ರಾಷ್ಟ್ರಪತಿಗಳ ಪೈಕಿ ದಿವಗಂತ ಡಾ. ಎ. ಪಿ. ಜೆ ಅಬ್ದುಲ್ ಕಲಾಂಗೆ ಮೊದಲ ಸ್ಥಾನ

ಟೀಮ್ ವೈ.ಎಸ್​​

ರಾಷ್ಟ್ರಪತಿಗಳ ಪೈಕಿ ದಿವಗಂತ ಡಾ. ಎ. ಪಿ. ಜೆ ಅಬ್ದುಲ್ ಕಲಾಂಗೆ ಮೊದಲ ಸ್ಥಾನ

Tuesday August 04, 2015,

3 min Read

ಭಾರತದ ಅತ್ಯುತ್ತಮ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಕಲಾಂ ವೃತ್ತಿಯಲ್ಲಿ ಲೇಖಕ, ಪ್ರಾಧ್ಯಾಪಕ ಮತ್ತು ವಿಜ್ಞಾನಿಯಾಗಿದ್ದರು. ಎಲ್ಲರ ಪಾಲಿನ ನೆಚ್ಚಿನ ಮೇಸ್ಟ್ರು ಆಗಿದ್ದ ಕಲಾಂರನ್ನು ಅಂದಿನ ಎನ್​ಡಿಎ ಸರಕಾರ ರಾಷ್ಟ್ರಪತಿಯನ್ಯಾನಾಗಿ ಮಾಡಿತ್ತು. ತನಗೆ ಸಿಕ್ಕಿದ ಗೌರವ ಮತ್ತು ಅಧಿಕಾರವನ್ನು ಬಳಸಿಕೊಂಡ ಕಲಾಂ ಜನರ ರಾಷ್ಟ್ರಪತಿ ಅನ್ನೋ ಹಾಗೇ ಮಾಡಿದ್ದರು. ಕಲಾಂ ಮಾತುಗಳು ಯುವ ಜನತೆಗೆ ಮಾದರಿಯಾಗಿತ್ತು. ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿತ್ತು. ಕಲಾಂ ಪಾಲಿಗೆ ಮಕ್ಕಳೆ ಮೊದಲ ದೇವರಾಗಿದ್ದರು.

image


ಅಬ್ದುಲ್ ಕಲಾಂ 15 ಅಕ್ಟೋಬರ್ 1931 ರಂದು ತಮಿಳುನಾಡಿನ ರಾಮೇಶ್ವರಂ ನ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಲಾಂ ಪೂರ್ಣ ಹೆಸರು ಅವುಳ್ ಪಕೀರ್ ಜೈನೂಲಬ್ದೀನ್ ಅಬ್ದುಲ್ ಕಲಾಂ . ಅಬ್ದುಲ್ ಕಲಾಂ ಅವರ ತಂದೆ ಜೈನೂಲಬುದೀನ್ ದೋಣಿ ಮಾಲೀಕ. ತಾಯಿ ಆಶಿಯಮ್ಮ ಗೃಹಣಿ. ಕಲಾಂ ಮೂರು ಸಹೋದರರು ಮತ್ತು ಒಬ್ಬ ಸಹೋದರಿಯ ಮಧ್ಯ ಬೆಳೆದವರು. ಕಲಾಂ ಪ್ರಾಥಮಿಕ ಶಿಕ್ಷಣವನ್ನು ರಾಮನಾಥಪುರಂ ಶ್ವಾರ್ಟ್ಸ್ ಮೇಟ್ರಿಕ್ಯುಲೇಶನ್ ಸ್ಕೂಲ್ ನಲ್ಲಿ ಮುಗಿಸಿದರು. ಗಣಿತದಲ್ಲಿ ಅಪಾರ ಅಸಕ್ತಿ ಹೊಂದಿದ್ದ ಕಲಾಂ ತುಂಬಾ ಕಷ್ಟ ಪಟ್ಟು ಓದುತ್ತಿದ್ದರು. ಕಾಲೇಜು ವಿಧ್ಯಾಭ್ಯಾಸವನ್ನು ತಿರುಚಿರಾಪಲ್ಲಿಯ ಸೈಂಟ್ ಜೋಸೆಫ್ ಕಾಲೇಜ್ ನಲ್ಲಿ ಮುಗಿಸಿದರು. 1955 ರಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿಯನ್ನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀ ಯಲ್ಲಿ ಪಡೆದರು.

ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ನಂತರ ಕಲಾಂ ಏರೊನಾಟಿಕಲ್ ಡೆವೆಲಪ್‌ಮೆಂಟ್ ಎಸ್ಟ್ಯಾಬ್ಲಿಶ್‌ಮೆಂಟ್ ಆಫ್ ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್‌ಮೆಂಟ್ ಆರ್ಗನೈಸೇಶನ್ ನಲ್ಲಿ ವಿಜ್ಞಾನಿಯಾಗಿ ಸೇರಿಕೊಂಡರು. ತಮ್ಮ ವೃತ್ತಿಯನ್ನು ಭಾರತೀಯ ಸೇನೆಗೆ ಸಣ್ಣ ಹೆಲಿಕಾಪ್ಟರ್ ನ್ನು ವಿನ್ಯಾಸ ಮಾಡುವುದರ ಮೂಲಕ ಆರಂಭಿಸಿದರು. 1969 ರಲ್ಲಿ ಕಲಾಂ ಅವರನ್ನು ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ( ಇಸ್ರೋ) ಗೆ ವರ್ಗಾವಣೆ ಮಾಡಲಾಯಿತು. ಅವರು ಆವಾಗ ಇಂಡಿಯಾ'ಸ್ ಫರ್ಸ್ಟ್ ಸೆಟಿಲೈಟ್ ಲಾಂಚ್ ವೆಹಿಕಲ್ ನ ಯೋಜನಾ ನಿರ್ದೇಶಕರಾಗಿದ್ದರು. ಕಲಾಂ ಅವರು 1970 ಮತ್ತು 1990 ರಲ್ಲಿ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಮತ್ತು ಪಿಎಸ್ಎಲ್​ವಿ3 ಯೋಜನೆಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತದ ಮಟ್ಟಿಗೆ ಆ ಎರಡು ಯೋಜನೆಗಳು ಯಶಸ್ವಿ ಆಗಿತ್ತು.

image


ಕಲಾಂ 18 ಜೂನ್ 2002 ರಲ್ಲಿ ಭಾರತೀಯ ಸಂಸತ್ತಿನ ಚುನಾವಣೆಗೆ ನಾಮ ನಿರ್ದೇಶನ ಗೊಂಡಿದ್ದರು. ಜುಲೈ 15, 2002 ರಲ್ಲಿ ರಾಷ್ಟ್ರಪತಿ ಆಯ್ಕೆಯ ಚುನಾವಣೆ ಆರಂಭಗೊಂಡಿತ್ತು. ಅವಿರೋಧವಾಗಿ ಆಯ್ಕೆಯಾಗಿದ್ದ ಕಲಾಂ 11 ನೇ ರಾಷ್ಟ್ರಪತಿಯಾಗಿ ಅಧಿಕಾರವಹಿಸಿಕೊಂಡ್ರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ. ಝಾಕಿರ್ ಹುಸೇನ್ ನಂತರ ಭಾರತ ರತ್ನ ಪಡೆದ ಮೂರನೇ ರಾಷ್ಟ್ರಪತಿ ಅನ್ನೋ ಗೌರವಕ್ಕೆ ಕಲಾಂ ಪಾತ್ರರಾದ್ರು.

ಕಲಾಂ ರಾಷ್ಟ್ರಪತಿ ಆಗಿದ್ದ ಸಮಯದಲ್ಲಿ ಅವರನ್ನು ಜನಗಳ ರಾಷ್ಟ್ರಪತಿ ಎಂದು ಕರೆಯಲಾಗುತ್ತಿತ್ತು. 2002 ರಿಂದ 2007 ರವರೆಗೆ ಕಲಾಂ ಯಶಸ್ವಿ ರಾಷ್ಟ್ರಪತಿ ಆಗಿ ಸೇವೆ ಸಲ್ಲಿಸಿದ್ದರು. ನಂತ್ರ ಐಐಟಿ ಶಿಲ್ಲಾಂಗ್​​, ಐಐಎಂ ಅಹಮದಾಬಾದ್ ಮತ್ತು ಐಐಎಂ ಇಂಧೋರ್​​ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜೀ ತಿರುವನಂತಪುರಂ ನಲ್ಲಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ರು. ಅಣ್ಣಾ ಯೂನಿವರ್ಸಿಟಿಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಮಾಡಿದ್ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನ ಗೌರವ ವ್ಯಕ್ತಿ ಆಗಿದ್ದರು.

