ಫ್ಲಿಪ್‍ಕಾರ್ಟ್‍ನಲ್ಲಿ ತಾಯಂದಿರಿಗೆ ಸುಗ್ಗಿ...

ಟಿಎಎ

ಫ್ಲಿಪ್‍ಕಾರ್ಟ್‍ನಲ್ಲಿ ತಾಯಂದಿರಿಗೆ ಸುಗ್ಗಿ...

Wednesday November 11, 2015,

2 min Read

ಶಾಪಿಂಗ್ ಮಾಲ್‍ಗೆ ಹೋಗಿ ಅದು, ಇದು ನೋಡಿ ಚೌಕಾಸಿ ಮಾಡಿ ಪರ್ಚೇಸ್​​​​ ಮಾಡಿಕೊಂಡು ಬರೋ ಕಾಲ ಹೋಯ್ತು. ಈಗೇನಿದ್ರೂ ಕೂತಲ್ಲೇ ಶಾಪಿಂಗ್ ಮಾಡಿ ಹೋಂ ಡೆಲವರಿ ಪಡೆಯೋ ಕಾಲ. ಇದನ್ನೇ ಬಂಡವಾಳ ಮಾಡಿಕೊಂಡು ದಿನಕ್ಕೊಂದು ಆನ್‍ಲೈನ್ ಸಂಸ್ಥೆಗಳು ಹುಟ್ಟಿಕೊಳ್ತಿವೆ. ಆದ್ರೆಇಂಡಿಯಾದ ಮೂಲೆ ಮೂಲೆಗೂ ಆನ್‍ಲೈನ್ ಬ್ಯುಸಿನೆಸ್ ರೀಚ್‍ ಆಗುವಂತೆ ಮಾಡಿದ್ದು ಫ್ಲಿಪ್‍ಕಾರ್ಟ್. ಕಾಮ್. ಬೆಂಗಳೂರಿನ ಬನ್ಸಾಲ್ ಸಹೋದರರು ಸ್ಥಾಪಿಸಿದ ಇ-ಕಾಮರ್ಸ್ ಕಂಪನಿ ಇದೀಗ ದೇಶಾದ್ಯಂತ ಹೆಸರು ಮಾಡಿದೆ. 2007ರಲ್ಲಿ ಆನ್‍ಲೈನ್‍ನಲ್ಲಿ ಪುಸ್ತಕ ಮಾರಾಟದ ಮೂಲಕ ಬೆಳಕಿಗೆ ಬಂದ ಈ ಕಂಪನಿ ನಂತರ ಬೇರೆ ಬೇರೆ ಪ್ರಾಡಕ್ಟ್​​​ಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲಾರಂಭಿಸಿತು. 2009ರಲ್ಲಿ ಭಾರತದಲ್ಲಿ ಆನ್‍ಲೈನ್ ಶಾಪಿಂಗ್‍ ಕ್ರಾಂತಿ ಮಾಡಿದ್ದು ಇದೇ ಫ್ಲಿಪ್‍ಕಾರ್ಟ್. ಶಾಪಿಂಗ್ ಮಾಲ್‍ನಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ಆನ್‍ಲೈನ್‍ನಲ್ಲಿ ಸಿಕ್ಕರೆ ಜೊತೆಗೆ ಕ್ಯಾಶ್‍ಆನ್‍ ಡೆಲಿವರಿ ಅಂದ್ರೆ ಯಾರ್‍ಬಿಡ್ತಾರೆ ಹೇಳಿ? ಹೀಗೆ ಜನರ ಮನಸ್ಸುಗೆಲ್ಲುತ್ತಾ, ಉತ್ತಮ ಪ್ರಾಡಕ್ಟ್​​ ಕೊಡುತ್ತಾ, ಜನರ ನಂಬಿಕೆ ಗಳಿಸುತ್ತಾ, ಆನ್‍ಲೈನ್ ಶಾಪಿಂಗ್‍ ಜಗತ್ತಿನ ಧೈತ್ಯನಾಗಿ ಬೆಳೆದುನಿಂತಿದೆ ಈ ಫ್ಲಿಪ್‍ಕಾರ್ಟ್ ಕಂಪನಿ. ಪ್ರತಿದಿನ ಕೋಟ್ಯಾಂತರ ರೂಪಾಯಿಗಳಿಸುವ ಈ ಫ್ಲಿಪ್‍ಕಾರ್ಟ್‍ದೇಶಾದ್ಯಂತ ಸಾವಿರಾರು ಮಂದಿ ಉದ್ಯೋಗಿಗಳನ್ನು ಹೊಂದಿದೆ.

