ಒಂದೇ ಕ್ಲಿಕ್​ನಲ್ಲಿ ಬರುತ್ತೆ ನಿಮ್ಮ ಮನೆಗೆ ತರಕಾರಿ..!

ಉಷಾ ಹರೀಶ್​

ಒಂದೇ ಕ್ಲಿಕ್​ನಲ್ಲಿ ಬರುತ್ತೆ ನಿಮ್ಮ ಮನೆಗೆ ತರಕಾರಿ..!

Friday April 15, 2016,

2 min Read

ಕಷ್ಟಗಳು ಮನುಷ್ಯನಿಗೆ ದುಃಖ ಕೊಡಲು ಮಾತ್ರ ಬರುವುದಿಲ್ಲ ಬದಲಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಹಾಗಾಗಿ ಕಷ್ಟಗಳನ್ನು ನಾವು ಧೈರ್ಯವಾಗಿ ಎದುರಿಸಬೇಕು ಎದುರಿಸಿ ನಿಂತಾಗಲೇ ಸುಖದ ಬಾಗಿಲು ನಿಮಗೆ ತೆರೆದುಕೊಳ್ಳುತ್ತದೆ.

ಇದನ್ನು ಓದಿ: ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ

ಈ ಮಾತು ದೆಹಲಿ ಮೂಲಕ ಸುನಿಲ್ ಸೂರಿ ಅವರಿಗೆ ಸಾಕಷ್ಟು ಅನ್ವಯವಾಗುತ್ತದೆ. ಸುನಿಲ್ ಸೂರಿ ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್. ತಿಂಗಳ ಕೊನೆಯಲ್ಲಿ ಸಂಬಳ ಎಣಿಸಿಕೊಂಡು ಆರಾಮಾಗಿದ್ದರು. ಅವರ ವೈಯಕ್ತಿಕ ಜೀವನದ ಕಹಿ ಘಟನೆಗಳೇ ಅವರ ಸಾಧನೆಗೆ ಸ್ಪೂರ್ತಿಯಾಗಿವೆ ಎಂದರೆ ತಪ್ಪಾಗಲಾರದು.

image


ತನ್ನ ತಂದೆ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗಿ ಮರಣ ಹೊಂದಿದರು. ಈ ದುಃಖದಲ್ಲಿದದ್ದ ಸೂರಿಗೆ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಾಯಿಯ ಅಗಲಿಕೆಯೂ ಮರೆಯಲಾಗದ ನೋವಾಗಿ ಉಳಿಯಿತು. ಇವರ ಸಾವಿಗೆ ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿರುವುದೇ ಕಾರಣ ಎಂಬುದನ್ನು ಅರಿತ ಸೂರಿ ಸ್ವದೇಶ್ ಮೆನು ಪ್ಲಾನ್ ಎಂಬ ಆಹಾರ ಪದ್ದತಿಯ ಆ್ಯಪ್​ನ್ನು ಅಭಿವೃದ್ಧಿಪಡಿಸಿದರು.

ಈ ಆ್ಯಪ್​ನ ಬಳಕೆದಾರರು ಈ ಪೋರ್ಟ್​ನಲ್ಲಿ ತಮ್ಮ ಆಹಾರಪದ್ಧತಿಯನ್ನು ನಮೂದಿಸಿದರೆ ಅದಕ್ಕೆ ಸಂಬಂಧಪಟ್ಟ ವೈದ್ಯರು ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಯಾವುದು ಮಾರಕ ಎಂಬುದನ್ನು ಆನ್​ಲೈನ್ ಮೂಲಕ ಬಳಕೆದಾರರಿಗೆ ತಿಳಿಸುತ್ತಿದ್ದರು. ಸೂರಿಯವರು ದುರಾದೃಷ್ವವೇನೋ ಎಂಬಂತೆ ಈ ಆ್ಯಪ್​ನ್ನು ಯಾರೂ ಖರೀದಿಸಲು ಮುಂದೆ ಬರಲಿಲ್ಲ ನಷ್ಟದ ಉದ್ದೇಶದಿಂದ ಈ ಸ್ಟಾರ್ಟ್​ಅಪ್​ನ್ನು ಸೂರಿ ಮುಚ್ಚಿಬಿಟ್ಟರು.

