ಗಣಿತ, ಕೋಡಿಂಗ್ ಮತ್ತು ಸ್ಪರ್ಧೆ:ಗೆಲ್ಲಲೆಂದೇ ಸ್ಪರ್ಧಿಸುತ್ತಾರೆ ಸಿಮ್ರನ್ ಡೊಕಾನಿಯಾ

ಟೀಮ್​​ ವೈ.ಎಸ್​. ಕನ್ನಡ

ಗಣಿತ, ಕೋಡಿಂಗ್ ಮತ್ತು ಸ್ಪರ್ಧೆ:ಗೆಲ್ಲಲೆಂದೇ ಸ್ಪರ್ಧಿಸುತ್ತಾರೆ ಸಿಮ್ರನ್ ಡೊಕಾನಿಯಾ

Thursday December 03, 2015,

3 min Read

ಪ್ರೋಗ್ರಾಮಿಂಗ್‍ನ ಸವಾಲೊಂದನ್ನು ಗಣಿತದ ಮೂಲಕ ಗೆಲ್ಲುವ ಸಾಮಥ್ರ್ಯವೇ ಕೋಡರ್ ಸಿಮ್ರನ್ ಡೊಕಾನಿಯಾ ಅವರಿಗೆ ಸ್ಪೂರ್ತಿ. ಸದ್ಯ ಅವರು ಬೆಂಗಳೂರಿನ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಇನ್‍ಫಾರ್ಮೇಶನ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೋಡಿಂಗ್ ವಿಷಯವನ್ನೇ ಸಿಮ್ರನ್ ಆಯ್ಕೆ ಮಾಡಿಕೊಂಡಿದ್ಯಾಕೆ ಅನ್ನೋದರ ಹಿಂದೆ ಕೂಡ ಕುತೂಹಲಕರ ಸಂಗತಿ ಇದೆ. ಸಿಮ್ರನ್ ಮೂರನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದಾಗ ಅವರ ಸೀನಿಯರ್ ಆಗಿದ್ದ ವಿವೇಕ್ ಯಾದವ್, ಇಡೀ ಬ್ಯಾಚ್‍ಗೆ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಅನ್ನು ಪರಿಚಯಿಸಿದ್ರು. ಮೊದಲಿನಿಂದ್ಲು ಗಣಿತದ ಸೌಂದರ್ಯಕ್ಕೆ ಸಿಮ್ರನ್ ಮಾರುಹೋಗಿದ್ರು, ಚಿಕ್ಕಂದಿನಿಂದ್ಲೂ ಲೆಕ್ಕ ಅವರ ಇಷ್ಟದ ವಿಷಯವಾಗಿತ್ತು. ಸಮಸ್ಯೆ ಪರಿಹರಿಸುವ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಕೂಡ ಗಣಿತವನ್ನೇ ಹೋಲುತ್ತದೆ. ಗಣಿತದ ಮೂಲಕ ಪ್ರೋಗ್ರಾಮಿಂಗ್ ಸವಾಲುಗಳನ್ನು ಪರಿಹರಿಸುವುದು ಅವರನ್ನು ಆಕರ್ಷಿಸಿತ್ತು.

ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಬಗ್ಗೆ ತಮಗಿದ್ದ ಆಸಕ್ತಿಯನ್ನು ಗುರುತಿಸಿದ ವಿವೇಕ್ ಯಾದವ್ ಅವರಿಗೆ ಸಿಮ್ರನ್ ಧನ್ಯವಾದ ಅರ್ಪಿಸ್ತಾರೆ. 2014ರ ಸಪ್ಟೆಂಬರ್‍ನಲ್ಲಿ ಕೋಡಿಂಗ್ ಆರಂಬಿಸಿರುವ ಸಿಮ್ರನ್, ಈ ಕೆಲಸ ಅಷ್ಟೇನೂ ಕಠಿಣವಲ್ಲ ಎನ್ನುತ್ತಾರೆ. ಬೇಸಿಗೆ ರಜೆ ಕಳೆಯಲು ಕೋಡಿಂಗ್ ಕಲಿತ ಸಿಮ್ರನ್, ಈಗ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಿಮ್ರನ್ ಅವರಿಗೆದುರಾದ ಮೊದಲ ಸ್ಪರ್ಧೆ, `ಮಾರ್ಗನ್ ಸ್ಟಾನ್ಲಿ ಕೋಡೆಥಾನ್'. 2014ರ ಡಿಸೆಂಬರ್‍ನಲ್ಲಿ ಇದು ನಡೆದಿತ್ತು. ಆ ಸಮಯದಲ್ಲಿ ಸಾಕಷ್ಟು ಅಭ್ಯಾಸ ಮಾಡದೇ ಇದ್ದಿದ್ರಿಂದ ಸಿಮ್ರನ್ ನರ್ವಸ್ ಆಗಿದ್ರು. ಆತಂಕ ಹೆಚ್ಚಾಗಿದ್ರೂ ಅದೊಂದು ಮೋಹಕ ಅನುಭವ ಅಂತಾ ಬಣ್ಣಿಸುವ ಸಿಮ್ರನ್, ತಾವು ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದನ್ನು ಖುಷಿಯಿಂದ ಹಂಚಿಕೊಳ್ತಾರೆ.

