ಹೊಸ ಉದ್ಯಮದ ಆರಂಭ ಹೇಗೆ..?

ಟೀಮ್​​ ವೈ.ಎಸ್​​.ಕನ್ನಡ

ಹೊಸ ಉದ್ಯಮದ ಆರಂಭ ಹೇಗೆ..?

Tuesday November 24, 2015,

3 min Read

ಹೊಸ ಉದ್ಯಮ ಆರಂಭಕ್ಕೆ ಮೊದಲು ಯೋಜನೆ ಅತ್ಯಗತ್ಯ. ಇಷ್ಟೇ ಅಲ್ಲ ಕೆಲಸದ ಮೇಲೆ ಶ್ರದ್ಧೆಯೂ ತುಂಬಾ ಮುಖ್ಯ. ಹಾಗಾದ್ರೆ ಹೊಸ ಉದ್ಯಮವನ್ನು ಅಥವಾ ಸಂಸ್ಥೆಯನ್ನು ಆರಂಭಿಸಿದ ಕೂಡಲೇ ಏನು ಮಾಡಬೇಕು ಅನ್ನೋದನ್ನು ಈಗ ತಿಳ್ಕೊಳ್ಳೋಣ.

1.ಖಾಸಗಿ ಸಂಸ್ಥೆ ಅಥವಾ ಸಹಭಾಗಿತ್ವ ಸಂಸ್ಥೆ ಎಂದು ನೋಂದಾಯಿಸುವುದಾ..? ಇದು ಸರಿಯಾ..?

ಅಲ್ಲ- ಇದು ತಪ್ಪು. ಬದಲಾಗಿ ನಿಮ್ಮ ಉತ್ಪನ್ನಗಳಿಗೆ ಗ್ರಾಹಕರನ್ನು ಹುಡುಕುವುದು. ನಿಮ್ಮ ಉತ್ಪನ್ನ ಸಿದ್ದವಾಗಿರದಿದ್ದರೂ ಪರವಾಗಿಲ್ಲ.. ಬಳಕೆದಾರರನ್ನು ಗುರುತಿಸಿ. ಇದು ಸಾಂಪ್ರದಾಯಿಕ ವ್ಯಾಪಾರ ನೀತಿಗೆ ವಿರುದ್ಧವಾಗಿ ಕಾಣಿಸಬಹುದು. ಇದರ ಜೊತೆಯಲ್ಲಿ ಮತ್ತೊಂದು ಸಲಹೆ. ನಿಮ್ಮ ಉತ್ಪನ್ನಗಳಿಗೆ ಮೊದಲ ದಿನವೇ ಆದಾಯ ದೊರೆತರೆ ತಕ್ಷಣ ನೀವು ನಿಮ್ಮ ಸಂಸ್ಥೆಯನ್ನು ನೊಂದಾಯಿಸಿಕೊಳ್ಳಬೇಕು. ಇದರೊಂದಿಗೆ ಒಂದು ಅಂಶವನ್ನು ನೀವು ನೆನಪಿನಲ್ಲಿಡಬೇಕು. ಇಂಟರ್ ನೆಟ್ ಆಧಾರಿತ ಸ್ಟಾರ್ಟ್​ ಅಪ್​ ಅಥವಾ ಹೊಸ ಉದ್ಯಮಗಳು ತಕ್ಷಣ ಆದಾಯ ತರುವುದಿಲ್ಲ. ಇದಕ್ಕೆ ತಿಂಗಳುಗಟ್ಟಲೇ ಹಿಡಿಯಬಹುದು. ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು, ಅದನ್ನು ಪ್ರಚಾರಪಡಿಸುವುದು ಮತ್ತು ಉಚಿತವಾಗಿ ಅದನ್ನು ಬಳಸಿಕೊಳ್ಳುವ ಜನರನ್ನು ಗುರುತಿಸಲು ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ.

ತಮ್ಮ ಬಳಕೆದಾರರು, ಈ ವ್ಯವಹಾರದ ಕಾನೂನು ಬದ್ಧ ಪ್ರಮಾಣಪತ್ರ ಬಯಸುತ್ತಿದ್ದಾರಾ?

