ಕಾಫಿ ಟೇಸ್ಟ್​ಗೆ ಜಿಎಸ್​ಟಿ ಕಿಕ್​- ಪಿಜ್ಹಾಗೆ ಎದುರಾಗಲಿದೆ ತೆರಿಗೆ ಭಾರ

ಟೀಮ್​ ವೈ.ಎಸ್​. ಕನ್ನಡ

ಕಾಫಿ ಟೇಸ್ಟ್​ಗೆ ಜಿಎಸ್​ಟಿ ಕಿಕ್​- ಪಿಜ್ಹಾಗೆ ಎದುರಾಗಲಿದೆ ತೆರಿಗೆ ಭಾರ

Monday May 22, 2017,

2 min Read

ಬೆಳಗ್ಗೆದ್ದು ಪಿಜ್ಹಾ ತಿನ್ನಬೇಕು ಅಂದ್ರೆ ಸಾಕು, ಆನ್​ಲೈನ್​ನಲ್ಲಿ ಅಥವಾ ಮೊಬೈಲ್ ಆ್ಯಪ್​ನಲ್ಲಿ ಪಿಜ್ಹಾ ಆರ್ಡರ್ ಮಾಡಿದ್ರೆ ಮನೆ ಮುಂದೆ ಅದು ಬರುತ್ತದೆ. ಪಿಜ್ಹಾ ಹಟ್, ಡಾಮಿನೋಸ್ ಸೇರಿದಂತೆ ಹಲವು ಪಿಜ್ಹಾ ತಯಾರಿಕಾ ಕಂಪನಿಗಳು ನಿಮಗಿಷ್ಟವಾದ ಪಿಜ್ಹಾಗಳನ್ನು ಡೆಲಿವರಿ ಮಾಡುತ್ತವೆ. ಕಾಫಿ ಕುಡಿಯೋದಕ್ಕೂ ಸಮಸ್ಯೆ ಏನಿಲ್ಲ. ಕಾಫಿ ಡೇಗಳು ನಿಮಗಿಷ್ಟವಾದ ಕಾಫಿಗಳನ್ನು ಸರ್ವ್ ಮಾಡುತ್ತವೆ. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಪಿಜ್ಹಾ ಮತ್ತು ಕಾಫಿಗಳಿಗೆ ಸ್ವಲ್ಪ ಹೆಚ್ಚು ಬೆಲೆ ಕೊಡಬೇಕಾಗುತ್ತದೆ. ಬ್ರಾಂಡೆಡ್ ಕಾಫಿ ಮತ್ತು ಪಿಜ್ಹಾಗಳಿಗೆ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ (ಜಿಎಸ್​ಟಿ)ನಲ್ಲಿ ಶೇಕಡಾ 5ರಷ್ಟು ಹೆಚ್ಚುವರಿ ತೆರಿಗೆ ಕೊಡಬೇಕಾಗುತ್ತದೆ.

image


ಕಾಫಿ ಉತ್ಪನ್ನಗಳಿಗೆ ತೆರಿಗೆ ವಿಧಿಸಿರುವುದು ಹಲವು ಭಾರತೀಯ ಕುಟುಂಬಗಳಿಗೆ ಇಷ್ಟವಾಗದು. ಯಾಕಂದ್ರೆ ಭಾರತದಲ್ಲಿ ಸುಮಾರು 10,000ಕ್ಕಿಂತಲೂ ಅಧಿಕ ಬ್ರಾಂಡೆಂಡ್ ಕಾಫಿ ರಿಟೈಲರ್​ಗಳಿದ್ದಾರೆ. ಜಿಎಸ್​ಟಿ ಅನ್ವಯವಾದರೆ ಬಜೆಟ್ ಪ್ಯಾಕ್ ಎಂದು ಖರೀದಿ ಮಾಡುವ 100 ಗ್ರಾಂ ಕಾಫಿ ಪ್ಯಾಕೇಟ್​ನ ದರ ಹೆಚ್ಚಾಗಲಿದೆ. ಇಂಡಿಯನ್ ರಿಟೈಲ್ ಫೋರಂ ಪ್ರಕಾರ ಪ್ರತೀವರ್ಷ ಭಾರತದಲ್ಲಿ ಸುಮಾರು 10,000 ಕೋಟಿ ಮೌಲ್ಯದ ಫಾಸ್ಟ್ ಫುಡ್ ಸೇವನೆಯಾಗುತ್ತಿದೆ. ಭಾರತೀಯ ಕಾಫಿ ಬೋರ್ಡ್ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ ಸುಮಾರು 90,000 ಟನ್ ಕಾಫಿ ಸೇವನೆಯಾಗುತ್ತಿದೆ. ಜಿಎಸ್​ಟಿ ಅನ್ವಯವಾದರೆ ಹಲವರಿಗೆ ಅಸಂತೋಷವಾಗಲಿದೆ.

