ಹಾಕಿಯನ್ನು ಮದುವೆಯಾದ್ರು, ಹಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಕೊಡುಗೆ ನೀಡಿದ ಮಹಾರಥಿ

ಟೀಮ್​ ವೈ.ಎಸ್​. ಕನ್ನಡ

ಹಾಕಿಯನ್ನು ಮದುವೆಯಾದ್ರು, ಹಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಕೊಡುಗೆ ನೀಡಿದ ಮಹಾರಥಿ

Thursday December 24, 2015,

3 min Read


40 ವರ್ಷದಿಂದ ನೀಡುತ್ತಿದ್ದಾರೆ ಹಾಕಿ ತರಬೇತಿ..

65 ವಯಸ್ಸಿನವರು ಮರ್ಜ್ಬನ್ ಪಟೇಲ್..

ಬಡವರಿಗೆ ನೀಡುತ್ತಾರೆ ಉಚಿತ ಕೋಚಿಂಗ್..

ಎಡ್ರಿನ್ ಡಿಸೋಜಾ, ಗೆವಿನ್ ಪೆರೆರ, ವಿರೇನ್ ರಸ್ಕಿನ್ಹಾ.. ಹಾಕಿಯಲ್ಲಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದವರು. ಇವರ ಮತ್ತೊಂದು ವಿಶೇಷತೆಯೆಂದರೆ ಇವರೆಲ್ಲಾ ಹಾಕಿ ಕಲಿತಿದ್ದು ಒಬ್ಬ ವ್ಯಕ್ತಿಯಿಂದ ಮಾತ್ರ. ಅವರೇ ಮರ್ಜಬನ್ ಪಟೇಲ್. 65 ವರ್ಷದ ಮರ್ಜಬನ್ ಪಟೇಲ್ ಹಾಕಿಯ ಉತ್ತುಂಗ ಶಿಖರಕ್ಕೆ ಹಾಕಿ ಆಟಗಾರರನ್ನು ತಲುಪಿಸಿದ್ದಾರೆ. ಹಲವರ ಕನಸನ್ನು ನನಸಾಗಿಸಿದ್ದಾರೆ. ಇವರಿಂದಾಗಿಯೇ ಇಂದು ಅಂತಾರಾಷ್ಟ್ರೀಯ ಹಿರಿಯರ ಮತ್ತು ಕಿರಿಯರ ಭಾರತೀಯ ತಂಡದಲ್ಲಿರುವ ಅನೇಕ ಆಟಗಾರರಿಗೆ ಇವರು ಸಿದ್ಧಪಡಿಸಿದ್ದಾರೆ.

image


ಮುಂಬೈನ ರೈಲ್ವೆ ಕಾಲೋನಿಯಲ್ಲಿ ಮರ್ಜಬನ್ ಪಟೇಲ್ ಜನಿಸಿದ್ರು. ಅವರಿಗೆ ಹಾಕಿಯೆಂದರೆ ಪ್ರಾಣ, ಓದಿನಲ್ಲಿ ಆಸಕ್ತಿಯಿರಲಿಲ್ಲ, ಹಾಗಾಗಿ ಅವರು 10ನೇ ತರಗತಿವರೆಗೆ ವ್ಯಾಸಾಂಗ ಮಾಡಿದ್ರು. ಅವರಿದ್ದ ಕಾಲೋನಿಯಲ್ಲೇ ಅವರ ಗೆಳೆಯನ ತಂದೆ ಉತ್ತಮ ಹಾಕಿ ಕೋಚ್ ಆಗಿದ್ರು. ಅವರು ಆಡುವುದನ್ನು ಆಗಾಗ ನೋಡುತ್ತಿದ್ರು. ಹಾಗಾಗಿ ಹಾಕಿಯ ಬಗ್ಗೆ ಅವರ ಪ್ರೇಮ ಹೆಚ್ಚಿತು. ಆರಂಭದಲ್ಲಿ ನೋಡಿ-ನೋಡಿ ಹಾಕಿ ಕಲಿತ ಅವರು ಆನಂತರ ಅವರ ಗಲ್ಲಿಯಲ್ಲೇ ಹಾಕಿ ಆಡುತ್ತಾ ಹಾಕಿಯನ್ನು ಅರಿಯಲು ಆರಂಭಿಸಿಬಿಟ್ಟಿದ್ರು.

