ಸಾಂಕೇತಿಕ ಭಾಷೆ ಮೂಲಕ ಕಿವುಡ ಕಲಾವಿಧರಿಗೆ ದನಿಯಾದ ಯುವತಿ..

ಟೀಮ್​​ ವೈ.ಎಸ್​​.

ಸಾಂಕೇತಿಕ ಭಾಷೆ ಮೂಲಕ ಕಿವುಡ ಕಲಾವಿಧರಿಗೆ ದನಿಯಾದ ಯುವತಿ..

Thursday October 22, 2015,

3 min Read

ಪ್ರೀತಿಗೆ ಭಾಷೆ ಇಲ್ಲ. ಅದನ್ನು ಹೇಗೆ ಬೇಕಾದರೂ ಹೇಳಬಹುದು ಎಂಬುದನ್ನು ಮನದಟ್ಟು ಮಾಡಿಕೊಂಡವರು ಸ್ಮೃತಿ ನಾಗ್​ಪಾಲ್. ಇವರ ಒಡಹುಟ್ಟಿದವರು ಶ್ರವಣ ದೋಷದಿಂದ ಬಳಲುತ್ತಿದ್ದರು. ಆದರೆ ಅವರು ಸಂಬಂಧಿಕರೊಂದಿಗೆ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲಿಲ್ಲ. ಒಡಹುಟ್ಟಿದವರಿಗೆ ದನಿಯಾಗಲು ಬಯಸಿದ ಸ್ಮೃತಿ ಸಾಂಕೇತಿಕ ಭಾಷೆ ಕಲಿಯಲು ಮುಂದಾದರು.

23 ವರ್ಷದ ಸ್ಮೃತಿ ಸಾಮಾಜಿಕ ಸೇವಾ ಸಂಸ್ಥೆ 'ಅತುಲ್ಯಕಲಾ'ದ ಸಿಇಓ ಹಾಗೂ ಸಂಸ್ಥಾಪಕಿಯಾಗಿದ್ದಾರೆ. ಶ್ರವಣ ದೋಷವಿರುವ ಕಲಾವಿದರಿಗೆ ಬೆಳಕಾಗುವುದು ಇದರ ಉದ್ದೇಶವಾಗಿದೆ. ಸ್ಮೃತಿಗೆ ಅವರಿಗಿಂತ 10 ವರ್ಷ ದೊಡ್ಡವರಾದ ಇಬ್ಬರು ಒಡಹುಟ್ಟಿದವರಿದ್ದಾರೆ. ಅವರ ಜೊತೆ ಸಾಂಕೇತಿಕ ಭಾಷೆಯಿಂದ ಮಾತ್ರ ಮಾತುಕತೆ ನಡೆಸಲು ಸಾಧ್ಯ. ಹೀಗಾಗಿ ಸಾಂಕೇತಿಕ ಭಾಷೆ ಕಲಿಯುವುದು ಅನಿವಾರ್ಯವಾಯ್ತು. ಅದೇ ಸ್ಮೃತಿ ಮಾತೃ ಭಾಷೆಯಾಯ್ತು. ಪಾಲಕರು ಹಾಗೂ ಒಡಹುಟ್ಟಿದವರ ನಡುವೆ ಸ್ಮೃತಿ ಸೇತುವೆಯಾದರು.