image


ಫ್ಲಿಪ್‍ಕಾರ್ಟ್ ಪ್ರಾಡಕ್ಟ್​​​ಗಳನ್ನ ಜನರು ಹೇಗೆ ನಂಬಿಕೆಯಿಂದ ಪಡೀತಾರೋ, ಹಾಗೇ ಇಲ್ಲಿ ಕೆಲಸ ಮಾಡೋ ಉದ್ಯೋಗಿಗಳು ಈ ಕಂಪನಿ ಮೇಲೆ ಅಷ್ಟೇ ನಂಬಿಕೆ ಇಟ್ಟಿದ್ದಾರೆ.ಇನ್ನು ತನ್ನ ಮಹಿಳಾ ಉದ್ಯೋಗಿ ಗಳಿಗಂತೂ ಮುತುವರ್ಜಿ ವಹಿಸಿ, ಅವರಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ.ಹೀಗಾಗೆ ಭಾರತದ ಉದ್ಯೋಗಿಗಳು, ಅದ್ರಲ್ಲೂ ಮಹಿಳಾ ಉದ್ಯೋಗಿಗಳು ಕೆಲಸ ಮಾಡಲು ಇಷ್ಟಪಡೋ ಸಂಸ್ಥೆಯಾಗಿದೆ.

ಮಹಿಳಾ ಉದ್ಯೋಗಿಗಳು ಮದುವೆ ಆದ್ಮೇಲೆ ಮಕ್ಕಳು, ಸಂಸಾರ ಅಂತಾ ಕೆಲಸ ಬಿಡ್ತಾರೆ. ಆದ್ರೆ ಕೆಲವರಿಗೆ ಉದ್ಯೋಗ ಅನಿವಾರ್ಯವಾಗಿರುತ್ತೆ. ಹೀಗಾಗೇ ಗರ್ಭಿಣಿಯಾಗಿ ಮೊದಲ ತಾಯ್ತನದ ಸುಖ ಅನುಭವಿಸೋ ಮಹಿಳೆಯರ ಖುಷಿಯನ್ನ ಫ್ಲಿಪ್‍ಕಾರ್ಟ್ ಇಮ್ಮಡಿಗೊಳಿಸಿದೆ.

ಮಹಿಳೆಯರಿಗೆ ಫ್ಲಿಪ್‍ಕಾರ್ಟ್ ನೀಡಿರುವ ಸೌಲಭ್ಯಗಳು ಇಂತಿವೆ

• ಫ್ಲಿಪ್‍ಕಾರ್ಟ್‍ನಲ್ಲಿಉದ್ಯೋಗ ಮಾಡ್ತಿರೋ ಪ್ರತಿಯೊಬ್ಬ ಮಹಿಳೆ ಮೊದಲ ಗರ್ಭಿಣಿಯಾದಾಗ 6 ತಿಂಗಳು ಸ್ಯಾಲರಿ ಸಹಿತ ರಜೆಯನ್ನು ನೀಡಲಾಗುತ್ತೆ.

(ಈ ರಜೆ ತಾಯಿಯಾಗುವ ಮೊದಲ ಮೂರು ತಿಂಗಳು, ಪ್ರಸವದ ನಂತರದ ಮೂರು ತಿಂಗಳು, ಅಂದ್ರೆ ಒಟ್ಟು 6 ತಿಂಗಳ ರಜೆಯಾಗಿರುತ್ತೆ )

image


• ಮಗುವಾದ ಮೇಲೆ ಕಚೇರಿಗೆ ಹಿಂದಿರುಗುವ ತಾಯಂದಿರು ಮೊದಲ ನಾಲ್ಕು ತಿಂಗಳು ತಮಗೆ ಅನುಕೂಲವಾಗೋ ಸಮಯಕ್ಕೆ ಬಂದು ಕೆಲಸ ಮಾಡಬಹುದಾಗಿದೆ.

• ತಾಯ್ತನದ ಖುಷಿಯನ್ನ ಮತ್ತಷ್ಟು ಅನುಭವಿಸಬೇಕೆಂಬ ಆಸೆ ಇರೋ ತಾಯಂದಿರು 12 ತಿಂಗಳು ಅಂದ್ರೆ ಒಂದು ವರ್ಷ ರಜೆ ಪಡೆಯಬಹುದು (ಆದ್ರೆ ಈ ರಜೆಗೆಯಾವುದೇ ಸಂಬಳ ಇರೋದಿಲ್ಲ)

ಫ್ಲಿಪ್‍ಕಾರ್ಟ್ ಮಹಿಳೆಯರಿಗೆ ನೀಡಿರೋ ಸೌಲಭ್ಯಗಳು

ಮೆಟರ್ನಿಟಿ ರಜೆ ಪಡೆಯುವಎರಡು ತಿಂಗಳು ಮುಂಚಿತವಾಗಿ, ಮಹಿಳಾ ಉದ್ಯೋಗಿಗಳಿಗೆ ಪ್ರತಿದಿನ 600 ರೂಪಾಯಿಯನ್ನು ಕಂಪನಿ ನೀಡುತ್ತದೆ.

