ವೈದ್ಯರ ಮಾಹಿತಿಗಾಗಿ ಇದೆ ಪ್ರಾಕ್ಟೋ ಆ್ಯಪ್

ಉಷಾ ಹರೀಶ್​

0

ಇತ್ತಿಚಿನ ದಿನಗಳಲ್ಲಿ ಮನುಷ್ಯನಿಗೆ ಆಹಾರದಷ್ಟೇಮುಖ್ಯ ವೈದ್ಯರು ಮತ್ತು ವೈದ್ಯಕೀಯ ವ್ಯವಸ್ಥೆ. ಅವು ಸಮಯಕ್ಕೆ ಸರಿಯಾಗಿ ಸರಿಗಬೇಕು ಇಲ್ಲದೇ ಹೋದಲ್ಲಿ ಕೆಲ ಬಾರಿ ಮನುಷ್ಯನ ಜೀವಕ್ಕೆ ಕುತ್ತು ಬರುತ್ತದೆ. ಇಂತಹ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿ ಶಶಾಂಕ್ ಎಂಬ ಯುವಕ ಪ್ರಾಕ್ಟೋ ಎಂಬ ಸಂಸ್ಥೆ ಹುಟ್ಟು ಹಾಕಿದ್ದಾರೆ.

ನಗರಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಜೊತೆ ಜೊತೆಗೆ ನಗರದಲ್ಲಿ ವಾಸಿಸುತ್ತಿರುವ ಹಲವಾರು ಜನ ಕಾಯಿಲೆಗಳಿಂದ ಬಳಸುತ್ತಿರುತ್ತಾರೆ. ಯಾವ ಕಾಯಿಲೆಗೆ ಯಾವ ವೈದ್ಯರನ್ನು ಸಂಪರ್ಕಿಸಬೇಕು ಇಂತಹ ಕಾಯಿಲೆಗೆ ನೋಡುವ ತಜ್ಞ ವೈದ್ಯರು ಯಾರಿದ್ದಾರೆ ಎಂಬ ಮಾಹಿತಿಯನ್ನು ಈ ಪ್ರಾಕ್ಟೋ ಸಂಸ್ಥೆ ನೀಡುತ್ತದೆ. ವೈದ್ಯರು ಮತ್ತು ರೋಗಿಗಳ ನಡುವೆ ಒಂದು ಸಂಪರ್ಕ ಸೇತುವೆಯಾಗಿ ಈ ಸಂಸ್ಥೆ ಕೆಲಸ ಮಾಡುತ್ತದೆ.

ಇದನ್ನು ಓದಿ: ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

ಸೇವೆ ಹೇಗೆ..?

ಪ್ರಾಕ್ಟೋ ಸಂಸ್ಥೆ ಆ್ಯಂಡ್ರಾಯ್ಡ್​​ ಫೋನ್​​ಗಳಿಗಾಗಿ ಒಂದು ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡು ನಿಮ್ಮ ಮಾಹಿತಿಯನ್ನು ಆಪ್ಲೋಡ್ ಮಾಡಬೇಕು. ನಂತರ ನಿಮಗೆ ಬೇಕಾದ ವೈದ್ಯರ ಸೇವೆ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಆ್ಯಪ್ ಮಾತ್ರವಲ್ಲದೇ ವೆಬ್​ಸೈಟ್ ಮೂಲಕವೂ ನಗರದಲ್ಲಿರುವ ಪ್ರಮುಖ ತಜ್ಞ ವೈದ್ಯರ ಹಾಗೂ ಆಸ್ಪತ್ರೆಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಅಷ್ಟೇಅಲ್ಲದೇ ವೈದ್ಯರನ್ನು ಆನ್​ಲೈನ್ ಮೂಲಕ ವೈದ್ಯರ ಭೇಟಿ ಸಮಯವನ್ನು ಕಾಯ್ದಿರಿಸಿ ಚಿಕಿತ್ಸೆ ಪಡೆಯಬಹುದು. ರೋಗಿಗಳು ತಾವು ಚಿಕಿತ್ಸೆ ಪಡೆದ ಆಶ್ಪತ್ರೆಗಳು ಹಾಗೂ ವೈದ್ಯರ ಸೇವೆ ಕುರಿತು ಆ್ಯಪ್ ಮೂಲಕ ಮತ್ತು ವೆಬ್​ಸೈಟ್​ನಲ್ಲಿ ಬರೆಯುವ ಅವಕಾಶವಿದೆ ಇದರ ಮೂಲಕ ನುರಿತ ಉತ್ತಮ ವೈದ್ಯರನ್ನು ರೋಗಿಗಳಿಗೆ ಸಂಪರ್ಕಿಸಲು ಅನುಕೂಲವಾಗುತ್ತದೆ.