image


ಮರ್ಜಬನ್ ಪಟೇಲ್ ಇದ್ದ ಸ್ಥಳದಲ್ಲೇ ಹತ್ತಿರವೇ ರಿಪಬ್ಲಿಕನ್ ಸ್ಪೋರ್ಟ್ಸ್ ಕ್ಲಬ್ ಎಂಬ ಹೆಸರಿನ ಒಂದು ಹಾಕಿ ಕ್ಲಬ್ ಇತ್ತು. 1963ರಲ್ಲಿ ಈ ಕ್ಲಬ್ ಸ್ಥಾಪನೆಯಾಗಿತ್ತು. ಕೆಲ ಯುವಕರು ಈ ಕ್ಲಬ್​ನಲ್ಲಿ ಅಭ್ಯಾಸ ಮಾಡಲು ಬರುತ್ತಿದ್ರು. ಮರ್ಜಬನ್ ಅವರು ಮೆಲ್ಲ-ಮೆಲ್ಲನೆ ಈ ಕ್ಲಬ್​ಗೆ ಬರಲು ಆರಂಭಿಸಿಬಿಟ್ರು. ಕ್ಲಬ್​​ನಲ್ಲಿ ಕೆಲಸ ಮಾಡುತ್ತಾ ಅಲ್ಲೇ ಅಭ್ಯಾಸ ಮಾಡಲು ಆರಂಭಿಸಿದ್ರು. ಇಲ್ಲಿ ಉಪಕರಣಗಳ ಕೊರತೆಯಿದ್ರು. ಮರ್ಜಬನ್ ಪಟೇಲ್ ಕ್ಲಬ್​​ನ ಉಳಿದ ಕೆಲಸ ನೋಡಿಕೊಳ್ಳುತ್ತಾ ಹಾಕಿ ಆಡುತ್ತಿದ್ರು. ಅವರೇ ಹೇಳುವಂತೆ. "ಇದೇ ಸಮಯದಲ್ಲಿ ಆಟಗಾರರನ್ನು ನಮ್ಮೊಂದಿಗೆ ಇರುವಂತೆ ನೋಡಿಕೊಳ್ಳುವುದು ಹೇಗೆ, ಅವರಿಂದ ಒಳ್ಳೆ ಆಟ ಹೇಗೆ ತೆಗೆಯಬೇಕು ಎಂಬುದನ್ನು ಕಲಿತೆ" ಎನ್ನುತ್ತಾರೆ.

image


ಕಾಲ ಕಳೆದಂತೆ, ಕ್ಲಬ್​ಗೆ ಬರುವ ಹಾಕಿ ಆಟಗಾರರಿಗೆ ಮರ್ಜಬನ್ ಪಟೇಲ್ ಹಾಕಿ ತರಬೇತಿ ನೀಡಲು ಆರಂಭಿಸಿದ್ರು. ಎಲ್ಲ ಹಿರಿಯ ಆಟಗಾರರು ಹಾಗೂ ಕೋಚ್​ಗಳನ್ನು ನೋಡಿ ಕಲಿತಿದ್ದ ಅವರು. ಹೀಗೆ ಕೋಚಿಂಗ್ ನೀಡುತ್ತ ಅನೇಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ್ದಾರೆ. ಅಂದು ಹಾಕಿ ಕಲಿಯಲು ಕ್ಲಬ್​​ಗೆ ಸೇರಿದ ಅವರು ಇಂದು ಅದೇ ಕ್ಲಬ್​ನ ನಡೆಸುತ್ತಿದ್ದಾರೆ. ಹಾಕಿ ಆಡಲು ಬರುವ ಬಡ ಮಕ್ಕಳಿಗೆ ಉಚಿತ ಹಾಕಿ ತರಬೇತಿ ನೀಡುವುದರ ಜೊತೆಗೆ ಅವರಿಗೆ ಸೂಕ್ತ ಉಪಕರಣಗಳ ವ್ಯವಸ್ಥೆಯನ್ನು ಮಾಡುತ್ತಾರೆ. ಕ್ಲಬ್​ನ ಜೊತೆಯಿರುವ ಅನೇಕ ಹಿರಿಯ ಆಟಗಾರರು ಬಡ ಮಕ್ಕಳ ತರಬೇತಿಗೆ ಬೇಕಾದ ಅವಶ್ಯಕತೆಗಳನ್ನು ಉಚಿತವಾಗಿ ಪೂರ್ಣಗೊಳಿಸುತ್ತಾರೆ.