ಇದು ಅಪರೂಪ. ಆದರೆ ದೊಡ್ಡ ಡೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾದರೆ, ಆ ಸಂಸ್ಥೆ, ನಿಮ್ಮ ಪೂರ್ವಾಪರ ಅಧಿಕೃತ ಪರವಾನಿಗೆ, ಬ್ಯಾಂಕ್ ದಾಖಲೆ ಪರಿಶೀಲಿಸುವ ಸಾಧ್ಯತೆಗಳಿವೆ. ಕಾನೂನು ಬದ್ಧವಾಗಿ ಸಂಸ್ಥೆಯ ಹೆಸರು ನೊಂದಾಯಿಸದಿದ್ದರೆ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ. ಇನ್ನೊಂದು ಅಂಶ ಕೂಡ ಇದೆ. ನಿಮ್ಮ ಬಳಕೆದಾರರು ಕೇವಲ ವಿಸಿಟಿಂಗ್ ಕಾರ್ಡ್ ಅಥವಾ ಲೆಟರ್ ಹೆಡ್ ಪರಿಶೀಲಿಸಲು ಬಯಸಿದ್ದಲ್ಲಿ ಯಾವುದೇ ಕಾನೂನು ತೊಡಕಿಲ್ಲದೆ ಇದನ್ನು ಮುದ್ರಿಸಲು ಕಾನೂನಿನಲ್ಲಿ ಅವಕಾಶ ಇದೆ.

2. ಯಾವಾಗ ನನಗೆ ಮೊದಲ ಆದಾಯ ದೊರೆಯಬಹುದು?

ನಿಮ್ಮ ಉತ್ಪನ್ನಗಳಿಂದ ಒಂದು ತಿಂಗಳಿನಲ್ಲಿ ನಿಮ್ಮದೆ ಆದಾಯ ದೊರೆಯಬಹುದು ಎಂಬ ಖಾತರಿ ಇದ್ದರೆ ನಿಮ್ಮ ಸಂಸ್ಥೆಯನ್ನು ಕಾನೂನು ಬದ್ಧಗೊಳಿಸಲು ಇದು ಸಕಾಲ.

ಬ್ಯಾಂಕ್ ಖಾತೆ ಆರಂಭಿಸುವ ಮೊದಲು ಚೆಕ್ ಅಥವಾ ನಗದು ಸ್ವೀಕರಿಸಬಹುದಾಗಿದೆ. ಭಾರತದಲ್ಲಿ ನೊಂದಾವಣೆ ಪ್ರಕ್ರಿಯೆಗೆ ಸಮಯ ತಗಲುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಬರುವ ಒಂದು ತಿಂಗಳ ಮೊದಲು ಈ ಪ್ರಕ್ರಿಯೆ ಆರಂಭಿಸಿದರೆ ಸೂಕ್ತ.

image


3. ಸರ್ಕಾರದ ಸಂಸ್ಥೆಗಳಿಂದ ಅಂಗೀಕಾರ ಅಥವಾ ಮಾನ್ಯತೆ ಪಡೆಯಬೇಕೆ?

ಇಂಟರ್ ನೆಟ್ ಆಧಾರಿತ ಸಂಸ್ಥೆಗಳು ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯುವ ಮೊದಲೇ ತಮ್ಮ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ನಿರತವಾಗಿವೆ.

ಆದರೆ ಕೆಲವು ಉತ್ಪನ್ನಗಳಿಗೆ ಪರವಾನಿಗೆ ಅತ್ಯಗತ್ಯ ಎಂದು ಕಂಡು ಬಂದಲ್ಲಿ ಇದನ್ನು ತಕ್ಷಣ ಹೊಂದಿರಬೇಕು. ಉಬೇರ್. ಒಲಾ ಟ್ಯಾಕ್ಸಿ ಸಂಸ್ಥೆ ಎದುರಿಸಿದಂತಹ ಯಾವುದೇ ಸಮಸ್ಯೆ ತಮಗೆ ಎದುರಾಗದು ಎಂಬುದು ನನ್ನ ನಂಬಿಕೆ.