ಕಲಾಂ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಕಲಾಂ ಬರವಣಿಗೆ ಯುವಕರ ಅವರತ್ತ ಸೆಳೆದಿತ್ತು. ಇಂಡಿಯಾ 2020 ಪುಸ್ತಕದಲ್ಲಿ ಕಲಾಂ ಪ್ರಬಲವಾಗಿ "ಜ್ಞಾನ ಮಹಾಶಕ್ತಿಯು" ಭಾರತವನ್ನು ಅಭಿವೃದ್ಧಿ ಕ್ರಿಯಾ ಯೋಜನೆ ಮತ್ತು 2020 ಅಭಿವುದ್ಧಿ, ರಾಷ್ಟ್ರ 2020 ರ ಬಗ್ಗೆ ಪ್ರತಿಪಾದಿಸಿದ್ದರು. ಕಲಾಂ 1999 ರಲ್ಲಿ ವೈಜ್ಞಾನಿಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ ನಂತರ 2 ವರ್ಷಗಳ ಅವಧಿಯಲ್ಲಿ ಸುಮಾರು 100000 ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದರು.

ಕಲಾಂ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

image


1981 : ಪದ್ಮಭೂಷಣ

1990 : ಪದ್ಮವಿಭೂಷಣ

1997 : ಭಾರತ ರತ್ನ ಮತ್ತು ಇಂದಿರಾಗಾಂಧಿ ಅವಾರ್ಡ್

1998 :ವೀರ್ ಸಾವರ್ಕರ್ ಅವಾರ್ಡ್

2000 : ರಾಮಾನುಜನ ಅವಾರ್ಡ್

2007 : ಸೈನ್ಸ್ ಗೌರವ ಡಾಕ್ಟರೇಟ್ , ವಿಜ್ಞಾನ ಮತ್ತು ತಂತ್ರಜ್ಞಾನ ಗೌರವ ಡಾಕ್ಟರೇಟ್

2008 : ಡಾಕ್ಟರ್ ಆಫ್ ಸೈನ್ಸ್ ಮತ್ತು ಡಾಕ್ಟರ್ ಆಫ್ ಇಂಜಿನಿಯರಿಂಗ್

2010 : ಡಾಕ್ಟರ್ ಆಫ್ ಇಂಜಿನಿಯರಿಂಗ್

2014 : ಡಾಕ್ಟರ್ ಆಫ್ ಸೈನ್ಸ್

ಕಲಾಂ 27 ಜುಲೈ 2015 ರಂದು "ಕ್ರಿಯೇಟಿಂಗ್ ಎ ಲಿವಾಬ್ಲೆ ಪ್ಲ್ಯಾನೆಟ್ ಅರ್ತ್ "ಬಗ್ಗೆ ಐಐಎಂ ಶಿಲ್ಲೊಂಗ್​​ಗೆ ತೆರಳಿದ್ದರು. ಉಪನ್ಯಾಸ ಆರಂಭವಾದ 5 ನಿಮಿಷಗಳ ನಂತರ ಕುಸಿದುಬಿದ್ದರು. ಹತ್ತಿರದ ಬೆತನೀ ಹಾಸ್ಪಿಟಲ್ ಗೆ ಸೇರಿಸಿದ್ರೂ, ಹೃದಯ ಸ್ತಂಭನದ ಪರಿಣಾಮ ಕಲಾಂ ಅವರು 27 ಜುಲೈ 2015 ರಂದು ಸಂಜೆ ಸುಮಾರು 7.45 ರ ಸಮಯದಲ್ಲಿ ನಿಧನ ಹೊಂದಿದ್ದರು. ಕಲಾಂ ಅಂತ್ಯ ಸಂಸ್ಕಾರವನ್ನು ಸರ್ಕಾರದ ಸಕಲ ಗೌರವಗಳೊಂದಿಗೆ ಅವರ ಹುಟ್ಟೂರಾದ ರಾಮೇಶ್ವರಂ ನಲ್ಲಿ ಮಾಡಲಾಯಿತು.

    Share on
    close