ಈ ಸಂಸ್ಥೆ ನಗರದಲ್ಲಿರುವ ವೈದ್ಯರು ಅವರು ನೀಡುವ ಚಿಕಿತ್ಸೆಯ ಮಾಹಿತಿ ನೀಡುವುದಲ್ಲದೆ, ಡಯಾಗ್ನೋಸ್ಟಿಕ್, ಲ್ಯಾಬ್, ಸ್ಪಾ ಮತ್ತು ಸಲೂನ್ ಮತ್ತು ಫಿಟ್ನೆಸ್​ಗಳ ಕುರಿತು ಮಾಹಿತಿ ನೀಡುತ್ತದೆ. ಈ ಮೂಲಕ ರೋಗಿಗಳಿಗೆ ಎಲ್ಲ ರೀತಿಯಲ್ಲೂ ನೆರವಾಗುತ್ತದೆ.

೧೨ ವಿವಿಧ ಕಾಯಿಲೆಗಳ ವೈದ್ಯರ ಮಾಹಿತಿ

ಪ್ರಾಕ್ಟೋದಲ್ಲಿ ಹೃದ್ರೋಗ, ಕಣ್ಣು, ಕಿವಿ, ಗಂಟಲು, ದಂತ, ಕರಳು ಬೇನೆ, ಸೇರಿದಂತೆ ಒಟ್ಟು ಹನ್ನೆರಡು ರೀತಿಯ ರೋಗಗಳ ಬಗೆಗಿನ ವೈದ್ಯರ ಮಾಹಿತಿ ಸಿಗುತ್ತದೆ. ಅಷ್ಟೇ ಅಲ್ಲದೆ ಎಂಆರ್​ಐ, ಸಿಟಿ ಸ್ಕ್ಯಾನ್, ಎಕ್ಸ್ ರೇ ಎಚ್ಐವಿಯ ಒಂದು ಮತ್ತು ೨ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡುವ ಲ್ಯಾಬ್​ಗಳ ಮಾಹಿತಿ ಜೊತೆಗೆ ಸೌಂದರ್ಯ ವರ್ಧಕ ಮಳಿಗೆಗಳು ಹಾಗೂ ಸಲೂನ್ಗಳ ಮಾಹಿತಿಯೊಂದಿಗೆ ಫಿಟ್ನೆಸ್ ಸೆಂಟರ್​ಗಳ ಮಾಹಿತಿಗಳು ಈ ಪ್ರಾಕ್ಟೋ ವೆಬ್ ಹಾಗೂ ಆ್ಯಪ್​ನಲ್ಲಿ ಸದಾ ಲಭ್ಯವಿರುತ್ತದೆ..

ಆ್ಯಪ್ ಬಳಕೆದಾರರಲ್ಲಿ ಪ್ರಥಮ ಸ್ಥಾನ

ಈ ಸಂಸ್ಥೆ ಜನರಿಗೆ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡಿರುವ ಸ್ಟಾರ್ಟ್ ಆ್ಯಪ್​ಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ೨೦ ಲಕ್ಷಕ್ಕೂ ಹೆಚ್ಚು ಮಂದಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆ್ಯಪ್ ಬಳಕೆದಾದರರ ಮೂಲಕ ಮತ್ತಷ್ಟು ಜನರನ್ನು ತಲುಪಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.

