ಬಾಂಗ್ಲಾ, ಶ್ರೀಲಂಕಾಕ್ಕಿಂತಲೂ ಭಾರತ ಹಿಂದೆ..!

ಟೀಮ್​ ವೈ.ಎಸ್​. ಕನ್ನಡ

ಬಾಂಗ್ಲಾ, ಶ್ರೀಲಂಕಾಕ್ಕಿಂತಲೂ ಭಾರತ ಹಿಂದೆ..!

Friday May 19, 2017,

2 min Read

ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸ್ಥಿತಿ ಚಿಂತಾಜನಕವಾಗಿದೆ. ಅಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. "ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ" ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತ ಆರೋಗ್ಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ಚೀನಾ, ಶ್ರೀಲಂಕಾ ಸೇರಿದಂತೆ ಬಾಂಗ್ಲಾದೇಶಕ್ಕಿಂತಲೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರತ ಹಿಂದಿದೆ ಅನ್ನುವುದು ಕೊಂಚ ಆತಂಕಕಾರಿ ವಿಷಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಗುರಿ ಮುಟ್ಟುವಲ್ಲಿ ಹಿಂದುಳಿದಿದ್ದು, ಭಾರತದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಸರ್ವೇಗೆ ಒಳಪಟ್ಟ 195 ದೇಶಗಳ ಪೈಕಿ, ಭಾರತ 154ನೇ ಸ್ಥಾನ ಪಡೆದುಕೊಂಡಿದೆ. 

image


ಭಾರತ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಆದ್ರೆ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಕಳೆದ 25 ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿದೆ. 1990ರಲ್ಲಿ ಹೆಲ್ತ್ ಕೇರ್ ಇಂಡೆಕ್ಸ್ 30.7ರಷ್ಟಿತ್ತು. 2015ರಲ್ಲಿ ಇದು 44.8ಕ್ಕೆ ಏರಿಕೆಯಾಗಿತ್ತು. ಟಿಬಿ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಕಿಡ್ನಿಗೆ ಸಂಬಧಿಸಿದ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ಅವುಗಳ ಚಿಕಿತ್ಸೆ ಸಂಬಂಧಿಸಿದ ಕ್ಷೇತ್ರಗಳಲ್ಲೂ ಸಾಕಷ್ಟು ಹಿನ್ನಡೆಯಾಗಿದೆ.

ಇದನ್ನು ಓದಿ: ದೊಡ್ಡದಾಗಿ ಬೆಳೆಯುತ್ತಿದೆ ಸಿಲಿಕಾನ್​ ಸಿಟಿ-ಪ್ರಯಾಣಿಕರಿಗೆ ತಪ್ಪಲ್ಲ ಟ್ರಾಫಿಕ್​ ಕಿರಿಕಿರಿ 

1990 ರಿಂದ 2015ರ ತನಕ ಒಟ್ಟು 195 ದೇಶಗಳ ಸಾವಿನ ಪ್ರಮಾಣ ಮತ್ತು ಇತರೆ ಆರೋಗ್ಯ ಸಮಸ್ಯೆಗಳನ್ನು ಲೆಕ್ಕದಲ್ಲಿಟ್ಟುಕೊಂಡು ಸರ್ವೇ ಮಾಡಲಾಗಿದೆ. ಇದಕ್ಕೆ ಬಿಲ್​ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್​ನಿಂದ ಧನ ಸಹಾಯ ಸಿಕ್ಕಿದೆ. 30 ಕಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ದೊರಕಿದ ಪ್ರಮಾಣವನ್ನು ಆಧರಿಸಿ ರೇಟಿಂಗ್ ನೀಡಲಾಗಿದೆ. ಭಾರತ ಅಸ್ವಸ್ಥತೆ ವಿಚಾರದಲ್ಲಿ 14 ಅಂಕಗಳನ್ನು ಪಡೆದುಕೊಂಡಿದ್ದರೆ, ಟಿಬಿ ಕಾಯಿಲೆಯ ಚಿಕಿತ್ಸೆಗೆ ನೀಡಿದ ಗುಣಮಟ್ಟಕ್ಕೆ 26 ಅಂಕಗಳನ್ನು ಪಡೆದುಕೊಂಡಿದೆ. ಸಣ್ಣ ಮತ್ತು ಮಧ್ಯಮ ಹೃದ್ರೋಗಕ್ಕೆ 33 ಅಂಕಗಳನ್ನು ಪಡೆದುಕೊಂಡಿದೆ. ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಮತ್ತು ಕಠಿಣ ಹೃದ್ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿಯೂ ಭಾರತ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. ಈ ವಿಭಾಗದಲ್ಲಿ ಭಾರತ ಕ್ರಮವಾಗಿ 38, 20 ಹಾಗೂ 45 ಅಂಕಗಳನ್ನು ಸಂಪಾದಿಸಿದೆ.

ಭಾರತಕ್ಕಿಂತ ಉತ್ತಮ ಸ್ಥಾನ ಪಡೆದಿರುವ ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ಸುಧಾರಿತ ಹಾಗೂ ಸುಲಭವಾಗಿ ಸಿಗುವ ವ್ಯವಸ್ಥೆಯನ್ನು ಹೊಂದಿವೆ. ಭಾರತಕ್ಕಿಂತ ಚೀನಾ ಸಾಕಷ್ಟು ಮುಂದೆ ಇದ್ದು 82ನೇ ಸ್ಥಾನ ಪಡೆದುಕೊಂಡಿದೆ. ಭಾರತದ ಆರೋಗ್ಯ ಕ್ಷೇತ್ರ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದೆ. 2020ರ ಹೊತ್ತಿಗೆ ಈ ಕ್ಷೇತ್ರ ಸುಮಾರು 280 ಬಿಲಿಯನ್ ಅಮೆರಿಕನ್ ಡಾಲರ್​ಗಳಷ್ಟು ಮಹತ್ವ ಪಡೆಯಲಿದೆ. ಭಾರತದಲ್ಲಿ ಜನಸಂಖ್ಯಾ ಸ್ಪೋಟ ಆರೋಗ್ಯ ಕ್ಷೇತ್ರದಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಭಾರತ ಈ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದು ಖಚಿತ. 

ಇದನ್ನು ಓದಿ:

1. ಮತ್ತೆ ಬಂತು ನೊಕಿಯಾ- ಹಳೆಯ ಮಾಡೆಲ್​ಗೆ ಸ್ಮಾರ್ಟ್ ಟಚ್..! 

2. ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ – ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ 

3. ಟ್ರಾಫಿಕ್ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಹೊಸ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಿದೆ ಬಿಬಿಎಂಪಿ