ಪುಣೆಯ ಅತೀ ಕಿರಿಯ ಬಿಲ್ಡರ್ ಕೃತಿ ಜೈನ್ ಅವರ ಪರಿಚಯ

ಟೀಮ್​​ ವೈ.ಎಸ್​​.

ಪುಣೆಯ ಅತೀ ಕಿರಿಯ ಬಿಲ್ಡರ್ ಕೃತಿ ಜೈನ್ ಅವರ ಪರಿಚಯ

Tuesday November 10, 2015,

4 min Read

ಆಕೆಗೆ ಆಗ 8 ವರ್ಷ. ಆಗಲೇ ಆಕೆ ಮೊದಲ ಬಾರಿಗೆ ಸೊಸೈಟಿ ಹ್ಯಾಂಡೋವರ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಳು. ಅಲ್ಲಿ ಆಕೆಯ ತಂದೆ ಲಲಿತ್ ಕುಮಾರ್ ಜೈನ್, ಸಮುದಾಯ ಗೃಹ ನಿರ್ಮಾಣ ಯೋಜನೆಯನ್ನು ಅಲ್ಲಿನ ನಿವಾಸಿಗಳಿಗೆ ಹಸ್ತಾಂತರಿಸಿದ್ದರು. ಇದು ಕೃತಿ ಜೈನ್​​ರ ಉದ್ಯಮಯಾನದ ಮೊದಲ ಹೆಜ್ಜೆಯಾಗಿತ್ತು.

ಪುಣೆ ಮೂಲದ ಕೃತಿ ಜೈನ್ ತನ್ನ 17ನೇ ವರ್ಷದಲ್ಲೇ ಕುಮಾರ್ ಬಿಲ್ಡರ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿದ್ದರು. ಅಲ್ಲದೇ ಅನೇಕ ಚಿಕ್ಕ ವಯಸ್ಸಿನಲ್ಲೇ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದರು.

image


2004-05ನೇ ಸಾಲಿನಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣರವರಿಂದ ಮ್ಯಾನೇಜ್‌ಮೆಂಟ್ ಕನ್ಸೋರ್ಟಿಯಮ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಕೃತಿ. 2012ರಲ್ಲಿ ಎನ್‌ಡಿಟಿವಿಯ ಯಂಗ್ ಗನ್ಸ್ ಆಫ್ ರಿಯಲ್ ಎಸ್ಟೇಟ್ ಕಾರ್ಯಕ್ರಮದಲ್ಲಿ ಕೃತಿಯವರನ್ನು ಸಂದರ್ಶಿಸಲಾಗಿತ್ತು.

ಆದರೆ ಈ ಕಥೆಯುದ್ದಕ್ಕೂ ಈ ಹಂತಕ್ಕೇರಲು ಕೃತಿಯವರು ಪಟ್ಟ ಶ್ರಮದ ವಿವರಣೆ ಇದೆ. ಈಗ ತಮ್ಮ 26ನೇ ವರ್ಷದಲ್ಲಿರುವ ಕೃತಿ, ತಮ್ಮನ್ನು ತಾವು ಗುರುತಿಸಿಕೊಳ್ಳಲು ಎಷ್ಟೊಂದು ಕಷ್ಟಪಟ್ಟರು ಎಂಬುದನ್ನು ತಿಳಿಸಿದ್ದಾರೆ.

ಇವೆಲ್ಲದರ ಆರಂಭ ಹೇಗಾಯ್ತು...