image


ಭಾರತದಲ್ಲಿ ಲಕ್ಷಾಂತರ ಮಂದಿ (0.9 ರಿಂದ 14 ಮಿಲಿಯನ್) ಶ್ರವಣ ದೋಷದಿಂದ ಬಳಲುತ್ತಿರುವವರು ಇದ್ದಾರೆ. ಭಾರತ ಅತಿ ಹೆಚ್ಚು ಅಂಗವೈಕಲ್ಯ ಹೊಂದಿದ ದೇಶವಾಗಿದೆ. ಇಂತವರು ಸಮುದಾಯದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅವರನ್ನು ಸಂಪರ್ಕಿಸಲು ಎರಡೇ ಮಾರ್ಗಗಳಿವೆ. ಒಂದು ಬರವಣಿ. ಇನ್ನೊಂದು ಸಾಂಕೇತಿಕ ಭಾಷೆ. ರಚನೆಯ ಕೊರತೆ ಮತ್ತು ಕಾರ್ಯನೀತಿಗಳಿಂದ ಅವರಿಗೆ ಸರಿಯಾಗಿ ಬರೆಯುವುದನ್ನು ಕಲಿಯಲು ಸಾಧ್ಯವಾಗುತ್ತಿಲ್ಲ.

ಒಡಹುಟ್ಟಿದವರ ಸಮಸ್ಯೆಯನ್ನು ಸ್ಮೃತಿ ಸಂಪೂರ್ಣ ಅರಿತಿದ್ದರು. ಹಾಗಾಗಿ ತಮ್ಮ 16ನೇ ವಯಸ್ಸಿನಲ್ಲಿ ಡೆಫ್ ನ್ಯಾಷನಲ್ ಅಸೋಸಿಯೇಷನ್ (NAD)ನಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಇದೇ ಮುಂದೊಂದು ದಿನ ಅವರು ಸಮಾಜಕ್ಕೆ ಕೊಡುಗೆ ನೀಡಲು ಸಹಾಯವಾಯ್ತು. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಸ್ಮೃತಿಗೆ ಟಿವಿ ಚಾನೆಲ್ ಒಂದರಿಂದ ಸಂದರ್ಶನಕ್ಕೆ ಕರೆ ಬಂತು. ಅಲ್ಲಿ ಸಾಂಕೇತಿಕ ಭಾಷೆಗೆ ವ್ಯಾಖ್ಯಾನ ನೀಡುವ ಕೆಲಸಕ್ಕೆ ಅವರು ಆಯ್ಕೆಯಾದರು. ಹಾಗಾಗಿ ಸ್ಮೃತಿ ದೂರದರ್ಶನ ನೆಟ್ ವರ್ಕ್ ನಲ್ಲಿ ಪ್ರತಿದಿನ ಬೆಳಿಗ್ಗಿನ ಸಾಂಕೇತಿಕ ಭಾಷಾ ಬುಲೆಟಿನ್ ಜವಾಬ್ದಾರಿ ವಹಿಸಿಕೊಂಡರು.

ಈ ಕೆಲಸ ಕಿವುಡ ಸಮುದಾಯದ ಸಮಸ್ಯೆಗಳನ್ನು ತಿಳಿದುಕೊಂಡು,ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಿತು.ಏಳು ತಿಂಗಳ ನಂತರ ಒಬ್ಬರ ಕಥೆ ಸ್ಮೃತಿಗೆ ಪ್ರೇರಣೆಯಾಯ್ತು. ಸ್ನಾತಕೋತ್ತರ ಪದವಿ ಪಡೆದಿದ್ದ ಹಿರಿಯ ಕಲಾವಿದರೊಬ್ಬರುನ್ನು ಸ್ಮೃತಿ ಭೇಟಿಯಾದಾಗ ಅವರ ಕಷ್ಟ ಸ್ಮೃತಿಗೆ ಅರ್ಥವಾಯ್ತು.. ಸ್ನಾತಕೊತ್ತರ ಪದವಿ ಪಡೆದಿದ್ದ ಆ ಕಲಾವಿದರು ಎನ್ ಜಿಓ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿದ್ದ ಪ್ರತಿಭೆ ವ್ಯರ್ಥವಾಗುತ್ತಿದೆ ಎಂಬುದನ್ನು ಅರಿತ ಸ್ಮೃತಿ, ಮನೆಗೆ ಬಂದು ಈ ಬಗ್ಗೆ ಅಭ್ಯಾಸ ಮಾಡಿದರು. ದಿಟ್ಟ ನಿರ್ಧಾರಕ್ಕೆ ಬಂದರು. ಸ್ನೇಹಿತ ಹರ್ಷಿತ್ ಜೊತೆ ಸೇರಿ ಅತುಲ್ಯಕಲಾ ಸ್ಥಾಪಿಸಿದರು