4. ಬಾಹ್ಯ ಹಣಕಾಸು ನೆರವಿನ ಅಗತ್ಯ ಇದೆಯಾ?

ಹೊಸ ಯೋಜನೆ ಅಥವಾ ಸ್ಟಾರ್ಟ್ ಅಪ್ ಪ್ರಸ್ತಾಪಗಳಿಗೆ ಎರಡು ವಿಧದ ಬಾಹ್ಯ ಹಣಕಾಸಿನ ನೆರವಿನ ಪ್ರಸ್ತಾಪ ಇದೆ. ಬ್ಯಾಂಕ್ ಸಾಲ ಮತ್ತು ವೆಂಚರ್ ನಿಧಿ. ಉತ್ತಮ ಆರ್ಥಿಕ ಹಿನ್ನೆಲೆಹೊಂದಿರುವ

ಸಂಸ್ಥೆಗಳಿಗೆ ಸ್ಥಿರ ಸೊತ್ತುಗಳನ್ನು ಪರಿಗಣಿಸಿ ಬ್ಯಾಂಕ್ ಗಳು ನಿರ್ಧಾರ ಕೈಗೊಳ್ಳುತ್ತವೆ. ಕೆಲವು ಬಾರಿ ಇದಕ್ಕೂ ಮೀರಿ ಬ್ಯಾಂಕ್​​ಗಳು ಹಣಕಾಸಿನ ನೆರವು ನೀಡುವ ಸಾಧ್ಯತೆಗಳಿವೆ

ಇನ್ನು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೊದಲು ಅಂದರೆ ವೆಂಚರ್ ಕ್ಯಾಪಿಟಲ್ ಅಥವಾ ನೆರವು ನಿಧಿ ಸ್ವೀಕರಿಸುವ ಮೊದಲು ಸಂಸ್ಥೆಯನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕಿದೆ.

ಇನ್ನು ಹೂಡಿಕೆದಾರರಿಂದ ಖಾತರಿ ಇದ್ದರೆ ಕೊನೆಯ ಕ್ಷಣದ ತನಕ ನಿರೀಕ್ಷೆ ಮಾಡಬಹುದು. ಸಂಸ್ಥೆಯಲ್ಲಿ ಹಣ ಹೂಡಲು ಸಿದ್ಧರಾಗಿದ್ದರೆ ತಕ್ಷಣ ಅದನ್ನು ನೊಂದಾಯಿಸಿ.

5. ಸರ್ಕಾರದ ಹಲವು ಯೋಜನೆಗಳಿಂದ ರಿಯಾಯಿತಿ ಅಥವಾ ಸಬ್ಸಿಡಿ ದೊರೆಯಬಹುದಾ?

ಸರ್ಕಾರದಿಂದ ಪ್ರಯೋಜನ ಲಭಿಸಬೇಕಾದರೆ ಅಥವಾ ಅದನ್ನು ನಿರೀಕ್ಷಿಸುತ್ತಿದ್ದರೆ ಸಂಸ್ಥೆಯನ್ನು ನೊಂದಾಯಿಸಿಕೊಳ್ಳಬೇಕು. ಹೊಸ ಯೋಜನೆಗಳಿಗೆ ಅಂದರೆ ವಿನೂತನ ಯೋಜನೆಗಳಿಗೆ ಸರ್ಕಾರ ಹಲವು ರೀತಿಯ ಪ್ರೋತ್ಸಾಹ ನೀಡುತ್ತಿದೆ. ನವೀಕರಿಸಬಹುದಾದ ಇಂಧನ, ಕೃಷಿ. ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿನೂತನ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ. ಕೆಲವು ಖಾಸಗಿ ಸಂಸ್ಥೆಗಳು ಕೂಡ ಇದಕ್ಕೆ ಅನುದಾನ ನೀಡುತ್ತಿವೆ.

6. ಖಾಸಗಿ ನಿಯಮಿತ, ಮಾಲಿಕತ್ವ, ಸಹಭಾಗಿತ್ವ ಈ ರೀತಿಯ ವರ್ಗೀಕರಣ ನಿರ್ಧರಿಸುವುದು ಹೇಗೆ?