• ಗರ್ಭಿಣಿಯರಿಗೆ ಅನುಕೂಲವಾಗಲು ಅವರಿಗಂತಲೇ ಬೇರೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರಿಗೆ ನೀಡಿರುವ ವೈದ್ಯಕೀಯ ಸೌಲಭ್ಯಗಳು

ಇನ್ನು ವೈದ್ಯಕೀಯ ಸೌಲಭ್ಯದಲ್ಲೂ ಫ್ಲಿಪ್‍ಕಾರ್ಟ್ ಕಂಪನಿ ತನ್ನ ಮಹಿಳಾ ಉದ್ಯೋಗಿಗಳ ಬಗ್ಗೆ ಉದಾರತೆ ಮೆರದಿದೆ.

• ಗರ್ಭಿಣಿಯರಿಗೆ ಸಹಜ ಹೆರಿಗೆಯಾದಲ್ಲಿ 65 ಸಾವಿರರೂಪಾಯಿ ಮತ್ತು ಸಿಜೇರಿಯನ್ ಆದಲ್ಲಿ 80 ಸಾವಿರ ರೂಪಾಯಿಯನ್ನ ತನ್ನ ಉದ್ಯೋಗಿಗಳಿಗೆ ಫ್ಲಿಪ್‍ಕಾರ್ಟ್ ಸಂಸ್ಥೆಯೇ ನೀಡುತ್ತೆ.

• ಇನ್ನು ಕಂಪನಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳಿಗೆ ಸೌಲಭ್ಯ ಒದಗಿಸುತ್ತದೆ.

ಇನ್ನು ಮಕ್ಕಳಾದ ಮೇಲೆ ಕೆಲಸಕ್ಕೆ ಹೋಗಲೇಬೇಕಾಗುತ್ತೆ. ಅಂತಹ ಅನಿವಾರ್ಯತೆ ಕೆಲ ಮಹಿಳೆಯರಿಗೆ ಇರುತ್ತೆ.ಇಂತವರಿಗಾಗಿ ಫ್ಲಿಪ್‍ಕಾರ್ಟ್​ ಉತ್ತಮ ಸೌಲಭ್ಯಗಳನ್ನು ಒದಗಿಸಿದೆ.

• ತಾಯಂದಿರುತಮ್ಮ ಮಕ್ಕಳನ್ನು ಡೇಕೇರ್ ಸೆಂಟರ್‍ನಲ್ಲಿ ಬಿಟ್ಟು ಬರಬಹುದಾಗಿದೆ. ಡೇಕೇರ್‍ಗೆ ನೀಡೋ ಹಣದಲ್ಲಿ ಉದ್ಯೋಗಿ ಅರ್ಧ ನೀಡಿದ್ರೆ, ಕಂಪನಿ ಅರ್ಧ ಹಣ ನೀಡುತ್ತೆ.

• ಮೆಟರ್ನಿಟಿ ಕೇರ್‍ ಕಾರ್ಯಕ್ರಮವನ್ನು ಕಂಪನಿಯೇ ಆಯೋಜಿಸುತ್ತೆ. ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ತಜ್ಞರಿಂದ ಅವರತಾಯ್ತನದ ಬಗ್ಗೆ, ಕೆಲಸ-ಕುಟುಂಬದ ನಿರ್ವಹಣೆ, ಮತ್ತು ಆರೋಗ್ಯದ ಬಗ್ಗೆ ಕಾಳಜಿ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡಲಾಗುತ್ತೆ.

ಫ್ಲಿಪ್‍ಕಾರ್ಟ್‍ನ ಇನ್ನುಳಿದ ಸೌಲಭ್ಯಗಳು ಇಂತಿವೆ

• ಇನ್ನು ನಿಮ್ಮ ಮುದ್ದುಕಂದಮ್ಮನಿಗೆ ನಾಮಕರಣ ಮಾಡಬೇಕು.. ಆದ್ರೆ ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟು ಕಾಡಬಹುದು. ಆಗ ಫ್ಲಿಪ್‍ಕಾರ್ಟ್ ತಮ್ಮ ಮಹಿಳಾ ಉದ್ಯೋಗಿಯ ಮಗುವಿಗೆ ನಾಮಕರಣ ಶಾಸ್ತ್ರವನ್ನು ಮಾಡಲಿದೆ.

• ಅಲ್ಲದೆಉಡುಗೊರೆ ಬುಟ್ಟಿಯನ್ನುಕೂಡಾ ನಿಮ್ಮಕಂದಮ್ಮನಿಗೆ ನೀಡಲಿದೆ.

ಇಷ್ಟೆಲ್ಲಾ ಸವಲತ್ತು ನೀಡಿ ಉದ್ಯೋಗಿ ಸ್ನೇಹಿ ಕಂಪನಿ ಎಂಬ ಹೆಗ್ಗಳಿಕೆ ಜೊತೆ ದೇಶದ ನಂ.1 ಆನ್‍ಲೈನ್ ಶಾಪಿಂಗ್‍ ತಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.