image


ಫಲ್ಫೂಲ್ ಪೋರ್ಟ್​

ಬಹಳ ಆಸೆಯಿಂದ ಮತ್ತು ಉತ್ತಮ ಉದ್ದೇಶದಿಂದ ಆರಂಭಿಸಿದ್ದ ಮೆನು ಪ್ಲಾನ್ ಆ್ಯಪ್ ಮುಚ್ಚಿದ ನಂತರ ಯೋಚಿಸುತ್ತಾ ಕುಳಿತಿದ್ದಾಗ ಹೊಳೆದಿದ್ದು ಮತ್ತೊಂದು ಯೋಜನೆ ಅದೇ ಫಲ್ಫೂಲ್​ ಪೋರ್ಟಲ್. ಸುಮಾರು ಹತ್ತು ಲಕ್ಷ ರೂಪಾಯಿಯನ್ನು ಬಂಡವಾಳವಾಗಿ ತೊಡಗಿಸಿದ ಸೂರಿ ಈ ವೆಬ್ ಪೋರ್ಟಲ್​ನಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಪೋರ್ಟಲ್ ಆರಂಭಿಸಿದ ಸಮಯದಲ್ಲಿ ಸೂರಿ ಅವರಿಗೆ ಸ್ವಲ್ಪ ಪ್ರಮಾಣದ ನಷ್ಟವಾಯಿತು.ಆದರೆ ನಂತರದ ದಿನಗಳಲ್ಲಿ ಇವರ ಈ ಹಣ್ಣು ಮತ್ತು ತರಕಾರಿ ಮಾರುವ ಕಂಪೆನಿ ಸರಿ ದಾರಿಗೆ ಬದು ಲಾಭತರುವ ಸಂಸ್ಥೆಯಾಗಿದೆ.

image


ಬುಕ್ ಮಾಡಿದರೆ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ತರಕಾರಿ

ಈ ವೆಬ್ ಪೋರ್ಟಲ್​ಗೆ ಹೋಗಿ ಪ್ರತಿ ದಿನ ಸಂಜೆ ಸಮಯದಲ್ಲಿ ಗ್ರಾಹಕರು ತಮಗೆ ಬೇಕಾದ ಹಣ್ಣು ಅಥವಾ ತರಕಾರಿಯನ್ನು ಆಯ್ಕೆ ಮಾಡಿ ಬುಕ್ ಮಾಡಿದರೆ ನಾಳೆ ಬೆಳಗ್ಗೆ ನೀವು ಬುಕ್ ಮಾಡಿದ ತರಕಾರಿ ಹಣ್ಣು ಗ್ರಾಹಕರ ಮನೆ ಬಾಗಿಲಿಗೆ ಪಲ್ಫೂಲ್ ವತಿಯಿಂದ ತಲುಪಿಸಲಾಗುತ್ತದೆ. ಆಗ ನೀವು ಬೆಳಗ್ಗೆ ಎದ್ದು ತರಕಾರಿ ತರಲು ಮಾರುಕಟ್ಟೆಗೆ ಹೋಗುವುದನ್ನು ಈ ಪಲ್ಫೂಲ್ ತಪ್ಪಿಸುತ್ತದಿದೆ. ಪ್ರಸ್ತುತ ಸುನೀಲ್ ಸೂರಿಯವರ ಈ ಸಂಸ್ಥೆ ಈ ಕಂಪೆನಿ ದಕ್ಷಿಣ ದೆಹಲಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಆರಂಭ ಮಾಡುವ ಆಲೋಚನೆ ಸೂರಿಯವರಿಗೆ ಇದೆ.

ಒಟ್ಟಿನಲ್ಲಿ ಸುನೀಲ್ ಸೂರಿ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗುವಂತಹ ಜೀವನ ನಡೆಸುತ್ತಿದ್ದಾರೆ. 

ಇದನ್ನು ಓದಿ:

1. ಭಾರತದಲ್ಲಿ ತಲೆಯೆತ್ತಲಿವೆ ಒರಾಕಲ್ ಸ್ಟಾರ್ಟ್​ಅಪ್ ಇನ್‍ಕ್ಯುಬೇಟರ್‍ಗಳು...

2. 'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!

3. ಬೆಂಗಾಡಿಗೆ ಭಾಗೀರತಿಯಾದ ಅಮಲಾ ರೂಯಿಯಾ...