ಇದನ್ನು ಓದಿ: ಸಾಧನೆಯ ಹಿಂದಿದೆ ಬೆಟ್ಟದಂತಹ ಪರಿಶ್ರಮ- ಸಾಲ್ಸಾದಲ್ಲಿ ಗಿನ್ನೆಸ್​ ದಾಖಲೆ ಬರೆದ ಸೂರ್ಯಕಾಂತ

- ಏಷ್ಯಾದಲ್ಲಿ ಭಾರತ ಕಾಫಿ ಉತ್ಪನ್ನಗಳನ್ನು ರಫ್ತು ಮಾಡುವ ಮೂರನೇ ಅತೀ ದೊಡ್ಡ ರಾಷ್ಟ್ರ. ವಿಶ್ವದಲ್ಲಿ 6ನೇ ಅತೀ ದೊಡ್ಡ ಕಾಫಿ ಉತ್ಪಾದನಾ ಮತ್ತು 5ನೇ ಅತೀ ದೊಡ್ಡ ರಫ್ತು ದೇಶ.

- ವಿಶ್ವದಲ್ಲೇ ಉತ್ಪಾದನೆಯಾಗುವ ಒಟ್ಟು ಕಾಫಿಯ ಶೇಕಡಾ 4.05ರಷ್ಟು ಕಾಫಿ ಭಾರತದಲ್ಲೇ ಉತ್ಪಾದನೆಯಾಗುತ್ತದೆ

- 2016-17ರಲ್ಲಿ ಭಾತದಲ್ಲಿ ಕಾಫಿ ಉತ್ಪಾದನೆ 3,20,000 ಟನ್​ಗಳಾಗಿದ್ದರೆ, 2015-16ನೇ ಸಾಲಿನಲ್ಲಿ ಇದು 3,48,000 ಟನ್​ಗಳಾಗಿತ್ತು.

ಹಿಮಾಲಯದಿಂದ ಕನ್ಯಾಕುಮಾರಿ ತನಕ ಭಾರತದಲ್ಲಿ ಕಾಫಿ ಸೇವಿಸುವವರ ಪ್ರಮಾಣ ಹೆಚ್ಚಿದೆ. ಹೀಗಾಗಿ ಜಿಎಸ್​ಟಿ ಜಾರಿಯಾದ್ರೆ ಕುಡಿಯುವ ಒಂದು ಕಪ್ ಕಾಫಿಗೆ ಹೆಚ್ಚು ಬೆಲೆ ಕೊಡಬೇಕಾಗುತ್ತದೆ. ಸರಕಾರ ಕಾಫಿಯಿಂದ ತೆರಿಗೆ ಸಂಗ್ರಹಿಸಿ ಆದಾಯ ಪಡೆಯುವ ನಿರೀಕ್ಷೆಯಲ್ಲಿದೆ.

ಜುಲೈ 1 ರಿಂದ ಅನ್ವಯವಾಗುವ ಜಿಎಸ್​ಟಿ ಹಲವು ಅಗತ್ಯ ವಸ್ತುಗಳ ಮೇಲೆ ಶೇಕಡಾ 5 ರಷ್ಟು ತೆರಿಗೆ ಹೊಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಲವು ವಸ್ತುಗಳ ಬೆಲೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಇದನ್ನು ಓದಿ:

1. ಟ್ರಾಫಿಕ್ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಹೊಸ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಿದೆ ಬಿಬಿಎಂಪಿ

2. ಊರಿನ ಜನರೆಲ್ಲಾ ಒಂದಾದ್ರು- ಕಲುಷಿತಗೊಂಡಿದ್ದ ನದಿಯನ್ನು ಶುಚಿಗೊಳಿಸಿದ್ರು..!

3. ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"