image


ಅತುಲ್ಯಕಲಾ ಒಂದು ಲಾಭದಾಯಕ ಸಂಸ್ಥೆಯಾಗಿದೆ. ಇದು ಕಿವುಡ ಕಲಾವಿದರು, ಬೆಳೆಯಲು,ಕಲಿಯಲು,ಗೌರವ ಹಾಗೂ ಹೆಮ್ಮೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ. ಕಿವುಡ ಕಲಾವಿದರ ಕಲೆಯನ್ನು ಆನ್​ಲೈನ್ ಹಾಗೂ ಆಫ್​​ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ ಎನ್​​ಜಿಓಗಳಿಗಿಂತ ಇದು ಭಿನ್ನವಾಗಿದೆ. ಕಲಾವಿದರ ಸೃಜನ ಶೀಲತೆಗೆ ಈ ಸಂಸ್ಥೆ ಒತ್ತು ನೀಡುತ್ತದೆ. ಕಲಾವಿದರು ತಮ್ಮ ಪ್ರತಿಭೆಯನ್ನು ಹೊರಹಾಕಲು ಸ್ವಾತಂತ್ರ್ಯ ನೀಡಿದೆ. ಕಲಾವಿದರು ಹೆಸರು ಮಾಡಬೇಕೆಂಬ ಉದ್ದೇಶ ಸಂಸ್ಥೆಯದು. ತಾವು ಸಾಧಿಸಿದ್ದೇವೆಂಬ ವಿಶ್ವಾಸ ಕಲಾವಿದರಲ್ಲಿ ಮೂಡಬೇಕೆನ್ನುತ್ತಾರೆ ಸ್ಮೃತಿ.

ಅತುಲ್ಯಕಲಾ ಇನ್ನು ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಕೆಲವು ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ಕೆಲವು ಸಂಗೀತಗಾರರ ಜೊತೆ ಸೇರಿ,ಕಿವುಡ ಸಮುದಾಯಕ್ಕಾಗಿ ಹಾಡು ಮತ್ತು ಚಿತ್ರಗಳನ್ನು ರಚಿಸಲಾಗಿದೆ. ಕೇವಲ ಕಿವುಡ ಕಲಾವಿದರಿಗೊಂದೇ ಇದು ಸೀಮಿತವಾಗಿಲ್ಲ. ಕಿವುಡ ಸಮುದಾಯದ ಉನ್ನತಿಯನ್ನು ಬಯಸುತ್ತಿದೆ ಅತುಲ್ಯಕಲಾ. ಸಂಕೇತ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಶಿಕ್ಷಣದಿಂದ ಮುಂದಿನ ಪೀಳಿಗೆಯಲ್ಲಿ ಬದಲಾವಣೆ ತರಲು ಸಾಧ್ಯ ಎನ್ನುವ ಸ್ಮೃತಿ, ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಸಾಂಕೇತಿಕ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಸಾಮಾನ್ಯ ಜನರಿಗಾಗಿ ಕೈಪಿಡಿಯನ್ನು ಸಿದ್ಧಪಡಿಸಿದ್ದಾರೆ.