ತಾವು 13ನೇ ವರ್ಷದಲ್ಲಿದ್ದಾಗ ಎಲ್ಲರಂತೆ ತಮ್ಮ ತಂದೆ ತಮ್ಮೊಂದಿಗೆ ಸಮಯ ಕಳೆಯಬೇಕೆಂದು ಕೃತಿ ಬಯಸುತ್ತಿದ್ದರು. ತಮ್ಮ ಬೇಸಿಗೆ ರಜೆಯನ್ನು ತಂದೆಯವರೊಂದಿಗೆ ಅವರ ಕಛೇರಿಯಲ್ಲೇ ಕಳೆಯುತ್ತಿದ್ದರು. ತಂದೆಯೊಂದಿಗೆ ಕನ್ಸ್ ಟ್ರಕ್ಷನ್ ಸೈಟ್‌ಗಳಿಗೆ ಭೇಟಿಕೊಡುತ್ತಿದ್ದರು. ಹೇಗಾದರೂ ತಂದೆ ತನ್ನೊಂದಿಗೆ ಸಮಯ ಕಳೆಯಲಿ ಎಂಬ ಆಸೆ ಅವರಲ್ಲಿತ್ತು. ಆದರೆ ತಂದೆ ಉದ್ಯಮ ನಡೆಸುತ್ತಿದ್ದ ರೀತಿಯಿಂದ ಪ್ರೇರೇಪಿತರಾಗುತ್ತಿದ್ದ ಅವರು ಬಿಸಿನೆಸ್‌ ಕುರಿತ ಜ್ಞಾನವನ್ನು ಬಹಳ ಬೇಗನೇ ಪಡೆದುಕೊಂಡರು.

ಕೃತಿಯವರೇ ಹೇಳುವಂತೆ ತಾವು ಕಛೇರಿ ಕೆಲಸದಲ್ಲಿ ಪಾಲ್ಗೊಳ್ಳುವ ಬದಲು ತಂದೆಯನ್ನು ಇವೆಲ್ಲದರಿಂದ ಹೊರಗೆ ತರಬೇಕೆಂದು ಕೃತಿ ಬಯಸುತ್ತಿದ್ದರು. ಆದರೆ ತಂದೆ ಪ್ರತಿ ಮೀಟಿಂಗ್‌ನಲ್ಲೂ ಭಾಗವಹಿಸಲು ಕೃತಿಯವರನ್ನು ಕಂಪ್ಯೂಟರ್ ಮುಂದೆ ಕುಳ್ಳಿರಿಸಿ ತಾವು ಮೀಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದರು. ಕೃತಿಯವರು ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಮೈಕ್ರೋಸಾಫ್ಟ್‌ ಪೈಂಟ್ ನಲ್ಲಿ ಪೈಂಟಿಂಗ್ ಮಾಡುತ್ತಿದ್ದರು. ಕೆಲ ವೇಳೆ ಅವರು ತಂದೆಯೊಂದಿಗೆ ಮೀಟಿಂಗ್‌ನಲ್ಲೂ ಭಾಗವಹಿಸುತ್ತಿದ್ದರು ಮತ್ತು ಅಲ್ಲಿನ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಈ ಎಲ್ಲಾ ನೆನಪುಗಳನ್ನು ತಿರುವಿಹಾಕುತ್ತಾ ಕೃತಿ ಒಂದು ಘಟನೆಯನ್ನು ಹಂಚಿಕೊಳ್ಳುತ್ತಾರೆ. ಚಿಕ್ಕಂದಿನಲ್ಲೇ ಕೃತಿಯವರು ಒಂದು ಕಾನೂನು ಕೌನ್ಸಿಲ್ ಮೀಟಿಂಗ್‌ನಲ್ಲಿ ತಂದೆಯೊಂದಿಗೆ ಹೋಗಿ ಕುಳಿತುಬಿಟ್ಟಿದ್ದರು. ಅಲ್ಲಿ ಕಾನೂನು ಸಲಹೆ ನೀಡುವ ವಕೀಲರೊಬ್ಬರು ಬಂದಿದ್ದರು. ಅದರ ಮುಂದುವರಿದ ಭಾಗವಾಗಿ ಮಾರನೇ ದಿನವೂ ಸಹ ಸಭೆ ಸೇರಿದಾಗ ಅಲ್ಲಿದ್ದವರು ವಕೀಲರು ತಿಳಿಸಿದ್ದ ಒಂದು ಮುಖ್ಯವಾದ ಅಂಶವನ್ನೇ ಬಿಟ್ಟಿದ್ದಾರೆಂಬುದು ಕೃತಿಯವರ ಗಮನಕ್ಕೆ ಬಂದಿತ್ತು. ಅದನ್ನು ಸಭೆಯಲ್ಲಿ ತಿಳಿಸಿದ್ದರು ಕೂಡ. ಆಗ ಕೃತಿಯವರ ಮಾತನ್ನು ಕೇಳಿದವರು ಒಮ್ಮೆಲೇ ಜೋರಾಗಿ ನಕ್ಕುಬಿಟ್ಟಿದ್ದರು.