image


ಸಿಮ್ರನ್ ಮುಂಬೈನಲ್ಲೇ ಹುಟ್ಟಿ ಬೆಳೆದವರು. ವಾಣಿಜ್ಯ ನಗರಿ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ``ನನ್ನ ಜೀವನದ ಬಹುಪಾಲು ಸಮಯವನ್ನು ಮುಂಬೈನಲ್ಲಿ ಕಳೆದಿದ್ದೇನೆ, ಬದುಕಿನ ಪಾಠವನ್ನು ಕಲಿತಿದ್ದೇನೆ, ನಾನು ಏನು ಎಂಬುದನ್ನು ಮುಂಬೈ ತಮಗೆ ಅರಿವು ಮಾಡಿಸಿದೆ'' ಎನ್ನುತ್ತಾರೆ ಅವರು. ಇನ್ನು ಬೆಂಗಳೂರಲ್ಲಿ ಸಿಮ್ರನ್ ಅವರ ಬ್ಯಾಚ್‍ನಲ್ಲಿ ಮಾತ್ರ ಹುಡುಗ ಹುಡುಗಿಯರ ಅನುಪಾತ 25:33ರಷ್ಟಿದೆ. ಕಂಪ್ಯೂಟರ್ ಸೈನ್ಸ್ ಕೇವಲ ಹುಡುಗರಿಗೆ ಹೇಳಿ ಮಾಡಿಸಿದಂತಹ ವಿಷಯ ಎಂಬ ಕಲ್ಪನೆ ರೂಢಿಯಲ್ಲಿ ಬಂದುಬಿಟ್ಟಿದೆ ಅನ್ನೋದು ಸಿಮ್ರನ್ ಅವರ ಅಭಿಪ್ರಾಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇರೋ ಬಹುತೇಕ ಮಹಿಳೆಯರು ಗರ್ಭಧಾರಣೆ ಬಳಿಕ, ವೃತ್ತಿಯನ್ನೇ ಬಿಟ್ಟುಬಿಡ್ತಾರೆ. ವೃತ್ತಿಯ ಬದಲು ಕುಟುಂಬಕ್ಕೆ ಆದ್ಯತೆ ಕೊಡುತ್ತಾರೆ. ಅದು ಅವರ ವೈಯಕ್ತಿಕ ಆಯ್ಕೆ. ಮಕ್ಕಳನ್ನು ಸಾಂಪ್ರದಾಯಿಕ ಪರಿಸರದಲ್ಲಿ ಬೆಳೆಸಬೇಕೆಂಬ ಆಸೆಯಿದ್ದರೆ, ವೃತ್ತಿಯನ್ನು ತ್ಯಜಿಸಬಹುದು, ಇಲ್ಲವಾದಲ್ಲಿ ಉದ್ಯೋಗದಲ್ಲಿ ಮುಂದುವರಿಯಬಹುದು. ಅನುಕೂಲಕರ ಕೆಲಸದ ಸಮಯವನ್ನು ಕಂಪನಿಗಳು ನಿಗದಿ ಮಾಡದ ಕಾರಣಕ್ಕೆ ಕೂಡ ಮಹಿಳೆಯರು ಉದ್ಯೋಗಕ್ಕೆ ಗುಡ್‍ಬೈ ಹೇಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹಾಗಾಗಿ ಕಂಪನಿಗಳು ತಾಯ್ತನದ ಜವಾಬ್ಧಾರಿ ಹೊತ್ತಿರುವ ಮಹಿಳೆಯರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಕುಟುಂಬದ ಹೊಣೆಗಾರಿಕೆ ಜೊತೆಗೆ ವೃತ್ತಿಯನ್ನೂ ನಿಭಾಯಿಸಬೇಕಾಗಿರುವುದರಿಂದ ಅವರಿಗೆ ಅನುಕೂಲ ಮಾಡಿಕೊಡಬೇಕು ಅನ್ನೋದು ಸಿಮ್ರನ್ ಅವರ ಅಭಿಪ್ರಾಯ.

ಇತ್ತೀಚೆಗೆ ನಡೆದ `ಹ್ಯಾಕರ್ ರ್ಯಾಂಕ್ ವುಮೆನ್ಸ್'ಕಪ್‍ನಲ್ಲಿ ಸಿಮ್ರನ್ ಮೊದಲ ರ್ಯಾಂಕ್ ಗಳಿಸಿದ್ದಾರೆ. ಸ್ನೇಹಿತರ ಜೊತೆ ಸೇರಿ ಸಿಮ್ರನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲ ರ್ಯಾಂಕ್ ಬರಬಹುದು ಎಂಬ ನಿರೀಕ್ಷೆ ಅವರಿಗಿರಲಿಲ್ಲ. ಟಾಪ್ 100 ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ನಮ್ಮ ಪ್ರದರ್ಶನದ ಬಗ್ಗೆ ಖುದ್ದು ನಮಗೇ ಅಚ್ಚರಿಯಾಗಿದೆ ಎನ್ನುತ್ತಾರೆ ಸಿಮ್ರನ್.

