ಭವಿಷ್ಯದ ವ್ಯಾಪಾರ ವಹಿವಾಟುಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಆಧಾರಿತವಾಗಿವೆಯೇ? ಓದಿ ನೋಡಿ...

0

ಅಮೇರಿಕದ ಪ್ರಸಿದ್ಧ ಭವಿಷ್ಯವಾದಿ ರೇ ಕರ್ಜ್ವೀಲ್‌ರವರು 1990 ರಿಂದ ಅನೇಕ ತರಹದ ಭವಿಷ್ಯ ನುಡಿದಿದ್ದರೆ. 1998 ರಷ್ಟೊತ್ತಿಗೆ ಕಂಪ್ಯೂಟರ‍್ಗಳು ಮನುಷ್ಯರನ್ನೇ ಚೆಸ್ ಆಟದಲ್ಲಿ ಸೋಲಿಸುತ್ತವೆ ಎಂದಿದ್ದರು. ಅಷ್ಟೇ ಅಲ್ಲ ಇನ್ನೇನು 30 ವರ್ಷಗಳಲ್ಲಿ ಮನುಷ್ಯನಿಗಿಂತ ಶತಕೋಟಿ ಪಟ್ಟರಷ್ಟು ಯೋಚನಾ ಸಾಮರ್ಥ್ಯ ಕಂಪ್ಯೂಟರ್‌ಗಳಿಗೊದಗುವದು ಎಂದಿದ್ದಾರೆ.

ಒರಾಕಲ್‌ನಿಂದ ಮೈಕ್ರೋಸಾಫ್ಟ್‌ ಮತ್ತು ಗೂಗಲ್ ನಿಂದ ಫೇಸ್ಬುಕ್ ವರೆಗೆ ಎಲ್ಲ ಸಂಸ್ಥೆಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಡೆಗೇ ಒಲವು ತೋರಿಸುತ್ತಿವೆ. ಕಂಪ್ಯೂಟರ‍್ಗಳು ಮನುಷ್ಯರನ್ನೇ ನಾಶಮಾಡಬಹುದು ಎಂಬ ಭಯ ಬಿಟ್ಟು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ.

"ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಅಡತಡೆಗಳು - ಎ‌ಐ ಮತ್ತು ಡೀಪ್ ಲರ್ನಿಂಗ್ ಪ್ರಪಂಚವನ್ನು ಅಡ್ಡಿಪಡಿಸುತ್ತದೆ" ಎಂಬ ವಿಷಯದ ಮೇಲೆ ತಾಂತ್ರಿಕ ಮೇಳದ ಮೊದಲನೆ ದಿನದ ಚರ್ಚೆಯಲ್ಲಿ ಘಟಾನುಘಾಟಿಗಳದ ಪೃಥ್ವಿಜಿತ್ ರಾಯ್, ಸಿ‌ಇ‌ಒ, ಬ್ರಿಜ್ಜಿ೨ಐ ಅನಾಲಿಟಿಕ್ಸ್ ಸೊಲ್ಯೂಷನ್ಸ್, ಸುದರಾ ರಾಮಲಿಂಗಂ ನಾಗಾಲಿಂಗಂ, ಹೆಡ್ ಡೀಪ್ ಲರ್ನಿಂಗ್ ಪ್ರಾಕ್ಟೀಸ್, ಎನ್ವಿಡಿಯಾ ಗ್ರಾಫಿಕ್ಸ್, ಸಿ‌ಇ‌ಒ ಮತ್ತು ಸಂಸ್ಥಾಪಕ ಏಕಾ ಸಾಫ್ಟ್ವೇರ್ ಸೊಲ್ಯೂಷನ್ಸ್ನ ಮಾನವ್ ಗಾರ್ಗ್ ಮತ್ತು ಜೆನ್ಪ್ಯಾಕ್ಟ್‌ನ ಹಿರಿಯ ಉಪಾಧ್ಯಕ್ಷ ಸುಧಾಂಶು ಸಿಂಗ್ ಎಸ್ ಎಲ್ಲರೂ ಈ ವಿಚಾರವಿನಿಮಯದಲ್ಲಿ ಭಾಗವಹಿಸಿದರು.

ಏನಿದು ಡೀಪ್ ಲರ್ನಿಂಗ್?