ಪ್ರತಿಯೊಂದರ ಕುರಿತು ಬಹಳ ಮಾತನಾಡುತ್ತಿದ್ದೆ ಮತ್ತು ಪ್ರತಿಯೊಂದರ ಬಗ್ಗೆಯೂ ಸ್ವಂತ ಅಭಿಪ್ರಾಯ ಹೊಂದಿದ್ದೆ ಎನ್ನುತ್ತಾರೆ ಕೃತಿ. ವಕೀಲರಿಂದ ಬಂದ ಹೊಗಳಿಕೆಯ ಮಾತುಗಳು ಅವರನ್ನು ಆರ್ಕಿಟೆಕ್ಟರ್ ಆಗಬೇಕೆಂಬ ಬಯಕೆಯಿಂದ ಕಾನೂನು ಕಲಿಯಬೇಕೆಂಬ ನಿರ್ಧಾರಕ್ಕೆ ಬರುವಂತೆ ಮಾಡಿತು.

ಯಶಸ್ಸು ಸುಲಭವಾಗಿ ದೊರಕುವುದಿಲ್ಲ...

ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ಮುಗಿದ ಕೂಡಲೇ ಅಂದರೆ ತಮ್ಮ 15ನೇ ವಯಸ್ಸಿನಲ್ಲೇ ವೃತ್ತಿ ಬದುಕಿಗೆ ಧುಮುಕಿದವರು ಕೃತಿ. ಆದರೆ ತಂದೆ ಅವರಿಗೆ ಇದಕ್ಕೆ ಸುಲಭವಾಗಿ ಅವಕಾಶ ಮಾಡಿಕೊಡಲಿಲ್ಲ. ಮುಂದಿನ 2 ವರ್ಷಗಳ ಕಾಲ ಕೃತಿ 23 ವಿಭಿನ್ನ ವಿಭಾಗಗಳಲ್ಲಿ ಕಾರ್ಯನಿರ್ವಹಿಸಬೇಕಾಯಿತು. ಇಂದು ಕೃತಿಗೆ ವರದಿ ಸಲ್ಲಿಸುತ್ತಿರುವ ಅನೇಕರ ಕೈಕೆಳಗೆ ಅವರು ಕೆಲಸ ಮಾಡಬೇಕಾಗಿತ್ತು. ಸಾಧನೆಯೊಂದೇ ಕೃತಿಯವರ ಗುರಿಯಾಗಿತ್ತು.

ಬಾಸ್‌ನ ಮಗಳಾಗಿದ್ದುದರಿಂದ ಕೃತಿಯವರು ಇನ್ನಷ್ಟು ಶಿಸ್ತಿನಿಂದ ವರ್ತಿಸಬೇಕಾಗಿತ್ತು. ತಾವೊಬ್ಬ ಉತ್ತಮ ಪ್ರತಿಭೆ ಎಂಬುದನ್ನು ಸಮರ್ಥಿಸಿಕೊಳ್ಳುವ ಕೃತಿ, ಪ್ರತಿಭೆಯ ವಿಚಾರದಲ್ಲಿ ತಾವು ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದ್ದಾಗಿ ಹೇಳಿಕೊಳ್ಳುತ್ತಾರೆ. ಕೃತಿಯವರ ಚಿಕ್ಕವಯಸ್ಸಿನಲ್ಲೇ ಅವರ ಬಗ್ಗೆ ಎಲ್ಲರಿಗೂ ಒಂದು ಸದಭಿಪ್ರಾಯ ಮೂಡಿತ್ತು.

ತಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಅವರ ತಂದೆ ಲಲಿತ್ ಕುಮಾರ್ ಅವರ ದೂರದೃಷ್ಟಿಯ ಕೆಲಸಗಳು ಮತ್ತು ವಿಸ್ತಾರವಾದ ನೆಟ್‌ವರ್ಕ್ ಅನ್ನು ದೂರವಾಣಿಯ ಮೂಲಕ ಬಳಸಿಕೊಂಡು ಕೃತಿಗೆ ವಾಸ್ತುಪ್ರಕಾರದ ವಿನ್ಯಾಸಗಳು ಹಾಗೂ ವೆಂಟಿಲೇಶನ್ ವಿನ್ಯಾಸ ಮಾಡಲು ಸಹಾಯಕವಾದವು. 2 ವರ್ಷ ತರಬೇತಿ ಪಡೆದ ಬಳಿಕ ಅವರನ್ನು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಇದರೊಂದಿಗೆ ಕೃತಿಯವರು ಬಿಬಿಎ ಮತ್ತು ಎಲ್ಎಲ್‌ಬಿ ಪದವಿಯನ್ನೂ ಸಹ ಯಶಸ್ವಿಯಾಗಿ ಮುಗಿಸಿದರು.

ಚಿಕ್ಕವಯಸ್ಸಿನಲ್ಲೇ ಆತ್ಮವಿಶ್ವಾಸದಿಂದ ವೃತ್ತಿನಿರತರಾದ ಕಾರಣ ಕೃತಿಯವರಿಗೆ ಲಿಂಗತಾರತಮ್ಯದಂತಹ ಸಮಸ್ಯೆಗಳ ಕುರಿತು ಯೋಚಿಸುವ ಅವಕಾಶವೂ ದೊರೆಯಲಿಲ್ಲ. ಅಂತಹ ಸಮಸ್ಯೆಗಳನ್ನು ಅವರು ಎದುರಿಸಲೂ ಇಲ್ಲ. ಟಾಮ್ ಬಾಯ್ ರೀತಿಯಲ್ಲೇ ಬೆಳೆದ ಕೃತಿಯವರಿಗೆ ಕನ್ಸ್ ಟ್ರಕ್ಷನ್ ವಿಭಾಗದಲ್ಲಿ ತಾವೊಬ್ಬರೇ ಹುಡುಗಿ ಎಂಬ ಭಾವನೆ ಮೂಡಲೇ ಇಲ್ಲ. ಅಥವಾ 90 ಇತರ ಕನ್ಸ್‌ ಟ್ರಕ್ಟರ್ ಗಳ ಜೊತೆ ಅಂತರಾಷ್ಟ್ರೀಯ ಪ್ರವಾಸ ಹೋಗುವಾಗಲೂ ನಾನೊಬ್ಬಳೇ ಹುಡುಗಿ ಎಂಬ ಭಾವನೆ ಮೂಡಲಿಲ್ಲ.

ಆದರೆ ತಾವು ಹುಡುಗಿ ಎಂಬುದನ್ನು ನೆನಪಿಸಿದ ಪ್ರಸಂಗವನ್ನು ನೆನೆಸಿಕೊಂಡು ಕೃತಿ ನಗುತ್ತಾರೆ. 5 ವರ್ಷಗಳ ಹಿಂದೆ ಒಂದು ಡೆವಲಪರ್ ಮೀಟ್‌ನಲ್ಲಿ ಭಾಗಿಯಾಗಿದ್ದಾಗ ಪುಣೆಯ ಸಿಆರ್‌ಇಡಿಎಐ ಅಧ್ಯಕ್ಷರು 200 ಮಂದಿಯನ್ನು ಉದ್ದೇಶಿಸಿ ಮಾತನಾಡುವಾಗ ಮೈ ಫೆಲೋ ಡೆವಲಪರ್ಸ್ ಅಂಡ್ ದ ಲೇಡಿ ಎಂದು ಸಂಭೋದಿಸಿದ್ದರು. ಇದನ್ನು ನೆನಪಿಸಿಕೊಂಡು ಕೃತಿ, ಅವರು ನನ್ನ ದ ಲೇಡಿ ಎಂದು ಕರೆದಿದ್ದರು ಎಂದು ಈಗಲೂ ನಗುತ್ತಾರೆ. ಉದ್ಯಮ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಮಹಿಳೆಯೊಬ್ಬಳು ಏನನ್ನು ಹೇಳುತ್ತಾಳೆ ಎಂಬುದನ್ನು ಕೇಳಲು ಇಚ್ಛಿಸುತ್ತಾರೆ. ಉದ್ಯಮದ ಕುರಿತು ಮಹಿಳೆಯ ದೃಷ್ಟಿಕೋನಗಳ ಬಗ್ಗೆ ತಿಳಿಯಲು ಉತ್ಸುಕರಾಗಿರುತ್ತಾರೆ ಎಂಬುದು ಕೃತಿಯವರ ಅಭಿಮತ.