image


ಇಂದು ದೇಶದ ಗೌರವವಾಗಿರುವ ಯುವರಾಜ್ ವಾಲ್ಮೀಕಿ, ದೇವೆಂದ್ರ ವಾಲ್ಮಿಕಿ ಇವರದೇ ಕ್ಲಬ್​ನಿಂದ, ಮರ್ಜಬನ್ ಅವರಿಂದ ಹಾಕಿಯ ಕೌಶಲ್ಯವನ್ನು ಕಲಿತರು. ಏಷ್ಯಾ ಕಪ್ ಗೆದ್ದ ಭಾರತ ಜೂನಿಯರ್ ಹಾಕಿ ತಂಡದ ಗೋಲ್ ಕೀಪರ್, ಸೂರಜ್ ಅವರಿಗೆ ಸ್ಕಿಲ್ಸ್​ಗಳನ್ನ ಕಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ಇವರ ಕ್ಲಬ್​ನಲ್ಲಿ ಪ್ರತಿದಿನ 30 ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಹಾಕಿ ಸ್ಟಾರ್ ಆಗಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 65 ವರ್ಷದ ಮರ್ಜಬನ್ ಪಟೇಲ್ ಇಂದಿಗೂ ಮದುವೆಯಾಗಿಲ್ಲ. ’ಹಾಕಿಯೊಂದಿಗೆ ನಾನು ಮದುವೆಯಾಗಿದ್ದೇನೆ ಹಾಗಾಗಿ ಎರಡನೇ ಮದುವೆ ಆಗುವುದರಲ್ಲಿ ಅರ್ಥವಿಲ್ಲ’ ಎಂತಾರೆ.. ಅವರ ಪ್ರಕಾರ ಈ ಕೆಲಸ ಮಾಡಲು ತುಂಬಾ ಸಮಯಬೇಕು. ಆದರೆ ಮದೆವೆಯಾದ ವ್ಯಕ್ತಿಗೆ ಇಷ್ಟು ಸಮಯ ಸಿಗುವುದಿಲ್ಲ ಎಂತಾರೆ.

’ಹಾಕಿ ಕಲಿಸುವ ಕೆಲಸ ಸುಲಭದಾಗಿರಲಿಲ್ಲ. ಈ ಕ್ಲಬ್​ಗೆ ಬರುವ ಅನೇಕ ಮಕ್ಕಳು ಬಡವರು. ಹಾಗಾಗಿ ಅವರಿಗೆ ಉಚಿತವಾಗಿ ತರಬೇತಿ ನೀಡುತ್ತೇವೆ. ಹಾಗಾಗಿ ಕ್ಲಬ್ ನಷ್ಟದಲ್ಲಿ ನಡೆಯುತ್ತಿದೆ. ಅನೇಕ ಸಲ ಕ್ಲಬ್ ಮುಚ್ಚುವಂತಹ ಪ್ರಸಂಗ ಬಂತು ಅದರೆ, ಧೈರ್ಯಗೇಡಲಿಲ್ಲ. ಬಡ್ಡಿಗೆ ಹಣವನ್ನು ತಂದು ನಡೆಸಲಾಯ್ತು.’ ಅಂತಾರೆ ಮರ್ಜಬನ್. ಈಗಲೂ ಕೂಡ ಕ್ಲಬ್​​ನ ಪರಿಸ್ಥಿತಿ ಸುಧಾರಿಸಿಲ್ಲ ತುಂಬಾ ಕಷ್ಟದಿಂದ ಕ್ಲಬ್ ನಡೆಸುತ್ತಿದ್ದೇವೆ. ಆದರೆ. ಸದ್ಯ ಹಿರಿಯ ಆಟಗಾರರು ಕ್ಲಬ್​​ನ ಸಹಾಯಕ್ಕೆ ನಿಂತಿದ್ದಾರೆ. ಕ್ಲಬ್​ಗೆ ಎಷ್ಟು ಬೇಕೋ ಅಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