ಎನ್ವಿಡಿಯಾ ಗ್ರಾಫಿಕ್ಸ್ ಡೀಪ್ ಲರ್ನಿಂಗ್ ಪ್ರಾಕ್ಟೀಸ್‌ನ ಮುಖ್ಯಸ್ಥ ಸುಂದರಾಮ್ ರಾಮಲಿಂಗಮ್‌ರವರು, "ಮಗು ಕೆಂಪು ಸೇಬನ್ನು ನೋಡಿದ ಕೂಡಲೆ ಇದು ಸೇಬು ಎಂದು ಗುರುತಿಸುವದು, ಏಕೆಂದರೆ ತಂದೆ ತಾಯಿ ಅದಕ್ಕೆ ಕಲಿಸಿಕೊಟ್ಟಿರುತ್ತಾರೆ, ಅಷ್ಟೇ ಅಲ್ಲದ ಅವರು ಹಸಿರು ಬಣ್ಣದ ಸೇಬು ಕೂಡ ಇರುತ್ತದೆ ಎಂದು ಹೇಳಿಕೊಟ್ಟಿರುತ್ತಾರೆ, ಆಗ ಮಗು ಹಸಿರು ಸೇಬು ನೋಡಿದ ಕೂಡಲೆ ಗುರುತಿಸುವದು. ಹೀಗೆಯೇ ನಾವು ಯಂತ್ರಗಳಿಗೆ ಕಲಿಸಿಕೊಡಬೇಕಾಗುವದು, ಇದನ್ನೇ ಡೀಪ್ ಲರ್ನಿಂಗ್ ಎನ್ನುತ್ತಾರೆ" ಎಂದು ಸಾಮಾನ್ಯ ಜನರಿಗೆ ತಿಳಿಯುವಂತೆ ವಿವರಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನೇಕ ಅಲ್ಗಾರಿದಮ್ ಮತ್ತು ಐತಿಹಾಸಿಕ ದತ್ತಾಂಶಗಳ ಮೇಲೆ ಕೆಲಸ ನಿರ್ವಹಿಸುವದು ಎಂದು ವಿವರಿಸಿದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಮನುಷ್ಯನಿಗೇ ಸೂಚಕ

ಬ್ರಿಜ್ಜಿ ೨ ಅನಾಲಿಟಿಕ್ಸ್ ಸೊಲ್ಯೂಷನ್ಸ್‌ನ ಸಂಸ್ಥಾಪಕ ಪೃಥ್ವಜಿತ್ ರಾಯ್ ಅವರು, "ಸ್ವಯಂಚಾಲಿತ ಕಾರುಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ತಂತ್ರಜ್ಞಾನದ ಆಧಾರದ ಮೇಲೆಯೇ ನಡೆಯುತ್ತವೆ. ಅಷ್ಟೇ ಅಲ್ಲ ವೈದ್ಯರು ಕೂಡ ಅನೇಕ ಏಐ ಆಧಾರಿತ ಯಂತ್ರಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಾರೆ" ಎಂದರು.

ಏಕಾ ಸಾಫ್ಟ್ವೇರ್ ಸೊಲ್ಯೂಷನ್ಸ್‌ನ ಸಂಸ್ಥಾಪಕ ಮಾನವ್ ಗಾರ್ಗ್, " ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ತಂತ್ರಜ್ಞಾನವನ್ನು ಬಳಸಿಕೊಂಡು ರೈತಾಪಿ ಜನರಿಗೆ ಕೂಡ ಬಿತ್ತನೆಯ ಕೆಲಸಗಳಿಗೆ ಸಲಹೆ ಸೂಚನೆ ಕೊಡಬಹುದು, ಇದರಿಂದ ಬೆಳೆಯ ನಾಶವನ್ನು ತಡೆಯಬಹುದು" ಎಂದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ತಂತ್ರಜ್ಞಾನದಿಂದ ಅನೇಕ ಅನಗತ್ಯವಾಗಿ ಪುನರಾವರ್ತಿತವಾಗುವ ಕೆಲಸಗಳನ್ನು ಕಡಿಮೆಗೊಳಿಸಬಹುದು ಎಂದು ಕೂಡ ಹೇಳಿದರು.

ಮಾನವ್ ಗಾರ್ಗ್‌ರವರು, "ಈಗ ಡಾಟಾ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.ಗೂಗಲ್ ಮತ್ತು ಫೇಸ್‌ಬುಕ್ ಈ ವಿಷಯದಲ್ಲಿ ಬಹಳ ಮುಂಚೂಣಿಯಲ್ಲಿವೆ" ಎಂದರು.

ಇತ್ತೀಚೆಗೆ ಅಡಿದಾಸ್ ಕಂಪನಿಯವರು ಜರ್ಮನಿಯಿಂದ ಚೀನಾಗೆ ತಮ್ಮ ಸ್ಥಾವರವನ್ನು ಸ್ಥಳಾಂತರಿಸಿದರು, ಕಾರಣ ಚೀನಾದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ತಂತ್ರಜ್ಞಾನವು ಬಹಳ ಬೇಗನೆ ಮುಂದುವರೆಯುತ್ತಿದೆ.

ನಮ್ಮ ರಾಜ್ಯದಲ್ಲಿ ಶೀಘ್ರವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಪ್ರೋತ್ಸಾಹಿಸುವ ಅವಕಾಶಗಳು ಹುಟ್ಟಿಕೊಂಡರೆ ಅಭೂತಪೂರ್ವ ಭವಿಶ್ಯವನ್ನು ನಾವೂ ಕೂಡ ಎದುರುನೋಡಬಹುದಲ್ಲವೆ?

Related Stories

Stories by YourStory Kannada