ಕಿವುಡ ಸಮುದಾಯದೊಂದಿಗೆ ತಮ್ಮ ಜೀವನವನ್ನು ಕಳೆಯುತ್ತಿರುವ ಸ್ಮೃತಿ ಉತ್ತಮ ಕಲಿಕಾ ಅನುಭವ ಹೊಂದಿದ್ದಾರೆ. ಸ್ಮೃತಿ ಕಿವುಡ ಜನರನ್ನು ಈಗ ನೋಡುವ ದೃಷ್ಟಿ ಬದಲಾಗಿದೆ. ಮೊದಲು ಅವರ ಜೊತೆ ಮಾತನಾಡಬೇಕು. ಅವರನ್ನು ಸ್ನೇಹಿರನ್ನಾಗಿ ಮಾಡಿಕೊಳ್ಳಬೇಕಂದಷ್ಟೆ ಬಯಸುತ್ತಿದ್ದರಂತೆ ಆದರೆ ಈಗ ಸಾಮರ್ಥ್ಯದ ಬಗ್ಗೆ ಅವರಿಗೆ ತಿಳಿಸಲು ಬಯಸುತ್ತಾರೆ. " ಸಮಾಜ ಅವರನ್ನು ಭಿನ್ನವಾಗಿ ನೋಡುವುರಿಂದ ಅವರಲ್ಲಿ ಆತ್ಮವಿಶ್ವಾಸವಿಲ್ಲ. ಜಗತ್ತು ಬದಲಾಗಬೇಕು. ಜನರು ಇವರನ್ನೂ ಸಾಮಾನ್ಯರಂತೆ ಕಾಣಬೇಕು’’ ಎನ್ನುತ್ತಾರೆ ಸ್ಮೃತಿ.

ಅತುಲ್ಯಕಲಾ ಆರಂಭವಾಗಿ ವರ್ಷವಾಗಿದ್ದರೂ ಅದು ತನ್ನದೇ ಆದ ಸ್ಪಷ್ಟ ಗುರಿಯನ್ನು ಹೊಂದಿದೆ.ಕಿವುಡರಿಗೆ ಉಪಯೋಗವಾಗುವ ಮಾಹಿತಿಯನ್ನು ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಕಿವುಡ ಕಲಾವಿದರಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವುದು ಸಂಸ್ಥೆಯ ಗುರಿ. ಸಮುದಾಯದಿಂದ ತಾವು ಭಿನ್ನವಾಗಿದ್ದೇವೆಂದು ಅವರು ಭಾವಿಸಬಾರದು ಎನ್ನುತ್ತಾರೆ ಸ್ಮೃತಿ.

ತನ್ನ ಕೆಲಸದ ಮೂಲಕ ಸಾಕಷ್ಟು ಮನ್ನಣೆ ಪಡೆದ ಸ್ಮೃತಿ, ಗಣರಾಜ್ಯೋತ್ಸವದ ಪಥಸಂಚಲನದ ವೇಳೆ ನ್ಯಾಷನಲ್ ಟೆಲಿವಿಷನ್​​ನಲ್ಲಿ ಸಾಂಕೇತಿಕ ಭಾಷೆಯನ್ನು ಅರ್ಥೈಸುವ ಅವಕಾಶ ಸಿಕ್ಕಿತ್ತು." ನಿಮ್ಮ ಕನಸುಗಳನ್ನು ಬಿಟ್ಟುಕೊಡಬೇಡಿ. ನಾನೊಬ್ಬ ಕನಸುಗಾರ. ಈ ವಯಸ್ಸಿನಲ್ಲಿ ಕನಸನ್ನು ಸಾಕಾರಗೊಳಿಸುತ್ತ. ಜನರಿಗೆ ಹತ್ತಿರವಾಗಬೇಕು. ನಾವಿರುವ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವುದು ನಮ್ಮ ಕರ್ತವ್ಯ. ಅದು ಕೊಡುವ ಸಂತೋಷವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಥೆ ಕಟ್ಟಬೇಕೆಂದೇನೂ ಇಲ್ಲ. ಪ್ರದಿ ದಿನ ಸಣ್ಣ ಪುಟ್ಟ ಸೇವೆ ಮಾಡಿದರೆ ಸಾಕು’’ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ ಸ್ಮೃತಿ.