image


"ಮೊದಲಿಗೆ ಹೋಲಿಸಿದ್ರೆ ಈಗ ಹಾಕಿಯ ಉಪಕರಣಗಳ ಬೆಲೆ ಹೆಚ್ಚಿದೆ. ಹಾಗಾಗಿ ಹಾಕಿ ಆಡುವವರ ಸಂಖ್ಯೆ ಕ್ಷಿಣೀಸುತ್ತಿದೆ. ಇಷ್ಟಾದ್ರು ಕ್ಲಬ್ ಬಡವರಿಗೆ ಉಚಿತವಾಗಿ ಹಾಕಿ ಹೇಳಿಕೊಡುತ್ತದೆ".

ಪ್ರತಿನಿತ್ಯ ಸಾಯಂಕಾಲ 5 ರಿಂದ 7 ಗಂಟೆಯ ವೇಳೆ ಮರ್ಜಬನ್ ಪಟೇಲ್ ಬಾಂಬೇ ಹಾಕಿ ಸಂಸ್ಥೆ ಮೈದಾನದಲ್ಲಿ ಹುಡುಗರಿಗೆ ತರಬೇತಿ ನೀಡುತ್ತಿರುತ್ತಾರೆ. ರಜೆಯ ದಿನದಲ್ಲೂ ಅವರು ಹಾಕಿ ಪಟುಗಳಿಗೆ ತರಬೇತಿ ಕೋಡ್ತಾರೆ. ಕ್ಲಬ್ ಅಲ್ಲದೇನೆ ಮರ್ಜಬನ್ ಪಟೇಲ್ ಶಾಲೆ-ಕಾಲೇಜುಗಳಿಗೆ ಹೋಗಿ ಹಾಕಿ ಕಲಿಸುತ್ತಾರೆ. "ಆರಂಭದಲ್ಲಿ ಹುಡುಗರು ಹಾಕಿ ಕಲಿಯುತ್ತಾರೆ. ಆದರೆ ಮುಂದೆ ಶಾಲೆ-ಕಾಲೇಜುಗಳಿಗೆ ಹೋಗುತ್ತಿದ್ದಂತೆ ಅವರು, ಹಾಕಿ ಆಡುವುದನ್ನು ಬಿಟ್ಟು ಬಿಡ್ತಾರೆ. ಇದರಿಂದ ಬೇಸರವಾಗುತ್ತೆ. ಆದರೆ ಐದು ಬೆರಳು ಸಮ ಇರುವುದಿಲ್ಲ. ಯಾವುದನ್ನು ಒತ್ತಡವೇರಿ ಕಲಿಸಬಾರದು. ಅದು ಅವರಿಷ್ಟವಾಗಿರಬೇಕು ಎಂತಾರೆ ಮರ್ಜಬನ್". ಎಲ್ಲಿಯವರೆಗೂ ಈ ಸೇವೆ ಎಂದು ಕೇಳಿದ್ರೆ ಅವರು ಉತ್ತರ ಕೂಡ ಅದ್ಭುತವಾಗಿದೆ. "ಈ ದೇಹದಲ್ಲಿ ಉಸಿರಿರುವರೆಗೂ ಹಾಕಿ ಕಲಿಸುತ್ತೇನೆ" ಎನ್ನುತ್ತಾರೆ.

ಒಂದ್ವೇಳೆ ನೀವು ಮರ್ಜಬನ್ ಪಟೇಲ್ ಅವರ ಕೆಲಸದಲ್ಲಿ ಭಾಗಿಯಾಗ ಬಯಸುತ್ತೀರಾ, ಅಥವಾ ಅವರಿಗೆ ಸಹಾಯ ಮಾಡುವ ಆಸೆಯಿದ್ರೆ. ಈ ಈ-ಮೇಲ್ ಮುಖಾಂತರ ಸಂಪರ್ಕಿಸಬಹುದು..

[email protected]


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ಎನ್.ಎಸ್.ರವಿ