸಿತ್ತು. ಆದ್ರೆ ಫ್ರೆಶ್ ಡೆಸ್ಕ್ ಕಂಪನಿ ತನ್ನ ಮೌಲ್ಯವನ್ನು ಇದುವರೆಗೂ ಸ್ಪಷ್ಟಪಡಿಸಿಲ್ಲ.

ಲೇಖಕರು: ಅಪರಾಜಿತ ಚೌಧರಿ
ಅನುವಾದಕರು: ಭಾರತಿ ಭಟ್​​

Related Stories