ಒಂದು ಸಂಸ್ಥೆಯಲ್ಲಿ ಅದರ ಮಾಲಿಕತ್ವವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಇಚ್ಚಿಸುವುದಾದರೆ. ಅಂತಹ ಸಂದರ್ಭದಲ್ಲಿ ಖಾಸಗಿ ನಿಯಮಿತ ಆಯ್ಕೆ ಸೂಕ್ತ.

ಖಾಸಗಿ ನಿಯಮಿತ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರದ ಸಲಹೆ ಸೂಚನೆಗಳನ್ನು ನಿಬಂಧನೆಗಳನ್ನು ಪಾಲಿಸಬೇಕಾಗಿದೆ. ಇದು ತಲೆ ನೋವಾದರೂ ಒಳ್ಳೆಯ ಯೋಜನೆ. ಸಂಪನ್ಮೂಲ ಮತ್ತು ಆರ್ಥಿಕ ಬಲ ಜೊತೆಗಿದ್ದರೆ ಉತ್ತಮ ಕಲ್ಪನೆ ಇದಾಗಿದೆ.

ಸಂಸ್ಥೆಯ ಏಕೈಕ ಮಾಲೀಕ ನಾನಿಗರೇಬೇಕು ಎಂಬ ಆಶಯ ನಿಮ್ಮಲಿದ್ದರೆ ಮಾಲಿಕತ್ವವೇ ಸೂಕ್ತ. ಇದಕ್ಕೆ ಹೆಚ್ಚಿನ ದಾಖಲೆಯ ಅಗತ್ಯ ಇಲ್ಲ. ನಿಮ್ಮ ಪಾನ್ ಕಾರ್ಡ್ ಒಂದೇ ಸಾಕು.

ಸಂಸ್ಥೆಯ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು. ನಿಮ್ಮ ಮಿತ್ರರೊಂದಿಗೆ ಸೇರಿ ಉದ್ಯಮ ಆರಂಭಿಸಲು ಬಯಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಸಹಭಾಗಿತ್ವ ಯೋಜನೆ ಸೂಕ್ತ.

ಛಾಪಾ ಕಾಗದದ ಮೇಲೆ ಎಲ್ಲವೂ ಮುದ್ರಿತವಾಗಿರಬೇಕು. ಪಾನ್ ಕಾರ್ಡ್ ಲಭಿಸಿದ ಕೂಡಲೇ ಬ್ಯಾಂಕ್ ಖಾತೆ ತೆರೆಯಬೇಕು. ಮುಂದೆ ನಿಮ್ಮ ಸಂಸ್ಥೆ ಯಾವುದಾದರೂ ಕಾನೂನು ತೊಡಕು ಎದುರಿಸಿದ್ದರೆ ಅದಕ್ಕೆ

ಎಲ್ಲರೂ ಜವಾಬ್ದಾರರು. ನಷ್ಟ ಸಂಭವಿಸಿದರೆ ಸಮಾನ ಭಾಗಿದಾರರು. ಸೀಮಿತ ಬಾಧ್ಯತಾ ಸಹಭಾಗಿತ್ವ ಎಂಬ ಮಾರ್ಗವೂ ಇದೆ. ಇದನ್ನೇ ಸಂಕ್ಷಿಪ್ತವಾಗಿ ಎಲ್ ಎಲ್ ಪಿ ಎಂದೇ ಕರೆಯುತ್ತಾರೆ. ಈ ಯೋಜನೆ ಅನ್ವಯ ಹೆಚ್ಚಿನ ದಾಖಲೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಸರ್ಕಾರದ ರೀತಿ ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಎಲ್ಲ ಸಲಹೆ - ಸೂಚನೆ ಹೊರತಾಗಿಯೂ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಲೆಕ್ಕ ಪರಿಶೋಧಕರನ್ನು ಒಮ್ಮೆ ಸಮಾಲೋಚಿಸಿ.. ಇದು ಎಲ್ಲ ಸಮಸ್ಯೆ, ಸಂಶಯಗಳನ್ನು ನಿವಾರಿಸಲಿದೆ.