ಎಂಬಿಎ ಮಾಡುವ ಕನಸು ಸಿಮ್ರನ್ ಅವರಿಗಿದೆ. ತಂತ್ರಜ್ಞಾನ ವಲಯದಲ್ಲೇ ಮುಂದುವರಿಯಲು ಇಚ್ಛಿಸಿರುವ ಅವರು ಯಂತ್ರ ಕಲಿಕಾ ಕ್ಷೇತ್ರದಲ್ಲೂ ಪರಿಣತಿ ಗಳಿಸುವ ಇರಾದೆ ಹೊಂದಿದ್ದಾರೆ. ಸಾಧನಗಳ ಮೂಲಕ ಕೊನೆಯಿರದ ಸಾಧ್ಯತೆಗಳು ಮತ್ತು ಅಚ್ಚರಿಯ ಕೆಲಸ ಮಾಡ್ತಾ ಇರುವ ಜನರ ಸಾಧನೆ ತಮಗೆ ಅದೇ ಕ್ಷೇತ್ರದಲ್ಲಿ ಹೆಚ್ಹೆಚ್ಚು ಅನ್ವೇಷಿಸಲು ಉತ್ಸಾಹ ಮೂಡಿಸಿದೆ ಅನ್ನೋದು ಸಿಮ್ರನ್ ಅವರ ಮನದ ಮಾತು.

ಶೆರಿಲ್ ಸ್ಯಾಂಡ್‍ಬರ್ಗ್ ಹಾಗೂ ಅನಿತಾ ಬೊರ್ಗ್ ಅವರೇ ಸಿಮ್ರನ್‍ಗೆ ಪ್ರೇರಣೆ. ನಾಯಕತ್ವ ವಹಿಸಿಕೊಳ್ಳಲು ಮಹಿಳೆಯರನ್ನು ಪ್ರೋತ್ಸಾಹಿಸಲು ಇವರು ಶ್ರಮಿಸಿದ್ದಾರೆ. ತಂತ್ರಜ್ಞಾನದ ಪ್ರಭಾವ ಗಳಿಸುವಲ್ಲಿ ಮಹಿಳೆಯರ ಪ್ರಭಾವ ಅಪಾರ ಅನ್ನೋದು ಅವರ ನಂಬಿಕೆ. ಉನ್ನತ ಹುದ್ದೆಗಳಲ್ಲಿ ಮಹಿಳೆಯರನ್ನು ಹೊಂದುವುದರಿಂದ ಎಲ್ಲರಿಗೂ ಸಮಾನ ಸ್ಥಾನ ಕಲಿಸಬಹುದು ಅನ್ನೋದು ಶೆರಿಲ್ ಹಾಗೂ ಅನಿತಾ ಅವರ ಅಭಿಪ್ರಾಯ.

ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್‍ನಲ್ಲಿ ಸಿಮ್ರನ್ ಅವರಿಗಿರುವ ಭದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಕಾಲೇಜಿನಲ್ಲಿದ್ದಾಗಲೇ ಅವರು ಸೂಕ್ಷ್ಮ ಕೆಲಸಗಾರ್ತಿಯಾಗಿದ್ದರು. ಗಡುವು ಮುಟ್ಟಬೇಕೆಂಬ ಬಯಕೆಯೇ ಅವರನ್ನು ಪ್ರೋತ್ಸಾಹಿಸುತ್ತಿತ್ತು. ಅಂದುಕೊಂಡಿದ್ದನ್ನು ಮಾಡಿ ಮುಗಿಸಲು ವ್ಯವಸ್ಥಿತ ವೇಳಾಪಟ್ಟಿ ಸಿದ್ಧಪಡಿಸಿಕೊಳ್ತಾರೆ. ಅದು ತಮಗೆ ಕುಶಲತೆಯ ಪ್ರಜ್ಞೆಯನ್ನು ಮೂಡಿಸುತ್ತದೆ, ನಾನದನ್ನು ಸಾಧಿಸಿದ್ದೇನೆ ಅಂತಾ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಅನ್ನೋದು ಸಿಮ್ರನ್ ಅವರ ಅಭಿಪ್ರಾಯ. ಅದರಿಂದ ಅಂದುಕೊಂಡ ಕಾರ್ಯ ಯಶಸ್ಸಿನೆಡೆಗೆ ಆರಾಮಾಗಿ ಸಾಗುತ್ತದೆ. ಸುಧಾರಣೆಗೆ ಇರುವ ಅವಕಾಶ ಮತ್ತು ಬೆಸ್ಟ್ ಎನಿಸಿಕೊಳ್ಳುವ ಬಯಕೆ ಅವರಿಗೆ ಪ್ರೇರಣೆಯಾಗಿದೆ.

ಸಿಮ್ರನ್ ಅವರಂತಹ ಯುವತಿಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದ್ರೆ, ಮುಂದಿನ ದಶಕ ಹೊಸ ದಾಖಲೆಗೆ ನಾಂದಿ ಹಾಡಲಿದೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಭಾರತಿ ಭಟ್​​

    Share on
    close