ಕೃತಿಯವರ ಸ್ಪೂರ್ತಿ

ಕೃತಿಯವರಿಗೆ ಅವರ ತಂದೆಯೇ ಸ್ಪೂರ್ತಿ. ಅವರ ಕುಟುಂಬದಿಂದಲೇ ಕೃತಿಯವರಿಗೆ ಉದ್ಯಮಶೀಲತೆ ಸಿದ್ಧಿಸಿದೆ. ಸಾಧನೆಯ ತುಡಿತ ಅವರ ರಕ್ತದಲ್ಲೇ ಇದೆ. ತಮ್ಮ ತಂದೆ ಲಲಿತ್ ಕುಮಾರ್ ಜೈನ್ ಅವರ ಬಗ್ಗೆ ಕೃತಿಯವರಿಗೆ ಹೆಮ್ಮೆ ಇದೆ. ತಂದೆಯನ್ನು ದೂರದೃಷ್ಟಿ ಹೊಂದಿರುವ ವ್ಯಕ್ತಿ ಮತ್ತು ಅತ್ಯುತ್ತಮ ಮಾರ್ಗದರ್ಶಕ ಎನ್ನುತ್ತಾರೆ ಕೃತಿ. ಕೃತಿಯನ್ನು ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಿದವರು ಅವರ ತಂದೆ ಲಲಿತ್ ಕುಮಾರ್ ಜೈನ್. ಕಲಾಟ್ರವ ಮತ್ತು ಜಹಾ ಹದೀದ್ ಅವರಿಂದಲೂ ಕೃತಿಯವರು ಪ್ರೇರೇಪಿತರಾಗಿದ್ದಾರೆ. ಭಾರತದಲ್ಲಿ ಇನ್ನೂ ಅಪ್ರಸ್ತುತವಾಗಿದ್ದ ಪೆರಾಮೆಟ್ರಿಕ್ ಕಟ್ಟಡಗಳಿಂದಲೂ ಅವರು ಸ್ಪೂರ್ತಿ ಪಡೆದಿದ್ದರು.

ಯಶಸ್ಸಿನತ್ತ ಕೊಂಡೊಯ್ದ ಅಂಶಗಳು

ವೈಯಕ್ತಿಕ ಜೀವನದಲ್ಲಾಗಲಿ ಅಥವಾ ವೃತ್ತಿಜೀವನದಲ್ಲಾಗಲೀ ಯಶಸ್ಸಿಗಾಗಿ ಏಕಾಗ್ರತೆ ಮತ್ತು ಶಿಸ್ತು ಅತೀ ಮುಖ್ಯ ಎನ್ನುತ್ತಾರೆ ಕೃತಿ. ತಮ್ಮ 11ನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟ ಹಾಕಿ ಪಂದ್ಯದಲ್ಲಿ ಅವರು ಭಾಗಿಯಾಗಿದ್ದರು. 13ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಪ್ರವಾಸ ಹೋಗಬೇಕೆಂಬ ಮನಸ್ಥಿತಿಯಲ್ಲಿದ್ದಾಗಲೂ ಅಷ್ಟೇ. ಪ್ರತಿದಿನವೂ ಬೆಳಗ್ಗೆ 7.30ಕ್ಕೆ ತಿಂಡಿ ಮುಗಿಸಿ ತಂದೆಯೊಂದಿಗೆ ಆಫೀಸ್‌ಗೆ ತೆರಳುತ್ತಿದ್ದರು.