ಆರು ದೇಶಗಳಲ್ಲಿ ಸೇವೆ ಲಭ್ಯ

ಪ್ರಾಕ್ಟೋ ಸಂಸ್ಥೆ ವಿಶ್ವದ ಆರು ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಸಾಕಷ್ಟು ಜನರಿಗೆ ತನ್ನ ಸೇವೆಯನ್ನು ನೀಡಿದೆ. ಭಾರತ, ಸಿಂಗಪೂರ, ಬ್ರೆಜಿಲ್, ಫಿಲಿಫೈನ್ಸ್, ಮಲೇಷ್ಯಾ, ಇಂಡೋನೆಷಿಯಾ ದೇಶಗಳ ನೂರಾರು ನಗರಗಳಲ್ಲಿ ಇದು ತನ್ನ ಕಾರ್ಯ ನಿರ್ವಹಿಸುತ್ತಿದೆ.

ಬೆಂಗಳೂರು, ದೆಹಲಿ, ಆಗ್ರಾ, ಕೋಲ್ಕತ್ತಾ, ನಾಗಪುರ್, ಇಂದೂರ್, ಸೇರಿದಂತೆ ಭಾರತದ ೩೯ ದೇಶಗಳಲ್ಲಿ ತನ್ನ ವೆಬ್​ಸೈಟ್ ಮತ್ತು ಆ್ಯಪ್ ಮೂಲಕ ವೈದ್ಯರ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ.

ಈ ಸಂಸ್ಥೆ ಆರು ದೇಶಗಳಲ್ಲಿ ವಾರಕ್ಕೆ ಹತ್ತು ಸಾವಿರಕ್ಕೂ ಹೆಚ್ಚಿನ ವೈದ್ಯರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಸಿಂಗಾಪೂರ ಮತ್ತು ಫಿಲಿಫೈನ್ಸ್​ನಲ್ಲಿ ಪ್ರಾಕ್ಟೋ ವೆಬ್​ಸೈಟ್​​ಗೆ ಭೇಟಿ ನೀಡಿದ ಸಂಖ್ಯೆಯ ಆಧಾರದಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಯೂರೋಪ್, ಆಗ್ನೇಯ ಏಷ್ಯಾ ಮತ್ತಿತರ ಕಡೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡು ಆಲೋಚನೆಯನ್ನು ಕಂಪನಿ ಹೊಂದಿದೆ. ಒಟ್ಟಿನಲ್ಲಿ ಸೂಕ್ತ ಸಮಯಕ್ಕೆ ಉತ್ತಮ ಚಿಕಿತ್ಸೆ ದೊರೆಯುವಂತಾಗಬೇಕು ಮತ್ತು ವೈದ್ಯರು ಹಾಗೂ ರೋಗಿಗಳ ನಡುವೆ ಸಂಪರ್ಕ ಕಲ್ಪಿಸುವ ಒಳ್ಳೆ ವೇದಿಕೆಯಾಗಿ ಈ ಪ್ರಾಕ್ಟೋ ಸಂಸ್ಥೆ ಕೆಲಸ ಮಾಡುತ್ತಿದೆ.

ಇದನ್ನು ಓದಿ: 

1. ವಿಶ್ವದ 6 ಸ್ತ್ರೀಸಮಾನತಾವಾದಿಗಳು...! 

2. ದೇಶಕ್ಕೆ ಮಾದರಿ ಬನ್ನೇರುಘಟ್ಟ ಜೈವಿಕ ಉದ್ಯಾನವನ

3. ವಯಸ್ಸಾದರೂ ಛಲ ಬಿಡದ ಸಾಹಸಿ

Related Stories