ತಮ್ಮ 15ನೇ ವಯಸ್ಸಿನಲ್ಲಿ, ಆ ವಯಸ್ಸಿನ ಎಲ್ಲಾ ಮಕ್ಕಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ವೇಳೆಯಲ್ಲಿ ಕೃತಿ ವಿವಿಧ ರೀತಿಯ ತರಬೇತಿ ಪಡೆಯುವುದರಲ್ಲಿ ನಿರತರಾಗಿದ್ದರು. 17ನೇ ವಯಸ್ಸಿನಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದಾಗಲೂ ಕೃತಿ 8 ಗಂಟೆಯ ವೇಳೆಗೆಲ್ಲಾ ಆಫೀಸ್‌ನಲ್ಲಿ ಹಾಜರಿರುತ್ತಿದ್ದರು.

ತಮ್ಮ ಸ್ನೇಹಿತರು ತಮಗೆ ಸಹಕರಿಸಿದ ರೀತಿಯ ಬಗ್ಗೆ ಕೃತಿ ನಗುತ್ತಾರೆ. ತಮ್ಮ ಸಾಮಾಜಿಕ ವಲಯಕ್ಕೆ ಕೃತಿ ಕೃತಜ್ಞರಾಗಿದ್ದಾರೆ. ಮೊದ ಮೊದಲು ಕೃತಿಯವರಿಗೆ ವೃತ್ತಿಯಲ್ಲಿ ಅಂತಹ ಆಸಕ್ತಿ ಮೂಡಿರಲಿಲ್ಲ. ಸಹಜವಾಗಿ 17 ವರ್ಷದ ಯಾವುದೇ ಹುಡುಗ ಹುಡುಗಿಯರಲ್ಲಿ ಅಂತಹ ಆಸಕ್ತಿ ಇರುವುದಿಲ್ಲ. ಆದರೆ ಕೃತಿಯವರ ಸ್ನೇಹಿತರು ಕೃತಿಯಲ್ಲಿದ್ದ ವೈಶಿಷ್ಟ್ಯತೆಯನ್ನು ಗಮನಿಸಿ ಅವರಿಗೆ ಅಗತ್ಯವಿದ್ದ ಪ್ರೋತ್ಸಾಹವನ್ನು ನೀಡಿದ್ದರು. ಕೃತಿಯ ವಿದ್ಯಾಭ್ಯಾಸದ ವಿಚಾರದಲ್ಲಿ, ಸಾಮಾಜಿಕ ಯೋಜನೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರಲ್ಲಿ, ಅವರ ಸಮಯಕ್ಕೆ ತಕ್ಕಂತೆ ಯೋಜನೆಗಳನ್ನು ಹಾಕಿಕೊಳ್ಳುವುದು ಈ ರೀತಿಯ ಕೆಲಸಗಳನ್ನು ಕೃತಿಯ ಸ್ನೇಹಿತರು ಮಾಡುತ್ತಿದ್ದರು. ಹೀಗಾಗಿ ಕೃತಿಯವರಿಗೆ ಆ ದಿನಗಳಲ್ಲಿ ತಾನೇನನ್ನೋ ಕಳೆದುಕೊಂಡೆ ಎಂಬಂತಹ ಭಾವನೆಗಳು ಮೂಡದಿರುವ ಹಾಗೆ, ಕೃತಿಗೆ ಅಗತ್ಯವಿದ್ದಾಗ ಸಿಗುವ ರೀತಿಯಲ್ಲಿ ಅವರ ಸ್ನೇಹಿತರು ನಡೆಸಿಕೊಂಡರು. “ಸ್ನೇಹಿತರಲ್ಲಿ ಕೆಲವರು ನನ್ನ ಉದ್ಯಮಕ್ಕೆ ಅನುಕೂಲವಾಗುವಂತಹ ವಾತಾವರಣವನ್ನು ಕಲ್ಪಿಸಿಕೊಟ್ಟರು. ಈ ಬಗ್ಗೆ ನನಗೆ ಸಂತೋಷವಿದೆ. ಈಗಲೂ ನನಗೆ 13 ರಿಂದ 70 ವರ್ಷ ವಯಸ್ಸಿನವರೆಗೂ ಸ್ನೇಹಿತರಿದ್ದಾರೆ ” ಎನ್ನುತ್ತಾ ಮಾತು ಮುಗಿಸುತ್ತಾರೆ ಕೃತಿ.